ರಾಘವೇಂದ್ರ ಅಡಿಗ ಎಚ್ಚೆನ್.

ಜವಳಿಗಳ ರಾಣಿ  ಎಂದೇ ಕರೆಯಲಾಗಿರುವ ರೇಷ್ಮೆಯ ಉಡುಪುಗಳನ್ನೇ ಭಾರತದ ಎಲ್ಲೆಡೆ ಮಹಿಳೆಯರು ಪ್ರಮುಖ ಸಮಾರಂಭಗಳಲ್ಲಿ ಮತ್ತು ಹಬ್ಬಗಳ ಸಂದರ್ಭಗಳಲ್ಲಿ ಧರಿಸುತ್ತಾರೆ. ಗ್ರಾಹಕರು ಶುದ್ಧವಾದ ರೇಷ್ಮೆಯನ್ನೆ ಖರೀದಿಸುವುದನ್ನು ಎದುರು ನೋಡುವುದರಿಂದ ಶೇ.100ರಷ್ಟು ಶುದ್ಧ ರೇಷ್ಮೆ ಪಡೆಯುವುದು ಅವರ ಹಕ್ಕಾಗಿರುತ್ತದೆ. ಆದರೆ, ಶುದ್ಧವಲ್ಲದ ರೇಷ್ಮೆಯ ಮಾರಾಟ ಮಾಡುವ  ನೀತಿ ನಿಷ್ಠೆಗಳಿಲ್ಲದ ಮಾರಾಟಗಾರರಿಂದ ಅನೇಕರು ವಂಚನೆಗೆ ಒಳಗಾಗುತ್ತಾರೆ. ಈ ಶುದ್ಧವಲ್ಲದ ರೇಷ್ಮೆಗಳನ್ನು ವಿಸ್ಕಾಸ್, ರೇಯಾನ್, ಪಾಲಿಯೆಸ್ಟರ್, ನೈಲಾನ್ ಮುಂತಾದಗಳಿAದ ತಯಾರಿಸಿ ಶುದ್ಧ ರೇಷ್ಮೆ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತದೆ.

IMG-20251204-WA0011

ಭಾರತ ಸರ್ಕಾರದ ಜವಳಿ ಇಲಾಖೆಯ ಸೆಂಟ್ರಲ್ ಸಿಲ್ಕ್ ಬೋರ್ಡ್ನ ಉಪಕ್ರಮವಾಗಿರುವ ಸಿಲ್ಕ್ ಮಾರ್ಕ್ ಆರ್ಗನೈಸೇಷನ್ ಆಫ್ ಇಂಡಿಯಾ(ಎಸ್‌ಎAಒಐ) ಭಾರತದ ಎಲ್ಲೆಡೆ ಸಿಲ್ಕ್ ಮಾರ್ಕ್ ಎಕ್ಸ್ಪೋಗಳನ್ನು ಆಯೋಜಿಸುತ್ತದೆ. ಗುಣಗ್ರಾöಹಿ ರೇಷ್ಮೆ ಪ್ರೇಮಿ ಗ್ರಾಹಕರು ದೇಶದ ಎಲ್ಲೆಡೆಯ ಶೇ.100ರಷ್ಟು ಪರಿಶುದ್ಧ ರೇಷ್ಮೆಯ ಉತ್ಪನ್ನಗಳನ್ನು ವೀಕ್ಷಿಸಿ ಖರೀದಿಸುವ ಅವಕಾಶ ಮಾಡಿಕೊಡಲು ಈ ಎಕ್ಸ್ಪೋಗಳನ್ನು ನಡೆಸಲಾಗುತ್ತಿದೆ. ಅಧಿಕೃತ ನೇಕಾರರು, ಸಹಕಾರ ಸಂಸ್ಥೆಗಳು, ಸಂಘಗಳು, ಮಹಿಳಾ ಉದ್ಯಮಶೀಲರು, ಮಾರಾಟಗಾರರು ಮುಂತಾದವರು ಅವರ ಉತ್ಪನ್ನಗಳನ್ನು ಶುದ್ಧ ರೇಷ್ಮೆಯ ಮೌಲ್ಯ ಅರಿತಿರುವ ಗ್ರಾಹಕರ ಮುಂದೆ ಪ್ರದರ್ಶಿಸಲು ಮತ್ತು ಮಾರಾಟ ಮಾಡಲು ಈ ಎಕ್ಸ್ಪೊಗಳು ವೇದಿಕೆ ಪೂರೈಸುತ್ತವೆ.

IMG-20251204-WA0016

ಈ ಎಕ್ಸ್ಪೋಗಳ ಅನನ್ಯ ವೈಶಿಷ್ಟö್ಯ ಎಂದರೆ ಭಾರತದ ಎಲ್ಲೆಡೆಯಿಂದ ಬರುವ ಅಸಂಖ್ಯ ರೇಷ್ಮೆ ನೇಯ್ಗೆ ಗುಂಪುಗಳ ವಿಸ್ತಾರವಾದ ಶ್ರೇಣಿಯ ರೇಷ್ಮೆಗಳನ್ನು ನೋಡಲು ಕಾಣಸಿಗುವುದಾಗಿದೆ. ಜೊತೆಗೆ ಮಲ್ಬರಿ, ಟಸ್ಸಾರ್, ಎರಿ ಮತ್ತು ಮುಗದಂತಹ ನಾಲ್ಕು ವಾಣಿಜ್ಯ ರೇಷ್ಮೆಗಳನ್ನು ಸ್ವತಃ ಸ್ಪರ್ಷಿಸಿ ಅನುಭವಿಸಲು ಮತ್ತು ಆರಿಸಿಕೊಳ್ಳಲು ಇಲ್ಲಿ ಅವಕಾಶವಿರುತ್ತದೆ. ಇದಕ್ಕೆ ಹೆಚ್ಚುವರಿಯಾಗಿ ಈ ಎಕ್ಸ್ಪೋದಲ್ಲಿ ಮಾರಾಟ ಮಾಡುವ ಪ್ರತಿಯೊಂದು ಉತ್ಪನ್ನ ಶೇ.100ರಷ್ಟು ಶುದ್ಧ ರೇಷ್ಮೆಯಾಗಿರುವ ಖಾತ್ರಿಯ ಭರವಸೆಯನ್ನು ಸಿಲ್ಕ್ ಮಾರ್ಕ್ ಲೇಬಲ್ ನೀಡುತ್ತದೆ. ಇದಲ್ಲದೆ ಎಕ್ಸ್ಪೋದಲ್ಲಿ ಸ್ಥಳದಲ್ಲಿಯೇ ರೇಷ್ಮೆ ಪರೀಕ್ಷಿಸುವ ಕೇಂದ್ರ ಇದ್ದು, ಗ್ರಾಹಕರು ತಾವು ಖರೀದಿಸುವ ರೇಷ್ಮೆಯ ಶುದ್ಧತೆಯನ್ನು ತಕ್ಷಣದಲ್ಲಿ ಸಂಪೂರ್ಣ ಉಚಿತವಾಗಿ ಪರೀಕ್ಷಿಸಿಕೊಳ್ಳಬಹುದಾಗಿದೆ.

IMG-20251204-WA0012

ಸಿಲ್ಕ್ ಮಾರ್ಕ್ ಆರ್ಗನೈಸೇಶನ್ ಆಫ್ ಇಂಡಿಯಾದ ಪ್ರಮುಖ ಮಳಿಗೆಗಳು ರೇಷ್ಮೆ ಕೃಷಿ ಉದ್ಯಮದ ಒಂದು ನೋಟವನ್ನು ರೇಷ್ಮೆ ಗೂಡು, ನೂಲು ಮತ್ತು ಬಟ್ಟೆಯ ಪ್ರದರ್ಶನದೊಂದಿಗೆ ಈ ಎಕ್ಸ್ಪೊದಲ್ಲಿ ಪ್ರಸ್ತುತಪಡಿಸುವುದರೊಂದಿಗೆ ಹೆಚ್ಚಿನ ಗಮನ ಸೆಳೆಯುತ್ತವೆ. ಈ ಕೇಂದ್ರದಲ್ಲಿ ಜೀವಂತ ರೇಷ್ಮೆ ಹುಳುಗಳ ಪ್ರದರ್ಶನ ಆಕರ್ಷಣೆಯ ಕೇಂದ್ರವಾಗಿದೆ.

IMG-20251204-WA0019

ಸಿಲ್ಕ್ ಮಾರ್ಕ್ ಎಕ್ಸ್ಪೋ 2025 ಪ್ರದರ್ಶನವು  ಡಿಸೆಂಬರ್ 04ರಿಂದ ಡಿಸೆಂಬರ್ 09, 2025ರವರೆಗೆ ಕರ್ನಾಟಕ ಚಿತ್ರಕಲಾ ಪರಿಷತ್, ಕುಮಾರ ಕೃಪ ರಸ್ತೆ, ಬೆಂಗಳೂರು ಇಲ್ಲಿ ನಡೆಯಲಿದೆ. ಈ ಎಕ್ಸ್ಪೋ ಪ್ರದರ್ಶನ ಬೆಳಿಗ್ಗೆ 11.00 ಗಂಟೆಯಿAದ ಸಂಜೆ 7 ಗಂಟೆಯವರೆಗೆ ತೆರೆದಿರುತ್ತದೆ.

IMG-20251204-WA0017

ಈ ಪ್ರದರ್ಶನದಲ್ಲಿ 8ರಿಂದ 10 ರಾಜ್ಯಗಳ ಮತ್ತು 12 ರೇಷ್ಮೆ ನೇಯ್ಗೆಯ ಸಮೂಹಗಳನ್ನು ಪ್ರತಿನಿಧಿಸುವ ಅಧಿಕೃತ ಸಿಲ್ಕ್ ಮಾರ್ಕ್ ಬಳಕೆದಾರರಿಂದ ಸ್ಥಾಪಿತವಾದ 43 ಸ್ಟಾಲ್‌ಗಳಿರುತ್ತವೆ. ಟಸ್ಸಾರ್ ಸಿಲ್ಕ್ ಸೀರೆಗಳ ಜೊತೆಗೆ ಫ್ಯಾನ್ಸಿ ವಿನ್ಯಾಸಗಳು, ವ್ಯತ್ಯಾಸಪೂರ್ಣ ಬಣ್ಣಗಳ ಕಸೂತಿ, ಕಾಂತ ವರ್ಕ್, ಟಸ್ಸಾರ್ ಶರ್ಟ್ಗಳು ಮತ್ತು ಜ್ಯಾಕೆಟ್ಸ್ಗಳು, ಎರಿ ಸಿಲ್ಕ್ ಸಾಕ್ಸ್ಗಳು, ಸಿಲ್ಕ್ ಬ್ಯಾಗ್‌ಗಳು, ಅಂಗಿಗಳು, ಧೋತಿಗಳು, ಬ್ಲೌಸ್‌ಗಳು ಮತ್ತು ಉಡುಪುಗಳು ಜೊತೆಗೆ ಸಾಂಪ್ರದಾಯಿಕ ಕಾಂಜಿವರA ಬನಾರಸಿ, ಪೊಚಂಪಳ್ಳಿ, ಮುರ್ಶಿದಾಬಾದ್, ಮೈಸೂರ್ ಸಿಲ್ಕ್, ಉಪ್ಪದ, ಪೈಥಾನಿ ಇತ್ಯಾದಿ ಸೀರೆಗಳು ಮುಂತಾದ ಉತ್ಪನ್ನಗಳು ಲಭ್ಯವಿರುತ್ತವೆ.

IMG-20251204-WA0009

ಕುಟುಂಬದಲ್ಲಿ ವಿವಾಹ ಸಮಾರಂಭಗಳು, ಮುಂಬರಲಿರುವ ವಿಶೇಷ ಸಂದರ್ಭಗಳು ಮತ್ತು ಉತ್ಸವಗಳು  ಅಥವ ನಿಗದಿತ ಬಳಕೆಗಾಗಿ ಶುದ್ಧವಾದ ರೇಷ್ಮೆ ಸೀರೆಗಳ ಖರೀದಿಗಾಗಿ ಎದುರು ನೋಡುವವರಿಗೆ ಇದು ಅದ್ಭುತವಾದ ಅವಕಾಶವಾಗಲಿದೆ.
ಸಿಲ್ಕ್ ಮಾರ್ಕ್ ಎಕ್ಸ್ಪೋ 2025, ಬೆಂಗಳೂರು ಕರ‍್ಯಕ್ರಮವನ್ನು ಫ್ಯಾಶನ್ ಶೈಲಿ ತಜ್ಞರು ಮತ್ತು ಉಡುಪು ವಿನ್ಯಾಸಕರಾದ ಶ್ರೀಮತಿ ಪ್ರಗತಿ ರಿಷಬ್ ಶೆಟ್ಟಿ ಅವರು ಬೆಂಗಳೂರಿನ ಕುಮಾರಕೃಪ ರಸ್ತೆಯಲ್ಲಿರುವ ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ ಡಿಸೆಂಬರ್ 04, 2025ರಂದು ಬೆಳಗ್ಗೆ 10.30ಕ್ಕೆ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕೇಂದ್ರ ರೇಷ್ಮೆ ಮಂಡಳಿಯ ಸದಸ್ಯ ಕಾರ್ಯದರ್ಶಿ ಮತ್ತು ಎಸ್‌ಎಂಒಐ ಉಪಾಧ್ಯಕ್ಷರಾದ ಶ್ರೀ. ಪಿ ಶಿವಕುಮಾರ್, ಐಎಫ್‌ಎಸ್, ಮತ್ತು ಕೇಂದ್ರ ರೇಷ್ಮೆ ಮಂಡಳಿ ಕಾರ್ಯದರ್ಶಿ (ತಾಂತ್ರಿಕ) ಮತ್ತು ಎಸ್‌ಎಂಒಐ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ನರೇಶ್ ಬಾಬು ಎನ್, ಅವರು ಹಾಜರಿದ್ದರು.

IMG-20251204-WA0020

ಬೆಂಗಳೂರಿನ ಎಲ್ಲಾ ರೇಷ್ಮೆ ಪ್ರೇಮಿಗಳಿಗೆ ಈ ಸಿಲ್ಕ್ ಮಾರ್ಕ್ ಎಕ್ಸ್ಪೋ 2019 ಬೆಂಗಳೂರಿಗೆ ಭೇಟಿ ನೀಡುವಂತೆ ಹಾಗೂ ಶೇ.100ರಷ್ಟು ಶುದ್ಧ ರೇಷ್ಮೆಯ ಅದ್ಭುತ ಜಗತ್ತನ್ನು ಅನುಭವಿಸಿ ಆವಿಷ್ಕರಿಸುವಂತೆ ನಾವು ಆಗ್ರಹಿಸುತ್ತೇವೆ. ಜೊತೆಗೆ ಭಾರತದ ಎಲ್ಲೆಡೆಯ ನೇಕಾರರು ಮತ್ತು ಕಲಾವಿದರನ್ನು ಪ್ರೋತ್ಸಾಹಿಸುವಂತೆ ನಾವು ಆಗ್ರಹಿಸುತ್ತೇವೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ