– ರಾಘವೇಂದ್ರ ಅಡಿಗ ಎಚ್ಚೆನ್.
ದರ್ಶನ್ ನಟನೆಯ ಡೆವಿಲ್ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ. ಸೂರ್ಯಂಗೆ ತುಂಬಾ ಹೊತ್ತು ಗ್ರಹಣ ಹಿಡಿಯಲ್ಲ, ನಾನ್ ಬರ್ತಿದ್ದೀನಿ ಚಿನ್ನ ಎಂಬ ಡೈಲಾಗ್ ಮೂಲಕ ದರ್ಶನ್ ಭರವಸೆ ಕೊಟ್ಟಿದ್ದಾರೆ.
ಸಿನಿಮಾದಲ್ಲಿನ ದರ್ಶನ್ ಪಾತ್ರದ ಝೆಲಕ್ ಟ್ರೈಲರ್ನಲ್ಲಿ ತೋರಿಸಲಾಗಿದೆ. ಅದ್ದೂರಿ ಮೇಕಿಂಗ್ನಲ್ಲಿ ಡೆವಿಲ್ ವಿಶ್ಯುವಲ್ ಟ್ರೀಟ್ ಇದೆ. ಸ್ಟೈಲೀಶ್ ಲುಕ್ನಲ್ಲಿ ದರ್ಶನ್ ಕಾಣಿಸಿಕೊಂಡಿದ್ದಾರೆ. ‘ಸೂರ್ಯಂಗೆ ಹೆಚ್ಚು ಹೊತ್ತು ಗ್ರಹಣ ಹಿಡಿಯಲ್ಲ. ನಾನು ಬರ್ತಿದೀನಿ ಚಿನ್ನ’ ಎಂದು ದರ್ಶನ್ ಡೈಲಾಗ್ ಹೇಳುವಾಗ ರಿಲೀಸ್ ದಿನಾಂಕ ತೋರಿಸಲಾಗುತ್ತದೆ. ಮಿಲನಾ ಪ್ರಕಾಶ್ ನಿರ್ದೇಶನದ ಚಿತ್ರವು ಇದೇ ಡಿಸೆಂಬರ್ 11 ರಂದು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. ‘ಡೆವಿಲ್’ ನಿರ್ದೇಶಕ ಮಿಲನ ಪ್ರಕಾಶ್ ಚಿತ್ರರಂಗದಲ್ಲಿ ಕಳೆದ 22 ವರ್ಷಗಳಿಂದ ಇದ್ದಾರೆ. ‘ಖುಷಿ’ ಅವರು ನಿರ್ದೇಶನ ಮಾಡಿದ ಮೊದಲ ಚಿತ್ರ. ಈ ಸಿನಿಮಾ 2003ರಲ್ಲಿ ಬಂತು. 2007ರಲ್ಲಿ ಬಂದ ‘ಮಿಲನ’ ಸೂಪರ್ ಹಿಟ್ ಆಯಿತು. ಪುನೀತ್ ರಾಜ್ಕುಮಾರ್ ಹಾಗೂ ಪಾರ್ವತಿ ಮೆನನ್ ಈ ಸಿನಿಮಾದಲ್ಲಿ ನಟಿಸಿದ್ದರು. ದರ್ಶನ್ ಜೊತೆ ಅವರು ಈ ಮೊದಲು ‘ತಾರಕ್’ ಅಲ್ಲಿ ಕೆಲಸ ಮಾಡಿದ್ದರು. ಈಗ ಇಬ್ಬರೂ ‘ಡೆವಿಲ್’ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ.

ಇದರೊಡನೆ ಬಿಗ್ ಬಾಸ್ ಮೂಲಕ ಭಾರೀ ಜನಪ್ರಿಯತೆ ಪಡೆದಿರುವ ಹಾಸ್ಯ ನಟ ಗಿಲ್ಲಿ ಕೂಡ ಡೆವಿಲ್ ಚಿತ್ರದಲ್ಲಿದ್ದಾರೆ. ಇವತ್ತು ರಿಲೀಸ್ ಆಗಿರುವ ಟ್ರೈಲರ್ನಲ್ಲೂ ಗಿಲ್ಲಿಯನ್ನು ತೋರಿಸಲಾಗಿದೆ. ಕಡಕ್ ಲುಕ್ನಲ್ಲಿ ಠಾಣೆಗೆ ಎಂಟ್ರಿ ಕೊಡುವ ಗಿಲ್ಲಿ, ಪೊಲೀಸ್ ಎದುರು ಕಾಲ್ಮೇಲೆ ಕಾಲು ಹಾಕಿ ಡೈಲಾಗ್ ಹೊಡೆದಿದ್ದಾರೆ. ಎಕ್ಸ್ಕ್ಯೂಸ್ ಮೀ ಪಿಸಿ.. ಚೂರು AC ಹಾಕಮ್ಮ.. ಲಾಟ್ ಆಫ್ ಸೆಕೆ ಅಂತಾ ಡೈಲಾಗ್ ಹೊಡೆದಿದ್ದಾರೆ.

‘ಡೆವಿಲ್’ ಸಿನಿಮಾದಲ್ಲಿ ದರ್ಶನ್ಗೆ ಜೊತೆಯಾಗಿ ರಚನಾ ರೈ ನಟಿಸಿದ್ದಾರೆ. ಮಹೇಶ್ ಮಂಜ್ರೇಕರ್, ಅಚ್ಯುತ್ ಕುಮಾರ್, ಶರ್ಮಿಳಾ ಮಾಂಡ್ರೆ, ಶೋಭರಾಜ್ ಮೊದಲಾದವರು ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಚಿತ್ರಕ್ಕೆ ಇದೆ. ಪ್ರಕಾಶ್ ಹಾಗೂ ಜಯಮ್ಮ ಚಿತ್ರ ನಿರ್ಮಿಸಿದ್ದಾರೆ.
ಟ್ರೈಲರ್ ರಿಲೀಸ್ ಬೆನ್ನಲ್ಲೇ ಸಿನಿಮಾ ಮೇಲಿನ ನಿರೀಕ್ಷೆಗಳು ದುಪ್ಪಟ್ಟಾಗಿವೆ. ಡಿಸೆಂಬರ್ 11ರಂದು ಬೆಳಗ್ಗೆ 6.30ಕ್ಕೆ ಎಲ್ಲೆಡೆ ಸಿನಿಮಾ ಪ್ರದರ್ಶನ ಆರಂಭವಾಗಲಿದ್ದು, ಅಭಿಮಾನಿಗಳಿಗೆ ಅಂತಲೇ ಸ್ಪೆಷಲ್ ಶೋಗಳನ್ನು ಮಾಡಲು ಚಿತ್ರತಂಡ ನಿರ್ಧರಿಸಿದೆ. ಹೀಗಾಗಿ ನಾಳೆಯಿಂದಲೇ ಬುಕ್ ಮೈ ಶೋನಲ್ಲಿ ಟಿಕೆಟ್ ಬುಕ್ಕಿಂಗ್ ಆರಂಭವಾಗುತ್ತಿದೆ.





