115 ಕೋಟಿ ಪೈಸಾ ವಸೂಲ್ ಮೂಲಕ ಸಿನಿ ರಸಿಕರ ಮನಸೋರೆಗೊಂಡ ಸು ಫ್ರಮ್ ಸೋ ಚಿತ್ರವನ್ನು ನೀವು ಮನೆಯಲ್ಲೇ ಕುಳಿತು ಮನತುಂಬಿಕೊಳ್ಳಬಹುದು.
ಥಿಯೇಟರ್ನಲ್ಲಿ ಇಂದಿಗೂ ಹೌಸ್ಫುಲ್ ಪ್ರದರ್ಶನ ಕಾಣುತ್ತಿರುವ ಬ್ಲಾಕ್ ಬಸ್ಟರ್ ಸಿನಿಮಾ ಸು ಫ್ರಮ್ ಸೋ, ಓಟಿಟಿ ಎಂಟ್ರಿಗೆ ಮುಹೂರ್ತ ಫಿಕ್ಸ್ ಆಗಿದೆ.
ಸು ಫ್ರಮ್ ಸೋ.. ರಿಲೀಸ್ ಆಗಿ ಸಿಲ್ವರ್ ಜ್ಯುಬಿಲಿ ಕಂಪ್ಲೀಟ್ ಮಾಡಿದರೂ ಇದರ ಹವಾ ಮಾತ್ರ ಇನ್ನೂ ಕಡಿಮೆಯಾಗಿಲ್ಲ. ರಾಜ್ ಬಿ ಶೆಟ್ಟಿ ಹೊಸ ಪ್ರತಿಭೆಗಳ ತಂಡ ಕಟ್ಟಿಕೊಂಡು ಕಟ್ಟಿದ ಈ ಸಿನಿಮಾ, ಜನರ ಮನವನ್ನು ರಂಜಿಸಿದೆ.
ಕನ್ನಡದ ಮಟ್ಟಿಗೆ ತಯಾರಾದ ಈ ಚಿತ್ರ ಕೇರಳ, ಆಂಧ್ರಗೂ ವಿಸ್ತರಿಸಿತು. ನಂತರ ಸಪ್ತಸಾಗರದಾಚೆ ತೆರಳಿ, ವಿಶ್ವದ ಹತ್ತಾರು ದೇಶಗಳಲ್ಲಿ ತೆರೆಕಂಡು, ಮನರಂಜನೆ ನೀಡಿತು. ಎಲ್ಲೆಡೆ ಅಭೂತಪೂರ್ವ ಪ್ರಶಂಸೆ ಹಾಗೂ ಪ್ರತಿಕ್ರಿಯೆಗಳಿಗೆ ಕಾರಣವಾದ ಸುಲೋಚನಾ ಫ್ರಮ್ ಸೋಮೇಶ್ವರ ಚಿತ್ರವನ್ನು ಮನೆಯಲ್ಲೇ ವೀಕ್ಷಿಸುವ ಅವಕಾಶ ನೀಡುತ್ತಿದೆ.
ಸು ಫ್ರಮ್ ಸೋ ಸೆಪ್ಟೆಂಬರ್ 8ಕ್ಕೆ ಓಟಿಟಿಗೆ ಲಗ್ಗೆ ಇಡುತ್ತಿದ್ದು, 6 ಕೋಟಿ 75 ಲಕ್ಷ ರೂಪಾಯಿಗಳಷ್ಟು ಬೃಹತ್ ಮೊತ್ತಕ್ಕೆ ಜಿಯೋ ಹಾಟ್ಸ್ಟಾರ್ ಪಾಲಾಗಿದೆ. ಪಂಚಭಾಷೆಯಲ್ಲಿ ಕಿರುತೆರೆಗೆ ಎಂಟ್ರಿ ಕೊಡುತ್ತಿರುವ ಈ ಚಿತ್ರವನ್ನು ನೋಡಿ ಎಂಜಾಯ್ ಮಾಡಬಹುದು.