ಪರಿಶ್ರಮ ತಂದ ಪ್ರತಿಫಲ! : ಪುಸ್ತಕಗಳನ್ನು ಹೊರತರುವ ಕಂಪನಿ ಫ್ರಿಂಜ್‌ ಕ್ಲೌಡ್‌ ಗಾಗಿ, ಇತ್ತೀಚೆಗೆ ಕ್ರೀಚೀಸ್‌ ಹೆಸರಿನ ಇಬ್ಬರು ಕಲಾವಿದರು ಒಟ್ಟು 6 ಡಾಲರ್‌ ಗಳಲ್ಲಿ 2 ಹಾಡು, 1 ವಿಡಿಯೋ ಮಾಡಿಕೊಟ್ಟಿದ್ದಾರೆ. ಏಕೆಂದರೆ ಈ ಕಲಾವಿದರಿಗೆ ಅಟಾಮಿಕ್‌ ಬುಕ್ಸ್ ಕಂಪನಿಯ ಪುಸ್ತಕಗಳು ಇಷ್ಟವಾಗಿದ್ದವು. ಇವರು ತಮ್ಮ ಬೇಸ್‌ ಮೆಂಟ್‌ ನಲ್ಲೇ ಇದನ್ನು ರೆಕಾರ್ಡ್‌ ಮಾಡಿ, ಇದಕ್ಕೆ ಅಟಾಮಿಕ್‌ ಹೆಸರು ನೀಡಿ, ಹಾಡು ರಚಿಸಿದ್ದರು. ಇದೀಗ ಈ ಹಾಡುಗಳನ್ನು ತನ್ನ ಸಂಗ್ರಹಕ್ಕೆ ತೆಗೆದುಕೊಂಡಿದೆ.

ಮೊದಲು ಪ್ರೇಮ ನಂತರ ಮದುವೆ : ಲಿಯಾ ಎಂಬಾಕೆ ಕನ್ನಿಂಗ್‌ ಹ್ಯಾಂ ಡಾಗ್‌ ಟ್ರಾವೆಲ್ ‌ಕಂಪನಿ ನಡೆಸುತ್ತಾಳೆ. ಆಕೆ ಅಮೆರಿಕಾದ ಒಬ್ಬ ಮಾಜಿ ಯೋಧ ನಿಯೋ ಎಂಬಾತನನ್ನು ಭೇಟಿಯಾಗಿ, ಪ್ರೇಮಕ್ಕೆ ಸಿಲುಕಿ, ಇಟಲಿಯ ಟಸ್ಕನಿ ನಗರದಲ್ಲಿ ಅದ್ಧೂರಿಯಾಗಿ ಮದುವೆಯಾದಳು. ಇವರಿಬ್ಬರ ಭೇಟಿ ಶುರುವಾಗಿದ್ದೇನೋ ಬಿಸ್‌ ನೆಸ್‌ ಗಾಗಿ. ಆದರೆ ಅದು ಪ್ರೇಮಕ್ಕೆ ತಿರುಗಿ ನಂತರ ಮದುವೆಗೆ ದಾರಿಯಾಯ್ತು. ಇವರಿಬ್ಬರೂ ಕೂಡಿ ತಮ್ಮ ಇಡೀ ಸಂಪಾದನೆಯ ದೊಡ್ಡ ಮೊತ್ತವನ್ನು, `ಭಾರತದ ರಿಚ್‌ಗ್ರಾಂಡ್‌ ವೆಡ್ಡಿಂಗ್‌’ ರೀತಿ ಖರ್ಚು ಮಾಡಿದ್ದಾರೆ. ಈ ಅಮೆರಿಕನ್‌ ವೆಡ್ಡಿಂಗ್‌ ಚೈನೀಸ್‌ ಪ್ರಾಡಕ್ಟ್ ತರಹ ಎಷ್ಟು ದಿನ ಉಳಿಯುತ್ತದೋ ಗೊತ್ತಿಲ್ಲ, ಅನ್ನೋದು ಬೇರೆ ಮಾತು. ಆದರೆ ಮದುವೆ ಅಂತೂ ಭಲೇ ಭರ್ಜರಿಯಾಗಿ ನಡೆದಿತ್ತು.

luxury-fashion-trends-2024

ಏನಾದರೂ ಹೊಸತನ ಇರಬೇಕು : ಫ್ಯಾಷನ್‌ ಲೋಕದಲ್ಲಿ ಏನಾದರೂ ಹೊಸ ತರಹದ ಬದಲಾವಣೆ ಅತ್ಯಗತ್ಯ ಬೇಕು. ಹೀಗಾಗಿಯೇ ವಿಶ್ವದೆಲ್ಲೆಡೆಯ ಫ್ಯಾಷನ್‌ ಗಾರ್ಮೆಂಟ್ಸ್ ನ ಕಾವಿದರು ಫ್ಯಾಬ್ರಿಕ್‌ ಮೇಕರ್ಸ್‌ ಜೊತೆ ಬೆರೆತು, ಹೊಸ ಹೊಸ ಡಿಸೈನ್ಸ್ ಮಾಡತೊಡಗಿದ್ದಾರೆ. ಅಂದಹಾಗೆ, ಸ್ಮಾರ್ಟ್‌ ನೆಸ್‌ ಎಂಬುದು ಫ್ಯಾಷನ್‌ ನಿಂದ ಅಲ್ಲ, ಮೈಕಟ್ಟು ಹಾಗೂ ಪೋಸ್ಚರ್ ನಿಂದ ಬರುತ್ತದೆ, ಆದರೆ 50 ಡಾಲರಿನ ಮಾಲನ್ನು 500ಕ್ಕೆ ಮಾರಬೇಕಾದರೆ, ತುಸು ನಾಟಕ ಆಡಲೇಬೇಕಾಗುತ್ತದೆ. ಈ ರಾಕೆಟ್ ನಿಂದ ಫ್ಯಾಷನ್‌ ಕಂಪನಿ ಹಾಗೂ ಕಲಾವಿದರಿಬ್ಬರಿಗೂ ಲಾಭವಿದೆ. ಜೊತೆಗೆ ಅಂಗಡಿಯವರಿಗೂ ಸಹ, ಏಕೆಂದರೆ ಇಂಥವನ್ನೇ ಲೇಟೆಸ್ಟ್ ಫ್ಯಾಷನ್‌ ಎಂಬ ಹೆಸರಿನಲ್ಲಿ ಮಾರುತ್ತಾ ಎಲ್ಲರನ್ನೂ ಮೂರ್ಖರನ್ನಾಗಿಸುತ್ತಾರೆ. ಈ ಚಿತ್ರದಲ್ಲಿ ಇಂಥ ಹಲವು ಬ್ರಾಂಡ್ಸ್ ಗಳ ಡಿಸೈನ್ಸ್ ಇವೆ. ಹೊಸ ಶಬ್ದಗಳ ಮೂಲ ಹುಡುಕುವ ತಂಟೆಗೆ ಮಾತ್ರ ಹೋಗಬೇಡಿ!

ga78ungaplatformofwomenleaders_20sept2023_unw4482_1_1200x800

ಏನೇ ಇರಲಿ ಅದು ಅವರವರ ಸ್ವಶಕ್ತಿಗೆ ತಕ್ಕಂತೆ : ಇಲ್ಲಿನವರು ವಿಶ್ವದ ಪವರ್‌ ಫುಲ್ ಮಹಿಳಾ ರಾಜಕಾರಣಿಗಳು, ವಿಶ್ವಸಂಸ್ಥೆಯ ಸಮ್ಮೇಳನದಲ್ಲಿ ಭೇಟಿಯಾಗಿದ್ದರು. ಇವರು ಕೇವಲ ಬೆರಳೆಣಿಕೆ ಮಂದಿ ಮಾತ್ರವೇ ಹೊರತು ಬಹಳಷ್ಟಲ್ಲ, ಧಾರ್ಮಿಕ ಬಂಧನಗಳೇನೇ ಇದ್ದರೂ, ನಿಧಾನವಾಗಿ ಇವರ ಸಂಖ್ಯೆ ಹೆಚ್ಚುತ್ತಿದೆ, ಹೀಗಾಗಿ ಗಂಡಸರು ಇವರ ಮುಂದೆ ವಿಧಿಯಿಲ್ಲದೆ `ಎಸ್‌ಮೇಡಂ’ ಎನ್ನಲೇಬೇಕಿದೆ. ಭಾರತದಲ್ಲಂತೂ ಮಮತಾ ಬ್ಯಾನರ್ಜಿ, ಸೋನಿಯಾ ಗಾಂಧಿ ಮಾತ್ರವೇ ತಂತಮ್ಮ ಸ್ವಶಕ್ತಿಯ ಪವರ್ ಹೊಂದಿದ್ದಾರೆ.

houstons-top-new-year-s-eve-par

ಜೀವನ ಇರುವುದೇ ಮೋಜುಮಸ್ತಿಗಾಗಿ : ಹೊಸ ವರ್ಷಾಚರಣೆಯ ಸಂಭ್ರಮ ಕೆಲವೆಡೆಗೆ ಮಾತ್ರ ಸೀಮಿತವಾಗದೆ ವಿಶ್ವದ ಎಲ್ಲೆಡೆ ಕಂಡುಬರುತ್ತದೆ. ಧರ್ಮಾಂಧರು ಸಹ ಈ ಪಾರ್ಟಿ ಎಂಜಾಯ್‌ ಮಾಡುತ್ತಾರೆ. ಈ ಪಾರ್ಟಿಯ ಪ್ಲಾನಿಂಗ್‌ ಬಲು ಜಬರ್ದಸ್ತಾಗಿ ನಡೆಯುತ್ತದೆ. ಆದರೆ ಸೇವೆ ಒದಗಿಸುವವರು ಮಾತ್ರ, ತಮ್ಮ ಆ ವರ್ಷದ ಕೊನೆಯ ದಿನ ಸಹ ಇತರರಿಗಾಗಿ ಮುಡಿಪಾಗಿಡಬೇಕು. ಇದಕ್ಕಾಗಿ ಚಿಂತಿಸುವ ಅಗತ್ಯವಿಲ್ಲ, ಏಕೆಂದರೆ ಅಮೆರಿಕಾದಂಥ ಶ್ರೀಮಂತ ದೇಶದಲ್ಲೂ ಇಂಥದ್ದೇ ನಡೆಯುತ್ತದೆ, ಅಲ್ಲೂ ಸಹ ಇಂಥ ತ್ಯಾಗವಿದ್ದೇ ಇದೆ. ಅಮೆರಿಕಾದ ಹೌಸ್ಟನ್‌ ನಗರದ ಡೇಲಿ ಸ್ಪೋರ್ಟ್ಸ್ ಕ್ಲಬ್‌ ನ ಹೊಸ ವರ್ಷಾಚರಣೆಯ ಈ ಫೋಟೋ ಈ ಕುರಿತಾಗಿ ಬಹಳಷ್ಟು ಹೇಳುತ್ತಿದೆ. ನಿಮ್ಮ ಪಾರ್ಟಿಯೂ ಹೀಗೇ ಇತ್ತೇ? ಇಲ್ಲದಿದ್ದರೆ ಹೊಸ ವರ್ಷವಿಡೀ ಅಂಥದ್ದೇ ಬೋರಿಂಗ್‌ಅಮರಿಕೊಂಡೀತು!

Circus-1903_KenLeanfore-1600x910

ಅಸಲಿ ಯಾವುದು ನಕಲಿ ಯಾವುದು? : ಪಾಶ್ಚಿಮಾತ್ಯ ದೇಶಗಳಲ್ಲಿ ಈಗಲೂ ಸರ್ಕಸ್‌ ಜನಪ್ರಿಯ, ಅದರ ಕಲಾವಿದರು ವಿಶ್ವದೆಲ್ಲೆಡೆ ಶೋ ನಡೆಸುತ್ತಾ ಇರುತ್ತಾರೆ. ಇದರಲ್ಲಿ ವ್ಯತ್ಯಾಸವಿಷ್ಟೆ, ಈಗ ಬಳಕೆಯಾಗುವ ಆನೆ ಕುದುರೆಗಳು ಅಸಲಿ ಅಲ್ಲ, ಅವುಗಳ ಪಪೆಟ್‌ ಬಳಸಿ ಕೊರತೆ ನೀಗಿಸಲಾಗುತ್ತದೆ. ವಿಶ್ವದೆಲ್ಲೆಡೆ ಈಗ ಸರ್ಕಸ್‌ ನಲ್ಲಿ ಅಸಲಿ ಪ್ರಾಣಿ ಬಳಸುವಂತಿಲ್ಲ ಎಂದೇ ಆಗಿದೆ. ಸಾಕುನಾಯಿ, ಬೆಕ್ಕುಗಳಿಗೆ ಇದು ಅನ್ವಯಿಸದು. ಏಕೆಂದರೆ ಪಾಲಕರು ಅವಕ್ಕೆ ಮಕ್ಕಳಂಥ ಮಮತೆ ತೋರಿಸುತ್ತಾರೆ.

_B1A3614

ಮೊಬೈಲ್ ಬಿಟ್ಟು ಡ್ಯಾನ್ಸ್ ಕಲಿಯಿರಿ : ಅಮೆರಿಕಾದ ಪ್ರತಿ ನಗರದಲ್ಲೂ 12 ಬ್ಯಾಲೆ ಕಲಿಸುವ ಕೇಂದ್ರಗಳಿರುತ್ತವೆ. ಇಲ್ಲಿ ಬಲು ಪ್ರಯಾಸಪಟ್ಟು, ದೇಹದಂಡಿಸಿ ಈ ಬಳುಕುವ ನೃತ್ಯ ಕಲಿಯುತ್ತಾರೆ. ನಮ್ಮಲ್ಲಿ ಶಾಸ್ತ್ರೀಯ ಯಾ ಪಾಪ್ಯುಲರ್‌ ಡ್ಯಾನ್ಸ್ ಕಲಿಸುವವರಿದ್ದರು, ಆದರೆ ಈಗ ಹೆಚ್ಚು ಚರ್ಚೆಯಲ್ಲಿಲ್ಲ ಉತಾಹ್‌ ನ ಫ್ರೆಡ್‌ ರಿಕ್‌ ಲಾಸನ್‌ ಬ್ಯಾಲೆ ಅಕ್ಯಾಡೆಮಿ ಸಹ ಪ್ರತಿ ವರ್ಷ ಇಂಥ ಹತ್ತಾರು ಸ್ಟಾರುಗಳಿಗೆ ಜನ್ಮ ನೀಡುತ್ತದೆ. ಇಲ್ಲೂ ಸಹ ಯುವ ಜನತೆ ಮೊಬೈಲ್ ‌ನ ಗೀಳು ಬಿಡದು, ಅವರು ಶ್ರದ್ಧೆವಹಿಸಿ ಈ ನೃತ್ಯ ಕಲಿತಾಗ ಮಾತ್ರ, ಪ್ರೇಕ್ಷಕರಿಗೆ ಇವರ ಮುಖದ ಭಾವ ಸ್ಪಷ್ಟವಾದೀತು.

 

 

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ