- ರಾಘವೇಂದ್ರ ಅಡಿಗ ಎಚ್ಚೆನ್.
ಹೆಸರಿನಲ್ಲೇ ಆಕರ್ಷಣೆ ತರಿಸುವ *ಕ್ಲಾಸ್ ಆಫ್ ಮೈಸೂರು* ಚಿತ್ರದ ಮುಹೂರ್ತ ಮತ್ತು ಶೀರ್ಷಿಕೆ ಅನಾವರಣ ಸಮಾರಂಭವು ಶ್ರೀ ಬಂಡೆ ಮಹಾಂಕಾಳಿ ಅಮ್ಮನ ದೇವಸ್ಥಾನದಲ್ಲಿ ನಡೆಯಿತು. ಸಿನಿಮಾದಲ್ಲಿ ಅಭಿನಯಿಸುತ್ತಿರುವ ಹಿರಿಯ ನಟ ದತ್ತಣ್ಣ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರೆ, ಹಿರಿಯ ನಟಿ ತಾರಾ ಟೈಟಲ್‌ನ್ನು ಲೋಕಾರ್ಪಣೆಗೊಳಿಸಿದರು. ’ಯಥಾಭವ’ ನಿರ್ಮಿಸಿ, ನಿರ್ದೇಶನ ಮಾಡಿರುವ *ಗೌತಂ ಬಸವರಾಜು ಎರಡನೇ ಅನುಭವ ಎನ್ನುವಂತೆ ಸಿನಿಮಾಕ್ಕೆ ಕಥೆ,ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳುವ ಜತೆಗೆ ಮಾಕ್ಟ್ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ಬಂಡವಾಳ* ಹೂಡುತ್ತಿದ್ದಾರೆ. ಎಲ್ಲಾ ಕಲಾವಿದರುಗಳು ರೇಷ್ಮೆ ಪಂಚೆ, ಮೈಸೂರು ಪೇಟದೊಂದಿಗೆ ಆಗಮಿಸಿದ್ದು, ವೇದಿಕೆ ಮೇಲೆ ಮೈಸೂರು ಅರಮನೆ, ಅಂಬಾರಿ ಸೆಟ್ ಸಿದ್ದಗೊಳಿಸಿದ್ದು ವಿಶೇಷವಾಗಿತ್ತು.

ಪೂಜೆ ನಂತರ ಮಾತನಾಡಿದ ನಿರ್ದೇಶಕರು, ಪಕ್ಕದಲ್ಲಿ ಇರುವ ಅರಮನೆ, ಅಂಬಾರಿ ಸಿನಿಮಾದ ಕಥೆಯನ್ನು ಹೇಳುತ್ತದೆ. ನಿವೃತ್ತಿ ಬದುಕಲ್ಲಿ ನಾವು ಏನನ್ನು ಕಳೆದುಕೊಂಡಿರುತ್ತೆವೋ, ಅದನ್ನು ಅನುಭವಿಸಿದರೆ ಹೆಂಗಿರುತ್ತೆ? ಎಂಬುದನ್ನು ತೋರಿಸಲಾಗುತ್ತಿದೆ. ಮಿಕ್ಕಿದ್ದನ್ನು ಈಗಲೇ ಹೇಳಿದರೆ ಚಿತ್ರದ ಸಾರಾಂಶವನ್ನು ಬಿಟ್ಟುಕೊಟ್ಟಂತೆ ಆಗುತ್ತದೆ. ಅದಕ್ಕಾಗಿ ಗೌಪ್ಯವಾಗಿಡಲಾಗಿದೆ. ಮೈಸೂರು ಭಾಗಕ್ಕೆ ಸೇರಿದ ಕತೆಯಾಗಿದ್ದು, ಪ್ರತಿಯೊಂದು ಫ್ರೇಮ್‌ನಲ್ಲಿ ಎಲ್ಲಾ ಕಲಾವಿದರು ಕಾಣಿಸಿಕೊಳ್ಳುತ್ತಾರೆ. ಇಬ್ಬರು ಹುಡುಗಿಯರಿಗಾಗಿ ತಲಾಷ್ ನಡೆಯುತ್ತಿದೆ. ಗೋವಾ, ಮಂಗಳೂರು, ಕೂರ್ಗ್, ಬೆಂಗಳೂರು ಸುತ್ತಮುತ್ತ ಎರಡು ಹಂತಗಳಲ್ಲಿ 40 ದಿನಗಳ ಕಾಲ ಚಿತ್ರೀಕರಣವನ್ನು ಫೆಬ್ರವರಿ 2ರಿಂದ ನಡೆಸಲು ಯೋಜನೆ ಹಾಕಲಾಗಿದೆ. ಪೋಸ್ಟ್ ಪ್ರೊಡಕ್ಷನ್‌ಗೆಂದು ಎರಡು ತಿಂಗಳು ಮೀಸಲಿಡಲಾಗಿದೆ ಎಂದು ಗೌತಂ ಬಸವರಾಜು ಮಾಹಿತಿ ನೀಡಿದರು.

ದತ್ತಣ್ಣ, ರಂಗಾಯಣರಘು, ತಬಲನಾಣಿ, ಬಿರಾದರ್, ಶರತ್ ಲೋಹಿತಾಶ್ವ ಪಾತ್ರದ ಪರಿಚಯ ಮಾಡಿಕೊಂಡರು. ಎಲ್ಲರಿಗಿಂತ ತಾರಾ ಭಿನ್ನವಾಗಿ ತಮ್ಮ ರೋಲ್ ಬಗ್ಗೆ ಸವಿಸ್ತಾರವಾಗಿ ಹೇಳಿಕೊಂಡ ಪರಿ ಹೀಗಿತ್ತು.

ಒಂದೊಂದು ಪಾತ್ರಕ್ಕೂ ಅದರ ಹಿಂದಿನ ಕಥೆ ಇದೆ. ಒಂದೊದು ಪಾತ್ರಕ್ಕೂ ಅದರದೆ ಆದ ಗಾತ್ರ ಇದೆ. ಒಂದೊಂದು ಪಾತಕ್ಕ್ಕೂ ಅದರದೆ ಆಯಕಟ್ಟು ಮಾಡಿದ್ದಾರೆ. ಪ್ರಸ್ತುತ ಬರುತ್ತಿರುವ ಸಿನಿಮಾಗಳನ್ನು ಹೊರತುಪಡಿಸಿ, ಬೇರೆ ಆಯಾಮದ ವಿಷಯವನ್ನು ಇವರು ಯಾವ ರೀತಿ ಆರಿಸಿಕೊಂಡರು ಎಂಬುದು ನಿಜಕ್ಕೂ ಸೋಜಿಗವಾಗಿದೆ. ಅಲ್ಲದೆ ಇಂತಹ ಮಹಾನ್ ಕಲಾವಿದರನ್ನು ಒಟ್ಟಿಗೆ ಕೂಡಿಸಿರುವುದು ಛಾಲೆಂಜ್ ಆಗಿದೆ. ಮಕ್ಕಳಿಗೆ ಅರ್ಥ ಕೊಡುವುದರಲ್ಲಿ ತಾಯಿ, ಜೀವನ ನಡೆಸೋದು ತಾಯಿ, ಜೀವನವನ್ನು ಸರಿದಾರಿಗೆ ಇಲ್ಲವೆ ತಪ್ಪು ದಾರಿಗೆ ಕರೆದುಕೊಂಡು ಹೋಗುವುದು ತಾಯಿ. ಅದನ್ನು ಮತ್ತೆ ಸರಿಪಡಿಸುವುದು ತಾಯಿ.

ಅಂತಹ ತೂಕದ ಪಾತ್ರದಲ್ಲಿ ಅಭಿನಯಿಸಲು ಅವಕಾಶ ಕಲ್ಪಿಸಿದ್ದಕ್ಕೆ ಥ್ಯಾಂಕ್ಸ್. ಇಲ್ಲಿನ ಮೈಸೂರನ್ನು ಸಾಂಕೇತಿಕವಾಗಿ ತೆಗೆದುಕೊಂಡು, ಅದನ್ನು ಸಿನಿಮಾ ರೂಪದಲ್ಲಿ ತೋರಿಸುತ್ತಿರುವುದು ಜವಬ್ದಾರಿಯುತ ಕೆಲಸ. ಈ ಸಿನಿಮಾ ನೋಡುಗರ ಜ್ಘಾನೋದಯವಾಗಬೇಕು. ಎಲ್ಲರೂ ನಮ್ಮವರೇ ಅಂಥ ಭಾವನೆ ಬರಬೇಕೆಂದು ತಾರಾ ಅಭಿಪ್ರಾಯಪಟ್ಟರು.





