ಪ್ರ : ನಾನು 19 ವರ್ಷದ ತರುಣಿ. ಹಿಂದೆಲ್ಲ ನನ್ನ ಹಲ್ಲು ಬೆಳ್ಳಗೆ ಹೊಳೆಯುತ್ತಿತ್ತು. ಆದರೆ ಕ್ರಮೇಣ ಹಲ್ಲು ಹಳದಿ, ಬಣ್ಣಕ್ಕೆ ತಿರುಗುತ್ತಿದೆ. ದಿನಕ್ಕೆ 2 ಸಲ ತಪ್ಪದೆ ಬ್ರಶ್ಮಾಡುತ್ತೇನೆ. ಬಗೆಬಗೆಯ ಟೂತ್ಪೇಸ್ಟ್ ಬಳಸಿದ್ದಾಯಿತು. ನಾನು ಏನು ಮಾಡಿದರೆ ನನ್ನ ಹಲ್ಲು ಹಿಂದಿನಂತೆ ಬೆಳ್ಳಗೆ ಹೊಳೆಯುತ್ತವೆ?

ಉ : ಹಲ್ಲನ್ನು ಬಹಳ ಕಾಲ ಸರಿಯಾಗಿ ಗಮನಿಸಿಕೊಳ್ಳದಿದ್ದರೆ ಹೀಗೇ ಆಗುತ್ತದೆ. ಹಲ್ಲಿನ ಹಳದಿ ಬಣ್ಣ ಹೋಗಲಾಡಿಸಲು ಈ ಕೆಳಗಿನ ಉಪಾಯ ಅನುಸರಿಸಿ :

ತುಳಸಿ : ಹಲ್ಲಿನ ಹಳದಿ ಬಣ್ಣ ಬದಲಾಯಿಸಲು ತುಳಸಿ ಪ್ರಮುಖ ಅಸ್ತ್ರ. ತುಳಸಿ ಹಲ್ಲನ್ನು ಹಲವು ದಂತರೋಗಗಳಿಂದಲೂ ರಕ್ಷಿಸಬಲ್ಲದು, ಜೊತೆಗೆ ಬಾಯಿಯ ಹಲವು ರೋಗಗಳಿಂದಲೂ ಸಹ. ಇದರ ಬಳಕೆಗಾಗಿ ತುಳಸಿ ರಸವನ್ನು ನಿಮ್ಮ ಹಲ್ಲುಪುಡಿ ಅಥವಾ ಟೂತ್‌ ಪೇಸ್ಟ್ ಜೊತೆ ಬೆರೆಸಿ ಹಲ್ಲುಜ್ಜಿರಿ, ಇದರಿಂದ ಹಲ್ಲು ಹೊಳೆಯತೊಡಗುತ್ತದೆ.

ಉಪ್ಪು : ಇದು ಹಲ್ಲನ್ನು ಶುಚಿಗೊಳಿಸಲು ಬಳಸಲಾಗುವ ಅತಿ ಪ್ರಾಚೀನ ವಿಧಾನ. ಇದ್ದಿಲು (ಚಾರ್‌ ಕೋಲ್‌) ಪುಡಿ ಮಾಡಿ, ಅದಕ್ಕೆ ಉಪ್ಪು ಬೆರೆಸಿ ಚೆನ್ನಾಗಿ ಹಲ್ಲು ತಿಕ್ಕಿರಿ, ಅದು ಕ್ರಮೇಣ ಮುತ್ತಿನಂತೆ ಹೊಳೆಯುತ್ತದೆ.

ವಿನಿಗರ್‌: 1 ಚಮಚ ಆಲಿವ್‌ಎಣ್ಣೆಗೆ ಆ್ಯಪಲ್ ವಿನಿಗರ್‌ಬೆರೆಸಿಕೊಳ್ಳಿ. ಈ ಮಿಶ್ರಣದಲ್ಲಿ ನಿಮ್ಮ ಟೂಥ್‌ಬ್ರಶ್‌ಅದ್ದಿ ಅದ್ದಿ, ನಿಧಾನ ಹಲ್ಲುಜ್ಜಿಕೊಳ್ಳಿ. ಹೀಗೆ ಬೆಳಗ್ಗೆ ಸಂಜೆ ಮಾಡಿ. ಇದರಿಂದ ಹಲ್ಲುಗಳ ಹಳದಿ ಬಣ್ಣ ಎಷ್ಟೋ ತಗ್ಗುತ್ತದೆ. ಜೊತೆಗೆ ಉಸಿರಾಟದ ದುರ್ವಾಸನೆಯೂ ತಗ್ಗುತ್ತದೆ.

 

ಪ್ರ : ನಾನು 22 ಯುವತಿ. ನಾನು ವ್ಯಾಕ್ಸಿಂಗ್‌, ಥ್ರೆಡಿಂಗ್ಮಾಡಿಸಿದಾಗೆಲ್ಲ ನನ್ನ ಅನಗತ್ಯ ಕೂದಲು ಸಂಪೂರ್ಣ ನಾಶ ಆಗಿರುವುದೇ ಇಲ್ಲ. ಕೂದಲು ಬಹಳ ಸಣ್ಣಕ್ಕಿದ್ದು, ಕೈಕಾಲುಗಳಿಂದ ಹೊರಗೆ ಇಣುಕುವಾಗ ಬಹಳ ಹಿಂಸೆಯಾಗುತ್ತದೆ. ಇದನ್ನು ಸಂಪೂರ್ಣ ನಾಶಪಡಿಸುವುದು ಹೇಗೆಂದು ಹೇಳುವಿರಾ?

ಉ : ಈ ಕೂದಲನ್ನು ಇನ್‌ ಗ್ರೋಥ್‌ಹೇರ್‌ಅಂತಾರೆ. ಇದನ್ನು ನೀವು ಎಕ್ಸ್ ಫಾಲಿಯೇಟ್‌ಮಾಡಿ ತೆಗೆಯಬಹುದು. ಇದರಿಂದ ಚರ್ಮದ ಒಳಗಿನ ಕೂದಲು ಬೇಗ ಹೊರಬರುತ್ತದೆ. ಇದಕ್ಕಾಗಿ ಹೀಗೆ ಮನೆಮದ್ದು ಮಾಡಿ :

ಅವಕ್ಯಾಡೋಜೇನುತುಪ್ಪ : ಅವಕ್ಯಾಡೋ (ಬೆಣ್ಣೆ) ಹಣ್ಣನ್ನು ಮಸೆದು, ಅದಕ್ಕೆ 2 ದೊಡ್ಡ ಚಮಚ ಜೇನು, 1 ಚಮಚ ಸಕ್ಕರೆ ಬೆರೆಸಿರಿ. ಸಕ್ಕರೆಯಿಂದ ಎಕ್ಸ್ ಫಾಲಿಯೇಶನ್‌ಸಾಫ್ಟ್ ಆಗಿ ಜರುಗಿದರೆ, ಜೇನು-ಬೆಣ್ಣೆ ಹಣ್ಣು ಚರ್ಮಕ್ಕೆ ಹೆಚ್ಚಿನ ಪೋಷಣೆ ಒದಗಿಸುತ್ತವೆ. ನಿಮ್ಮದು ಆಯ್ಲಿ ಚರ್ಮವೇ? ಹಾಗಿದ್ದರೆ ಇದಕ್ಕೆ ನೀವು 2-3 ತೊಟ್ಟು ನಿಂಬೆರಸ ಬೆರೆಸಿಕೊಳ್ಳಿ. ನಿಂಬೆರಸದಿಂದ  ಚರ್ಮ ಟೈಟ್‌ಆಗಿ, ಪೋರ್ಸ್‌ಕ್ಲೋಸ್‌ಆಗುತ್ತವೆ. ಈ ಮಾಸ್ಕ್ ನ್ನು ಮುಖಕ್ಕೆ ಹಚ್ಚಿ 15-20 ನಿಮಿಷ ಹಾಗೇ ಬಿಡಿ. ನಂತರ ತಣ್ಣೀರಿನಿಂದ ತೊಳೆದು ತೆಗೆದುಬಿಡಿ.

ಟೀಟ್ರಿ ಆಯಿಲ್‌: ಇದರಲ್ಲಿ ಆ್ಯಂಟಿಬ್ಯಾಕ್ಟೀರಿಯಲ್, ಆ್ಯಂಟಿ ಸೆಪ್ಟಿಕ್‌, ಆ್ಯಂಟಿ ಇನ್‌ ಫ್ಲಮೇಟರಿ ಗುಣಗಳು ಅಡಗಿವೆ. ಇದರಿಂದಾಗಿ ಚರ್ಮದ ಸೋಂಕು ಸಹಜವಾಗಿ ದೂರಾಗುತ್ತದೆ, ಜೊತೆಗೆ ಇನ್‌ ಗ್ರೋಥ್‌ಹೇರ್‌ಸಮಸ್ಯೆ ಸಹ ಇಲ್ಲವಾಗುತ್ತದೆ.

ಟೀಟ್ರಿ ಆಯಿಲ್ ‌ನಲ್ಲಿ ಡಸ್ಟಿಲ್ಡ್‌ವಾಟರ್‌ಬೆರೆಸಿ ಚರ್ಮಕ್ಕೆ ಹಚ್ಚಿರಿ. 15-20 ನಿಮಿಷ ಹಾಗೇ ಬಿಟ್ಟು ನಂತರ ತಣ್ಣೀರಿನಿಂದ ತೊಳೆಯಿರಿ. ಈ ಉಪಾಯಗಳನ್ನು ನೀವು ವ್ಯಾಕ್ಸಿಂಗ್‌ಮಾಡಿಸಿದ 12 ದಿನಗಳ ನಂತರ ಅನುಸರಿಸುವುದು ಲೇಸು.

 

ಪ್ರ : ನನಗೀಗ 30 ಹರೆಯ. ನಾನು ಬಹುಕಾಲ ಅಲೋಪತಿ ಔಷಧಿ ಬಳಸುತ್ತಿದ್ದೆ. ಇದೀಗ ಔಷಧಿ ಬಳಕೆ ನಿಂತಿದೆ. ಅದರ ಅಡ್ಡ ಪರಿಣಾಮವಾಗಿ ಮುಖದ ಮೇಲೆ ಸಾಕಷ್ಟು ಕಲೆಗುರುತು ಮೂಡಿದೆ. ದಯವಿಟ್ಟು ಇದರಿಂದ ಮುಕ್ತಿ ಪಡೆಯುವುದು ಹೇಗೆ?

ಉ : 4-5 ಸ್ಟ್ರಾಬೆರಿ ಮತ್ತು ಒಂದು ಏಪ್ರಿಕಾಟ್‌ತಿರುಳನ್ನು ಮಸೆದು ಪೇಸ್ಟ್ ಮಾಡಿಕೊಳ್ಳಿ. ಇದನ್ನು ಕಲೆಗುರುತಿನ ಜಾಗಕ್ಕೆ ಹಚ್ಚಿರಿ. 15 ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆಯಿರಿ. ಪ್ರತಿದಿನ ಹೀಗೆ 3-4 ವಾರ ಮಾಡಿ, ನಿಮ್ಮ ಮುಖದಲ್ಲಿ ಉತ್ತಮ ಸುಧಾರಣೆ ಕಾಣಿಸುತ್ತದೆ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ