ಆಶ್ಮೀನ್ಮುಂಜಾಲ್

ತಮ್ಮ ಅಪಾರ್ಟ್‌ ಮೆಂಟ್‌ ನ ಮೊದಲ ಮಹಡಿಯ 1 ಕೋಣೆಯಲ್ಲಿ 25 ವರ್ಷಗಳಿಗೆ ಮುನ್ನ,  ಆಶ್ಮೀನ್‌ ಮುಂಜಾಲ್‌`ಆಶ್ಮೀನ್‌ಗ್ರೇಸ್‌’ ಎಂಬ ಹೆಸರಲ್ಲಿ ಒಂದು ಬ್ಯೂಟಿ ಪಾರ್ಲರ್‌ ಆರಂಭಿಸಿದ್ದರು. ಕಾಲ ಸರಿದಂತೆ ಅದು ಜನಪ್ರಿಯವಾಗುತ್ತಾ ಅತಿ ದೊಡ್ಡದಾಗಿ ಬೆಳೆಯಿತು. ಇದಕ್ಕಾಗಿ ಮತ್ತೆರಡು ಕೋಣೆಗಳನ್ನು ಸಿದ್ಧಪಡಿಸಿದ್ದಾಯ್ತು. 8 ವರ್ಷಗಳ ನಂತರ ಸೌಥ್‌ ಎಕ್ಸ್ ಟೆನ್ಶನ್‌ ನಲ್ಲಿ ಮೊದಲ ಸಲ ಕಮರ್ಶಿಯಲ್ ಮಾರ್ಕೆಟ್‌ ನಲ್ಲಿ ಮತ್ತೊಂದು ಪಾರ್ಲರ್‌ ತೆರೆದು ಅದನ್ನು `ಆಶ್ಮೀನ್‌ ಮುಂಜಾಲ್ಸ್ ಎಂಪೈರ್‌ ಆಫ್‌ ಮೇಕ್ ಓವರ್‌’ ಎಂದು ಹೆಸರಿಟ್ಟರು. ಬೇಡಿಕೆ ಹೆಚ್ಚಿ ಯೂನಿಸೆಕ್ಸ್ ಸೆಲೂನ್‌ತೆರೆಯಲೇಬೇಕಾಯಿತು. ಆಗ ಈಕೆ `ಸ್ಟಾರ್‌ ಸೆಲೂನ್‌ ಪ್ರೈ.ಲಿ.’ ಹೆಸರಿನಲ್ಲಿ ತಮ್ಮ ಕಂಪನಿಯನ್ನು ರಿಜಿಸ್ಟರ್‌ ಮಾಡಿಸಿದರು. ಇದರಲ್ಲಿ ಆಕೆ ಡೈರೆಕ್ಟರ್‌, ಉಳಿದವರು ಪಾರ್ಟ್‌ ನರ್ಸ್‌. ನಂತರ 2010ರಲ್ಲಿ ಇದರಡಿ `ಸ್ಟಾರ್‌ ಅಕಾಡೆಮಿ’ ಶುರುವಾಯ್ತು. ಇಲ್ಲಿ ಬ್ಯೂಟಿ ಪಾರ್ಲರ್‌ ನಡೆಸಲು ತರಬೇತಿ ನೀಡತೊಡಗಿದರು. ಈ ರೀತಿ 1 ಕೋಣೆಯಲ್ಲಿ ಶುರುವಾದ ಪಾರ್ಲರ್‌ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದೆ!

ಈಕೆ ಕಳೆದ 25 ವರ್ಷಗಳಿಂದ ಬ್ಯೂಟಿ ಇಂಡಸ್ಟ್ರಿಯಲ್ಲಿ ಕಾಸ್ಮೆಟಾಲಜಿಸ್ಟ್ ಆಗಿ ದುಡಿಯುತ್ತಿದ್ದಾರೆ. ಇಲ್ಲಿ ಹೆಣ್ಣು ಗಂಡು ಇಬ್ಬರಿಗೂ ಸೌಂದರ್ಯ ಸಂವರ್ಧನೆ ಒದಗಿಸಿ ಅವರನ್ನು ಕೆರಿಯರ್‌ ನ ಉತ್ತುಂಗಕ್ಕೇರಿಸುವ ಕೆಲಸ ನಡೆಯುತ್ತದೆ. ಒಬ್ಬ ಸಾಧಾರಣ  ಗೃಹಿಣಿಯಾಗಿ ತಮ್ಮ ಮನೆಯ ಒಂದು ಕೋಣೆಯನ್ನೇ ಇದಕ್ಕಾಗಿ ಮೀಸಲಿಟ್ಟರು. ಮನೆ ಮಟ್ಟಿಗೆ ಬಿಸ್‌ ನೆಸ್‌ ನಡೆಸುವಂತೆ ಪತಿ ಸಲಹೆ ನೀಡಿದರು. 107ರವರೆಗೆ ಇದನ್ನು ನಡೆಸುತ್ತಾ, ಮನೆವಾರ್ತೆ ಗಮನಿಸಿಕೊಂಡರು. ಕೇವಲ ಡಿಗ್ರಿ ಹೊಂದಿದ್ದ ಈಕೆಗೆ ಉನ್ನತ ಶಿಕ್ಷಣ ಏನೂ ಇರಲಿಲ್ಲ. ಮನೆಮಟ್ಟಿಗೆ ಎಂದಾಗ ಬೇರೇನಾದರೂ ಸಣ್ಣಪುಟ್ಟದ್ದು ಮಾಡಬಹುದಿತ್ತು. ಜನರ ಸೌಂದರ್ಯ ಹೆಚ್ಚಿಸುವ ಕೆಲಸ ಪ್ರಿಯಾಗಿ ಅದನ್ನೇ ಮುಂದುವರಿಸಿದರು.

ಇದಕ್ಕಾಗಿ ದೆಹಲಿಯಲ್ಲಿ ಲಭ್ಯವಿದ್ದ ಬೆಸ್ಟ್ ಕಾಸ್ಮೆಟಿಕ್‌ ಟೆಕ್ನಾಲಜಿಯ ಕೋರ್ಸ್‌ ಮುಗಿಸಿ ಮುಂದೆ ಪಾರ್ಲರ್‌ ವಿಸ್ತರಿಸಲು ಬಯಸಿದರು. ಇವರ ಕೈಚಳಕನ್ನು ಜನ ಗುರುತಿಸಿ ಬಹಳ ಮೆಚ್ಚಿಕೊಂಡರು. ಹೇರ್‌ ಕಟ್‌ಕಲರಿಂಗ್‌ ಇವರ ಪ್ಲಸ್‌ ಪಾಯಿಂಟ್‌. ವರ್ಕೋಹಾಲಿಕ್‌ ಆದ ಈಕೆ ಅದರಲ್ಲಿ ಸಂಪೂರ್ಣ ಮುಳುಗಿಹೋದರು. 10-10ರವರೆಗೆ ದುಡಿಯುವುದು ಅಭ್ಯಾಸವಾಯ್ತು. ಜೊತೆ ಜೊತೆಗೆ ಮನೆ, ಮಕ್ಕಳು, ಅವರ ಓದಿನ ಕಡೆಯೂ ಸಮಾನ ಗಮನ ಹರಿಸಬೇಕಿತ್ತು.

ಇಲ್ಲಿಯವರೆಗೆ ಈಕೆಗೆ ಬಹಳಷ್ಟು ಪ್ರಶಸ್ತಿಗಳು ಅರಸಿ ಬಂದಿವಂ. ಸ್ಕಿಲ್ ‌ಡೆಲಪ್‌ ಮೆಂಟ್‌ ಗಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್‌ಕೇಜ್ರಿವಾಲ್ ‌ಪ್ರಶಸ್ತಿ, ಉಪರಾಷ್ಟ್ರಪತಿ ಎಂ. ವೆಂಕಯ್ಯನವರಿಂದ ಪ್ರಶಸ್ತಿ ಪುರಸ್ಕಾರ, ವುಮನ್‌ ಎಂಪವರ್ಮೆಂಟ್‌ ಗಾಗಿ ಸುಷ್ಮಾ ಸ್ವರಾಜ್‌ ಪ್ರಶಸ್ತಿಗಳು, ಮೇಕಪ್‌ಬ್ಯೂಟಿಗಾಗಿ ಆಲ್ ಇಂಡಿಯಾ ಎಕ್ಸಿಲೆನ್ಸ್ ಅವಾರ್ಡ್‌, ಸೆಲೆಬ್ರಿಟಿ ಮೇಕಪ್‌ ಆರ್ಟಿಸ್ಟ್ ಅವಾರ್ಡ್ಸ್….. ಹೀಗೆ ಲೆಕ್ಕವಿಲ್ಲದಷ್ಟು ಸಂದಿವೆ.

ಪ್ರಾಪರ್‌ ಟೈಂ ಮ್ಯಾನೇಜ್‌ ಮೆಂಟ್‌ ಎಲ್ಲಕ್ಕಿಂತ ಬಲು ಮುಖ್ಯ ಎನ್ನುತ್ತಾರೆ. ಹಣ, ಹೆಸರು, ಕೀರ್ತಿ, ಕೆರಿಯರ್‌….. ಇವೆಲ್ಲ ಇದ್ದದ್ದೇ, ಆದರೆ ನಿಮ್ಮ ಮಕ್ಕಳ ಬಾಲ್ಯ ಮತ್ತೆ ವಾಪಸ್‌ ಬರಲಾರದು. ಹೀಗಾಗಿ ಅವರ ಬಾಲ್ಯದ ದಿನಗಳನ್ನು ಆನಂದಿಸಿ. ಮಕ್ಕಳನ್ನು ಸರಿಯಾಗಿ ಗಮನಿಸಿಕೊಳ್ಳಲಿಲ್ಲ ಎಂಬ ಗಿಲ್ಟ್ ಮುಂದೆ ನಿಮ್ಮ ಯಶಸ್ಸನ್ನು ಎಂಜಾಯ್‌ ಮಾಡಲಿಕ್ಕೂ ಬಿಡದು. ತಮ್ಮ ಪ್ರೊಫೆಶನಲ್ ಸಕ್ಸಸ್‌ ನ್ನು ಎಂಜಾಯ್‌ ಮಾಡುವ ಈಕೆ ಇಂದು ತನ್ನ ಸಂಸಾರ, ಗಂಡ, ಮನೆ ಮಕ್ಕಳು, ನೆಂಟರಿಷ್ಟರು, ಹಬ್ಬ ಹರಿದಿನಗಳ ಸುಖ ಸಂತೋಷ ಎಂದೂ ಬಿಟ್ಟು ಕೊಡಲಿಲ್ಲ.

ನೀವು ಫೀಲ್ಡ್ ಗೆ ಬಂದದ್ದು ಹೇಗೆ?

ಜನರ ಬ್ಯೂಟಿ ಹೆಚ್ಚಿಸುವುದು ನನ್ನ ಹವ್ಯಾಸ. ಅದನ್ನೇ ವೃತ್ತಿಯಾಗಿ ಮಾಡಿಕೊಂಡೆ. ನಿಮ್ಮನ್ನು ನೀವು ಹೇಗೆ ರೂಪಿಸಿಕೊಳ್ಳಿ ಬಯಸುತ್ತೀರಿ ಎಂಬುದಿಲ್ಲಿ ಮುಖ್ಯ. ಸೌಂದರ್ಯದ ಕುರಿತಾಗಿ ಪ್ರತಿ ಸಮುದಾಯ, ದೇಶಕ್ಕೂ ತನ್ನದೇ ಆದ ಮಾನದಂಡ ಇರುತ್ತದೆ. ಒಂದೆಡೆ ಕಪ್ಪು, ಗೌರವರ್ಣ, ಶ್ಯಾಮಲವರ್ಣ, ಗೋಧಿ ಬಣ್ಣ ಇತ್ಯಾದಿ ಪ್ರಮುಖ ಆಗುತ್ತದೆ. ಪ್ರತಿಯೊಂದೂ ವಿಭಿನ್ನ, ನೀವು ಹೇಗೆ ಬ್ಯೂಟಿ ಎನ್‌ ಹ್ಯಾನ್ಸ್ ಮಾಡಬಲ್ಲಿರಿ ಅನ್ನೋದೇ ಇಲ್ಲಿ ಮುಖ್ಯ. ಒಬ್ಬರ ಕೂದಲು, ಚರ್ಮದ ಮೇಲ್ಪದರ ಅವರ ಲುಕ್ಸ್ ಮೇಲೆ ಹೆಚ್ಚಿನ ಪ್ರಭಾವ ಬೀರಬಲ್ಲದು. ಕೆಲವರನ್ನು ಅವರಿಷ್ಟದ ರೂಪಕ್ಕಾಗಿ ಕೂದಲಿನ ಸ್ಟೈಲ್, ವಾಲ್ಯೂಂ ಹೆಚ್ಚಿಸಿ, ಸೂಕ್ತ ಕಟಿಂಗ್ ನೀಡಿ, ಚರ್ಮದ ಪಿಗ್ಮೆಂಟೇಶನ್‌, ಮೊಡವೆ, ಡಾರ್ಕ್‌ ಸರ್ಕಲ್ಸ್ ಇತ್ಯಾದಿ ಸರಿಪಡಿಸಿದರೆ, ಮೇಕಪ್‌ ನಿಂದ ಸ್ಕಿನ್‌ ಲುಕ್ಸ್ ಆಕರ್ಷಕಗೊಳಿಸಿದರೆ, ಜನ ತಂತಾನೇ ಸ್ಮಾರ್ಟ್‌ ಆಗಿ ಕಾಣಿಸುತ್ತಾರೆ. ಬಾಲ್ಯದಿಂದಲೂ ಬೊಂಬೆಗೆ ತಲೆ ಬಾಚಿ ಅಲಂಕರಿಸುತ್ತಿದ್ದ ನಾನು ಸಹಜವಾಗಿಯೇ ಈ ಫೀಲ್ಡ್ ಗೆ ಬಂದುಬಿಟ್ಟೆ!

ಯಾವ ಘಟನೆ ನಿಮ್ಮ ಜೀವನವನ್ನೇ ಬದಲಿಸಿತು?

ಆ ದಿನ ನನ್ನ ಮಗಳ ಹುಟ್ಟುಹಬ್ಬ. ಅದನ್ನು ಅದ್ಧೂರಿಯಾಗಿ ಆಚರಿಸಲು, ಅವಳಿಗೆ ಗ್ರಾಂಡ್‌ ಡ್ರೆಸ್‌ ಖರೀದಿಸಲು ಬಯಸಿದೆ. ಆದರೆ ಅದೆಲ್ಲ ನನ್ನ ಬಜೆಟ್‌ ಗೆ ಮೀರಿದ್ದು ಎಂದು ಮಾರ್ಕೆಟ್‌ ಗೆ ಹೋದಾಗ ಗೊತ್ತಾಯ್ತು. ನನ್ನ ಬಳಿ ಇದ್ದ ಹಣದಲ್ಲೇ ಕಾಂಪ್ರಮೈಸ್ ಮಾಡಿಕೊಂಡು ಹೇಗೋ ಬರ್ತ್‌ ಡೇ ಮುಗಿಸಿದೆ. ಮುಂದಿನ ಬರ್ತ್‌ ಡೇ ಹೊತ್ತಿಗೆ ನಾನು ಬಯಸಿದ್ದನ್ನು ಕೊಳ್ಳುವಂತೆ ಆಗಬೇಕೆಂದು ದೃಢವಾಗಿ ನಿಶ್ಚಯಿಸಿದೆ. ನಾನು ಮನೆಯವರ ಬಳಿ ಕೈಯೊಡ್ಡಲಿಲ್ಲ. ಸ್ವತಂತ್ರವಾಗಿ ನಾನೇ ಏಕೆ ಗಳಿಸಬಾರದು ಎಂದು ನಿಶ್ಚಯಿಸಿದೆ. ಹೀಗೆ ಸ್ವಾವಲಂಬಿ ಆಗುವ ನನ್ನ ದೃಢ ವಿಶ್ವಾಸವೇ ನನ್ನನ್ನು ಇಂದು ಈ ಮಟ್ಟಕ್ಕೆ ಬೆಳೆಸಿದೆ.

ನನ್ನ ಪತಿ ಸಹ ಬಿಸ್‌ ನೆಸ್‌ ಮಾಡು, ಮನೆಮಟ್ಟಿಗೆ ನಿಭಾಯಿಸು, ಗೃಹಿಣಿಯ ಜವಾಬ್ದಾರಿ ಮರೆಯಬೇಡ ಎಂದು ಎಚ್ಚರಿಸಿದರು. ಹೀಗಾಗಿ ಕೆಲಸಕ್ಕೆ ಹೊರಗೆ ಹುಡುಕಲಿಲ್ಲ. ಮನೆ ಮಟ್ಟಿಗೆ ಸಣ್ಣಪುಟ್ಟದು ಆರಂಭಿಸಲು ನನ್ನಿಷ್ಟದ ಮೇಕಪ್‌ ಬಿಸ್‌ ನೆಸ್‌ ಇರಲಿ ಎಂದು ಅಂದು ನಿರ್ಧರಿಸಿದ್ದು, ಇಂದು ಈ ಮಟ್ಟಕ್ಕೆ ಬೆಳೆದಿದೆ!

ಹೆಂಗಸರು ಫೀಲ್ಡ್ ನಲ್ಲಿ ಹೇಗೆ ಪ್ರಗತಿ ಕಾಣಲು ಸಾಧ್ಯ?

ನಿಮಗೆ ಜನರನ್ನು ಬ್ಯೂಟಿಗೊಳಿಸುವುದೇ ಮುಖ್ಯ ಎನಿಸಿದರೆ, ಪಾರ್ಲರ್‌ ತೆರೆಯದೆಯೂ, ಜನರ ಬಳಿ ಹೋಗಿ ಈ ಸರ್ವೀಸ್ ಒದಗಿಸಬಹುದು. ಇಂದಿನ ಆಧುನಿಕ ದಿನಗಳಲ್ಲಿ ಒಂದು ಸ್ಮಾರ್ಟ್‌ ಫೋನ್‌ ಇದ್ದರೆ, ವಿಶ್ವದ ನಾನಾ ಕಡೆಯ ಬಾಗಿಲು ತೆರೆದಂತೆಯೇ ಸರಿ. ಇದಕ್ಕಾಗಿ ನೀವು ಒಂದಿಷ್ಟು ಮೂಲ ಬಂಡವಾಳ ಹೂಡಿ ಬೇಕಾದ ಬೇಸಿಕ್‌ ಥಿಂಗ್ಸ್ ಕೊಂಡರಾಯ್ತು. ನಿಮ್ಮ ಬಳಿ ಈ ಪ್ರತಿಭೆ ಇದ್ದರೆ ತಂತಾನೇ ಬೇರೆಲ್ಲ ಮ್ಯಾನೇಜ್‌ ಆಗುತ್ತದೆ. ಗ್ರಾಹಕರು ತಾವೇ ನಿಮ್ಮ ಅಡ್ರೆಸ್‌ ಹುಡುಕಿ ಬರುತ್ತಾರೆ. ಹೊಸ ಹೊಸ ಟೆಕ್ನಿಕ್ಸ್ ನಿಮ್ಮೆಲ್ಲ ಕೆಲಸ ಸುಲಭ ಆಗಿಸಿದೆ. ಇಂದಿನ ಜನರಿಗೆ ಸ್ಮಾರ್ಟ್‌ ಆಗುವ ಕ್ರೇಜ್‌ ಸ್ವಲ್ಪ ಜಾಸ್ತೀನೇ ಇದೆ. ಹೇರ್‌ ಸ್ಟೈಲ್‌, ಮೇಕಪ್‌ ಗಳಲ್ಲಿ ಸುಧಾರಣೆ ಮಾಡಬೇಕಷ್ಟೆ. ಹಿಂದೆ ಕೇವಲ ಕೆಲವೇ ಮಂದಿ ಪಾರ್ಲರ್‌ ಗೆ ಹೋಗುತ್ತಿದ್ದರು, ಈಗ ಎಲ್ಲರೂ ಸಹ!

ಒಬ್ಬ ಮಹಿಳೆ ಸಶಕ್ತಳಾಗುವುದು ಹೇಗೆ?

ನೀವು ನಿಮ್ಮನ್ನು ಹೇಗೆ ರೂಪಿಸಿಕೊಳ್ಳ ಬಯಸುತ್ತೀರೋ ಹಾಗೇ ಬೆಳೆಯಬಹುದು! ನಾನು ಒಬ್ಬಂಟಿ ಹೆಣ್ಣು ಹೆಂಗಸು, ನಾನೇನು ತಾನೇ ಮಾಡಬಲ್ಲೆ, ಇದು ನನ್ನ ಹಣೆಬರಹ ಎನ್ನುತ್ತಿದ್ದರೆ ಹಾಗೇ ಇದ್ದುಬಿಡುತ್ತೀರಿ. ದೃಢ ಮನಸ್ಕರಾಗಿ ಆ ಸ್ಥಿತಿಯಿಂದ ಹೊರಬಂದರೆ ನಿಮ್ಮನ್ನು ಯಾರೂ ತಡೆಯಲಾರರು. ಇದನ್ನು ಹೇಗೆ ಮಾಡಿಕೊಳ್ಳಬೇಕು ಎಂಬುದನ್ನು ಅವರವರ ಮಟ್ಟದಲ್ಲಿ ಅವರೇ ನಿರ್ಧರಿಸಬೇಕು. ಮಹಿಳೆಯ ಆಂತರಿಕ ಶಕ್ತಿ ಅಪಾರ! ಅದನ್ನು ಸೂಕ್ತವಾಗಿ ಹೊರತರಬೇಕಷ್ಟೆ. ಇಂಥದ್ದೇ ಮಾಡಬೇಕು ಎಂದು ಹಠತೊಟ್ಟು ಮುನ್ನಡೆಯಿರಿ.

ನಾನು ಬಲು ಸಂಪ್ರದಾಯಸ್ಥ ಮನೆಯಲ್ಲಿ ಬೆಳೆದೆ, ಮದುವೆಯಾದೆ. ನಮ್ಮ ಮನೆತನದ ಮೊದಲ ಸೊಸೆಯಾಗಿ ನಾನು ದುಡಿಯಲಾರಂಭಿಸಿದೆ. ಹೆಣ್ಣು ಸಂಪಾದಿಸಬಾರದು ಎಂಬುದೆಲ್ಲ ಕಳೆ ಕಂದಾಚಾರ. ಸ್ವಾವಲಂಬಿಯಾಗಿ ಸಿಡಿದು ನಿಂತ ಹೆಣ್ಣನ್ನು ಯಾರೂ ಹಿಮ್ಮೆಟ್ಟಿಸಲಾರರು!

ನಿಮಗೆ ಮೂಲ ಪ್ರೇರಣೆ ಯಾವುದು?

ನನ್ನ ತಾಯಿ ಬಹಳ ಸಪೋರ್ಟ್‌ ಮಾಡುತ್ತಿದ್ದರು. ಆಕೆ ದೆಹಲಿ ಪೊಲೀಸ್‌ ವಿಭಾಗದಲ್ಲಿ ಮುಖ್ಯಸ್ಥೆ. ಮನೆ, ಕೆರಿಯರ್‌ ಎರಡನ್ನೂ ಚೆನ್ನಾಗಿ ನಿಭಾಯಿಸಿದರು. ಕ್ರೈಂ ಇನ್‌ ಚಾರ್ಜ್‌ ಆಗಿ ಕಠಿಣ ಕೆಲಸ ನಿಭಾಯಿಸಿದ್ದಾರೆ. ಮೂವರು ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿಸಿ, ನೆಂಟರಿಷ್ಟರನ್ನು ಆದರಿಸುತ್ತಾ ಯಶಸ್ವೀ ಗೃಹಿಣಿಯಾಗಿ ಆಕೆ ಮಾಡುತ್ತಿದ್ದ ಬ್ಯಾಲೆನ್ಸ್ ಶ್ಲಾಘನೀಯ! ಮುಂದೆ ನಿನಗೆ ಮದುವೆಯಾಗಿ ಮಕ್ಕಳಾದರೂ ಸ್ವಾವಲಂಬಿ ಆಗದೆ ಇರಬೇಡ ಎನ್ನುತ್ತಿದ್ದರು.

ಪ್ರತಿನಿಧಿ.

 

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ