ಪ್ರ : ನಾನು 23 ವರ್ಷದ ವಿವಾಹಿತ ಮಹಿಳೆ. ನನಗೊಬ್ಬ ಮಗನೂ ಇದ್ದಾನೆ. ನನ್ನ ತೂಕ ಮೊದಲಿನಿಂದಲೇ ಕಡಿಮೆ ಇದೆ. ಇತ್ತೀಚೆಗೆ ಅದು ಇನ್ನಷ್ಟು ಕಡಿಮೆಯಾಗಿ ಕೇವಲ 32 ಕಿಲೋ ಆಗಿದೆ. ಕುಟುಂಬದ ಎಲ್ಲರೂ ನಾನು ಸರಿಯಾಗಿ ಊಟತಿಂಡಿ ತಿನ್ನುವುದಿಲ್ಲ, ಖುಷಿಯಿಂದಿರುವುದಿಲ್ಲ ಎಂದು ಹೇಳುತ್ತಿರುತ್ತಾರೆ. ಆದರೆ ನಾನು ಸರಿಯಾಗೇ ತಿನ್ನುತ್ತೇನೆ. ಆದರೆ ದೇಹ ಕುಗ್ಗುತ್ತಾ ಹೊರಟಿದೆ. ಇದು ಯಾವುದಾದರೂ ಆಂತರಿಕ ರೋಗದ ಲಕ್ಷಣ ಆಗಿರಬಹುದೆ? ತೂಕ ಹೆಚ್ಚಲು ಏನು ಮಾಡಬೇಕು ತಿಳಿಸಿ.

ಉ : ಯಾವುದೇ ಒಬ್ಬ ವ್ಯಕ್ತಿಯ ತೂಕ ಪ್ರಯತ್ನ ಮಾಡದೇ ತಂತಾನೇ ಕುಗ್ಗುತ್ತಾ ಹೋದರೆ, ಆ ವ್ಯಕ್ತಿಗೆ ದೈಹಿಕ ಅಥವಾ ಮಾನಸಿಕ ರೋಗ ಇರದೇ ಇದ್ದರೆ ಅದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ನೀವು ನಿಮ್ಮ ಕುಟುಂಬ ವೈದ್ಯರು ಅಥವಾ ಇಂಟರ್ನ್‌ ಮೆಡಿಸಿನ್‌ ನ ತಜ್ಞ ವೈದ್ಯರನ್ನು ಭೇಟಿಯಾಗಿ ಪರೀಕ್ಷೆ ಮಾಡಿಸಿಕೊಳ್ಳಿ.

ಕರುಳಿನ ಹಲವು ಪ್ರಕಾರದ ರೋಗಗಳಲ್ಲಿ ಕರುಳಿನ ಪಚನಶಕ್ತಿ ದುರ್ಬಲಗೊಳ್ಳುತ್ತದೆ ಹಾಗೂ ಆಹಾರ ಕರುಳಿನಲ್ಲಿ ಪಚನವಾಗುವ ಬದಲಿಗೆ ದೇಹದಲ್ಲಿ ವ್ಯರ್ಥವಾಗಿ ಹೋಗುತ್ತದೆ. ಆ ಕಾರಣದಿಂದ ಈ ಸ್ಥಿತಿ ಉದ್ಭವಿಸಬಹುದು. ಮಧುಮೇಹ ವಿಪರೀತ ಸ್ಥಿತಿಗೆ ಹೋದಾಗಲೂ ಈ ಲಕ್ಷಣ ಕಂಡುಬರುತ್ತದೆ. ದೇಹದಲ್ಲಿ ಟಿಬಿ ಅಂದರೆ ಕ್ಷಯ ರೋಗ ಇದ್ದಾಗಲೂ ದೇಹ ಕೃಶವಾಗುತ್ತದೆ. ಕೆಲವು ಹಾರ್ಮೋನ್‌ ರೋಗಗಳು ಹೈಪೊಥೈರಾಯ್ಡಿಸಂ ಹಾಗೂ ಎಡಿಸನ್‌ ರೋಗದ ಸಂದರ್ಭದಲ್ಲೂ ತೂಕ ಕುಗ್ಗುತ್ತಾ ಹೋಗುತ್ತದೆ.  ಕೆಲವು ವ್ಯಕ್ತಿಗಳಲ್ಲಿ ಕ್ಯಾನ್ಸರ್‌ ನಂತಹ ರೋಗ ಕೂಡ ಅದಕ್ಕೆ ಕಾರಣವಾಗಬಹುದು.

ಕೆಲವು ಜನರಲ್ಲಿ ಮಾನಸಿಕ ಅತೃಪ್ತಿ, ಉದಾಸತನ, ಖಿನ್ನತೆಯಿಂದಲೂ ಹೀಗಾಗಬಹುದು. ಮತ್ತೆ ಕೆಲವರಲ್ಲಿ ಇದೇ ಲಿವರ್‌, ಕಿಡ್ನಿ ಅಥವಾ ಹಾರ್ಟ್‌ ಫೆಲ್ಯೂರ್‌ ಗೂ ಸಂಬಂಧಿಸಿದ್ದಾಗಿ ಇರಬಹುದು. ನೀವು ಸಮಸ್ಯೆಯಿಂದ ಹೊರಬರಲು ಎಲ್ಲಕ್ಕೂ ಮೊದಲು ಅದಕ್ಕೆ ಏನು ಕಾರಣ ಎಂದು ಕಂಡುಕೊಳ್ಳಬೇಕು. ಆ ಬಳಿಕವೇ ಅದಕ್ಕೆ ಏನು ಉಪಾಯ ಎಂದು ಹೇಳಬಹುದು.

ಪ್ರ : ನಾನು 40 ವರ್ಷದ ಉದ್ಯೋಗಸ್ಥ ಮಹಿಳೆ. ಕೆಲವು ದಿನಗಳಿಂದ ಮಂಡಿನೋವು ಉಂಟಾಗುತ್ತಿದೆ. ಕೆಲವೊಮ್ಮೆ ಸಮಸ್ಯೆ ಎಷ್ಟು ಗಂಭೀರವಾಗುತ್ತದೆಂದರೆ, ಕೆಲಸ ಮಾಡುವುದಿರಲಿ, ನಡೆದಾಡಲು ಕೂಡ ಆಗುವುದಿಲ್ಲ. ಇಷ್ಟು ಕಡಿಮೆ ವಯಸ್ಸಿನಲ್ಲಿ ಮಂಡಿಯ ನೋವು ವಿಕೋಪಕ್ಕೆ ಹೋಗಿಬಿಟ್ಟರೆ ಮುಂದೆ ಜೀವನ ಹೇಗೆ ಎಂದು ಚಿಂತೆಯಾಗುತ್ತದೆ. ಇದು ಸಂಧಿವಾತದ ಲಕ್ಷಣವಾಗಿರಬಹುದು. ಸಮಸ್ಯೆ ಹೆಚ್ಚಾಗದಂತೆ ಏನು ಮಾಡಬೇಕು? ಯಾವ ವೈದ್ಯರನ್ನು ಭೇಟಿಯಾಗಬೇಕು?

ಉ : 40ನೇ ವಯಸ್ಸಿನಲ್ಲಿ ಶುರುವಾಗಿರುವ ಮಂಡಿನೋವಿನ ಹಿಂದೆ ಹಲವು ಪ್ರಕಾರದ ಸಂಧಿವಾತ ಹಾಗೂ ಮಂಡಿಯ ಅಂಗಾಂಶ ಹಾಗೂ ನರಗಳಲ್ಲಿ ಏನಾದರೂ ಪೆಟ್ಟಾಗಿದ್ದರೆ ಹೀಗಾಗಬಹುದು. ರುಮೆಟೈಡ್‌ ಆರ್ಥರೈಟಿಸ್‌, ಆಸ್ಟೂವೆ ಅರ್ಥರೈಟಿಸ್ ಹಾಗೂ ಇತರೆ ಕೆಲ ಆರ್ಥರೈಟಿಸ್‌ ಇದಕ್ಕೆ ಕಾರಣವಾಗಿರಬಹುದು. ಏಳುವಾಗ, ಕುಳಿತುಕೊಳ್ಳುವಾಗ, ಓಡುವಾಗ ಸಮಸ್ಯೆ ಅನಿಸುತ್ತದೆ. ಯಾರಾದರೂ ಅರ್ಥೊಪಿಡಿಕ್‌ ಸರ್ಜನ್‌ ರ ಬಳಿ ಪರೀಕ್ಷೆ ಮಾಡಿಸಿಕೊಳ್ಳಿ.

 

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ