ರಾಘವೇಂದ್ರ ಅಡಿಗ ಎಚ್ಚೆನ್.
ಚಿತ್ರ: ದಿ ಡೆವಿಲ್
ನಿರ್ಮಾಣ: ಕೈಮಾತಾ ಕಂಬೈನ್ಸ್
ನಿರ್ದೇಶನ:  ಪ್ರಕಾಶ್ ವೀರ್
ತಾರಾಂಗಣ:  ದರ್ಶನ್, ರಚನಾ ರೈ, ಅಚ್ಯುತ್ ಕುಮಾರ್, ಮಹೇಶ್ ಮಂಜ್ರೇಕರ್, ವಿನಯ್ ಗೌಡ, ಶರ್ಮಿಳಾ ಮಾಂಡ್ರೆ ಮುಂತಾದವರು.
ರೇಟಿಂಗ್: 3.5
ಚಾಲೆಂಜಿಂಗ್ ಸ್ಟಾರ್’ ದರ್ಶನ್ ಅಭಿನಯದ ‘ದಿ ಡೆವಿಲ್’ ಸಿನಿಮಾ ಗ್ರ್ಯಾಂಡ್ ಆಗಿ ಬಿಡುಗಡೆ ಆಗಿದೆ. ಡಿಸೆಂಬರ್ 11ರಂದು ತೆರೆಕಂಡಿರುವ ಈ ಸಿನಿಮಾದಲ್ಲಿ ರಾಜಕೀಯದ ಕಥಾಹಂದರ ಇದೆ. ದರ್ಶನ್ ಜೊತೆ ಅಚ್ಯುತ್ ಕುಮಾರ್, ಮಹೇಶ್ ಮಂಜ್ರೇಕರ್ ಮುಂತಾದ ಪ್ರತಿಭಾವಂತ ಕಲಾವಿದರು ಅಭಿನಯಿಸಿದ್ದಾರೆ. ‘ಮಿಲನ’, ‘ತಾರಕ್’ ಖ್ಯಾತಿಯ ನಿರ್ದೇಶಕ ಪ್ರಕಾಶ್ ವೀರ್ ಅವರು ‘ದಿ ಡೆವಿಲ್ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಸಿನಿಮಾ ಹೇಗಿದೆ ತಿಳಿಯಲು ಮುಂದೆ ಓದಿ..

rajakeeya

ಭ್ರಷ್ಟಾಚಾರದ ಆರೋಪದಿಂದ ಮುಖ್ಯಮಂತ್ರಿ ರಾಜಶೇಖರ್ (ಮಹೇಶ್ ಮಂಜ್ರೇಕರ್) ಸ್ಥಾನಕ್ಕೆ ಕುತ್ತು ಬರುತ್ತದೆ. ಮುಂದಿನ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆ ಎದುರಾಗುತ್ತದೆ. ತನ್ನ ಮಗ ಧನುಷ್ (ದರ್ಶನ್) ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಆಗಬೇಕು ಎಂಬುದು ರಾಜಶೇಖರ್ ಉದ್ದೇಶ. ಆದರೆ ಧನುಷ್ ಪಕ್ಕಾ ವಿಲನ್! ಅವನ ಬದಲು ಅವನ ರೀತಿಯೇ ಕಾಣುವ ಕೃಷ್ಣ ಎಂಬ ವ್ಯಕ್ತಿಯನ್ನು ಧನುಷ್ ಎಂದು ತೋರಿಸಿ ಜನರನ್ನು ನಂಬಿಸಲಾಗುತ್ತದೆ.  ಒಬ್ಬ ಸಾಮಾನ್ಯ ಮನುಷ್ಯ ಹೇಗೆ ಧನುಷ್ ಆಗುತ್ತಾನೆ, ಆ ಧನುಷ್ ಹೇಗೆ ಲೀಡರ್ ಆಗುತ್ತಾನೆ, ಆ ಲೀಡರ್ ಹೇಗೆ ಡೆವಿಲ್ ಆಗುತ್ತಾನೆ – ಇನ್ನ ಡೆವಿಲ್ ಹೇಗೆ ಧನುಷ್ ಆಗುತ್ತಾನೆ ಧನುಷ್ ಹೇಗೆ ಸಿಎಂ ಆಗುತ್ತಾನೆ ಎಲ್ಲಾನು  ಥೀಯೇಟರ್ ಗೆ ಹೋಗಿ ನೋಡಿ.
ಪ್ರಕಾಶ್ ವೀರ್ ಅಚ್ಚುಕಟ್ಟಾದ ಕಥೆ ಹೆಣೆದು  ಜೊತೆ ಮತ್ತು ಈಗಿನ ಜನರೇಶನ್ ಗೇ ಬೇಕಾದ ಬೇಕಾಗಿರುವ ರೀತಿಯಲ್ಲಿ ಡೈರೆಕ್ಷನ್ ಮಾಡಿದ್ದಾರೆ ಅವರು ಎಲ್ಲಕ್ಕಿಂತ ಹೆಚ್ಚಾಗಿ ಕಥೆಗೆ ಮಹತ್ವ ನೀಡಿದ್ದಾರೆ. ಮಾಸ್ ಅಂಶಗಳ ಜೊತೆಯಲ್ಲೇ ಒಂದು ಕ್ಲಾಸ್ ಆದಂತಹ ಕಥೆಯನ್ನು ಅವರು ಪ್ರೇಕ್ಷಕರ ಎದುರು ತಂದಿದ್ದಾರೆ. ಈ ಕಥೆಯಲ್ಲಿ ಸಂಪೂರ್ಣ ಹೊಸತನ ಇಲ್ಲದೇ ಇದ್ದರೂ ಒಮ್ಮೆ ನೋಡಿಸಿಕೊಂಡು ಹೋಗುವ ಗುಣ ಇದೆ.
ದರ್ಶನ್ ಆಕ್ಟಿಂಗ್  ಕುರಿತು ಹೇಳುವಾಗ ದಿ ಡೆವಿಲ್ ಎಂಬ ರಾಕ್ಷಸತನವನ್ನು ಮೈ ತುಂಬಿಕೊಂಡು ಮಾಡಿರುವ ಅಭಿನಯ ಅವರಿಗೆ ಅವರೇ ಸಾಟಿ ನೆಗೆಟಿವ್ ಶೇಡ್ ಪಾತ್ರಕ್ಕೆ ಪರಕಾಯ ಪ್ರವೇಶ ಮಾಡುವುದು ಕಷ್ಟಸಾಧ್ಯ ಅಂತಹಾ ಒಂದು ಪಾತ್ರವನ್ನು ಅತ್ಯುತ್ತಮವಾಗಿ ಮಾಡಿ ತೋರಿಸಿದ್ದಾರೆ ದರ್ಶನ್..  “ರಾಬರ್ಟ್” ಚಿತ್ರದ ನಂತರ ಮತ್ತೊಮ್ಮೆ ಹೋಟೆಲ್ ಶೆಫ್ ಪಾತ್ರದಲ್ಲಿ ದರ್ಶನ್ ಕಾಣಿಸಿಕೊಂಡಿದ್ದಾರೆ ಮಾತ್ರವಲ್ಲ “ರಾಬರ್ಟ್” ಸಿನಿಮಾದ ಹಾಡು “ಎ ಬ್ರದರ್ ಫ್ರಂ ಎನೆದರ್ ಮದರ್” ಸಾಲುಗಳು ಎರಡು ಮೂರು ಬಾರಿ ಮರುಕಳಿಸಿದೆ.
ಕಥೆಯಲ್ಲಿ ತುಂಬಾ ಟ್ವಿಸ್ಟ್ ಆಂಡ್ ಟರ್ನ್ ಗಳಿದೆ. ಇನ್ನು  ಚಿತ್ರದ ಅವಧಿ ಎರಡು ಗಂಟೆ ನಲವತ್ತೈದು ನಿಮಿಷದಷ್ಟಿದ್ದೂ ಸಿನಿಮಾದಲ್ಲಿ ತುಂಬಾ ಹೊಸತನ ಇಲ್ಲ.  ಪ್ರೀ-ಕ್ಲೈಮ್ಯಾಕ್ಸ್ ತಲುಪುವ ವೇಳೆಗೆ ಕಥೆ ಸ್ವಾರಸ್ಯ ಕಳೆದುಕೊಳ್ಳುತ್ತದೆ. ಗಿಲ್ಲಿ ನಟ ಇದ್ದರೂ ಕೂಡ ಕಾಮಿಡಿ ದೃಶ್ಯ ಹೆಚ್ಚಾಗಿಲ್ಲ. ಕ್ಲೈಮ್ಯಾಕ್ಸ್  ಗೊಂದಲದಿಂದ ಕೂಡಿದೆ.. ಚಿತ್ರದ ಕೊನೆಗೆ ಬರೋ  ಟ್ವಿಸ್ಟ್ ಡೆವಿಲ್ ಗೆ ನಾಂದಿ ಹಾಡಿದ್ದಾರೋ – ಇಲ್ಲಾ ಡೆವಿಲ್ 2 ಗೇ ಅಡಿಗಲ್ಲು ಹಾಕಿದಾರೋ ತಿಳಿಯೊದಿಲ್ಲ.
ರಚನಾ ರೈ ಮೊದಲ ಚಿತ್ರ ಆದರೂ ಉತ್ತಮ ಅಭಿನಯ ನೀಡಿದ್ದಾರೆ ಜೊತೆ ಮುಂದೆ ಉತ್ತಮ ನಿರ್ದೇಶಕ, ಕಥೆ ಸಿಕ್ಕಿದರೆ ಕನ್ನಡದಲ್ಲಿ ಒಳ್ಳೆಯ ನಾಯಕಿ ಆಗುವ ಲಕ್ಷಣ ಇದೆ.
ಅಚ್ಯುತ್, ಶೋಭರಾಜ್, ಗಿಲ್ಲಿ, ಹುಲಿ ಕಾರ್ತಿಕ್, ಶರ್ಮಿಳಾ ಮಾಂಡ್ರೆ ಉಳಿದವರು ಎಲ್ಲಾರೂ ಚಿತ್ರದಲ್ಲಿ ಎಲ್ಲರ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.
ಹಾಡುಗಳು ಈಗಾಗಲೇ ಒಂದು ವೈಬ್ ಕ್ರಿಯೇಟ್ ಮಾಡಿದೆ. ರಿಲೀಸ್ ಆಗುವ ಮೊದಲೇ ಹಾಡು ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿತ್ತು. ಪ್ರೋಮೋಗಳು ಜನರ ಮಧ್ಯೆ ಟ್ರೆಂಡ್ ಆಗಿದ್ದವು. ಹೀಗಿದ್ದರೂ ಅಜನೀಶ್ ಸಂಗೀತದಲ್ಲಿ ಹಾಡುಗಳು ನೋಡಲು ಖುಷಿಯಾಗುತ್ತದೆ. ಇದು ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಲಿದೆ. ಮೇಕಿಂಗ್ ಬಗ್ಗೆ ಎರಡು ಮಾತು ಇಲ್ಲದಂತೆ ಛಾಯಾಗ್ರಹಣ ಹಾಗೂ ಸೆಟ್ ನ ಅದ್ದೂರಿತನ ಚಿತ್ರದಲ್ಲಿ ಕಣ್ಣುಗಳಿಗೆ ಹಬ್ಬವಾಗಲಿದೆ. ಒಟ್ಟಾರೆಯಾಗಿ ಇದೊಂದು ಕುಟುಂಬ ಸಹಿತ ನೋಡಬಹುದಾದ ಮನರಂಜನೆಯ ಪೊಲಿಟಿಕಲ್ ಆಕ್ಷ ನ್ ಥ್ರಿಲ್ಲರ್ ಎನ್ನಬಹುದು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ