ಇಂದಿಗೂ ಸಹ ಸಾರ್ವಜನಿಕ ಸ್ಥಳಗಳಲ್ಲಿ ಹುಡುಗಿಯ ಬ್ರಾ ಸ್ಟ್ರಾಪ್ಸರಿದು ಕಾಣಿಸಿಕೊಂಡರೆ, ಜನ ಅಸಹಜವಾಗಿ ವರ್ತಿಸುತ್ತಾರೆ, ಇದು ವ್ಯಂಗ್ಯದ ವಿಷಯವಾಗುತ್ತದೆ. ಗಂಡಸು ತನ್ನ ಬನಿಯನ್ಒಣಗಿಸಲು ಸಂಕೋಚಿಸದೆ ಇರುವಾಗ, ಬ್ರಾ ಬಗ್ಗೆ ಇಂಥ ವ್ಯಂಗ್ಯದ ವಾಗ್ಬಾಣಗಳೇಕೆ……?

ಸಡಿಲ, ಜೋತಾಡುವ ಬ್ರೆಸ್ಟ್ ಕೆಟ್ಟದಾಗಿ ಕಾಣುತ್ತದೆ. ವಯಸ್ಸಾದ ಹಾಗೆ ಸ್ತನಗಳ ಇಂಥ ಜೋತಾಟ ಮಾಮೂಲಿ. ಇದಕ್ಕೆ ಕಾರಣ ಬ್ರಾ ಧರಿಸದೆ ಇರುವುದಾಗಿದೆ. ಸಡಿಲ, ಜೋತಾಡುವ ಸ್ತನಗಳು ಖಂಡಿತಾ ಅಟ್ರಾಕ್ಟಿವ್ ‌ಎನಿಸುವುದಿಲ್ಲ. ಹಾಗೇಂತ ಇಡೀ ದಿನ, ಬ್ರಾ ಧರಿಸಿಕೊಂಡೇ ಇರುವುದು ಸಹ ಕಷ್ಟದ ಕೆಲಸವಾಗುತ್ತದೆ.

24ರ ರಚಿತಾ ಈ ಬಗ್ಗೆ ಹೇಳುತ್ತಾಳೆ, “ನನಗೆ ಆರಂಭದಲ್ಲಿ ಬ್ರಾ ಧರಿಸುವುದು ಅಂದ್ರೆ ಇಷ್ಟ ಆಗುತ್ತಿರಲಿಲ್ಲ. ಆದರೆ ಕ್ರಮೇಣ ಇದು ಅಭ್ಯಾಸ ಆಗತೊಡಗಿತು. ಟೀನೇಜ್‌ ನಲ್ಲಿ ನಾನು ಕಡ್ಡಾಯ ಬ್ರಾ ಧರಿಸಬೇಕು ಎಂದು ಅಮ್ಮ ಹೇಳುತ್ತಿದ್ದಾಗ, ಬಹಳ ಕೋಪ ಬರ್ತಿತ್ತು. ಇನ್ನೊಂದು ಹೊರೆ ಪಟ್ಟಿ ಬಿಗಿದುಕೊಳ್ಳುವುದು ಯಾರಿಗೆ ತಾನೇ ಸುಲಭ ಎನಿಸುತ್ತದೆ? ಆದರೆ ನಾನೀಗ ದೊಡ್ಡವಳಾಗಿದ್ದೇನೆ, ಸ್ತನದ ಗಾತ್ರ ಬೆಳೆಯುತ್ತಿದೆ, ಹೀಗಾಗಿ ಬ್ರಾ ಅನಿವಾರ್ಯ ಎನ್ನುತ್ತಿದ್ದರು. ನನ್ನ ಎದೆಯ ಭಾಗ ಪರ್ಫೆಕ್ಟ್ ಆಗಿ ಕಂಡುಬರಲು ಬ್ರಾ ಧರಿಸಲೇಬೇಕು ಎಂದು ಅಕ್ಕಾ ಸಹ ಹೇಳಿದಳು. “ಆದರೆ ಬ್ರಾ ಧರಿಸುವುದು ಅಂದ್ರೆ ಹಿಂಸೆಯೇ ಸರಿ. ಇಡೀ ದಿನ ಇದನ್ನು ಧರಿಸಿಕೊಂಡಿರುವುದು ಹಿಂಸೆಯೇ ಸರಿ. ಬ್ರಾ ಧರಿಸಿದ ನಂತರ ಯಾರೋ ನನ್ನ ದೇಹವನ್ನು ಬಿಗಿಯಾಗಿ ಕಟ್ಟಿಹಾಕಿದಂತೆ ಹಿಂಸೆ ಆಗುತ್ತಿತ್ತು. ನಂತರ ಕ್ರಮೇಣ ಇದು ಅಭ್ಯಾಸವಾಗಿ ಹೋಯಿತು. ಈಗ ಬ್ರಾ ಧರಿಸದೆ ಇದ್ದರೆ ಹಿತಕರ ಅನಿಸೋದಿಲ್ಲ.”

bra-strap

ನಮ್ಮ ಚಾಯ್ಸ್ ನಮಗಿರಬೇಕು

ಕಂಫರ್ಟ್‌ ವಿಷಯ ಬಂದಾಗ ರಚನಾ ಹೇಳುವುದೆಂದರೆ, “ಆರಂಭದಲ್ಲಿ ಇದು ಬಿಲ್ ಕುಲ್ ಕಂಫರ್ಟೆಬಲ್ ಅನಿಸುತ್ತಿರಲಿಲ್ಲ. ಉಸಿರಾಡಲಿಕ್ಕೆ ತೊಂದರೆ ಆಗುತ್ತಿತ್ತು. ಭುಜದ ಬಳಿ ಸ್ಟ್ರಾಪ್‌ ನ ಗುರುತು ಉಳಿದುಬಿಡುತ್ತಿತ್ತು. ಬೇಸಿಗೆಯಲ್ಲಂತೂ ಈ ಹಿಂಸೆ ಇನ್ನೂ ಹೆಚ್ಚುತ್ತಿತ್ತು. ಸ್ತನಗಳ ಮಧ್ಯೆ ಬೆವರು, ನವೆ, ತುರಿಕೆ, ಕಡಿತ ಇತ್ಯಾದಿ.

“ಇಷ್ಟು ಮಾತ್ರವಲ್ಲ, ಬ್ರಾ ಧರಿಸುವುದರಿಂದ ರಾಶೆಸ್‌ ಸಹ ಹೆಚ್ಚುತ್ತಿತ್ತು. ಇಷ್ಟೆಲ್ಲ ಕಷ್ಟಪಟ್ಟು ಬ್ರಾ ಧರಿಸುವುದರಿಂದ ಮಾತ್ರ ಬ್ರೆಸ್ಟ್ ಸರಿಯಾದ ಪೊಝಿಶನ್‌ ನಲ್ಲಿ ಇರುತ್ತದೆ. ಆಗ ಅದು ಕಸುವಿನಿಂದ ಕೂಡಿರುತ್ತದೆ, ಜೋತಾಡುವುದಿಲ್ಲ. ಇಷ್ಟು ಮಾತ್ರವಲ್ಲ, ಬೇರೆ ಬೇರೆ ಚಟುವಟಿಕೆಗಳಲ್ಲಿ ಮುಳುಗಿರುವಾಗ, ಅದು ತುಳುಕುವುದಿಲ್ಲ. ಆ ಕಾರಣದಿಂದ ಅದು ಕೆಟ್ಟದಾಗಿ ಕಾಣುವುದಿಲ್ಲ. ಹಾಗಾಗಿ ಬ್ರಾ ಧರಿಸುವುದರಿಂದ ತಂತಾನೇ ಆತ್ಮವಿಶ್ವಾಸ ಉಕ್ಕಿ ಬರುತ್ತದೆ. ಇಡೀ ದಿನ ಧರಿಸುವುದು ಹಿಂಸೆ, ಹೀಗಾಗಿ ರಾತ್ರಿ ಹೊತ್ತು ಇದನ್ನು ಕಳಚಿಟ್ಟು ಮಲಗುವೆ.”

ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸಕ್ಕಿರುವ ಪ್ರೀತಿ ಕುಮಾರ್‌ ಹೇಳುತ್ತಾಳೆ, “ಇಡೀ ದಿನ ಬ್ರಾ ಧರಿಸಿರುವುದು ಅಂದ್ರೆ ನಿಜಕ್ಕೂ ಅನ್‌ ಕಂಫರ್ಟೆಬಲ್ ಅನಿಸುತ್ತದೆ. ಮೊದಲ ಸಲ ನಾನು ಬ್ರಾ ಧರಿಸಿದಾಗ, ಯಾರೋ ನನ್ನ ಎದೆ ಹಿಡಿದು ಅಮುಕುತ್ತಿರುವಂತೆ, ನನ್ನ ಉಸಿರು ಸಿಕ್ಕಿ ಹಾಕಿಕೊಂಡಿತು. ಇನ್ನು ಮುಂದೆ ಉಸಿರಾಡುವುದೇ ಕಷ್ಟಕರ ಎನಿಸಿತು. ಅದನ್ನು ಆಗಲೇ ಕಳಚಿ ಬಿಸಾಡೋಣ ಎನಿಸಿತು. ಹೀಗೇ ಕೆಲವು ದಿನ ಧರಿಸಿ ಅಭ್ಯಾಸವಾದಾಗ ನನಗೆ ಕ್ರಮೇಣ ಸೆಟ್‌ ಆಯಿತು.

“ಈ ಕೊಳಕು ಸಮಾಜದ ಎದುರು, ನನಗೆ ಬ್ರಾ ಧರಿಸಿರುವುದರಿಂದ ಆಗುವ ಅನಾನುಕೂಲ ದೊಡ್ಡದಾಗಿ ಕಾಣಲಿಲ್ಲ. ಬ್ರಾ ಇಲ್ಲದೆ ಈಗ ಹೊರಗೆ ಹೋಗುವುದು ಅಂದ್ರೆ ನನಗೆ ಸರಿಹೋಗದು. ಆದರೆ ಮನೆಗೆ ಬಂದು ನೈಟಿ ಧರಿಸಿದ ತಕ್ಷಣ ಇದನ್ನು ಕಳಚುತ್ತೇನೆ. ಹಾಗೆ ಮಾಡಿದಾಗ ಮಾತ್ರ ನನಗೆ ಹಾಯ್ ಎನಿಸುತ್ತದೆ, ಫ್ರೀ ಆದಂತೆ ಫೀಲಾಗುತ್ತದೆ. ಬ್ರಾ ಧರಿಸುವುದು, ಬಿಡುವುದು ಹುಡುಗಿಯ ಆಯ್ಕೆಗೆ ಬಿಟ್ಟಿದ್ದು. ಸಮಾಜದ ಭಯಕ್ಕೆ ಅಂಜಿ ಅವಳು ಬ್ರಾ ಧರಿಸಬೇಕಾಗಿರುವುದು ಸರಿಯಲ್ಲ.

ಇಷ್ಟೆಲ್ಲಾ ಹಿಂಸೆ ಇದೆ ಎಂದ ಮೇಲೆ ಹೆಂಗಸರೇಕೆ ಬ್ರಾ ಧರಿಸಲೇಬೇಕು? ಇದಕ್ಕೆ ಉತ್ತರವಾಗಿ ಮೈಸೂರಿನ ನಿಧಿ ಹೇಳುತ್ತಾಳೆ, “ಇದು ಪುರುಷಪ್ರಧಾನ ಸಮಾಜ. ಹೀಗಾಗಿ ಹುಡುಗಿಗೆ ಇದು ಸರಿ, ಇದು ತಪ್ಪು ಎಂದು ಆಗಾಗ ಹೇಳಲಾಗುತ್ತಿರುತ್ತದೆ. ಹೆಣ್ಣು ತನ್ನ ಆಯ್ಕೆಯಂತೆ ಡೀಸೆಂಟ್‌ ಡ್ರೆಸ್‌ ಧರಿಸಿ, ಈ ಸಮಾಜದ ರೀತಿ ನೀತಿ ಧಿಕ್ಕರಿಸಿದರೆ, ಅವಳನ್ನು ಬಜಾರಿ, ಗಯ್ಯಾಳಿ ಎಂದೆಲ್ಲ ಟೀಕಿಸಲಾಗುತ್ತದೆ. ಇಲ್ಲಿ ಹೆಣ್ಣು ಗಂಡುಗಳ ದೇಹ ರಚನೆ ಆಧಾರದಿಂದ ಅವರಿಗೆ ಹಕ್ಕು ಹಂಚಿರುವುದಲ್ಲ, ಹಾಗೇ ಅವರ ಉಡುಗೆ ಬಗ್ಗೆಯೂ ಹಂಚಿಕೆ ಆಗಿದೆ. ಈ ಸಮಾಜ ಸದಾ ಹೆಣ್ಣನ್ನು ತನ್ನ ಕಪಿಮುಷ್ಟಿಯಲ್ಲಿ ಅಡಗಿಸಿಡಲು ಬಯಸುತ್ತದೆ.

“ಈ ಸಮಾಜ ತಾನು ಹೇಳಿದ್ದನ್ನೇ ಹೆಣ್ಣು ನಡೆಸಬೇಕು ಎಂದು ಬಯಸುತ್ತದೆ. ಆದರೆ ಹೆಣ್ಣು ಇಂಥ ಕುರುಡು ಕಂದಾಚಾರಕ್ಕೆ ಬಲಿಯಾಗಲು ಬಯಸುವುದಿಲ್ಲ. ಬ್ರಾ ಧರಿಸುವುದೋ ಬಿಡುವುದೋ ಅದು ಅವಳ ವೈಯಕ್ತಿಕ ವಿಷಯ, ಇದನ್ನು ಕಟ್ಟಿಕೊಂಡು ಸಮಾಜಕ್ಕೇನು?”

ಬ್ರಾ ಕುರಿತು ಸಾಮಾಜಿಕ ದೃಷ್ಟಿ ಉ. ಕರ್ನಾಟಕದಿಂದ ಬೆಂಗಳೂರಿಗೆ ಬಂದು ಉದ್ಯೋಗಸ್ಥೆ ಆಗಿರುವ 20 ವರ್ಷದ ಮಮತಾ ಹೇಳುತ್ತಾಳೆ, “ಇವತ್ತಿಗೂ ಹಳ್ಳಿಗಳಲ್ಲಿ `ಬ್ರಾ’ ಅನ್ನುವ ಬದಲು ಅದನ್ನು `ಬಾಡಿ’ ಅಂತಾರೆ. ಕೆಲವು ಪಾಶ್‌ ಹುಡುಗಿಯರಂತೂ ಇದರ ಹೆಸರನ್ನು ಗಿಡ್ಡ ಮಾಡಿ `B‌’ ಅಂತಾರಷ್ಟೆ. ನಮ್ಮ ಕಡೆಯ ಹಿಂದುಳಿದ ಹಳ್ಳಿಗಳಲ್ಲಿ ಬ್ರಾ ಎಂದ ಮಾತ್ರಕ್ಕೆ ಬಿರುಗಾಳಿ ಎದ್ದುಬಿಡುತ್ತದೆ. ಆದರೆ ಈಗೀಗ ಹೆಣ್ಣುಮಕ್ಕಳು ತಮ್ಮ ಸ್ವಾತಂತ್ರ್ಯ, ಹಕ್ಕುಗಳ ಕುರಿತಾಗಿ ಹೆಚ್ಚು ಜಾಗರೂಕರಾಗುತ್ತಿದ್ದಾರೆ.

`ಬ್ರಾ’ ಎಂಬುದು ಸಮಾಜ ಅವರ ಮೇಲೆ ಹೇರಿರುವ ಒಂದು ಹೊರೆ. ಹೀಗಾಗಿ ಎಷ್ಟೋ ಹೆಂಗಸರು ಇದನ್ನು ವಿರೋಧಿಸ ತೊಡಗಿದ್ದಾರೆ. ಇಂದು ವಿಶ್ವದ ಎಷ್ಟೋ ಕಡೆಗಳಲ್ಲಿ ಹೆಂಗಸರು `ಬ್ರಾ’ಗೆ ಬಹಿಷ್ಕಾರ ಹಾಕಿ, ಅದನ್ನು ಧರಿಸುವುದೇ ಇಲ್ಲ!”

ಎಷ್ಟೋ ಹೆಂಗಸರಿಗೆ ಬ್ರಾ ಧರಿಸುವುದು ಇಷ್ಟವೇ ಇಲ್ಲ ಎಂಬುದು ನಿಜ. 2017ರಲ್ಲಿ ದ. ಕೊರಿಯಾದ ಮಾಡೆಲ್‌ನಟಿಯಾದ ವಸೂಲೀ ಎಂಬಾಕೆ, ಒಂದು ಫೆಮಿನಿಸ್ಟ್ ಕ್ಯಾಂಪೈನ್‌ ಶುರು ಮಾಡಿದಳು. ಇದು `ನೋ ಬ್ರಾ ಮೂಮೆಂಟ್‌’ ಎಂದೇ ಹೆಸರಾಯಿತು. ಇಲ್ಲಿ ಈಕೆ ಸೋಶಿಯಲ್ ಮೀಡಿಯಾದಲ್ಲಿ, ಬ್ರಾ ಧರಿಸದೆ ಕೇವಲ ಟಾಪ್‌ ಮಾತ್ರ ಧರಿಸಿರುವಂಥ ಫೋಟೋ ಪೋಸ್ಟ್ ಮಾಡಿದಳು. ಇದರ ಪರಿಣಾಮವಾಗಿ ಆ ಊರಿನ ಹೆಂಗಸರೆಲ್ಲ ವರ್ಕಿಂಗ್‌ಪಬ್ಲಿಕ್‌ ಪ್ಲೇಸ್‌ ನಲ್ಲಿ ವಿದೌಟ್‌ ಬ್ರಾ ಸುತ್ತಾಡತೊಡಗಿದರು! ಈ ಒಂದು ಪ್ರಕರಣ ಇಡೀ ವಿಶ್ವದ ಎಲ್ಲಾ ಸೋಶಿಯಲ್ ಮೀಡಿಯಾದಲ್ಲೂ ದೊಡ್ಡ ಕ್ರಾಂತಿಯನ್ನೇ ಎಬ್ಬಿಸಿತು. ಎಲ್ಲಾ ದಿಕ್ಕಿನಿಂದಲೂ ಹೆಂಗಸರು ಹ್ಯಾಶ್‌ ಟ್ಯಾಗ್‌ `ನೋ ಬ್ರಾ’ ಎಂದು, ಬ್ರಾ ರಹಿತ ಟಾಪ್ಸ್ ಧರಿಸಿ ಹುಯಿಲೆಬ್ಬಿಸತೊಡಗಿದರು. ಅಂಥ ತಮ್ಮ ಫೋಟೋಗಳನ್ನು ಎಲ್ಲರೂ ಅಂತರ್ಜಾಲದಲ್ಲಿ ಹರಿಯ ಬಿಡತೊಡಗಿದರು.

CG365995

ನ್ಯಾಶನಲ್ ನೋ ಬ್ರಾ ಡೇ

`ಫ್ಯಾನ್‌’ ಎಂಬ ಹೆಸರಿನ ಸೋಶಿಯಲ್ ಮೀಡಿಯಾದ ಹೆಂಗಸರ ಗುಂಪೊಂದು, ತಮ್ಮ ಅನುಪಮ ರೀತಿಯ ಹೋರಾಟಕ್ಕೆ ಹೆಸರಾಗಿದೆ. ಹೀಗಾಗಿ ಈ ಗ್ರೂಪಿನ ಸದಸ್ಯೆಯರೆಲ್ಲ ಬೇಕೆಂದೇ ತಮ್ಮ ತೆರೆದ ಎದೆ ಪ್ರದರ್ಶಿಸುತ್ತಾ, `ನೋ ಬ್ರಾ’ ಚಳುವಳಿ ಆರಂಭಿಸಿದರು. ಹೀಗಾಗಿ ಇದು ಎಲ್ಲೆಡೆ ಚರ್ಚೆಗೆ ಗ್ರಾಸವಾಯಿತು. ಇದೇ ತರಹ 1960ರಲ್ಲಿ `ಬ್ರಾ ಬರ್ನಿಂಗ್‌’ ಚಳುವಳಿ ಸಹ ನಡೆದಿತ್ತು. ಇದಕ್ಕಾಗಿ ಹೆಂಗಸರೆಲ್ಲರೂ ತಮ್ಮ ಬ್ರಾ ತಂದು ಬೆಂಕಿಗೆ ಹಾಕಿ, ತಮ್ಮ ಅಖಂಡ ವಿರೋಧ ವ್ಯಕ್ತಪಡಿಸಿದರು. ಕೆಲವರು ಇದನ್ನು ಬೆಂಕಿಗೆ ಹಾಕುವ ಬದಲು, ಪಬ್ಲಿಕ್‌ ನ ಕಸದ ಬುಟ್ಟಿಗೆ ಎಸೆಯತೊಡಗಿದರು. ಭಾರತದಲ್ಲಿ ಪ್ರತಿ ವರ್ಷ ಅಕ್ಟೋಬರ್‌ 13 ರಂದು `ನ್ಯಾಶನಲ್ ನೋ ಬ್ರಾ ಡೇ’ ಆಚರಿಸಲಾಗುತ್ತದೆ. ಬ್ರೆಸ್ಟ್ ಕ್ಯಾನ್ಸರ್‌ ವಿರುದ್ಧ ಜಾಗೃತಿ ಹರಡಲೆಂದೇ ಹೀಗೆ ಮಾಡಲಾಗುತ್ತದೆ.

ಬ್ರಾ ಧರಿಸುವ ವಿರುದ್ಧ ಕೆಂಡ ಕಾರುವ ದಾವಣಗೆರೆಯ 22ರ ವಿನುತಾ ಕುಲಕರ್ಣಿ ಹೇಳುತ್ತಾಳೆ, “ಇದನ್ನು ಧರಿಸುವುದರಿಂದ ಎಷ್ಟು ಅನ್‌ ಕಂಫರ್ಟೆಬಲ್ ಆಗುತ್ತದೆ ಎಂದು ಹೆಣ್ಣುಮಕ್ಕಳಿಗೆ ಮಾತ್ರ ಗೊತ್ತು! ಬೇರೆಯವರೂ ಹೀಗೇ ಅತಿ ಟೈಟಾದ ಡ್ರೆಸ್‌ ಧರಿಸಿ ಓಡಾಡಲಾರದೇ ಮುಗ್ಗರಿಸಿದಾಗ ಮಾತ್ರ, ಅವರಿಗೂ ಈ ಬೇನೆಯ ಬಗ್ಗೆ ಗೊತ್ತಾಗುತ್ತದೆ. ಹಿಂದೆಲ್ಲ ಬ್ರಾ ಇಲ್ಲದೆ ಸಾರ್ವನಿಕವಾಗಿ ಓಡಾಡಲು ನಾನು ಹಿಂಜರಿಯುತ್ತಿದ್ದೆ. ಆದರೆ ಕ್ರಮೇಣ ಅದೇ ಸಲೀಸಾಗತೊಡಗಿತು. ನಾನು ಹೇಳುವುದಿಷ್ಟೆ, ಹೆಂಗಸರಿಗೆ ಈ ಚಾಯ್ಸ್ ಬಿಟ್ಟುಬಿಡಿ, ಬೇಕಾದವರು ಧರಿಸಲಿ, ಬೇಡವಾದರು ಬಿಡಲಿ!”

ಇಂಥದ್ದೇ ಭಾವನೆಗಳಿರುವ ಅನೇಕ ಮಂದಿ ಹೆಂಗಸರಿದ್ದಾರೆ. ಮಂಗಳೂರಿನಲ್ಲಿ ಬ್ಯೂಟಿಪಾರ್ಲರ್‌ ನಡೆಸುತ್ತಿರುವ 32ರ ವೀಣಾ ಭಟ್‌ ಹೇಳುತ್ತಾರೆ, “ಹಾಗೆ ನೋಡಿದರೆ ಬ್ರಾ ನಮ್ಮ ದೇಹದ ಮೇಲೆ ಒಂದು ಎಕ್ಸ್ ಟ್ರಾ ಫಿಟ್ಟಿಂಗ್‌ ಇದ್ದಂತೆ. ಆದರೆ ನಮ್ಮ ಸಮಾಜ ಮಾತ್ರ ಹೆಂಗಸರಿಗೆ ಬ್ರಾ ಇಲ್ಲದೆ ಹೊರಗೆ ಬರಲೇಬಾರದು ಎಂದು ಏಕೆ ಶಾಸನ ವಿಧಿಸಿದೆಯೋ ಗೊತ್ತಿಲ್ಲ. ಇದು ಅವರನ್ನು ಸಭ್ಯರನ್ನಾಗಿ ತೋರಿಸುವ ನಾಜೂಕು ಕಲೆ. ಈ ಸಮಾಜ ಹೆಂಗಸರಿಗೆ ಬ್ರಾ ಧರಿಸುವುದನ್ನು ಕಡ್ಡಾಯದ ಅಭ್ಯಾಸ ಮಾಡಿಸಿಬಿಟ್ಟಿದೆ. ಹೀಗಾಗಿ ಯಾರಾದರೂ ಹೆಂಗಸರು ಬ್ರಾ ಧರಿಸದೆ ಬಂದರೆ, ಎಲ್ಲರೂ ತಿರುತಿರುಗಿ ಆಕೆಯನ್ನು ನೋಡುವುದರಿಂದ, ಅದು ಆಕೆಗೆ ಬಲು ಅನ್‌ ಕಂಫರ್ಟೆಬಲ್ ಅನಿಸುತ್ತದೆ.”

ವೀಣಾ ತರಹವೇ ತುಮಕೂರಿನ ಯೋಗಾ ಇನ್‌ ಸ್ಟ್ರಕ್ಟರ್‌ 35ರ ಚಂದ್ರಿಕಾ ಹೇಳುತ್ತಾರೆ, “ವಿದೌಟ್‌ ಬ್ರಾ ಮನೆಯಿಂದ ಹೊರಬರುವ ಕುರಿತಾಗಿ ಯೋಚಿಸುವುದೇ ತುಂಬಾ ವಿಕ್ಷಿಪ್ತ ವಿಚಾರ ಅಂದ್ರೆ ಉತ್ಪ್ರೇಕ್ಷೆಯಲ್ಲ. ಬ್ರಾ ಬ್ರೆಸ್ಟ್ ಎತ್ತಿಹಿಡಿಯಲು ಸಪೋರ್ಟಿವ್‌. ಬ್ರಾ ಧರಿಸದಿದ್ದರೆ ಬ್ರೆಸ್ಟ್ ಜೋತಾಡ ತೊಡಗುತ್ತದೆ. ಬ್ರಾ ಧರಿಸದಿದ್ದರೆ 20+ ತರುಣಿಯರೂ ಕ್ರಮೇಣ 40+ ತರಹ ಕಾಣಿಸುತ್ತಾರೆ. ಬ್ರಾ ಧರಿಸಿದ್ದರಿಂದ ಇತರ ಉಡುಗೆಗಳ ಫಿಟಿಂಗ್‌ ಪರ್ಫೆಕ್ಟ್ ಎನಿಸುತ್ತದೆ. ಟಾಪ್‌ ಒಳಗೆ ಬ್ರಾ ಧರಿಸಿದ ಹುಡುಗಿ, ವಿದೌಟ್‌ ಬ್ರಾ ಹುಡುಗಿಗಿಂತ ಹೆಚ್ಚು ಆಕರ್ಷಕವಾಗಿ ಕಾಣಿಸುತ್ತಾಳೆ. ಇಷ್ಟೆಲ್ಲ ವಿವರಣೆ ಇದ್ದರೂ….. ಬ್ರಾ ಧರಿಸುವುದು ಬಿಡುವುದು ಅವರವರ ಪರ್ಸನ್‌ ವಿಚಾರ!”

ಎಷ್ಟೋ ಸಲ ಟೀನೇಜ್‌ ಹುಡುಗಿಯರಿಗೆ ಬ್ರಾ ಕುರಿತಾಗಿ ಹೆಚ್ಚಿನ ನಾಲೆಜ್‌ ಇರುವುದಿಲ್ಲ. ಹೀಗಾಗಿ ಕೆಲವರು ಬ್ರಾ ಧರಿಸುವುದನ್ನು ನಿರ್ಲಕ್ಷಿಸುತ್ತಾರೆ. ಈ ಕಾರಣದಿಂದಲೇ ಅವರ ಸ್ತನ ಜೋತುಬೀಳುತ್ತದೆ. ಇಂಥ ಸ್ಲಂ ಏರಿಯಾಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ.

ಬ್ರಾದ ಇತಿಹಾಸ

ಇತಿಹಾಸದ ಒಳಗೆ ಇಣುಕಿ ನೋಡಿದಾಗ, ಅನಾದಿ ಕಾಲದಿಂದಲೂ ಹೆಂಗಸರು ಬ್ರಾ ಧರಿಸುತ್ತಿದ್ದರು ಅಂತೇನಿಲ್ಲ. ಎದೆ ಮರೆಸಿಕೊಳ್ಳುವುದು ಸಹ ಅವರವರಿಗೆ ಬಿಟ್ಟದ್ದು. ಬ್ರಾ ಇಂದಿನ ಅಸ್ತಿತ್ವ ಹೇಗೆ ಕಂಡುಕೊಂಡಿತು? ಇದನ್ನು ತಿಳಿಯಲು ಬ್ರಾ ಎಂದರೇನು ಎಂದು ಅರಿಯಬೇಕು. ಇದು ಮೂಲತಃ ಫ್ರೆಂಚ್‌ ಪದವಾದ `ಬ್ರೇಸಿಯರ್ಸ್‌’ನಿಂದ ಆದ ಚಿಕ್ಕ ಪದ. ಇದರ ಅರ್ಥ, ದೇಹದ ಮೇಲ್ಭಾಗದ ಕವಚ.

ಹಾಗಾದರೆ ವಿಶ್ವದ ಮೊದಲ ಮಾಡರ್ನ್‌ ಬ್ರಾ ತಯಾರಾದದ್ದು ಎಲ್ಲಿ? 1869ರಲ್ಲಿ ಫ್ರಾನ್ಸಿನ ಹರ್ಮನಿ ಕಂಪನಿ ಇದನ್ನು ರೂಪಿಸಿತು. ಅಲ್ಲಿನ ಕ್ಯಾಡೋಲ್ ‌ಎಂಬಾಕೆ ಜಾಕೇಟಿನಂಥ ವಸ್ತ್ರ ಕತ್ತರಿಸಿ, ಬ್ರಾ ರೂಪ ನೀಡಲು ಎರಡು ತುಂಡು ಜೋಡಿಸಿ, ಇಂಥ ಅಂಡರ್‌ ಗಾರ್ಮೆಂಟ್ಸ್ ರೆಡಿ ಮಾಡಿದಳು. ನಂತರ ಇದರ ಮೇಲ್ಭಾಗದ ಸ್ಟ್ರಾಪ್‌ ಸಿದ್ಧಪಡಿಸಿ, ಆಧುನಿಕ ರೂಪ ನೀಡಿ ಮಾರುಕಟ್ಟೆಗೆ ಬಿಡಲಾಯಿತು.

ರೋಮನ್‌ ದೇಶದ ಹೆಂಗಸರು ತಮ್ಮ ಎದೆ ಭಾಗವನ್ನು ಮರೆಮಾಚಲು, ಒಂದು ಬಟ್ಟೆ ಬಿಗಿದು ಕಟ್ಟಿಕೊಳ್ಳುತ್ತಿದ್ದರು. ಅದೇ ಗ್ರೀಕ್ ಹೆಂಗಸರು ಅಗಲದ ಬೆಲ್ಟ್ ಕಟ್ಟಿಕೊಂಡು, ಬ್ರೆಸ್ಟ್ ವಿಕಸಿತಗೊಳ್ಳುವಂತೆ ಮಾಡುತ್ತಿದ್ದರು. ಇವೆಲ್ಲ ಬ್ರಾದ ಆರಂಭಿಕ ಹಂತಗಳು. ಇಂದಿನ ಆಧುನಿಕ ಬ್ರಾದ ಮೊದಲ ರೂಪ ಅಮೆರಿಕಾದಲ್ಲಿ ಸುಮಾರು 1930ರ ಹೊತ್ತಿಗೆ ತಯಾರಾಯಿತು.

ಇದರರ್ಥ, ಹೆಂಗಸರು ಮೊದಲಿನಿಂದ ಬ್ರಾ ಧರಿಸುತ್ತಿರಲಿಲ್ಲ ಎಂಬುದು ಸುಸ್ಪಷ್ಟ. ಅವರಿಗೆ ಬ್ರಾದ ಉಡುಗೊರೆ ಅಥವಾ ಉಡುಗೊರೆ ಎಂಬ ಶಿಕ್ಷೆ ನೀಡುವ ಹಿನ್ನಲೆಯಲ್ಲಿ ಗಂಡಿನ ಷಡ್ಯಂತ್ರವಿದೆ. ಗಂಡು ಹಿಂದಿನಿಂದಲೂ ಹೆಣ್ಣನ್ನು ಆಕರ್ಷಣೆಯ ವಸ್ತುವಾಗಿ ನೋಡುತ್ತಿದ್ದ. ಹಾಗಾಗಿ ಬ್ರಾ ಒಂದು ಸೆಕ್ಷ್ಯುಯೆಲ್ ‌ಉಡುಗೆಯೇ ಸರಿ. ಹೆಣ್ಣು ಬ್ರಾ ಧರಿಸಿದರೆ ಮಾತ್ರ ಅವಳು ಸೆಕ್ಸಿಯಾಗಿ ಕಂಡುಬರುತ್ತಾಳೆ, ತನ್ನ ಭೋಗದ ವಸ್ತುವಾಗುತ್ತಾಳೆ ಎಂಬುದು ಅವನ ಹುನ್ನಾರ.

ಮತ್ತೊಂದು ಕಾರಣ ಬಿಸ್‌ ನೆಸ್‌. ಬ್ರಾ ಇಲ್ಲದೆಯೂ ಕೆಲಸ ನಡೆಯುತ್ತದೆ. ಆದರೆ ತಮ್ಮ ವಾಣಿಜ್ಯ ಕ್ಷೇತ್ರದ ವಿಸ್ತೀರ್ಣಕ್ಕಾಗಿ, ವ್ಯಾಪಾರಿಗಳು ಬ್ರಾ ಇರಲಿ ಎಂದು ಪಟ್ಟುಹಿಡಿದರು. ನಂತರ ನಿಧಾನವಾಗಿ ಬಗೆ ಬಗೆಯ ಡಿಸೈನಿನಲ್ಲಿ ಬ್ರಾ ತಯಾರಿಸಿ, ತಮ್ಮ ವ್ಯಾಪಾರ ಹಿಗ್ಗಿಸಿದರು.

ಬ್ರಾ ಧರಿಸದಿರುವಿಕೆ ಅನುಕೂಲಕರವೇ?

ಕಂಫರ್ಟ್‌ ನ ವಿಷಯಕ್ಕೆ ಬಂದಾಗ, ಇಡೀ ದಿನ ಬ್ರಾ ಧರಿಸಿರುವುದು ಅಂದ್ರೆ ಕಿರಿಕಿರಿಯೇ ಸರಿ. ಹೀಗಾಗಿ ಮನೆಯಲ್ಲಿ ಒಂಟಿಯಾಗಿ ಉಳಿಯುವ ಹೆಂಗಸರು, ಬ್ರಾ ಧರಿಸುವುದಿಲ್ಲ. ರಾತ್ರಿ ಮಲಗುವ ಮುನ್ನ ಹೆಂಗಸರು ಅಗತ್ಯವಾಗಿ ಅದನ್ನು ಕಳಚಿಡುತ್ತಾರೆ.

ಇಡೀ ವಿಶ್ವ ಕೋವಿಡ್‌ ಕಪಿಮುಷ್ಟಿಗೆ ಸಿಲುಕಿದಾಗ, ಲಾಕ್‌ ಡೌನ್‌ ಕಾರಣ ಎಲ್ಲರೂ ಮನೆಯಲ್ಲೇ ಉಳಿಯುವಂತಾಗಿ, ಬ್ರಾ ಸೇಲ್ಸ್ ಸಂಪೂರ್ಣ ಕುಸಿದುಹೋಗಿತ್ತು. ಅಂಥ ಹೆಂಗಸರು ಬ್ರಾದ ಗೊಡವೆಗೇಕೆ ಹೋಗುತ್ತಾರೆ? ಕೋಲಾರದ ಟೀಚರ್‌ 33ರ ರಾಗಿಣಿ ಹೇಳುತ್ತಾರೆ, “ಕೋವಿಡ್‌ ಕಾಲದಲ್ಲಿ ಶಾಲಾ ಕಾಲೇಜುಗಳೆಲ್ಲ ಬಂದ್‌ ಆಗಿದ್ದವು. ಮುಂದಿನ ಭವಿಷ್ಯವಾದ ಮಕ್ಕಳ ಓದಿಗೆ ಅಡ್ಡಿ ಆಗಬಾರದೆಂದು ಸರ್ಕಾರ, ಆನ್‌ ಲೈನ್‌ ಕ್ಲಾಸೆಸ್‌ ಶುರು ಮಾಡಿತು. ಹಾಗಾಗಿ ಟೀಚರ್ಸ್‌ ಸ್ಟೂಡೆಂಟ್ಸ್ ಆನ್‌ ಲೈನ್‌ ನಲ್ಲಿ ಮಾತ್ರ ಮುಖಾಮುಖಿ ಆಗುತ್ತಿದ್ದರು. ಹೈಸ್ಕೂಲ್ ‌ಮಕ್ಕಳು ಬಲು ಸೂಕ್ಷ್ಮ, ಹೀಗಾಗಿ ನಾನು ಬ್ರಾ ಧರಿಸಿಯೇ ಆನ್‌ ಲೈನ್‌ ಕ್ಲಾಸ್ ಮುಗಿಸುತ್ತಿದ್ದೆ, ಕ್ಲಾಸ್‌ ನಂತರ ನಾನು ಅದನ್ನು ಕಳಚುತ್ತಿದ್ದೆ. ಅದು ಇಲ್ಲದೆ ಹಾಯಾಗಿ ಇತರ ಮನೆಗೆಲಸಗಳಲ್ಲಿ ತೊಡಗಿರಬಹುದು ಎಂದೇ ಅನಿಸುತ್ತದೆ.

“ಇಡೀ ದಿನ ಅಂತೂ ಇದನ್ನು ಖಂಡಿತಾ ಧರಿಸಲಾಗದು. ಉಸಿರುಗಟ್ಟಿಸುವ ಈ ಹಿಂಸೆಗಿಂತ, ಅದಲ್ಲದೆ ಫ್ರೀ ಫ್ರೀ ಆಗಿರೋಣ ಅನಿಸುತ್ತದೆ. ಒಂದು ದೊಡ್ಡ ಹೊರೆ ಇಳಿಸಿದಂತೆ ಭಾಸವಾಗುತ್ತದೆ. ಆದರೆ ಬ್ರಾ ಧರಿಸುವುದರ ಲಾಭ ಹಾನಿಗಳ ಬಗ್ಗೆ ಹೆಂಗಸರು ತಿಳಿದಿರಬೇಕಾದುದು ಅತ್ಯಗತ್ಯ.”

ಧಾರವಾಡದ ಡಾ. ಸುಕನ್ಯಾ ಪಾಟೀಲ್ ‌ಹೇಳುತ್ತಾರೆ, “ಹೆಣ್ಣಿನ ದೇಹದ ಮಹತ್ವಪೂರ್ಣ ಅಂಗ ಎಂದರೆ ಸ್ತನಗಳು. ಅದು ಅವಳ ಆಕರ್ಷಣೆಯ ಕೇಂದ್ರಬಿಂದು. ಬ್ರಾ ಧರಿಸದೆ ಇದ್ದರೆ ಸ್ತನ ಕ್ಯಾನ್ಸರ್‌ ಚಾನ್ಸಸ್‌ ಕಡಿಮೆ ಎಂದೇ ಹೇಳಬಹುದು. ಬ್ರೆಸ್ಟ್ ಡೆವಲಪ್ ಮೆಂಟ್‌ ಗೆ ಬ್ರಾ ಬೇಕೇ ಬೇಕು. ಇದನ್ನು ಧರಿಸದಿದ್ದರೆ ಆ ನಿಟ್ಟಿನಲ್ಲಿ ಸಮಸ್ಯೆ ಮೂಡಬಹುದು. ಇದನ್ನು ಧರಿಸದವರ ಸ್ತನ ಬೇಗ ಜೋತಾಡುತ್ತದೆ. ಸತತ ಬ್ರಾ ಧರಿಸದೆ ಇರುವುದರಿಂದ, ಮುಂದೆ ಬೇಕೆನಿಸಿದಾಗ ಬ್ರಾದ ಸೈಜ್‌ ಹಿಗ್ಗಿರುತ್ತದೆ. ಆದರೆ ದಿನಕ್ಕೆ 1-2 ಗಂಟೆಗಿಂತಲೂ ಹೆಚ್ಚಾಗಿ ಇದನ್ನು ಧರಿಸಬಾರದೆಂಬುದೇ ಸರಿ. ರಾತ್ರಿ ಮಲಗಿರುವಾಗ ರಕ್ತ ಸಂಚಾರ ಹೆಚ್ಚುತ್ತದೆ, ಹೀಗಾಗಿ ರಾತ್ರಿ ಅದನ್ನು ಕಳಚಿಡುವುದೇ ಸರಿ.”

ನಿಮ್ಮ ನಿರ್ಧಾರ ನಿಮ್ಮದು

ಉಡುಪಿಯೆ ಸೇಲ್ಸ್ ವುಮನ್‌ ಮೋನಿಕಾ ಹೇಳುತ್ತಾರೆ, “ಒಂದು ಸರಿಯಾದ ಅಳತೆಯ ಬ್ರಾ, ನಿಮ್ಮ ಡ್ರೆಸ್‌ ಗೆ ಕಳಶವಿಟ್ಟಂತೆ ಇರುತ್ತದೆ. ವಿವಿಧ ಬಗೆಯ ಡ್ರೆಸೆಸ್‌ ಗೆ ಬೇರೆ ಬೇರೆ ಡಿಸೈನಿನ ಬ್ರಾ ಇರಬೇಕು. ವಿದೌಟ್‌ ಬ್ರಾ, ಆ ಡ್ರೆಸ್‌ ಸ್ಪೆಷಲ್ ಎನಿಸದು. ಹೀಗಿರುವಾಗ ಬ್ರಾ ಅವಾಯ್ಡ್ ಮಾಡುವ ಮಾತೇಕೆ?”

ಬ್ರಾ…. ಅಷ್ಟೇ ತಾನೇ?

ನಿನ್ನ ಬ್ರಾದ ಸ್ಟ್ರಾಪ್‌ ಕಾಣುತ್ತಿದೆ, ಅದನ್ನು ಸರಿ ಮಾಡಿಕೋ. ನೀನು ಬಾಲ್ಕನಿಯಲ್ಲಿ ಹೊರಗೆ ಬ್ರಾ ಒಣಗಿಸಬೇಡ, ಯಾರಾದರೂ ನೋಡಿಬಿಡ್ತಾರೆ. ನೀನು ನಿನ್ನ ಬ್ರಾವನ್ನು ನಿನ್ನ ಬೀರುವಿನಲ್ಲಿ ಜೋಪಾನವಾಗಿ ಇರಿಸಿಕೋ, ಅದನ್ನು ಹೊರಗೆ ಇರಿಸಲೇಬೇಡ….. ಇತ್ಯಾದಿ ಮಾತುಗಳು ಎಲ್ಲಾ ಹುಡುಗಿಯರನ್ನೂ ಕಾಡುತ್ತಲೇ ಇರುತ್ತವೆ. ಇದು ಕೇವಲ ಒಂದು ಬಟ್ಟೆ ಅಷ್ಟೆ, ಇದರಲ್ಲಿ ಅಂಥ ಗುಟ್ಟಿನ ವಿಚಾರವೇನಿದೆ? ಎಂಬುದು ಹುಡುಗಿಯರ ಆಕ್ಷೇಪಣೆ.

ಸ್ನಾನಕ್ಕೆ ಹೊರಟಾಗಲೂ ಹೆಂಗಸರು ತಮ್ಮ ಅಂಡರ್‌ ಗಾರ್ಮೆಂಟ್ಸ್ ನ್ನು ನೈಟಿಯಡಿ ಮರೆಸಿಯೇ ಕೊಂಡೊಯ್ಯಬೇಕು. ಹಾಗೆಯೇ ಒಣಗಿಸುವಾಗಲೂ, ಇತರ ಬಟ್ಟೆಗಳು ಇದರ ಹಿಂದೆ ಮರೆ ಮಾಡುವಂತಿರಬೇಕು, ಹೊರಗಿನವರಿಗೆ ಕಾಣಿಸುವಂತೆ ಇರಲೇಬಾರದು.

ಕಾಲ ಸರಿದಂತೆ, ಏನೇನೋ ಬದಲಾವಣೆಗಳು ಆಗಿಹೋಗಿವೆ. ಆದರೆ ಇಂದಿಗೂ ನಮ್ಮ ಸಮಾಜದಲ್ಲಿ `ಬ್ರಾ’ ಪ್ರಸಂಗ ವಿಕ್ಷಿಪ್ತವಾಗಿಯೇ ಇದೆ. ಯಾವುದೇ ಹೆಣ್ಣಿನ ಬ್ರಾ ಸ್ಟ್ರಾಪ್‌ ತುಸು ಕಾಣಿಸಿದರೂ ಸಾಕು, ಜನ ಆಕೆಯನ್ನು ವಿಚಿತ್ರವಾಗಿ ದುರುಗುಟ್ಟಿಕೊಂಡು ನೋಡುತ್ತಾರೆ. ಬೇಡದ ವ್ಯಂಗ್ಯವಾಡುತ್ತಾರೆ. ಸಂಸ್ಕಾರ ರಹಿತಳು ಎಂದು ಅವಳಿಗೆ ಹಣೆಪಟ್ಟಿ ಅಂಟಿಸುತ್ತಾರೆ. ಇಂಥ ವಿಚಾರಧಾರೆ ಖಂಡಿತಾ ಬದಲಾಗಬೇಕು. ಬ್ರಾದ ಸ್ಟ್ರಾಪ್‌ ಕಾಣಿಸಿದ ಮಾತ್ರಕ್ಕೆ ಘನಘೋರವೇನೂ ಆಗಿಬಿಡಲಿಲ್ಲ. ಗಂಡಸರ ಬನಿಯನ್‌ ಕಾಣಿಸಿದಾಗ ಗೊಣಗದವರು ಇದಕ್ಕೇಕೆ ಹುಯಿಲಿಡಬೇಕು…..?

ಜಿ. ಪ್ರಿಯಾಂಕಾ ಕುಮಾರ್

ಬ್ರೆಸ್ಟ್ ಕೇರ್ಟಿಪ್ಸ್

ನಿಮ್ಮ ವಕ್ಷಸ್ಥಲನ್ನು ಸದಾ ಶುಚಿಯಾಗಿಡಿ. ಸ್ಯಾಲಿಸಿಲಿಕ್‌ ಆ್ಯಸಿಡ್‌ ಇರುವಂಥ ಸೋಪ್‌, ಬಾಡಿವಾಶ್‌ ನ್ನೇ ಬಳಸಿರಿ. ಇದರಿಂದಾಗಿ ಸ್ತನಗಳ ಮೇಲೆ ರಿಂಕಲ್ಸ್ ಬರುವುದಿಲ್ಲ.

ಸ್ನಾನದ ನಂತರ ಅಗತ್ಯವಾಗಿ ಸ್ತನಗಳ ಮಸಾಜ್‌ ಮಾಡಿ. ಇದಕ್ಕಾಗಿ ಆಲಿವ್‌/ ಕೋಕೋನಟ್‌ ಆಯಿಲ್ ‌ಗಳನ್ನು ಬೆರೆಸಿಕೊಂಡು ಮಿಶ್ರಣ ಮಾಡಿಕೊಳ್ಳಿ.

ನಿಮಗಾಗಿ ಪರ್ಫೆಕ್ಟ್ ಸೈಜಿನ ಬ್ರಾ ಆರಿಸಿ. ಇದು ಟೈಟ್‌ ಅಥವಾ ಲೂಸ್‌ ಇರಬಾರದು. ಟೀನೇಜ್‌ ಗರ್ಲ್ಸ್ ಟೀಶರ್ಟ್‌ ಬ್ರಾ ಅರಿಸುವುದು ಮೇಲು. 20-35 ವಯಸ್ಸಿನವರು ನಾರ್ಮಲ್ ಬ್ರಾ ಕೊಳ್ಳಲಿ. ಮಗುವಿಗೆ ಮೊಲೆಯುಣಿಸುವ ತಾಯಂದಿರು ಹೈ ಕರೇಜ್‌ ಬ್ರಾ ಕೊಳ್ಳಬೇಕು.

ಆದಷ್ಟೂ ಬ್ರಾಂಡೆಡ್‌ ಬ್ರಾವನ್ನೇ ಆರಿಸಿ. ಎಂದೂ ಇನ್ನೊಬ್ಬರ ಬ್ರಾ ಧರಿಸದಿರಿ, ಇನ್‌ ಫೆಕ್ಷನ್‌ ಆದೀತು. ಮುಂದೆ ಬ್ರೆಸ್ಟ್ ಕ್ಯಾನ್ಸರಿಗೆ ತಿರುಗಲೂಬಹುದು.

ಆಟೋಟದ ಹೆಣ್ಣಿನ ಬ್ರೆಸ್ಟ್ ಬೌನ್ಸಿಂಗ್‌ ಸಮಸ್ಯೆ ತಪ್ಪಿದ್ದಲ್ಲ. ಇಂಥವರು ಸ್ಪೋರ್ಟ್ಸ್ ಬ್ರಾ ಧರಿಸದೆ ಜಾಗಿಂಗ್‌ ಮಾಡಿದರೆ, ಸ್ತನ ಜಗ್ಗಿಹೋಗುವ ಸಾಧ್ಯತೆಗಳಿವೆ. ಹಾಗಾಗಿ ಉತ್ತಮ ಗುಣಮಟ್ಟದ ಸ್ಪೋರ್ಟ್ಸ್ ಬ್ರಾ ಆರಿಸಿ.

ಬ್ರೆಸ್ಟ್ ಅಂದ್ರೆ ಬಾಡಿಯ ಅತಿ ಸೆನ್ಸಿಟಿವ್ ‌ಭಾಗ. ಹೀಗಾಗಿ ಇದರ ಮೇಲೂ ಮಾಯಿಶ್ಚರೈಸರ್‌ ಹಚ್ಚಿಕೊಳ್ಳಬೇಕು. ಮನೆಯಿಂದ ಹೊರಗೆ ಹೊರಡುವಾಗ, ಮುಖಕ್ಕೆ ಮಾಯಿಶ್ಚರೈಸರ್‌ ಹಚ್ಚಿಕೊಳ್ಳುವಂತೆಯೇ ಬ್ರೆಸ್ಟ್ ಗೂ ಸನ್‌ ಸ್ಕ್ರೀನ್‌ ಹಚ್ಚಿಕೊಳ್ಳಿ.

ಆರೋಗ್ಯಕರ ಸ್ತನಕ್ಕಾಗಿ ವ್ಯಾಯಾಮ, ಯೋಗ ಎರಡೂ ಬೇಕು. ಪುಶ್‌ ಅಪ್ಸ್, ಡಂಬಲ್ ಪ್ರೆಸ್‌, ಕ್ಯಾಮೆಲ್ ‌ಪ್ರೆಸ್‌, ಆರ್ಮ್ ಪ್ರೆಸ್ ಮುಂತಾದ ಬ್ರೆಸ್ಟ್ ಗೆ ಹಿತಕಾರಿ. ಇದರಿಂದ ಆ ಭಾಗದ ರಕ್ತಸಂಚಾರ ಹೆಚ್ಚುತ್ತದೆ. ಧೂಮಪಾನ, ಮದ್ಯಪಾನ ಸ್ತನಗಳ ಆರೋಗ್ಯಕ್ಕೆ 100% ಹಾನಿಕರ. ಇದರಿಂದ ದೇಹದಲ್ಲಿನ ಎಲಾಸ್ಟಿನ್‌ ಅಂಶ ನಷ್ಟಗೊಂಡು, ಸ್ತನ ಜೋತಾಡುತ್ತದೆ, ಅದರ ಆಕಾರ ಖಂಡಿತಾ ಕೆಡುತ್ತದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ