ಇಂದು ಅಧಿಕಾರ ಎಂಬುದು, ಕೇವಲ ವೋಟು ಆಧಾರಿತ ನೇತಾಗಳ ಕೈಯಲ್ಲಿ ಉಳಿಯದೆ, ಅಲ್ಲಿಂದ ಜಾರಿ ನೇತಾಗಳಿಗಾಗಿ ಕೆಲಸ ಮಾಡುವ ಸರ್ಕಾರಿ ಅಧಿಕಾರಿಗಳ ಪಾಲಾಗಿದೆ. ಈ ಅಧಿಕಾರಿಗಳು ಈಗ ಹಳೆಯ ಪುರೋಹಿತರಂತೆ ಮಾತನಾಡುತ್ತಿದ್ದಾರೆ. ಆ ಕಂದಾಚಾರಿಗಳು, ಇಂದಿನ 21ನೇ ಶತಮಾನದಲ್ಲೂ ಹೆಂಗಸರನ್ನು ಸದಾ ಧರ್ಮವೆಂಬ ಸರಪಣಿಯಿಂದ ಬಂಧಿಸಿಡುತ್ತಾರೆ. ಈ ಅಧಿಕಾರಿಗಳೆಂಬ ಪುರೋಹಿತರು ಎಲ್ಲಾ ಗಂಡಸು ಹೆಂಗಸರಿಗೂ ಹೇಳುವುದಿಷ್ಟೆ, ಇವರ ತಲೆಯಿಂದ ಅವರಿಗೆ ಸಿಕ್ಕಿರುವುದೆಲ್ಲ ದೇವರ ಅನುಗ್ರಹ ಹಾಗೂ ಅವರಿಂದ ಏನೇ ಕಿತ್ತುಕೊಂಡಿದ್ದರೂ, ಅದು ದೇವರ ಕೃಪೆಯಂತೆ.

ಹಿಂದಿನಿಂದಲೂ ಹಾಗೂ ಈಗಲೂ ಸಹ ಈ ಪುರೋಹಿತರು ಹೇಗೆ ಬ್ರೇನ್‌ ವಾಶ್‌ ಮಾಡುತ್ತಿದ್ದಾರೆಂದರೆ, ಇಡೀ ಜನತೆ ತಮ್ಮ ಎಲ್ಲಾ ದವಸಧಾನ್ಯ, ಪರಿಶ್ರಮ, ಬಟ್ಟೆಬರೆ ಮಾತ್ರವಲ್ಲದೆ, ಪ್ರಾಣವನ್ನೂ ಸಹ ಇವರ ಸೇವೆಗೆ ಒತ್ತೆ ಇಡಬೇಕು. ಹೆಂಗಸರು ಅಂದೂ ಇದನ್ನು ತಾವಾಗಿ ತೆರುತ್ತಿದ್ದರೂ, ಇಂದೂ ತೆರುತ್ತಾ ತಮ್ಮನ್ನೇ ತಾವು ದೋಷಿಗಳೆಂದು ವಿಧಿಗೆ ಶಾಪ ಹಾಕುತ್ತಾ ಸುಮ್ಮನಿದ್ದಾರೆ.

ಎಂದಿನಿಂದ ಆಧುನಿಕ, ತಾರ್ಕಿಕ, ವೈಜ್ಞಾನಿಕ ವಿಚಾರಧಾರೆಗಳು ಹುಟ್ಟಿಕೊಂಡವೋ, ಗಂಡಸರು ಈ ಪುರೋಹಿತರ ಮಾತನ್ನು ಬದಿಗಿಟ್ಟರು. ಆಗಿನಿಂದ ಗಂಡಸರ ಮೇಲೆ ರಾಜರು, ರಾಜಪುರೋಹಿತರ ಹಿಡಿತ ತಪ್ಪಿತು. ಆದರೆ ಹೆಂಗಸರಿಗೆ ಇಂಥ ಭಾಗ್ಯ ಲಭಿಸಲಿಲ್ಲ. ಮೊದಲಿನಿಂದಲೂ ಅವರು ಈ ಧರ್ಮದ ದಲ್ಲಾಳಿಗಳ ತಿಜೋರಿ ಭರ್ತಿ ಮಾಡುತ್ತಾ, ತಮ್ಮ ತನುಮನಗಳ ಸೇವೆಯನ್ನೂ ಮುಂದುವರಿಸುತ್ತಿದ್ದಾರೆ.

ಈಗ ಅಧಿಕಾರಿಗಳೆಂಬ ಈ ಪುರೋಹಿತರು ಭಾರತದಲ್ಲಿ ಹೇಳಲು ಶುರು ಮಾಡಿರುವುದೆಂದರೆ, ದೇಶದ ತುಸು ಸುಶಿಕ್ಷಿತ ಯುವಜನತೆಗೆ ಸರ್ಕಾರಿ ನೌಕರಿಗಳಿಗಾಗಿ ಕಾದು ಕುಳಿತಿರುವುದು ಬೇಡ ಎನ್ನುತ್ತಿದ್ದಾರೆ. ಸಂಜೀವ್ ‌ಸಂನ್ಯಲಾ ಎಂಬ ಒಬ್ಬ ಅಧಿಕಾರಿ ಯುವಜನತೆಯನ್ನು ಧಿಕ್ಕರಿಸುವಂತೆ, ಅವರೇಕೆ ಜೀವನದ ಅಮೂಲ್ಯ ವರ್ಷಗಳನ್ನು ಸರ್ಕಾರಿ ನೌಕರಿ ಹುಡುಕುವುದರಲ್ಲೇ ಕಳೆದುಬಿಡುತ್ತಾರೆ, ಅದರ ಬದಲಿಗೆ ಅವರು ಆ್ಯಲೆನ್‌ ಮಸ್ಕ್ ಅಥವಾ ಮುಕೇಶ್‌ ಅಂಬಾನಿ ಆಗಬಾರದೇಕೆ ಎಂದು ಗುಡುಗಿದ್ದಾರೆ.

ಇಂದು ಅವರು ಜನತೆಗೆ ನೀಡುವ ಉಪದೇಶ ಎಂದರೆ, ಜನ ತಪಸ್ಸು ಮಾಡಿ ಇಂದ್ರ ಪದವಿ ಪಡೆಯಲು ಎಲ್ಲವನ್ನೂ ತ್ಯಾಗ ಮಾಡಬೇಕು, ಅವರ ಕಣ್ಣು ತಪ್ಪಿಸಿ, ಹೇಗೋ ಬುದ್ಧಿವಂತಿಕೆಯಿಂದ ಒಂದು ಮನೋಹರ ಆಶ್ರಮ ಸ್ಥಾಪಿಸಬೇಕು, ಅದರ ರಕ್ಷಣೆಯ ಹೊಣೆ ರಾಜರದಂತೆ!

ಸಂಜೀವ್ ‌ಮುಂದುವರಿಯುತ್ತಾ, 2 ಹೊತ್ತಿನ ಊಟ ಪಡೆಯುವುದಕ್ಕಾಗಿ ಯುವಜನತೆ ಸರ್ಕಾರಿ ನೌಕರಿ ಹುಡುಕುವ ಬದಲು, ಸಣ್ಣಪುಟ್ಟ ಹೋಟೆಲ್ ‌ಸ್ಥಾಪಿಸಿ, ನೂರಾರು ಜನ ಬಂದು ಉಂಡು ಹೋಗುವಂತೆ ಮಾಡಬೇಕು ಎನ್ನುತ್ತಾರೆ. ಯುವಜನತೆ ಘನ ಉದ್ದೇಶ ಹೊಂದಿರಬೇಕು, ಕೇವಲ ಅಲ್ಪತೃಪ್ತರಾಗಿ ಇರಬಾರದು. ತಾನೇ ಸರ್ಕಾರಿ ಹುದ್ದೆಯಲ್ಲಿ ಕುಳಿತುಕೊಂಡ ಈತ ಹೀಗೆ ಉಪದೇಶ ನೀಡುವುದು ಹೇಗಿದೆ ಅಂದ್ರೆ, ಪ್ರತಿ ಪ್ರವಚನದಲ್ಲೂ ಪುರೋಹಿತರು/ಪಾದ್ರಿಗಳು ಭವ್ಯ ಭವನದಲ್ಲಿ ಚಿನ್ನದ ಸಿಂಹಾಸನದಲ್ಲಿ ಕುಳಿತು ಮಾಯೆಗೆ ಮೋಹದ ಹೆಸರು ನೀಡಿ, ಮೋಕ್ಷ ಪಡೆಯಲು ತ್ಯಾಗದ ಮಹಿಮೆ ಹೊಗಳುವುದಾಗಿದೆ. ಇಂಥ ಆಫೀಸರ್‌ ಗಳು ವಿಶ್ವದ ಎಲ್ಲೆಡೆ ಹೇಳುವುದೆಂದರೆ, ನಿಮ್ಮ ಆಸೆಗಳನ್ನು ನಿಯಂತ್ರಿಸಿ, ನಿಮ್ಮ ಕರ್ಮವನ್ನು ಪೂರ್ಣಗೊಳಿಸಿ, ಆಡಳಿತ ಮಂದಿಗೆ ಸದಾ ಸೇವೆ ಮಾಡುತ್ತಿರಿ ಅಂತ.

ಇಂದು ಮನೆ ಮನೆಗಳ ಮೇಲೂ ಅಧಿಕಾರ, ಸರ್ಕಾರ, ರಿಚ್‌ ಕಂಪನಿಗಳ ಹೈಟೆಕ್‌ ಗುರುಗಳ ಹಿಡಿತವಿದೆ. ಮಗು ಹುಟ್ಟಿದ ತಕ್ಷಣ ಅದಕ್ಕೆ ಓಂ, ಕ್ರಾಸ್‌, ಅಲ್ಲಾ ಎಂದು ಬೋಧಿಸಲಾಗುತ್ತದೆ. ಮುಂದೆ ಅವರೇನೇ ಮಾಡಿದರೂ ಇವರಿಗಾಗಿಯೇ ಮಾಡಬೇಕು. ಕೆಲವರು ಇಂಥ ಜೇಡರ ಬಲೆಯಿಂದ ನುಣುಚಿಕೊಳ್ಳಬಹುದು, ಅಂಥವರನ್ನು ಈ ಕಂದಾಚಾರಿಗಳು ಹಿಡಿದು, ನಮ್ಮನ್ನು ವಿರೋಧಿಸದಿರಿ, ನಿನ್ನ ತಾರ್ಕಿಕ ಬುದ್ಧಿಯಿಂದ ಸಾಧಾರಣ ಜನತೆಯನ್ನು ಲೂಟಿ ಮಾಡಿ ದಾರಿ ತಪ್ಪಿಸಲು ಬಳಸಿಕೋ ಎನ್ನುತ್ತಾರೆ.

ವಿಶ್ವದೆಲ್ಲೆಡೆ ತಾಯಂದಿರು ತಮ್ಮ ಮಕ್ಕಳನ್ನು ಧರ್ಮಭೀರು ಆಗಿಸುತ್ತಿದ್ದಾರೆ, ಆಗ ಮಾತ್ರ ಅವರು ಈ ಧರ್ಮ ನಿಯಂತ್ರಿತ ಸಮಾಜದಲ್ಲಿ ಸೇವಕ, ಮಧ್ಯಮ ವೈಟ್‌ ಕಾಲರ್‌ ಜಾಬ್ಸ್ ಯಾ ಪರಿಶ್ರಮದ ಬ್ಲೂ ಕಾಲರ್‌ ಜಾಬ್ಸ್ ಮಾಡಲಿ ಅಥವಾ ಆಡಳಿತಕ್ಕೆ ತಲೆಬಾಗಿ ಪೀಳಿಗೆಯಿಂದ ಪೀಳಿಗೆಗೆ ತಮ್ಮ ಸ್ಥಾನ ಸುರಕ್ಷಿತಗೊಳಿಸಿಕೊಳ್ಳಲಿ ಅಂತ.

ನಮ್ಮ ಭಾರತದಲ್ಲಂತೂ ಇದು ತುಸು ಹೆಚ್ಚಾಗಿಯೇ ನಡೆಯುತ್ತಿದೆ. ಇಲ್ಲಿ ಮಾಮೂಲಿ ಮುಗ್ಧ ಜನತೆಯ ಬ್ರೇನ್‌ ವಾಶ್‌ ಮಾಡುವುದು ಸುಲಭ, ಏಕೆಂದರೆ ಹುಟ್ಟಿನಿಂದಲೇ ಇಲ್ಲಿ ತಮಗೆ ಬೇಕಾದಂತೆ ಗಿಳಿಪಾಠ ಒಪ್ಪಿಸುವ ಪ್ರವೃತ್ತಿ ಕಲಿಸುತ್ತಾರೆ. ಸವಾಲುಗಳನ್ನು ಕೇಳಿ ಜವಾಬು ಪಡೆಯುವ ಶಿಕ್ಷಣದ ಬದಲು, ತಮಗೆ ಹೇಳಿದ್ದನ್ನು ಅದೇ ಅಂತಿಮ ಸತ್ಯ ಎಂದು ಒಪ್ಪಿಕೊಳ್ಳುವುದಾಗಿದೆ. ಈಗಂತೂ ಪರೀಕ್ಷೆಗಳಲ್ಲಿ ಸರಿಯಾದ ಉತ್ತರಗಳನ್ನು ಮೊದಲೇ ನೀಡಲಾಗಿರುತ್ತದೆ, 3 ತಪ್ಪು ಬಿಟ್ಟು ಸರಿ ಉತ್ತರ ಹುಡುಕುವುದಷ್ಟೇ ಬಾಕಿ.

ಇಂದಿನ ಕಂದಾಚಾರಿ ಅಧಿಕಾರಿಗಳು ಸರ್ಕಾರದ ಮೇಲೆ ಮಾತ್ರವಲ್ಲ, ಟೆಕ್ನಾಲಜಿ ಮೇಲೂ ಹಿಡಿತ ಸಾಧಿಸಿದ್ದಾರೆ. ಯಾರು ತಾರ್ಕಿಕ ಜ್ಞಾನ ಪಡೆಯುತ್ತಾನೋ ಅವನು ತಂದೆಗೆ ತಕ್ಕ ಮಗ, ಬೇರೆಯದಾಗಿ ಶಿಕ್ಷಣ ಪಡೆಯುತ್ತಾನೆ, ಪ್ರಶ್ನೆ ಕೇಳುತ್ತಿರುತ್ತಾನೆ, ಹೊಸ ವಿಚಾರ ಪ್ರಸ್ತುತಪಡಿಸುತ್ತಾನೆ, ಅಧಿಕಾರ ನಡೆಸುವವರ ವಲಯದೊಳಗೆ ನುಗ್ಗುತ್ತಾನೆ, ಕಂಪನಿ ನಡೆಸುತ್ತಾನೆ, ಟೆಕ್ನೊ ಇನ್‌ ವೆನ್ಶನ್‌ ಮಾಡುತ್ತಾನೆ. ಆದರೆ ಉಳಿದವರಿಗೆ ಸಂಜೀವ್ ಹೇಳುತ್ತಾರೆ, ಈ ಸರ್ಕಾರಿ ವಲಯದಲ್ಲಿ ಏನೂ ಇಲ್ಲ, ಇದೊಂದು ಭ್ರಮೆ ಅಷ್ಟೆ, ಎಲ್ಲಾ ಮಾಯೆ ಅಂತಾರೆ. ಜಪತಪ ಮಾಡಿ ಇಂದ್ರ ಸ್ಥಾನ ಪಡೆಯಲು ಯತ್ನಿಸದಿರು, ಜೀಸಸ್‌/ಬುದ್ಧ ಆಗಬೇಡ ಅಂತಾರೆ.

ಇಂದಿನ ಪರಿಸ್ಥಿತಿ ಹೇಗಿದೆ ಅಂದ್ರೆ, ಹುಡುಗಿಯರಿಗೆ ಸುಂದರ ಮುಖಚಹರೆ ಹಾಗೂ ರೀಲ್ಸ್ ತಯಾರಿಸಲು ಹಾಕಿ, ಹುಡುಗರನ್ನು ಕಾಡಿ ಎತ್ತುವ ಕಡೆ ಹಾಕಿದ್ದಾರೆ. ಸಂಜೀವ್ ‌ಈ ಕುರಿತು ಏನೂ ಹೇಳುವುದಿಲ್ಲ. ಅವರಿಗೆ ಬಂಗಾಳಿಗಳ ಅಡ್ಡೆ ಕುರಿತು ದೂರು ಉಂಟು, ಅಲ್ಲಿ ಜನ ಚಾವಡಿಗಳಲ್ಲಿ ಕುಳಿತು ಕಷ್ಟಸುಖ ಹಂಚಿಕೊಳ್ಳುತ್ತಾ, ಪುರೋಹಿತಶಾಹಿಯನ್ನು ಅರಿಯುವ ಪ್ರಯತ್ನ ನಡೆಸಲಾಗುತ್ತಿತ್ತು. ಅವರು ಒಣ ರೊಟ್ಟಿಗೆ 2 ಹನಿ ಜೇನು ಸವರಿ, ಜೇನು ತಯಾರಿಸಲು ಪ್ರಯತ್ನಿಸಿ, ಒಣ ರೊಟ್ಟಿ ತಿನ್ನಿ ಅಂತ. ಜೇನಿಗಾಗಿ ಗುಲಾಮ ನೊಣಗಳು, ರಾಣಿ ನೊಣಕ್ಕಾಗಿ ಹೂಗಳಿಂದ ಮಕರಂದ ಹೀರಿ ತರುತ್ತವೆ, ಮಧ್ಯದಲ್ಲೇ ಸಾಯುತ್ತವೆ. ರಾಣಿ ಮಾತ್ರ ಹಾಯಾಗಿ ಜೇನುಗೂಡಿನ ಉಸ್ತುವಾರಿ ವಹಿಸುತ್ತದೆ.

ಎಲ್ಲಾ ದೇಶಗಳಲ್ಲೂ ಸಂಜೀವ್ ‌ರಂಥ ಅಧಿಕಾರಿಗಳ ದರ್ಬಾರು ಮಾಮೂಲಿ. ಯುವಜನತೆ ಮುಂದೆ ಹೇಗೆ ಆದರ್ಶ ಗುಲಾಮರಾಗಿರಬೇಕು, ಯಂತ್ರ ಮಾನವರಾಗಿ, ಕಂಪ್ಯೂಟರ್‌ ಪ್ರೋಗ್ರಾಮರ್ಸ್‌ ಆಗಿ, ಮೆಕ್ಯಾನಿಕಲ್, ಡೆಲಿವರಿ ಬಾಯ್ಸ್ ಆಗಿ…. ಆದರೆ ಸರ್ಕಾರದ ಉಚ್ಚ ಅಧಿಕಾರದ ಹುದ್ದೆಗಳ ಬಗ್ಗೆ ಎಂದೂ ಕನಸು ಕಾಣದಿರಿ, ಅದೇನಿದ್ದರೂ ಪೀಳಿಗೆಯಿಂದ ಪೀಳಿಗೆಗೆ ಕೆಲವರಿಗಷ್ಟೇ ಮೀಸಲು ಅಂತಾರೆ.

ಪ್ರತಿ ಹುಡುಗಿ, ಯುವತಿ, ಹೆಂಗಸು, ಪತ್ನಿ ಅಥವಾ ತಾಯಿಯೇ ಇರಲಿ. ಈ ಒಂದು ಕಪಿಮುಷ್ಟಿಗೆ ಹೇಗೋ ಬಂದು ಸಿಲುಕುತ್ತಾರೆ. ತಮ್ಮನ್ನು ತಾವು ಟೈಗರ್‌ ಮಾಮ್ ಎಂದುಕೊಳ್ಳುವ ತಾಯಂದಿರೂ ಸಹ ಈ ಸಿಸ್ಟಂಗೆ ಬಂಧಿಸಲ್ಪಟ್ಟಿರುವ ಯುವಜನತೆಯನ್ನೇ ಹೆರುತ್ತಿರುತ್ತಾರೆ.

ಅಸ್ತವ್ಯಸ್ತ ಜೀವನ ದುಃಖಾಂತ್ಯಗೊಳ್ಳಲು ಕಾರಣ

ಆಧುನಿಕ ಸೇನೆಯ ಕುರಿತಾದ ಒಂದು ವೈಶಿಷ್ಟ್ಯ ಎಂದರೆ, ಅಲ್ಲಿ ಸೈನಿಕರ ಜೀವನ ಬಿಲ್ ‌ಕುಲ್ ‌ಒಂದಿಷ್ಟೂ ಅಸ್ತವ್ಯಸ್ತ ಆಗದಂತೆ ಶಿಸ್ತಾಗಿ ಬದುಕುವ ಕಲೆ ಕಲಿಸಲಾಗುತ್ತದೆ. ಅವರೆಲ್ಲರಿಗೂ ಒಂದೇ ತರಹದ ಬೆಡ್‌, ಒಂದೇ ತರಹದ ಶೂಸ್‌, ಒಂದೇ ರೀತಿಯ ಊಟ, ಇನ್ನಿತರ ಎಲ್ಲಾ ಸೌಲಭ್ಯಗಳೂ ಒಂದೇ ಸಮ ಇರುತ್ತವೆ. ಹೀಗಾಗಿಯೇ ಪ್ರತಿ ಸೈನಿಕರಿಗೂ ಮುಂದಿನ ಕೆಲವು ಗಂಟೆಗಳಲ್ಲಿ ಏನೆಲ್ಲ ಕೆಲಸ ಮಾಡಬೇಕು ಎಂಬ ಸ್ಪಷ್ಟ ಅರಿವಿರುತ್ತದೆ. ಅದಕ್ಕೆ ಎಷ್ಟು ಹೊತ್ತು ಬೇಕು, ಏನೆಲ್ಲ ಶಕ್ತಿ ಬೇಕು ಎಂಬುದೂ ತಿಳಿದಿರುತ್ತದೆ.

ಪಾಶ್ಚಿಮಾತ್ಯ ದೇಶಗಳ ಸೇನೆಗಳು ಇತ್ತ ಪೂರ್ಮ, ಮಧ್ಯ ಏಷ್ಯಾ ಹಾಗೂ ಅಮೆರಿಕಾಗಳ ಮೇಲೆ ಸುಲಭವಾಗಿ ಆಕ್ರಮಣ ನಡೆಸಲು ಸಾಧ್ಯವಾಗಿದ್ದು ಸಹ ಇದೇ ಕಲೆಯಿಂದ.

ಇಂದು ನಮ್ಮ ಜೀವನದಲ್ಲಿ ಅಸ್ತವ್ಯಸ್ತತೆ ಎಂಬುದು ದಿನೇದಿನೇ ಹೆಚ್ಚುತ್ತಿದೆ. ಯಾವ ದೇಶಗಳಲ್ಲಿ ಎಲ್ಲ ಚದುರಿ ಗಬ್ಬೆದ್ದಿದೆಯೋ, ಅವು ಹೆಚ್ಚು ಬಡ ದೇಶಗಳು ಎಂಬುದು ಸುಸ್ಪಷ್ಟ. ನಮ್ಮ ಭಾರತದಲ್ಲಂತೂ ಇಡೀ ದೇಶದಲ್ಲಿ ಎಲ್ಲೆಲ್ಲೂ ಗಲೀಜೋ ಗಲೀಜು. ಸಂಸತ್ತಿನ ಹಳೆ, ಹೊಸ ಕಟ್ಟಡಗಳಿಂದ ಹಿಡಿದು, ಅವುಗಳ ಸುತ್ತಮುತ್ತಲ ರಸ್ತೆಗಳು, ದೂರದವರೆಗಿನ ಸಣ್ಣಪುಟ್ಟ ಹಳ್ಳಿಗಳವರೆಗೂ ಜನರ ಜೀವನ ಬಿಲ್ ‌ಕುಲ್ ‌ಹರಿದು ಹಂಚಿಹೋಗಿದೆ. ಪ್ರತಿ ಸಲ ಹರಡಿದ್ದನ್ನು ಜೋಡಿಸಿಕೊಳ್ಳುವುದೇ ಜನರ ಕೆಲಸ ಆಗಿರುತ್ತದೆ.

ಈ ಪರಿಯ ಗಲೀಜು ಕಂಡು, ಇದಕ್ಕೆಂದೇ ಮೊದಲೇ ಟ್ರೇನಿಂಗ್‌ ಕೊಟ್ಟಿರುತ್ತಾರೇನೋ, ಮೊದಲು ಎಲ್ಲೆಲ್ಲೂ ಬೇಕಾದ್ದನ್ನು ಹರಡಿ, ಆಮೇಲೆ ಜೋಡಿಸುವ ಕೆಲಸ ಮಾಡಬೇಕು, ಎಂದೇ ಎಲ್ಲಾ ಹೆಂಗಸರೂ ಭಾವಿಸುತ್ತಾರೆ. ಕೇವಲ ಅಡುಗೆ ತಯಾರಿಸುವುದರಲ್ಲಿ ಸಮಯ ವ್ಯರ್ಥ ಮಾಡಿ, ಜೀವನ ಮಾಡಲಾಗದು ಅಥವಾ ಕಿಚನ್‌ ಸಂಭಾಳಿಸಲಾಗದು. 5 ಸ್ಟಾರ್‌ ಹೋಟೆಲ್ ನ ಒಂದು ಬೃಹತ್ ಕಿಚನ್‌ ನೋಡಿ, ಅಥವಾ ಒಂದು ಸಾಧಾರಣ ದರ್ಶಿನಿಯ ಅಡುಗೆಮನೆ. 5 ಸ್ಟಾರ್‌ ಹೋಟೆಲ್ ‌ನ ಕಿಚನ್‌ ನಲ್ಲಿ ಎಲ್ಲಾ ಸಾಮಗ್ರಿಗಳೂ ತಂತಮ್ಮ ಜಾಗದಲ್ಲಿ ಸುವ್ಯವಸ್ಥಿತವಾಗಿ ಜೋಡಿಸಲ್ಪಟ್ಟಿರುತ್ತವೆ. ಆದರೆ ಸಣ್ಣಪುಟ್ಟ ದರ್ಶಿನಿಯ ಅಡುಗೆಮನೆ ಭಲೇ ಫಜೀತಿಗೆ ಈಡಾಗಿರುತ್ತದೆ. ಎಲ್ಲೆಲ್ಲೂ ಕಸದ ರಾಶಿ ಹರಡಿರುತ್ತದೆ.

ನಮ್ಮ ಮಂದಿರಗಳನ್ನು ಗಮನಿಸಿ. 1 ಮೈಲಿ ದೂರದಿಂದಲೇ, ಹತ್ತಿರದಲ್ಲೇ ಎಲ್ಲೋ ಮಂದಿರ ಇರಬೇಕೆಂಬ ಭಾವನೆ ಬರುತ್ತದೆ. ಎಲ್ಲೆಲ್ಲೂ ಸೊಟ್ಟಗೆ ನಿಂತ ಗಾಡಿಗಳು, ರಿಕ್ಷಾ, ಎಂದೂ ಸಾಲಲ್ಲಿ ನಿಲ್ಲದ ಆಟೋ, ಜನರ ನೂಕು ನುಗ್ಗಲಿನ ಗಲಾಟೆ. ಇದರ ಸುತ್ತಲೂ ಸಂತೆ, ಮುರಿದ ಪೆಟ್ಟಿಗೆ ಅಂಗಡಿಗಳ ದಾಂಧಲೆ. ಫುಟ್‌ ಪಾತ್‌ ಬಿಟ್ಟು ರಸ್ತೆಗಿಳಿಯುವ ಮಾರಾಟಗಾರರು. ಅಲ್ಲೇ ಏಳುವ ಆಹಾರದ ಬಿಡಾರ, ಅದರ ರಾಶಿ ರಾಶಿ ಕೊಳಕು ಪಾತ್ರೆ ಪಗಡಗಳು…. ಒಂದೇ ಎರಡೇ! ಮಂದಿರದ ಒಳಗೆ ಹೋದ ಮೇಲೆ ಅಲ್ಲಿನ ನೂಕು ನುಗ್ಗಲು ಸಹಿಸಿ ದರ್ಶನ ಪಡೆದು ಹೊರ ಬರುವಷ್ಟರಲ್ಲಿ ಹೋದ ಜೀವ ಬಂದಂತಾಗಿರುತ್ತದೆ.

ಅಲ್ಲಿಗೆ ಬಂದ ಭಕ್ತಗಣ ಇದನ್ನೇ ಕರಗತ ಮಾಡಿಕೊಂಡು ಮನೆಗೆ ಹೋದ ಮೇಲೂ ಅದನ್ನೇ ಪುನರಾವರ್ತನೆ ಮಾಡುತ್ತಾರೆ. ಅಲ್ಲ, ಆ ದೇವರೇ (ಇದ್ದಾನೋ ಇಲ್ಲವೋ….) ತನ್ನ ಏಜೆಂಟರುಗಳಿಗೆ ಹೇಳಿ ಗುಡಿ ನೀಟಾಗಿ ಇರಿಸಿಕೊಳ್ಳದಿದ್ದಾಗ, ನಾವೇಕೆ ನಮ್ಮ ಮನೆ, ಸುತ್ತಮುತ್ತ ನೀಟಾಗಿಡಬೇಕೆಂದು ಸುಮ್ಮನಾಗುತ್ತಾರೆ. ಇಂಥವರ ಮನೆಯಲ್ಲಿ ಎಲ್ಲೆಲ್ಲೂ ಬಟ್ಟೆಗಳು ಅಲ್ಲಿ ಇಲ್ಲಿ ನೇತಾಡುತ್ತಿರುತ್ತವೆ, ಮನೆಯ ಇತರ ಸಾಮಗ್ರಿ ಬಗ್ಗೆ ಹೇಳುವುದೇ ಬೇಡ. ಅದೇ ರೀತಿ ಸಂಬಂಧಗಳೂ ಸಹ ಅಸ್ತವ್ಯಸ್ತ ಆಗಿರುತ್ತವೆ. ಪತಿ ಪತ್ನಿ, ಅತ್ತೆ, ಸೊಸೆ, ತಾಯಿ ಮಕ್ಕಳು, ಅಣ್ಣ ತಂಗಿ, ಅಕ್ಕಪಕ್ಕದವರು, ಸಹೋದ್ಯೋಗಿ, ಹೊರಗಿನ ವ್ಯವಹಾರಸ್ಥರ ಜೊತೆ…. ಎಲ್ಲೆಲ್ಲೂ ಎಲ್ಲ ಅಸ್ತವ್ಯಸ್ತವೇ! ಸದ್ಯದ ಗಳಿಗೆ ಕಳೆಯಲಿ, ಆಮೇಲೆ ನೋಡಿಕೊಳ್ಳೋಣ ಎಂಬ ನಿರ್ಲಕ್ಷ್ಯ.

ಕಿಚನ್‌ ಸಿಂಕ್‌ ತೊಳೆಯದ ಪಾತ್ರೆಗಳಿಂದ ತುಂಬಿದ್ದರೆ, ಬಚ್ಚಲಮನೆ ಒಗೆಯದ ಬಟ್ಟೆಗಳಿಂದ ತುಂಬಿರುತ್ತದೆ. ಬೀರುವಿನಲ್ಲಿನ ಯಾವ ವಸ್ತುಗಳೂ ಅಚ್ಚುಕಟ್ಟಾಗಿ ಇರುವುದಿಲ್ಲ. ಈ ಎಲ್ಲದರ ಮಧ್ಯೆ ನಮ್ಮ ಪ್ರಾಚೀನ ವಿಶ್ವಾಸಗಳು, ಮೂಢನಂಬಿಕೆಗಳು, ನಮ್ಮ ಸಂಬಂಧಗಳು, ನಮ್ಮ ವಿಚಾರಧಾರೆ…. ಎಲ್ಲ ಅಸ್ತವ್ಯಸ್ತಮಯ!

ನಮ್ಮ ಜೀವನ ದುಃಖಾಂತ್ಯ ಆಗುತ್ತಿರುವುದೇ ಈ ನಾನಾ ಕಾರಣಗಳಿಂದ. ನಮ್ಮ ಸುತ್ತಮುತ್ತಲೂ ಅನಗತ್ಯ ರಾಶಿ ವಸ್ತು ಹೇರಿಕೊಂಡಿರುತ್ತೇವೆ, ಅದನ್ನು ಜೋಡಿಸಿಡುವ ಬದಲು ಮತ್ತಷ್ಟು ಹರಡುತ್ತೇವೆ. ಈ ರೀತಿ ಎಲ್ಲವನ್ನೂ ಹರಡಿ ಗಲೀಜು ಮಾಡುವುದೇ ನಮ್ಮ ಹಕ್ಕು, ಅದನ್ನು ಸರಿಪಡಿಸುವ ಬಾಧ್ಯತೆ ಕುರಿತು ಆಮೇಲೆ ಚಿಂತಿಸೋಣ ಎನ್ನುತ್ತಾರೆ. ಈ ಕಾರಣದಿಂದ ಪ್ರತಿ ವಸ್ತು ಬೇಕಾದಾಗಲೂ ಅದನ್ನು ಹುಡುಕಲು ಹಲವು ಗಂಟೆಗಳೇ ಬೇಕು. ಜೀವನದ ಸಂಬಂಧಗಳು, ನೆಂಟಸ್ತನ, ದೋಸ್ತಿ ಸಹ ಹೀಗೆಯೇ ಎಲ್ಲ ಗೋಜಲುಮಯ ಆಗಿ ಕೂತಿದೆ. ನಮಗೆ ಮಾರ್ಗ ತೋರಬೇಕಾದುದು `ಧರ್ಮ’ ಒಂದೇ ಎಂದು ನಂಬುತ್ತೇವೆ. ಇದಂತೂ ಬರೀ ತಪ್ಪುಗಳ ಗೊಂದಲಮಯ ಗೂಡಾಗಿದೆ. ನಮ್ಮ ಜೀವನ ಇಷ್ಟೆಲ್ಲ ಗೊಂದಲಗೊಳ್ಳಲು ಕಾರಣ ಈ ಧರ್ಮದ ದಾರಿ ತಪ್ಪಿಸುವ ಆಲೋಚನೆಗಳು!

ರಾಜಕೀಯ ಪಕ್ಷಗಳ ಮನೆ ಮುರುಕುತನದಿಂದ ನೆಮ್ಮದಿ ಹಾಳು

ಅಣ್ಣ ತಮ್ಮಂದಿರಲ್ಲಿ ವಿವಾದ ಏಳುವುದು ಹೊಸ ವಿಷಯವೇನಲ್ಲ. ಈ ಸಲದ ಚುನಾವಣೆ ಸಮೀಪಿಸಿದಂತೆ, ಒಂದೇ ಮನೆಯ ಸದಸ್ಯರು ಬೇರೆ ಬೇರೆ ಪಕ್ಷಗಳಿಗೆ ಹಂಚಿ ಹೋಗುವುದರಿಂದ, ಚುನಾವಣೆಯ ಬಿಸಿಯಿಂದ ಮನೆ ರಣರಂಗವಾಗುತ್ತದೆ. ಬಿಜೆಪಿ ರಾಮವಿಲಾಸ್‌ ಪಾಸ್ವಾನ್‌ ರ ಮಗ ಚಿರಾಗ್‌ ಪಾಸ್ವಾನ್‌ ನನ್ನು ಮತ್ತೆ ತಮ್ಮ ಜೊತೆ ಕೂಡಿಸಿಕೊಂಡು, ಬಿಹಾರದಲ್ಲಿ ಆತನಿಗೆ 5 ಸೀಟು ಕೊಟ್ಟಿದೆ. ಈತನ ಚಿಕ್ಕಪ್ಪ ಪಶುಪತಿ ಕುಮಾರ್‌ ಪಾರಸ್‌ ಗೆ ಏನೇನೂ ಇಲ್ಲ!

ಆಂಧ್ರದ ಪ್ರದೇಶದಲ್ಲಿ ಕಾಂಗ್ರೆಸ್‌ ಮುಖ್ಯಮಂತ್ರಿ ಜಗನ್‌ ರೆಡ್ಡಿಯ ತಂಗಿಯನ್ನು ಆ ಪ್ರದೇಶದ ಕಾಂಗ್ರೆಸ್‌ ಅಧ್ಯಕ್ಷರನ್ನಾಗಿಸಿ ಅಣ್ಣ ತಂಗಿಯರಲ್ಲಿ ಜಗಳ ತಂದಿಟ್ಟಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿ ಮೊದಲು ಅಜಿತ್‌ ಪವಾರ್‌ ರನ್ನು, ನ್ಯಾಶನಲ್ ಕಾಂಗ್ರೆಸ್‌ ಪಾರ್ಟಿಯ ವೃದ್ಧ ಶರದ್‌ ಪವಾರ್‌ ರಿಂದ ಬೇರೆ ಮಾಡಿತು. ಇದರಿಂದ ಅಜಿತ್‌ ರ ತಮ್ಮ ಶ್ರೀನಿವಾಸ್‌ ಅಣ್ಣನನ್ನು ಬಿಟ್ಟು ದೂರ ಹೋಗುವಂತಾಯಿತು.

ಅಣ್ಣತಮ್ಮಂದಿರ, ಒಡಹುಟ್ಟಿದವರ ವಿವಾದ ಪೌರಾಣಿಕ ಯುಗದಿಂದಲೂ ನಡೆದುಬಂದಿದೆ. ಆ ಸನಾತನ ಕಾಲದಲ್ಲೂ ರಾಗ ಅನುರಾಗ ಧಾರಾಳವಾಗಿದ್ದಾಗಲೂ, ಪುರಾಣಗಳಲ್ಲಿ ಕಲಹದ ಕಥೆಗಳು ಕಾಲ್ಪನಿಕವಾಗಿಯೂ ಹೆಚ್ಚು ವ್ಯಕ್ತಗೊಂಡಿವೆ. ದಶರಥನ ದೆಸೆಯಿಂದಾಗಿ ಅಣ್ಣತಮ್ಮದಿರ ಹಕ್ಕುಗಳ ನೆಪದಲ್ಲಿ ಶ್ರೀರಾಮ ವನವಾಸ ಹೊರಡುವಂತಾಯಿತು. ರಾಮ ಹಿಂದಿರುವವರೆಗೂ ಅಯೋಧ್ಯೆಯ ರಾಜ್ಯಭಾರ ಹೇಗೋ ನಡೆಯುತ್ತಿತ್ತು. ಮಹಾಭಾರತದಲ್ಲಂತೂ ದಾಯಾದಿಗಳ ಕಲಹವೇ ಇಡೀ ಕುರುಕ್ಷೇತ್ರಕ್ಕೆ ನಾಂದಿ. ಶ್ರೀಕೃಷ್ಣನ ದೆಸೆಯಿಂದ ಈ ದಾಯಾದಿಗಳ ಕಲಹ ಜೀವಂತ ಉಳಿಯಿತು, ಅದನ್ನೇ ಧರ್ಮದ ರಕ್ಷಣೆ ಎಂದು ಸಾರಲಾಯಿತು.

ಇಂದೂ ಸಹ ಪ್ರತಿ ಮನೆಯಲ್ಲೂ ಅಣ್ಣ ತಮ್ಮ, ಅಕ್ಕತಂಗಿಯರ ಜಗಳ ಇದ್ದದ್ದೇ! ಇದು ಇಷ್ಟು ಬಲವಾಗಿ ಬೇರೂರಲು, ಪೌರಾಣಿಕ ಕಥೆಗಳನ್ನು ಆದರ್ಶವಾಗಿ ನಮ್ಮ ತಲೆಯಲ್ಲಿ ತುರುಕಿದ್ದೇ ಕಾರಣ. ಹಣ ಅಧಿಕಾರಕ್ಕಾಗಿ ಜಗಳ ನಡೆದಾಗ, ಅಣ್ಣತಮ್ಮ, ಮಕ್ಕಳು, ತಾಯಿ ತಂದೆ ಎಂಬುದನ್ನೂ ಮರೆತು, ರಕ್ತಪಿಪಾಸುಗಳಾಗಿ ಮಾರ್ಪಡುತ್ತಾರೆ. ವಿಭೀಷಣನಿಂದ ರಾವಣ ಸತ್ತ, ಹಿರಣ್ಯಕಶಿಪು  ಕಾರಣ ಅವನ ತಂಗಿ ಹೋಲಿಕಾ (ಉತ್ತರ ಭಾರತದ ಪುರಾಣ) ಬೆಂಕಿಗೆ ಆಹುತಿಯಾದಳು.

ಇಂದು ಕೋರ್ಟಿನ ಎಲ್ಲಾ ಕೇಸುಗಳೂ ಅಣ್ಣ ತಮ್ಮ, ಅಣ್ಣ ತಂಗಿಯರ ಹಕ್ಕುಗಳ ಕುರಿತಾದ ವ್ಯಾಜ್ಯಗಳಿಂದಲೇ ತುಂಬಿಹೋಗಿವೆ. ತಂದೆಯ ಆಸ್ತಿ ತನಗೇ ಬರಬೇಕು ಎಂದು ಅಣ್ಣ ತಮ್ಮ ಹೊಡೆದಾಡಿದರೆ, ಇದರಲ್ಲಿ ತನಗೂ ಪಾಲಿರಲಿ ಎಂದು ಈಗ ತಂಗಿಯೂ ಸೊಂಟಕ್ಕೆ ಸೆರಗು ಕಟ್ಟಿ ನಿಂತಿದ್ದಾಳೆ. ಹಿಂದೂ ಹೆಂಗಸರಿಗೆ ಪೌರಾಣಿಕ ಕಥೆಗಳ ಆಧಾರದಿಂದ ಅವರ ಹಕ್ಕು ಸಿಗದಂತೆ ಮಾಡಲಾಗಿದೆ. ಸನಾತನ ಧರ್ಮದ ಗುಣಗಾನ ಮಾಡುವವರು, ತುಟಿ ಪಿಟಕ್‌ ಎನ್ನದೆ ಸುಮ್ಮನಿದ್ದಾರೆ.

ಅಣ್ಣ ತಮ್ಮ, ಅಕ್ಕ ತಂಗಿ, ಒಡಹುಟ್ಟಿದವರ ಸಂಬಂಧ ಎಲ್ಲಕ್ಕಿಂತಲೂ ಗಟ್ಟಿಯಾದುದು. ಇದು ರಕ್ತ ಸಂಬಂಧ, ಬಾಲ್ಯದ ಸಂಬಂಧ, ಹಣಹಕ್ಕಿನ ಕಾರಣ ಇದನ್ನು ಮುರಿಯುವುದು ನೋವಿನ ಸಂಗತಿ ಮಾತ್ರವಲ್ಲ, ಬಲು ಅನೈತಿಕ ಹೌದು. ಪ್ರತಿಯೊಂದು ರಾಜಕೀಯ ಪಕ್ಷ ಈ ತಪ್ಪಿಗೆ ಹೊಣೆ ಹೊರಬೇಕಿದೆ. ಇದು ಬಲು ಗಂಭೀರವಾದುದು, ಏಕೆಂದರೆ ರಾಜಕೀಯ ಪಕ್ಷಗಳೇ ಸಂಸತ್ತು ಹಾಗೂ ವಿಧಾನಸಭೆಗಳಲ್ಲಿ ಕುಳಿತು ಕಾನೂನು ರಚನೆ ಮಾಡುವಂಥದ್ದು. ಅವುಗಳಿಂದಲೇ ಈ ಸಂಬಂಧ ಒಂದಾಗಿರಬೇಕೋ ಮುರಿದು ಹೋಳಾಗಬೇಕೋ, ನಿರ್ಧರಿಸಲ್ಪಡುತ್ತದೆ.

ರಾಜಕೀಯ ಪಕ್ಷಗಳು ಆದರ್ಶ ಪ್ರಸ್ತುತ ಪಡಿಸುವಂತಿರಬೇಕು, ಮನೆ ಮುರುಕುತನ ತೋರಬಾರದು. ಪೌರಾಣಿಕ ವಿಚಾರಧಾರೆ ಅವರ ನೈತಿಕತೆಯನ್ನೇ ಸಮಾಪ್ತಿ ಮಾಡಿಟ್ಟಿದೆ. ಇಂಥ ಪಕ್ಷಗಳ ಈ ಮನೆ ಮುರುಕುತನ ಏನೂ ಹೊಸದಲ್ಲ, ಆದರೆ ಸದಾ ದುಃಖ ತರುವಂಥದ್ದು. ಪೌರಾಣಿಕ ಯುಗ ಎಲ್ಲಾ ಧರ್ಮದವರನ್ನೂ ಹಾಳು ಮಾಡಿಟ್ಟಿದೆ. ಇದರಿಂದ ಒಡಹುಟ್ಟಿದವರಲ್ಲಿ ದ್ವೇಷ ಕೊಲೆಯವರೆಗೂ ಹೋಗಿ, ನೆಮ್ಮದಿಯ ಸಾವು ಇಲ್ಲದಂತೆ ಮಾಡಿದೆ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ