– ರಾಘವೇಂದ್ರ ಅಡಿಗ ಎಚ್ಚೆನ್
ನಟ ಸಿದ್ದು ಮೂಲಿಮನಿ ಅವರು ಇತ್ತೀಚೆಗೆ ‘ಅಜ್ಞಾತವಾಸಿ’ ಸಿನಿಮಾದಲ್ಲಿ ಒಂದು ಮುಖ್ಯವಾದ ಪಾತ್ರ ಮಾಡುವ ಮೂಲಕ ಗಮನ ಸೆಳೆದರು. ಈಗ ಅವರು ‘ಸೀಟ್ ಎಡ್ಜ್’ ಸಿನಿಮಾದಲ್ಲಿ ಹೀರೋಷಯ ಆಗಿ
ನಟಿಸುತ್ತಿದ್ದು ಸಿನಿಮಾ ಶೂಟಿಂಗ್ ಈಗ ಮುಕ್ತಾಯ ಆಗಿದೆ. ಕಿರುತೆರೆ ಮತ್ತು ಹಿರಿತೆರೆ ಎರಡರಲ್ಲೂ ಸಿದ್ದು ಮೂಲಿಮನೆ ಅವರು ಹೆಸರು ಮಾಡಿದ್ದಾರೆ. ಈಗ ಸೀಟ್ ಎಡ್ಜ್’ ಸಿನಿಮಾ ಕೂಡ ಬಿಡುಗಡೆಗೆ ಸಜ್ಜಾಗುತ್ತಿದೆ.
ಇದಾಗಲೇ ಚಿತ್ರದ ಎರಡು ಹಾಡುಗಳು ಬಿಡುಗಡೆಯಾಗಿದ್ದು ಪ್ರೇಕ್ಷಕರ ಗಮನ ಸೆಳೆದಿದೆ. ಈಗ ಚಿತ್ರದ ಟ್ರೇಲರ್ ಬಿಡುಗಡೆ ಆಗಿದ್ದು ಇದೀಗ ‘ವ್ಲಾಗ್-1 ದಿ ಲೂಪ್’ ಎಂಬ ಹೆಸರಿನಲ್ಲಿ ‘ಸೀಟ್ ಎಡ್ಜ್’ ಸಿನಿಮಾದ ಟೀಸರ್ ಮತ್ತು ಕಂಟೆಂಟ್ ಝಲಕ್ ಅನ್ನು ಬಿಡುಗಡೆ ಮಾಡಿದೆ. ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಅದ್ದೂರಿಯಾಗಿ ನಡೆಯಿತು.
ಚೇತನ್ ಶೆಟ್ಟಿ ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ‘ಎನ್.ಆರ್. ಸಿನಿಮಾ ಪ್ರೊಡಕ್ಷನ್ಸ್’ ಮೂಲಕ ಗಿರಿಧರ ಟಿ. ವಸಂತಪುರ ಮತ್ತು ಸುಜಾತಾ ಗಿರಿಧರ ಬಂಡವಾಳ ಹೂಡಿದ್ದಾರೆ.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ನಟ ಸಿದ್ದು ಮೂಲಿಮನಿ ‘ಇದೊಂದು ಔಟ್ ಅಂಡ್ ಔಟ್ ಸಸ್ಪೆನ್ಸ್-ಥ್ರಿಲ್ಲರ್ ಶೈಲಿಯಲ್ಲಿ ಮೂಡಿಬಂದಿರುವ ಸಿನಿಮಾ. ಈ ಸಿನಿಮಾದಲ್ಲಿ ಮೊದಲ ಬಾರಿಗೆ ನಾನೂಬ್ಬ ಯು-ಟ್ಯೂಬ್ ವ್ಲಾಗರ್ ಆಗಿ ಕಾಣಿಸಿಕೊಂಡಿದ್ದೇನೆ. ಯಾರೂ ಹೋಗದ ಭಯಾನಕ್ಕೆ ಜಾಗವನ್ನು ಪ್ರೇಕ್ಷಕರಿಗೆ ಪರಿಚಯಿಸಬೇಕು ಎಂದು ಹಠಕ್ಕೆ ಬಿದ್ದ ನಾನು, ಘೋಸ್ಟ್ ಟೌನ್ ಗೆ ಹೋಗಿ ಘೋಸ್ಟ್ ಹಂಟಿಂಗ್ ವೀಡಿಯೋ ಮಾಡಲು ನಿರ್ಧರಿಸುತ್ತೇನೆ. ಕೊನೆಗೆ ನಾನು ಅಂದುಕೊಂಡಂತೆ ಘೋಸ್ಟ್ ಹಂಟಿಂಗ್ ವಿಡಿಯೋ ಮಾಡಿ ಆಡಿಯನ್ಸ್‌ಗೆ
ತೋರಿಸುತ್ತೇನಾ..? ಇಲ್ಲಿವಾ..? ಈ ಘೋಸ್ಟ್ ಹಂಟಿಂಗ್ ಅನ್ನೋದು ಹೇಗಿರುತ್ತದೆ ಎಂಬುದೇ ನನ್ನ ಪಾತ್ರ’ ಎಂದು ಹೇಳಿದರು.
ನಾಯಕಿ ರವೀಕ್ಷಾ ಶೆಟ್ಟಿ ಮಾತನಾಡಿ, ‘ನಾನು ಈ ಸಿನಿಮಾದಲ್ಲಿ ಮಧ್ಯಮ ವರ್ಗದ ಕಾಲೇಜ್ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಘೋಸ್ಟ್ ಹಂಟಿಂಗ್‌ಗೆ ಹೋಗುವ ಯು-ಟ್ಯೂಬರ್ ಜೊತೆಗೆ ನಾನು ಕೂಡ ತೊಂದರೆಗೆ ಸಿಲುಕಿಕೊಳ್ಳುತ್ತೇನೆ. ಎರಡು ಶೇಡ್‌ಗಳಿರುವಂಥ ಪಾತ್ರ ಈ ಸಿನಿಮಾದಲ್ಲಿ ಸಿಕ್ಕಿದೆ. ಇಡೀ ಸಿನಿಮಾದ ನನಗೆ ಸಾಕಷ್ಟು ವಿಷಯಗಳನ್ನು ಕಲಿಸಿದೆ. ಒಳ್ಳೆಯ ಅನುಭವಗಳನ್ನು ಕೊಟ್ಟಿದೆ. ಒಳ್ಳೆಯ ಕಥೆ, ಹಾಡು, ಡ್ಯಾನ್ಸ್, ಕಾಮಿಡಿ, ಸೆಂಟಿಮೆಂಟ್, ಸಸ್ಪೆನ್ಸ್-ಥ್ರಿಲ್ಲರ್ ಹೋಗೆ ಎಲ್ಲಾ ಥರದ ಅಂಶಗಳೂ ಈ ಸಿನಿಮಾದಲ್ಲಿದೆ. ಖಂಡಿತವಾಗಿಯೂ ‘ಸೀಟ್ ಎಡ್ಜ್’ ಆಡಿಯನ್ಸ್‌ನ ‘ಸೀಟ್ ಎಡ್ಜ್’ ನಲ್ಲಿ ಕೂರಿಸುವಂಥ ಸಿನಿಮಾವಾಗಲಿದೆ’ ಎಂದರು.
ನಿರ್ದೇಶಕ ಚೇತನ್ ಶೆಟ್ಟಿ ಅವರು ಈ ಮೊದಲು ‘ಕೆಮಿಸ್ಟ್ರೀ ಆಫ್ ಕರಿಯಪ್ಪ’, ‘ಕ್ರಿಟಿಕಲ್ ಕೀರ್ತನೆಗಳು’ ಚಿತ್ರಗಳಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಆ ಅನುಭವದೊಂದಿಗೆ ಅವರು ಈಗ ‘ಸೀಟ್ ಎಡ್ಜ್’ ಸಿನಿಮಾಗೆ ಸ್ವತಂತ್ರ ನಿರ್ದೇಶಕರಾಗಿ ಆ್ಯಕ್ಷನ್-ಕಟ್ ಹೇಳಿದ್ದಾರೆ. ಈ ಸಿನಿಮಾದಲ್ಲಿ ಸಿದ್ದು ಮೂಲಿಮನಿ ಅವರಿಗೆ ರವೀಕ್ಷಾ ಶೆಟ್ಟಿ ನಾಯಕಿ ಆಗಿದ್ದಾರೆ. ಸಿನಿಮಾದ ಪಾತ್ರವರ್ಗದಲ್ಲಿ ರಾಘು ರಾಮನಕೊಪ್ಪ, ಮಿಮಿಕ್ರಿ ಗೋಪಿ , ಗಿರೀಶ್ ಶಿವಣ್ಣ, ಲಕ್ಷ್ಮಿ ಸಿದ್ದಯ್ಯ, ಪುನೀತ್ ಬಾಬು, ಮನಮೋಹನ್ ರೈ, ತೇಜು ಪೊನ್ನಪ್ಪ ಮುಂತಾದವರು ನಟಿಸಿದ್ದಾರೆ.
ಸೀಟ್ ಎಡ್ಜ್’ ಚಿತ್ರದಲ್ಲಿ ಡಾರ್ಕ್ ಕಾಮಿಡಿ ಜೊತೆಗೆ ಹಾರರ್, ಥ್ರಿಲ್ಲರ್ ಕಹಾನಿ ಇರಲಿದೆ. ಯೂಟ್ಯೂಬ್ ಬ್ಲಾಗರ್ ಆಗಿರುವ ಹುಡುಗನೊಬ್ಬನ ಘೋಸ್ಟ್ ಹಂಟಿಂಗ್ ಸಾಹಸವನ್ನು ತೋರಿಸಲಾಗುತ್ತದೆ. ಈ ಪ್ರಯತ್ನದಲ್ಲಿ ಆತ ಏನೆಲ್ಲ ಸಮಸ್ಯೆಗಳನ್ನು ಎದುರಿಸುತ್ತಾನೆ ಎಂಬುದರ ಸುತ್ತ ಈ ಸಿನಿಮಾದ ಕಥೆ ಇದೆ. ಮೈಸೂರು, ಬೆಂಗಳೂರು, ಶಿವಮೊಗ್ಗ ಮುಂತಾದೆಡೆ 45 ದಿನಗಳ ಕಾಲ ಶೂಟಿಂಗ್ ಮಾಡಲಾಗಿದೆ. ದೀಪಕ್ ಕುಮಾರ್ ಜೆ.ಕೆ. ಅವರು ಛಾಯಾಗ್ರಹಣ ಮಾಡಿದ್ದಾರೆ. ನಾಗೇಂದ್ರ ಉಜ್ಜನಿ ಅವರು ಸಂಕಲನ ಮಾಡುತ್ತಿದ್ದಾರೆ. ಆಕಾಶ್ ಪರ್ವ ಅವರು ‘ಸೀಟ್ ಎಡ್ಜ್’ ಸಿನಿಮಾದ ಹಾಡುಗಳಿಗೆ ಸಂಗೀತ ನೀಡಿದ್ದಾರೆ.
ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆದಿದ್ದು ಶೀಘ್ರದಲ್ಲೇ ಸಿನಿಮಾ ತೆರೆಗೆ ಬರಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.