- ರಾಘವೇಂದ್ರ ಅಡಿಗ ಎಚ್ಚೆನ್.
ಹಿರಿಯ ನಟ ಬಾಲಕೃಷ್ಣ ಅವರ ಮೊಮ್ಮಗ 140 ಕೋಟಿ ರೂಪಾಯಿಗೆ ಸರ್ಕಾರದ ಈ ಜಮೀನು ಮಾರಾಟ ಮಾಡಿ ಕನ್ನಡದ ಹಿರಿಯ ನಟ ಡಾ. ವಿಷ್ಣುವರ್ಧನ್ ಅವರ ಸಮಾಧಿಯನ್ನು ಅತ್ಯಂತ ಬರ್ಬರವಾಗಿ ವಿರೂಪಗೊಳಿಸಿ ನಾಶಪಡಿಸಿ ಹಣ ಮಾಡಲು ಮುಂದಾಗಿದ್ದ. ಇದೀಗ ರಾಜ್ಯ ಸರ್ಕಾರ ಆದೇಶ ಮಾಡಿದ್ದು, ಡಿಸಿ ಅವರು ಜಮೀನನ್ನು ವಾಪಸ್ ತೆಗೆದುಕೊಳ್ಳುತ್ತಾರೆ. ಇದು ಡಾ. ವಿಷ್ಣುವರ್ಧನ್ ಅವರ ಕೆಪ್ಯಾಸಿಟಿ. ಬೆಂಗಳೂರು ದಕ್ಷಿಣ ತಾಲ್ಲೂಕು, ಕೆಂಗೇರಿ ಹೋಬಳಿ ಮೈಲಸಂದ್ರ ಗ್ರಾಮದ ಸರ್ವೆ ನಂ.22 (78ಎ-18ಗು), ಸರ್ವೆ ನಂ.26 (62ಎ-20ಗು)ರ ಪ್ರದೇಶವನ್ನು ತುರಹಳ್ಳಿ ಕಾಯ್ದಿಟ್ಟ ಅರಣ್ಯ ಪ್ರದೇಶವೆಂದು ಉಲ್ಲೇಖ(1)ರ ಪತ್ರದಲ್ಲಿ ಘೋಷಣೆ ಮಾಡಿಲಾಗಿದೆ.
1969ರ ಪ್ರಕಾರ, ಮೈಲಸಂದ್ರ ಗ್ರಾಮದ ಸರ್ವೆ ನಂ.26ರಲ್ಲಿ 20ಎಕರೆ ಪ್ರದೇಶವನ್ನು ಟಿ.ಎನ್.ಬಾಲಕೃಷ್ಣ ರವರಿಗೆ ಅಭಿಮಾನ್ ಚಿತ್ರ ಸ್ಟುಡಿಯೋ ಸ್ಥಾಪಿಸುವ ಸಲುವಾಗಿ 20 ವರ್ಷಗಳ ಅವಧಿಗೆ ಗೇಣಿ ಆಧಾರದ ಮೇಲೆ ನೀಡಲಾಗಿತ್ತು. ಅದಾಗ್ಯೂ ಮೈಲಸಂದ್ರ ಗ್ರಾಮದ ಸರ್ವೆ ನಂ.26ರಲ್ಲಿ 20 ಎಕರೆ ಪ್ರದೇಶವನ್ನು ಅಭಿಮಾನ್ ಚಿತ್ರ ಸ್ಟುಡಿಯೋ ನಿರ್ಮಿಸುವ ಸಲುವಾಗಿ ಕಂದಾಯ ಇಲಾಖೆಗೆ ಒಪ್ಪಿಸುವ ಬಗ್ಗೆ ಆದೇಶ ನೀಡಿದ್ದರು.
1970ರ ಆದೇಶದಲ್ಲಿ ಅಭಿಮಾನ್ ಸ್ಟುಡಿಯೋ ಅಭಿವೃದ್ಧಿ ಹೊರತಾಗಿ ಬೇರೆ ಯಾವುದೇ ಉದ್ದೇಶಕ್ಕೆ ಬಳಸದಿರಲು ಸರ್ಕಾರದ ಪೂರ್ವಾನುಮತಿ ವಿನ: ಮಾರಾಟ / ಪರಭಾರೆ ಮಾಡದಿರಲು ಷರತ್ತು ವಿಧಿಸಿ ಆದೇಶ ನೀಡಿತ್ತು. ಷರತ್ತುಗಳ ಉಲ್ಲಂಘನೆ ಆದಲ್ಲಿ ಮಂಜೂರಾತಿಯನ್ನು ರದ್ದು ಪಡಿಸಿ ಭೂಮಿಯನ್ನು ಸರ್ಕಾರ ಹಿಂಪಡೆಯುತ್ತದೆಂದು ಆದೇಶದಲ್ಲಿ ಸ್ಪಷ್ಟವಾಗಿ ನಮೂದಿಸಿತ್ತು. ಟಿ.ಎನ್.ಬಾಲಕೃಷ್ಣ ರವರು ಪರಿವರ್ತನ ಶುಲ್ಕ, ವಿನಾಯಿತಿ (Exemption of Conversion fees) ನೀಡಲು ಕೋರಿರುವ ಮೇರೆಗೆ1970ರ ಸರ್ಕಾರಿ ಆದೇಶದ ಷರತ್ತಿನ ಅನ್ಮಯ ವಿನಾಯಿತಿ ನೀಡಿ 5 ವರ್ಷ ಒಳಗೆ ಅಭಿಮಾನ್ ಚಿತ್ರ ಸ್ಟುಡಿಯೋ ಪೂರ್ಣಗೊಳಿಸುವಂತೆ ಹಾಗೂ ಸದರಿ ಉದ್ದೇಶ ಹೊರತಾಗಿ ಯಾವುದೇ ಉದ್ದೇಶಕ್ಕೆ ಬಳಸುವುದು, ಷರತ್ತಿನ ಉಲ್ಲಂಘನೆಯಾಗುತ್ತದೆ. ಅಂತಹ ಸಂದರ್ಭದಲ್ಲಿ ಮಂಜೂರಾತಿಯು ರದ್ಧಾಗಿ ಸದರಿ ಸ್ಥಳವನ್ನು ಹಿಂಪಡೆದಾಗ ಯಾವುದೇ ಪರಿಹಾರ ನೀಡಲಾಗುವುದಿಲ್ಲ ಎಂಬುದಾಗಿ ಸ್ಪಷ್ಟವಾಗಿ ಆದೇಶ ನೀಡಲಾಗಿತ್ತು.
1970ರ ಆದೇಶದಲ್ಲಿ ಯಾವ ಉದ್ದೇಶಕ್ಕಾಗಿ ಸದರಿ ಕಾಯ್ದಿಟ್ಟ ಅರಣ್ಯ ಪ್ರದೇಶವು ಮಂಜೂರಾತಿ ಆಗಿರುತ್ತದೆ, ಅದೇ ಉದ್ದೇಶಕ್ಕಾಗಿ ಹೊರತಾಗಿ ಬೇರೆ ಯಾವುದೇ ಉದ್ದೇಶಕ್ಕೆ ಬಳಸುವುದು ಷರತ್ತಿನ ಉಲ್ಲಂಘನೆಯಾಗುತ್ತದೆ ಎಂದು ಸ್ಪಷ್ಟವಾಗಿ ತಿಳಿಸಿದ್ದರು. ಆದರೂ ವಿಶೇಷ ಜಿಲ್ಲಾಧಿಕಾರಿಗಳು, ಬೆಂಗಳೂರು ನಗರ ಜಿಲ್ಲೆ ಬೆಂಗಳೂರು ರವರು ಕೆಲವು ಷರತ್ತುಗಳನ್ವಯ ಟಿ.ಎನ್.ಬಾಲಕೃಷ್ಣ ಇವರ ಮಕ್ಕಳಾದ ಶ್ರೀನಿವಾಸ್ ಹಾಗೂಬಿ.ಗಣೇಶ್ ಇವರುಗಳಿಗೆ ಮಂಜೂರಾದ 20 ಎಕರೆ ಪೈಕಿ 10 ಎಕರೆ ಜಮೀನನ್ನು ಮಾರಾಟ ಮಾಡಲು ಅನುಮತಿಯನ್ನು ನೀಡಿರುತ್ತಾರೆ. ಹಾಗಾಗಿ ಇದೀಗ ರಾಜ್ಯ ಸರ್ಕಾರ ಆದೇಶ ಮಾಡಿದ್ದು, ಡಿಸಿ ಅವರು ಜಮೀನನ್ನು ವಾಪಸ್ ತೆಗೆದುಕೊಳ್ಳಲು ಮುಂದಾಗಿದೆ