ರಾಘವೇಂದ್ರ ಅಡಿಗ ಎಚ್ಚೆನ್.

ಬಿಗ್ ಬಾಸ್ ಕನ್ನಡ 12 ಶುರುವಾದಾಗಿನಿಂದ ಕಲರ್ಸ್ ಕನ್ನಡ ಚಾನೆಲ್ ನ TRP ಹೆಚ್ಚಾಗುತ್ತಲೆ ಇದೆ.
ಬಿಗ್ ಬಾಸ್ ಕನ್ನಡ 12 ಕಾರ್ಯಕ್ರಮಕ್ಕೂ ಭರ್ಜರಿ ಟಿಆರ್‌ಪಿ ಲಭಿಸುತ್ತಿದ್ದು, ಅದರ ನೇರ ಇಂಪ್ಯಾಕ್ಟ್‌ ಕಲರ್ಸ್ ಕನ್ನಡ ವಾಹಿನಿ ಮೇಲೆ ಬೀರಿದೆ. TRP ಲೆಕ್ಕಾಚಾರದಲ್ಲಿ ಕಲರ್ಸ್ ಕನ್ನಡ ವಾಹಿನಿಯು ಜೀ ಕನ್ನಡ ವಾಹಿನಿಯನ್ನ ಹಿಂದಿಕ್ಕಿದೆ ಅಂದ್ರೆ ನೀವು ನಂಬಲೇಬೇಕು.
ಜಿಆರ್‌ಪಿ ಲೆಕ್ಕಾಚಾರದಲ್ಲಿ ಕಲರ್ಸ್ ಕನ್ನಡ ವಾಹಿನಿ ನಂಬರ್ 1, ಕರ್ನಾಟಕ ಅರ್ಬನ್ 15 – 50 ಎಬಿಸಿ ಕಲರ್ಸ್ ಕನ್ನಡ SD ಅನ್ವಯ, ಕಲರ್ಸ್ ಕನ್ನಡ ವಾಹಿನಿ ನಂಬರ್ 1 ಸ್ಥಾನ ಪಡೆದಿದೆ. ಕಲರ್ಸ್ ಕನ್ನಡ – 536 ಜಿಆರ್‌ಪಿ ಪಡೆದಿದ್ದರೆ, ಜೀ ಕನ್ನಡ – 533 ಜಿಆರ್‌ಪಿ ಪಡೆದು ಎರಡನೇ ಸ್ಥಾನದಲ್ಲಿದೆ.

WhatsApp-Image-2025-11-06-at-6.41.13-PM

ಕಳೆದ ಮೂರು ವಾರಗಳಿಂದ ಬಾರ್ಕ್ ರಿಪೋರ್ಟ್‌ನಲ್ಲಿ ಕಲರ್ಸ್ ಕನ್ನಡ ವಾಹಿನಿಯ ಟಿವಿಆರ್‌ ರೇಟಿಂಗ್ಸ್‌ನ 1000 ಸಾವಿರ ಗಡಿ ದಾಟುತ್ತಿದೆ. ಸತತ ಮೂರು ವಾರಗಳಿಂದ ಸಾವಿರ ಗಡಿ ದಾಟಿ ಕಲರ್ಸ್ ಕನ್ನಡ ವಾಹಿನಿ ಹ್ಯಾಟ್ರಿಕ್ ಬಾರಿಸಿದೆ.

WhatsApp-Image-2025-11-06-at-6.39.04-PM-1-768x434

ಬಿಗ್ ಬಾಸ್‌’ ಕಾರ್ಯಕ್ರಮಕ್ಕೆ ಬಂದಿರುವ ಟಿವಿಆರ್‌ ಎಷ್ಟು?
‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋಗೆ ಭರ್ಜರಿ ರೇಟಿಂಗ್ಸ್ ಲಭಿಸುತ್ತಿದೆ. ಸೋಮವಾರದಿಂದ ಶುಕ್ರವಾರ ಪ್ರಸಾರವಾಗುವ ವಾರದ ಸಂಚಿಕೆಗಳಿಗೆ 8.0 ಟಿವಿಆರ್‌ ದಾಖಲಾಗಿದೆ. ಇದು ಈ ಸೀಸನ್‌ನಲ್ಲಿ ಈವರೆಗೂ ದಾಖಲಾಗಿರುವ ಹೈಯೆಸ್ಟ್ ಟಿವಿಆರ್‌. ಇನ್ನೂ ಕಿಚ್ಚ ಸುದೀಪ್‌ ನಡೆಸಿಕೊಡುವ ‘ವಾರದ ಕಥೆ ಕಿಚ್ಚನ ಜೊತೆ’ ಶನಿವಾರದ ಸಂಚಿಕೆ ಡಬಲ್‌ ಡಿಜಿಟ್‌.. ಅಂದ್ರೆ 10.0 ಟಿವಿಆರ್‌ ಬಂದಿದೆ. ಕಿಚ್ಚ ಸುದೀಪ್‌ ಭಾನುವಾರ ನಡೆಸಿಕೊಡುವ ‘ಸೂಪರ್ ಸಂಡೆ ವಿತ್ ಸುದೀಪ’ ಸಂಚಿಕೆ ಎರಡಂಕಿಯ 10.3 ರೇಟಿಂಗ್‌ ಪಡೆದಿದೆ. ಇದು ಕರ್ನಾಟಕ ಅರ್ಬನ್ 15 – 50 ಎಬಿಸಿ ಅನುಸಾರ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ