- ರಾಘವೇಂದ್ರ ಅಡಿಗ ಎಚ್ಚೆನ್.

ಸದಾ ಕಾಲದಿಂದಲೂ ವಿಭಿನ್ನ ಹಾಗೂ ಎಲ್ಲರೂ ಇಷ್ಟಪಡುವ ಸೀರಿಯಲ್‌ಗಳನ್ನು  ವೀಕ್ಷಕರಿಗೆ ನೀಡುತ್ತಿರುವ *ಉದಯ ವಾಹಿನಿಯಲ್ಲಿ ಮಾಂಗಲ್ಯ* ಹೆಸರಿನ ನೂತನ  ಧಾರವಾಹಿ ಸಿದ್ದವಾಗಿದೆ. ದುರ್ಗಾಪುರದ ಬಡತನದಲ್ಲಿ ಬೆಳೆದ ಮಯೂರಿ, ಮನೆ ಮಗನಂತೆ ಶ್ರೀಮಂತ ಕುಟುಂಬದಲ್ಲಿ ಎಲ್ಲಾ ಜವಬ್ದಾರಿ ನಿಭಾಯಿಸುವಂತ ದಿಟ್ಟ ಹುಡುಗಿ. ಆ ಶ್ರೀಮಂತ ಮನೆಯ ಕುಲಪುತ್ರ ತಾರಾಕ್. ಅಮ್ಮನ ಅಹಂಕಾರದ ವರ್ತನೆಗಳು ಅವನಿಗೆ ಹಿಡಿಸುತ್ತಿರುವುದಿಲ್ಲ.

IMG-20250829-WA0003

ಕಾರಣಾಂತದಿಂದ ಮದ್ಯವ್ಯಸನಿಯಾಗಿರುತ್ತಾನೆ. ಒಳ್ಳೆ ಮನಸ್ಸಿನ ಕುಡುಕ ಒಂದು ಸಂದರ್ಭದಲ್ಲಿ ಅಮ್ಮನ ಅಹಂಕಾರವನ್ನು ಮುರಿಯಲು ಮಯೂರಿಗೆ ತಾಳಿ ಕಟ್ಟುತ್ತಾನೆ. ಅಲ್ಲಿಂದ ಆಕೆಯ ಜೀವನದ ಹೊಸ ಪಯಣ ಶುರುವಾಗುತ್ತದೆ.

IMG-20250829-WA0007

ಗಾಂಧಾರಿ, ಲಕ್ಷಣ, ಶ್ರೀಗೌರಿ ಧಾರವಾಹಿಗಳಲ್ಲಿ ಹೆಸರು ಮಾಡಿರುವ *ಬಿಗ್‌ಬಾಸ್‌ನ ಜಗನ್ ನಾಯಕ, ನಿರ್ದೇಶಕ ಮತ್ತು ನಿರ್ಮಾಣ* ಮಾಡುತ್ತಿದ್ದಾರೆ.

IMG-20250829-WA0005

ಅನುರೂಪ, ಗಿರಿಜಾ ಕಲ್ಯಾಣ, ಸರ್ವ ಮಂಗಳ ಮಾಂಗಲ್ಯೆ, ಸುಂದರಿ ಧಾರವಾಹಿಗಳು, ಹಾಗೂ ಸಂತು ಸ್ಟ್ರೈಟ್ ಫಾರ್ವಡ್, ಶ್ರೀಕಂಠ ಸಿನಿಮಾಗಲ್ಲಿ ನಟಿಸಿರುವ *ಐಶ್ವರ್ಯ ಪಿಸ್ಸೆ ಇದರಲ್ಲಿ ಗಂಡನನ್ನು ಸರಿದಾರಿಗೆ ತರುವ ಪಾತ್ರದಲ್ಲಿ ನಾಯಕಿಯಾಗಿ* ಕಾಣಿಸಿಕೊಳ್ಳುತ್ತಿದ್ದಾರೆ. ಇವರೊಂದಿಗೆ ಜಾನ್ಸಿ, ಬಿ.ಎಂ.ವೆಂಕಟೇಶ್, ಇಂಚರ, ದಿಶಾ, ಹನುಮಂತು, ಜಯಬಾಲು, ಚಿತ್ರಾ, ರೂಪೇಶ್, ದಾಮಿನಿ ಮುಂತಾದವರು ಅಭಿನಯಿಸುತ್ತಿದ್ದಾರೆ.

IMG-20250829-WA0004

ನವೀನ್ ಸೋಮನಹಳ್ಳಿ ಸಂಚಿಕೆ ನಿರ್ದೇಶನವಿದೆ. ಛಾಯಾಗ್ರಹಣ ಮಂಜು, ಸಂಕಲನ ಧನು ಅವರದಾಗಿದೆ. ಇದೇ *ಸೆಪ್ಟಂಬರ್ 2ರಂದು ಮಂಗಳವಾರ ಸಂಜೆ 7 ಗಂಟೆಗೆ*, ನಂತರ *ಪ್ರತಿ ಸೋಮವಾರದಿಂದ ಶನಿವಾರದವರೆಗೆ ಸಂಜೆ 7 ಗಂಟೆಗೆ ಉದಯ ಟಿವಿ* ದಲ್ಲಿ ಪ್ರಸಾರವಾಗಲಿದೆ

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ