ಬೆಂಗಳೂರು, ನವೆಂಬರ್ 15: ಸ್ವರಾರ್ಚನೆ ತನ್ನ 7ನೇ ವಾರ್ಷಿಕೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ಆಯೋಜಿಸಿದ್ದ “ಹರುಷ–ವರುಷ” ಸಂಗೀತ ಕಾರ್ಯಕ್ರಮವು ಬಸವನಗುಡಿಯ Indian Institute of World Culture ನಲ್ಲಿ ಭವ್ಯವಾಗಿ ನೆರವೇರಿತು.ಈ ಸಂಗೀತ ಸಂಜೆಯನ್ನು ಅಜಿತ್ ಕೇಶವ, ನಾಗರಂಜಿನಿ ರಘು, ರವಿ ಹೊಸಕೋಟೆ ಮತ್ತು ಸಿರಿ ಚಂದ್ರಶೇಖರ್ ಅವರ ಮನಸೂರೆಗೊಂಡ ಗಾಯನವು ಇನ್ನಷ್ಟು ರಂಗೇರಿಸಿತು. ಇದಕ್ಕೆ ತಾಳ ಮೇಳವಾಗಿ ಕರ್ನಾಟಕದ ಖ್ಯಾತ ವಾದ್ಯ ವೃಂದ ಸೃಷ್ಟಿ ಉಮೇಶ್ ತಂಡವು

ಮತ್ತಷ್ಟು ಮೆರಗು ನೀಡಿತು. ತುಂಬಿದ ಸಭಾಂಗಣದಲ್ಲಿ

ಸಂಗೀತಪ್ರಿಯರಾದ ಪ್ರೇಕ್ಷಕರ ಉದ್ಗಾರ, ಚಪ್ಪಾಳೆ, ನೃತ್ಯ—ಎಲ್ಲವೂ ಕಾರ್ಯಕ್ರಮದ ಉತ್ಸಾಹವನ್ನು ಇನ್ನಷ್ಟು ಹೆಚ್ಚಿಸಿತು. ವಿಶೇಷವಾಗಿ, ಈ ಕಾರ್ಯಕ್ರಮಕ್ಕೂ ಒಂದು ದಿನ ಮುಂಚೆಯೇ ‘ಸೋಲ್ಡ್ ಔಟ್’ ಆಗಿದ್ದು, ಕೊನೆಯ ಕ್ಷಣವರೆಗೂ ಟಿಕೆಟ್‌ಗಳಿಗಾಗಿ ಬೇಡಿಕೆ ಮುಂದುವರಿಯಿತು.

IMG-20251116-WA0006

ಈ ಸಂಗೀತ ಸಂಜೆಯ ಮತ್ತೊಂದು ಆಕರ್ಷಣೆಯೆಂದರೆ ಸ್ವರಾರ್ಚನೆ ತಂಡದ ಹೊಸ ಲೋಗೋ ಬಿಡುಗಡೆ.ಇದು ತಂಡದ ಹೊಸ ದಿಕ್ಕು ಹಾಗೂ ಹೊಸ ಉತ್ಸಾಹದ ಸಂಕೇತವಾಗಿತ್ತು.

IMG-20251116-WA0008

ಹರುಷ–ವರುಷ ಕಾರ್ಯಕ್ರಮದ ಭರ್ಜರಿ ಯಶಸ್ಸು, ಸ್ವರಾರ್ಚನೆ ತಂಡದ ಏಳು ವರ್ಷದ ಸಂಗೀತಯಾನ ಮತ್ತು ಪ್ರೇಕ್ಷಕರೊಂದಿಗೆ ಬೆಳೆದ ಬಾಂಧವ್ಯದ ಪರಿಪಾಕವಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸೃಜನಾತ್ಮಕ, ನೆನಪಾಗುವಂತಹ ಸಂಗೀತ ಕಾರ್ಯಕ್ರಮಗಳನ್ನು ನೀಡುವ ದೃಢಸಂಕಲ್ಪವನ್ನು ತಂಡ ವ್ಯಕ್ತಪಡಿಸಿದೆ.

IMG-20251116-WA0079

ಮದುವೆ ಹಾಗೂ ಇತರೆ ಶುಭ ಸಮಾರಂಭಗಳಲ್ಲಿ ಸ್ವರಾರ್ಚನೆ ತಂಡದ ಕಾರ್ಯಕ್ರಮಗಳಿಗಾಗಿ ಸಂಪರ್ಕಿಸಿ .

ಅಜಿತ್ ಕೇಶವ – 9740733878

ರವಿ ಹೊಸಕೋಟೆ – 9845259422

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ