ಪ್ರೌಢ ವಯಸ್ಸು ಬಂದಿದೆ ಎಂಬುದರ ಸಂಕೇತವೇ ನಿಮ್ಮ ಮುಖದಲ್ಲಿನ ಸುಕ್ಕುಗಳು. ಆದರೆ ಎಷ್ಟೋ ಸಲ ಮಾಲಿನ್ಯಕ್ಕೆ ಒಡ್ಡಿದ ಮುಖ, ಡೀಹೈಡ್ರೇಟೆಡ್‌ ಸ್ಕಿನ್‌ ಅಥವಾ ಹೆಚ್ಚು ಬಿರುಬಿಸಿಲಿನಿಂದಲೂ ಕಡಿಮೆ ವಯಸ್ಸಿನವರ ಮುಖದಲ್ಲೂ ಈ ಸುಕ್ಕುಗಳ ಕಾಟ ಶುರುವಾಗುತ್ತದೆ. ಇದರ ಹೆಚ್ಚಿನ ಹಾಗೂ ನೇರ ಪರಿಣಾಮ ನಮ್ಮ ಮುಖ ಹಾಗೂ ಕೈಗಳ ಚರ್ಮದ ಮೇಲೆ ಆಗುತ್ತದೆ. ವಯಸ್ಸನ್ನಂತೂ ತಡೆಯಲಾಗದು, ಆದರೆ ಚರ್ಮದ ನಿಯಮಿತ ಆರೈಕೆಯಿಂದ, ಈ ದುಷ್ಪರಿಣಾಮಗಳನ್ನು ಎಷ್ಟೋ ತಡೆಯಬಹುದು.

ಚರ್ಮದ ಆರೈಕೆಯ ಕುರಿತಾಗಿ ತಜ್ಞರ ಸಲಹೆ ಪಡೆಯೋಣವೇ? :

ಸುಕ್ಕುಗಳಾಗಲು ಕಾರಣ

ವಯಸ್ಸು ಪ್ರೌಢತೆಯತ್ತ ತಿರುಗಿದಂತೆ ಚರ್ಮ ತೆಳು ಹಾಗೂ ಶುಷ್ಕ ಆಗುತ್ತದೆ. ಇದರಿಂದಾಗಿ ಅದರ ಬಳುಕುವಿಕೆಯ ಗುಣ ತಗ್ಗುತ್ತದೆ, ಕ್ರಮೇಣ ಅದು ಡ್ಯಾಮೇಜ್‌ ಆಗ ತೊಡಗುತ್ತದೆ. ಇದು ತಾನಾಗಿ ಖಂಡಿತಾ ಸರಿಹೋಗದು. ಇದರಿಂದಾಗಿ ಅಲ್ಲಲ್ಲಿ ಸುಕ್ಕುಗಳು ಮೂಡುತ್ತವೆ. ಇತ್ತೀಚೆಗೆ ಚಿಕ್ಕ ವಯಸ್ಸಿನವರಿಗೂ ಸುಕ್ಕುಗಳ ಕಾಟ ತಪ್ಪಿದ್ದಲ್ಲ. ಇದಕ್ಕೆ ಕಾರಣಗಳೆಂದರೆ ವ್ಯಸ್ತ ಜೀವನಶೈಲಿ, ಕಡಿಮೆ ನಿದ್ದೆ, ಅತಿಯಾದ ಟೆನ್ಶನ್‌, ಅಪೌಷ್ಟಿಕ ಆಹಾರ ಇತ್ಯಾದಿ. ಆರಂಭದಲ್ಲಿಯೇ ಈ ಸಮಸ್ಯೆ ಗುರುತಿಸಿ ಆರೈಕೆ ಮಾಡಿಕೊಳ್ಳಬೇಕು.

ಇದರ ಜೊತೆಗೆ ಯಾರು ಬಿಸಿಲಿನಲ್ಲಿ ಹೆಚ್ಚು ಕೆಲಸ ಮಾಡುತ್ತಾರೋ ಅವರಲ್ಲಿಯೂ ಬೇಗ ಸುಕ್ಕು ಕಾಣಿಸಬಹುದು. ಏಕೆಂದರೆ ಸೂರ್ಯನ UV ಕಿರಣಗಳು ಚರ್ಮದಲ್ಲಿನ ಕೊಲೋಜೆನ್‌ ಹಾಗೂ ಎಲಾಸ್ಟಿಕ್‌ ಫೈಬರ್‌,  ಇದರಿಂದ ತಂತಾನೇ ಬೇರ್ಪಡಲು ಆರಂಭಿಸುತ್ತವೆ. ಇವೆರಡೂ ಗಟ್ಟಿಯಾಗಿ ಬೆಸೆದಿದ್ದಾಗ ಮಾತ್ರ, ಚರ್ಮದ ಜೀವಕೋಶಗಳು ಸಕ್ರಿಯವಾಗಿ ಯಂಗ್‌ ಆಗಿರಲು ಸಾಧ್ಯ, ಆಗ ತಾರುಣ್ಯ ತಂತಾನೇ ಹೊರಸೂಸುತ್ತದೆ. ಈ ಪದರದ ಬ್ರೇಕಿಂಗ್‌ ನಿಂದ ಚರ್ಮ ದುರ್ಬಲಗೊಳ್ಳುತ್ತದೆ,  ಪರಿಣಾಮ…. ಸುಕ್ಕುಗಳು!

ಇದರ ನಿವಾರಣೆಗಾಗಿ 5 ಸುಲಭ ಟಿಪ್ಸ್ ಹೀಗಿವೆ :

ಸೂಕ್ತ ಪ್ರಮಾಣದಲ್ಲಿ ನೀರಿನ ಸೇವನೆ : ಪ್ರತಿದಿನ ತಪ್ಪದೆ ಕನಿಷ್ಟ 5-6 ಲೀ. ನೀರು ಸೇವಿಸಿ. ಇದರಿಂದ ಚರ್ಮ ಸದಾ ಹೈಡ್ರೇಟೆಡ್ ಆಗಿರುತ್ತದೆ, ಇದರಿಂದ ಚರ್ಮದಲ್ಲಿ ತೆಳುವಾದ ಸುಕ್ಕಿನ ಗೆರೆ ಕಾಣಿಸಿಕೊಳ್ಳುವುದಿಲ್ಲ. ಈ ವಿಧಾನವಂತೂ ಬಲು ಸುಲಭ, ದುಬಾರಿಯೂ ಅಲ್ಲ, ಅತಿ ಸಾಧಾರಣ ಪ್ರಕ್ರಿಯೆ ಆಗಿದೆ. ಇದರಿಂದ ಚರ್ಮ ಸದಾ ತಾಜಾತನದಿಂದ ನಳನಳಿಸುತ್ತಿರುತ್ತದೆ.

ವಿಟಮಿನ್ಸಿ ರಿಚ್ಆಗಿರುವ ಹಣ್ಣು ಹಂಪಲನ್ನು ಹೆಚ್ಚು ಸೇವಿಸಿ :  ಆರೆಂಜ್‌, ಮೂಸಂಬಿ, ನಿಂಬೆಹಣ್ಣು, ಸೀಬೆಹಣ್ಣು ಇತ್ಯಾದಿ ಕೊಲೇಜನ್‌ ನ್ನು ಸಮನ್ವಯಗೊಳಿಸಲು ಸಹಾಯ ಮಾಡುತ್ತವೆ. ಇದರಿಂದ ಚರ್ಮದ ಟೆಕ್ಸ್ ಚರ್‌ ಹಾಗೂ ಹೊಳಪು ಎಷ್ಟೋ ಸುಧಾರಿಸುತ್ತದೆ. ವಿಟಮಿನ್‌ರಿಚ್‌ ಆಗಿರುವ ಹಣ್ಣು, ತರಕಾರಿಗಳಿಂದ ಚರ್ಮಕ್ಕೆ ಹೆಚ್ಚಿನ ಪೋಷಣೆ ದೊರಕುತ್ತದೆ. ಅಂದ್ರೆ ಕ್ಯಾರೆಟ್‌, ಪರಂಗಿಹಣ್ಣು, ಸೊಪ್ಪು, ತಾಜಾ ಹಸಿ ತರಕಾರಿಯ ಸೇವನೆಯಿಂದ ಇದು ನಮಗೆ ಹೇರಳವಾಗಿ ಸಿಗುತ್ತದೆ. ಇದು ಸ್ಕಿನ್‌ ಟೆಕ್ಸ್ ಚರ್ ಮತ್ತು ಟೋನ್‌ ಎರಡನ್ನೂ ಸುಧಾರಿಸುತ್ತದೆ.

ಆದಷ್ಟೂ ಬಿರುಬಿಸಿಲಲ್ಲಿ ಸುತ್ತಾಡಬೇಡಿ : ಈಗಾಗಲೇ ಬೇಸಿಗೆ ಬಲು ಬಿರುಸಾಗಿದೆ. ಹೀಗಾಗಿ ಹೊರಗಿನ ಉರಿ ಬಿಸಿಲಲ್ಲಿ ಆದಷ್ಟೂ ತಿರುಗದೇ ಇರುವುದೇ ಒಳ್ಳೆಯದು. ಏಕೆಂದರೆ ಮತ್ತೆ ಮತ್ತೆ ಸೂರ್ಯನ UV ಕಿರಣಗಳಿಗೆ ಚರ್ಮ ಒಡ್ಡುವುದರಿಂದ, ಅದರಲ್ಲಿನ ಕೊಲೋಜೆನ್‌ ಪೂರ್ತಿ ಹಾಳಾಗುತ್ತದೆ. ಇದರಿಂದಾಗಿ ಸ್ಕಿನ್‌ ಏಜಿಂಗ್‌ ಹೆಚ್ಚುತ್ತದೆ. ಆ ಕಾರಣದಿಂದ ಸುಕ್ಕುಗಳು ಕಾಣಿಸಿಕೊಳ್ಳುತ್ತಾ ಹೆಚ್ಚಾಗುತ್ತವೆ. ಹೀಗಾಗಿ ಉತ್ತಮ ಸನ್‌ ಸ್ಕ್ರೀನ್‌ ಲೋಶನ್‌ ಹಚ್ಚಿಕೊಂಡು, ತಲೆಗೆ ಸ್ಕಾರ್ಫ್‌ ಕಟ್ಟಿಕೊಳ್ಳಲು ಮರೆಯದಿರಿ.

ಮ್ಯಾಜಿಕ್ಪಲ್ಪ್ ನ್ನು ಪ್ರಯೋಗವಾಗಿ ಬಳಸಿ : ಆ್ಯಲೋವೆರಾದ ಪಲ್ಪ್ ನ್ನು ಓರಲಿ ಸೇವಿಸುವುದರಿಂದ ಅಥವಾ ಫೇಸ್‌ ಪ್ಯಾಕ್ ರೂಪದಲ್ಲಿ ಪ್ರಯೋಗಿಸುವುದರಿಂದ, ನಮ್ಮ ಚರ್ಮ ಸದಾ ಹೈಡ್ರೇಟೆಡ್‌ಸ್ಮೂತ್‌ ಆಗಿರುತ್ತದೆ. ಇದರಿಂದ ಸದಾ ಫ್ರೆಶ್‌ ಲುಕ್ಸ್ ಸಿಗುತ್ತದೆ. `ಬನಾನಾ ಮಾಸ್ಕ್’ ಇದಕ್ಕೆ ಪರ್ಯಾಯ ಎನ್ನಬಹುದು. ಇದನ್ನು ತಯಾರಿಸಲು, ಕಳಿತ ಬಾಳೆಹಣ್ಣನ್ನು ಚೆನ್ನಾಗಿ ಮಸೆದು ಮುಖಕ್ಕೆ ಹಚ್ಚಿಕೊಳ್ಳುವುದರಿಂದ, ಚರ್ಮ ಎಷ್ಟೋ ಸ್ಮೂತ್‌ ಆಗುತ್ತದೆ. ಆರೆಂಜ್‌ ಪಲ್ಪ್ ನಲ್ಲೂ ಸಹ ವಿಟಮಿನ್‌ ಸಿ ತುಂಬಿಕೊಂಡಿದ್ದು, ಚರ್ಮವನ್ನು ಪುನರುಜ್ಜೀಗೊಳಿಸಿ ಹೆಚ್ಚಿನ ಗ್ಲೋ ನೀಡುವುದರಲ್ಲಿ ಸಹಾಯ ಮಾಡುತ್ತದೆ.

ಆಯಿಲ್ಮಸಾಜ್ನ್ನು ಎಂದೂ ನಿರ್ಲಕ್ಷಿಸಬೇಡಿ : ಕೊಬ್ಬರಿ ಎಣ್ಣೆ ಹಾಗೂ ಬಾದಾಮಿ ಎಣ್ಣೆ ಎರಡೂ ಡ್ರೈ ಸ್ಕಿನ್‌ ಗೆ ಬಲು ಉತ್ತಮ ಎಂದು ಸಾಬೀತಾಗಿದೆ. ಇದು ಒಡೆದ ಚರ್ಮವನ್ನು ಸರಿಪಡಿಸಿ, ಚರ್ಮದಲ್ಲಿ ಫೈನ್‌ ಲೈನ್ಸ್ ಹಾಗೂ ಸುಕ್ಕುಗಳು ಆಗದಂತೆ ತಡೆಯುತ್ತದೆ. ನಿಯಮಿತವಾಗಿ ಇದರಿಂದ ಮುಖವನ್ನು ಮಸಾಜ್‌ ಮಾಡುವುದರಿಂದ, ಅಲ್ಲಿ ರಕ್ತ ಸಂಚಾರ ಹೆಚ್ಚುತ್ತದೆ. ಇದರಿಂದ ಅಲ್ಲಿನ ಚರ್ಮ ರಿಜುವಿನೇಟ್‌ ಆಗುತ್ತದೆ. ಹೀಗೆ ಆಯಿಲ್ ಮತ್ತು ಅದರ ಮಸಾಜ್‌ ಎರಡೂ ಚರ್ಮಕ್ಕೆ ಹೆಚ್ಚು ಲಾಭಕರ. ಆದರೆ ಹೆಚ್ಚು ಆ್ಯಕ್ನೆ ಇರುವ ಚರ್ಮದವರು ಮಾತ್ರ ಇದನ್ನು ಅವಾಯ್ಡ್ ಮಾಡುವುದೇ ಸರಿ!

ಜಿ. ಸುಮನಾ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ