ಅಸಲಿ ಯಾ ನಕಲಿ :  ಶಬ್ದದ ಬಳಕೆ ಈಗ ಅತಿ ಮಾಮೂಲಿ ಆಗಿಹೋಗಿದೆ. ಏಕೆಂದರೆ ವಿಶ್ವದೆಲ್ಲೆಡೆಯ ಮಾಹಿತಿ ರೆಡಿಮೇಡ್‌ ಆಗಿ ಇದೀಗ ನಿಮ್ಮ ಕೈಗಳಲ್ಲಿ ಅತ್ಯಾಧುನಿಕ ಟೆಕ್ನಾಲಜಿಯಾಗಿ ಕ್ಷಣ ಮಾತ್ರದಲ್ಲಿ ಲಭ್ಯ ಎಂದಾಗಿ ಹೋಗಿದೆ. ಇದರ ಅರ್ಥ, ಎಲ್ಲಾ ಜನಸಾಮಾನ್ಯರೂ ಇದರ ಬಳಕೆಯಿಂದ ಅತಿ ಬುದ್ಧಿವಂತರಾಗಿ ಹೋಗುತ್ತಾರೆ ಅಂತಲ್ಲ. ಬದಲಿಗೆ ನಿಮಗೆ ಯಾವಾಗ ಬೇಕೋ, ಹೇಗೆ ಬೇಕೋ ಅಂಥ ಫೋಟೋ, ಅಗತ್ಯದ ಫೋನ್‌ ನಂಬರ್‌, ವಿಡಿಯೋ, ದಸ್ತಾವೇಜು, ಇಮೇಲ್ ‌ಇತ್ಯಾದಿಗಳನ್ನು ಕರಾರುವಾಕ್ಕಾಗಿ ನೀಡುತ್ತದೆ. ಜೊತೆಗೆ, ಆ ಮಾಹಿತಿ ಎಷ್ಟು ಮಾತ್ರ ಅಸಲಿ ಯಾ ನಕಲಿ ಎಂದೂ ಹೇಳಬಲ್ಲದು. ಯಾರೋ ಒಬ್ಬ ನಿಮಗೆ ಫೋನ್‌ ಮಾಡಿ ಫ್ಲರ್ಟ್‌ ಮಾಡುತ್ತಿದ್ದರೆ ಅಥವಾ ನಿಮ್ಮಿಂದ ಪರ್ಸನಲ್ ಮಾಹಿತಿ ಪಡೆದು ಬ್ಯ್ಲಾಕ್‌ ಮೇಲಿಂಗ್‌ ಗೆ ಇಳಿದರೆ, ಅಂಥವುಗಳ ಸುಳಿವು ನೀಡಬಲ್ಲದು! ಗನ್‌ ಬ್ಲಡ್‌ ಎಂಬ ಕಂಪನಿ ಇಂಥ ಒಂದು ಕ್ಯಾರೆಕ್ಟರ್‌ ತಯಾರಿಸಿದೆ, ಅದು ಹೊಸ ಹೊಸ ರಾಗಗಳಲ್ಲಿ ಸಂಗೀತ ಸುಧೆ ಹರಿಸಬಲ್ಲದು, ಹಾಡಿನಲ್ಲಿ ಹೊಸ ಬಗೆಯ ಸಾಹಿತ್ಯ ನೀಡಬಲ್ಲದು…. ಇರಿ ಇರಿ…. ಹಿಗ್ಗಿ ಹೋಗದಿರಿ, ಇವೆಲ್ಲ ಈ ಲೋಕದ ಇನ್ನಾವುದೋ ಮೂಲೆಯೊಂದರಲ್ಲಿ ಬಳಸಲ್ಪಟ್ಟಿದ್ದೇ, ಅಂದರೆ ಕದ್ದ ಮಾಲು! ಹಾಗಾಗಿ ಬಳಸುವಾಗ ಏಮಾರದಿರಿ.

women-s-national-team

ಧೈರ್ಯ ಕಳೆದುಕೊಳ್ಳಬೇಡಿ : ನಿಮ್ಮ ದೇಹದ ಒಂದು ಭಾಗ ಕೆಲಸ ಮಾಡುತ್ತಿಲ್ಲ ಎಂದರೆ, ಹೆದರದಿರಿ! ಅಂಥವರೂ ಸಹ ಈಗ ಫುಟ್‌ ಬಾಲ್ ‌ಯಾ ಸಾಕರ್‌ ನಂಥ ಆಟ ಆಡಬಲ್ಲರು. ಮೇಲಿನ ಈ ತಂಡ ಇದನ್ನೇ ತೋರಿಸುತ್ತಿದೆ, ಅಮೆರಿಕಾದ ನ್ಯಾಶನಲ್ ಆ್ಯಂಪ್ಯುಟರಿ ಟೂರ್ನಮೆಂಟ್‌ ನಲ್ಲಿ ಭಾಗವಹಿಸಿ, ತಮ್ಮ ಕ್ರೆಚಸ್‌ ಜೊತೆ ಗೆಲುವು ಸಾಧಿಸಿದ್ದಾರೆ! ನಮ್ಮ ದೇಹ ಹೇಗೇ ಇರಲಿ, ಅದರ ಲಿಮಿಟ್‌ ನಲ್ಲಿ ನಾವು ಖಂಡಿತಾ ಏನಾದರೂ ಸಾಧಿಸಬಹುದು ಎಂದು ತೋರಿಸಿಕೊಟ್ಟಿದ್ದಾರೆ.

nantucket-s-annual-july-4th-wat

ಮೋಜುಮಸ್ತಿಗೆ ಸಮನುಂಟೆ? : ಹೋಳಿ ಹಬ್ಬದ ಮಜಾ ಇರುವುದೇ, ಪರಿಚಿತ ಅಪರಿಚಿತರ ಮೇಲೆ ಬಣ್ಣ ಎರಚಾಡುವುದರಲ್ಲಿ! ಇದೇ ಹಬ್ಬವನ್ನು ವಿದೇಶದ ಮಂದಿ ಬೇರೆ ಬೇರೆ ರೀತಿಯಲ್ಲಿ ಆಚರಿಸಿ ಮಜಾ ಪಡೆಯುತ್ತಿದ್ದಾರೆ. ಅಮೆರಿಕಾದ ಎಷ್ಟೋ ನಗರಗಳಲ್ಲಿ ಕಳೆದ ಜುಲೈ 4 ರಂದು, ಪರಸ್ಪರರ ಮೇಲೆ ನೀರೆರಚಿ ಇಂಥ ಸಂಭ್ರಮಾಚರಣೆಯ ಮೋಜುಮಸ್ತಿಯಲ್ಲಿ ಜನ ಮಿಂದೆದ್ದರು. ಭಾರತದಲ್ಲಿ ಇತ್ತೀಚೆಗೆ ಇಂಥ ಕಡಿಮೆ ಆಗುತ್ತಿದೆ. ಹಿಂದೂಮುಸ್ಲಿಂ ವೈಷಮ್ಯ ಅಥವಾ ದಲಿತರು ಉಚ್ಚ ಜಾತಿಯವರ ನಡುವಿನ ಸಂಘರ್ಷದಿಂದ, ಇಲ್ಲಿ ಮೋಜು ಹೋಗಿ ಇಲ್ಲದ ಗೋಜು ಶುರುವಾಗುವುದೇ ಹೆಚ್ಚು.

good-giveaway

ಪ್ರಶಂಸನೀಯ ಪ್ರಯತ್ನ : ವೀ ಗ್ರೋ ಲಾಸ್‌ ಆ್ಯಂಗಲ್ಸ್, ಹೇಳಿಕೊಳ್ಳುವಂಥದ್ದೇನೂ ಗ್ರೋ ಮಾಡುತ್ತಿಲ್ಲ. ಇದೊಂದು  ಅಂತಾರಾಷ್ಟ್ರೀಯ ಸಮಾಜಸೇವೆ ಸಂಸ್ಥೆ ಆಗಿದ್ದು, ಅಲ್ಲಿನ ಅನುಕೂಲಸ್ಥರೆಲ್ಲ ಸೇರಿ ಕಟ್ಟಿದ ಈ ಸಂಸ್ಥೆ, ಆ ನಗರದ ಹಸಿವಿನಿಂದ ಕಂಗೆಟ್ಟವರಿಗೆ ಆಹಾರ ಒದಗಿಸುವ ಕೆಲಸ ಮಾಡುತ್ತಿದೆ. ಭಾರತದಲ್ಲಿ ವ್ಯತ್ಯಾಸ ಎಂದರೆ, ಅನಗತ್ಯವಾಗಿ ಪುರೋಹಿತರಿಗೆ ದಾನದಕ್ಷಿಣೆ ನೀಡಲಾಗುತ್ತದೆ, ಅಲ್ಲಿ ತೀರಾ ಸೂರು ಸಹ ಇಲ್ಲದವರಿಗೆ. ಇದಕ್ಕಾಗಿ ಅಲ್ಲಿ ಹಣ ಸಂಗ್ರಹಣೆ, ದಾನಿಗಳನ್ನು ಹುಡುಕುವುದು ತೀರಾ ಕಷ್ಟವೇನಲ್ಲ. ಅಮೆರಿಕಾ ಮಂದಿ ಪರಸ್ಪರ ಅರಿತು ಬಾಳುವರು, ಸಹಾಯಕ್ಕೆ ಹಿಂಜರಿಯರು.

modeling-agency-dubai-reference-1

ಬಿಸ್ನೆಸ್ಇದೀಗ ಉಜ್ವಲ! : ಅಂಬಾನಿಯವರಿಗೆ ಎಲ್ಲರೂ ಥ್ಯಾಂಕ್ಸ್ ಹೇಳಬೇಕಾದ್ದೇ! ಏಕೆಂದರೆ ಅವರು ಲಕ್ಷುರಿ ಪ್ರೀವೆಡ್ಡಿಂಗ್ ಫಂಕ್ಷನ್‌ ಹಾಗೂ ಮಹಾ ಲಕ್ಷುರಿ ವೆಡ್ಡಿಂಗ್‌ ಫಂಕ್ಷನ್‌ ನಡೆಸಿ, ಇಡೀ ದೇಶದ ಯುವಜನತೆಗೆ ಹೊಸ ಮಾರ್ಗದರ್ಶನ ನೀಡಿದ್ದಾರೆ. `ಕೆರೆಯ ನೀರನು ಕೆರೆಗೆ ಚೆಲ್ಲಿ….’ ಎಂಬಂತೆ ಜನತೆಯಿಂದ ಪಡೆದ ಲಾಭದ ಹಣವನ್ನು, ಬಿಸ್‌ ನೆಸ್‌ ಮೂಲಕ ಅದೇ ಜನತೆಗೇ ತಲುಪಿಸಿದ್ದಾರೆ. ಇದರಿಂದ ತಿಳಿದು ಬಂದದ್ದು ಎಂದರೆ, ರಾಜರುಗಳ ಕಾಲ ಆಗಿಹೋದರೂ ರಾಜ ಉಳಿದಿದ್ದಾನೆ, ಪ್ರಜೆಗಳೇ ರಾಜನಂತೆ ಕೆಲಸ ನಿಭಾಯಿಸಬೇಕು ಎಂಬುದು. ಹೀಗಾಗಿ ಪ್ರೀವೆಡ್ಡಿಂಗ್‌ ಶೂಟ್‌ ಮಾಡಿಸುವ ಮಾಡೆಲಿಂಗ್‌ ಏಜೆನ್ಸಿಗಳಾದ ದುಬೈ, ಆ್ಯಡ್‌ ಸ್ಕೂಲ್ ‌ಇಂಡಿಯಾ ಇತ್ಯಾದಿ ಸಂಸ್ಥೆಗಳ ಬಿಸ್‌ ನೆಸ್‌ ಇದೀಗ ಉಜ್ವಲ ಆಗುತ್ತಿದೆ. ಪ್ರೀವೆಡ್ಡಿಂಗ್‌ ಶೂಟ್‌ ನಲ್ಲಿ ಲಕ್ಷಾಂತರ ಖರ್ಚು ಮಾಡಿ, ಮದುವೆಗಾಗಿ ಕೋಟ್ಯಂತರ ಖರ್ಚು ಮಾಡಿ, ಎಂಬ ಅವರ ಸಂದೇಶ ದೇಶದ ಜನತೆಗೆ ತಲುಪಿದೆ, ಕಂಗ್ರಾಟ್ಸ್!

the-soapgirls-live-onstage

ಯುವಜನತೆ ಬಯಸುವುದೂ ಇದನ್ನೇ! : ಸೋಪ್‌ ಗರ್ಲ್ಸ್ ಎಂಬ ಹೆಸರಿನಿಂದ ಜನಪ್ರಿಯ ಆಗಿರುವ ಈ ಸಿಂಗರ್‌ ಜೋಡಿ, ಇದೀಗ ಅಮೆರಿಕಾದ ಮನೆಮಾತು! ಪ್ರತಿ ಪರ್ಫಾರ್ಮೆರ್ನ್ಸ್ ನಲ್ಲೂ ಈ ಜೋಡಿ ಅಪಾರ ಜನಸ್ತೋಮ ಸೇರಿಸುತ್ತಿದೆ. ಮಾಯೀ ಮಿಲೀ ಡೆಬ್ರೆ ಜೋಡಿಯಲ್ಲಿ ಸೂಪರ್‌ ಸ್ಪಿರಿಟ್‌ ತುಂಬಿ, ರೆಬಿಲಿಯನ್‌ ಎನಿಸಿದೆ. ತಮ್ಮ ಯಶಸ್ವಿ ಪ್ರವಾಸದ ನಂತರ ಈ ತಂಡ, ಅಮೆರಿಕಾದ ಗಲ್ಲಿ ಗಲ್ಲಿಗಳಲ್ಲಿ ಕಾರ್ಯಕ್ರಮ ನೀಡುತ್ತಿದೆ. ಅಲ್ಲಿನ ಯುವಜನತೆ ಇದನ್ನೇ ಬಯಸುತ್ತಾರೆ. ಪ್ರತಿ ದೇಶದಲ್ಲೂ ಆಧುನಿಕ ಪೀಳಿಗೆ, ತಮ್ಮನ್ನು ಹಿರಿ ತಲೆಗಳು ಅರ್ಥ ಮಾಡಿಕೊಂಡಿಲ್ಲ ಎಂದೇ ಭಾವಿಸುತ್ತದೆ. ಈ ಬೇಸರದಲ್ಲೇ ಯುವಜನತೆ ಡ್ರಿಂಕ್ಸ್, ಡ್ರಗ್ಸ್, ಫ್ರೀ ಸೆಕ್ಸ್ ನ ಮೊರೆ ಹೋಗುತ್ತಿದೆ. ಇವರನ್ನು ಹೆತ್ತವರು, ಸರ್ಕಾರ, ಚಿಂತಕರು ಮೀಡಿಯಾ ಯಾರೇ ಆಗಲಿ ತಿದ್ದಲು ಆಗುತ್ತಿಲ್ಲ.

streets-ahead-menswear-line

ಇದೀಗ ವಾರ್ಡ್ರೋಬ್ನ್ನು ಖಾಲಿ ಮಾಡೋದೇ ಸರಿ : ಸ್ಟ್ರೀಟ್‌ ಅಹೆಡ್‌ ಸಂಸ್ಥೆ, ಮನೆಮಠ ಕಳೆದುಕೊಂಡವರಿಗೆ ಬಟ್ಟೆಗಳನ್ನು ದಾನ ಮಾಡುವ ಚ್ಯಾರಿಟಿ ಸಂಸ್ಥೆ ಏನೂ ಅಲ್ಲ. ಇದು ಹೊಸ ಬಟ್ಟೆಗಳ ಶೋರೂಮಿನ ಒಂದು ಬ್ರಾಂಡ್‌ ಆಗಿದ್ದು, ಇದೀಗ ಅದು ಹೊಸ ರೇಂಜ್‌ ಪ್ರಸ್ತುತಪಡಿಸುತ್ತಿದೆ. ಈಗ ಹೊಸ ಡ್ರೆಸ್‌ ನ್ನು ಇಸ್ತ್ರೀ ಮಾಡಿಯೇ ಧರಿಸಬೇಕು ಎಂದೇನಿಲ್ಲ, ರಿಂಕಲ್ಸ್ ಇರುವಂಥದ್ದೂ ಫ್ಯಾಷನ್‌ ನಲ್ಲಿದೆ. ನೀವು ಸದಾ ಇಟಲಿ ದೇಶದ ಮಿಲಾನ್‌ ನಗರ ಗಮನಿಸುತ್ತಿರಿ, ಅಲ್ಲಿ ಅಂತಾರಾಷ್ಟ್ರೀಯ ಡಿಸೈನರ್‌ ಗಳು ಸದಾ ಹೊಸ ಹೊಸ ಬಗೆಯ ಕಟಿಂಗ್ಸ್ ಪ್ರಸ್ತುತಪಡಿಸುತ್ತಾ, ಇಂದಿನ ಯುವಜನತೆಯನ್ನು ಸೆಳೆಯುತ್ತಿದ್ದಾರೆ. ಬೆಟರ್‌, ನೀವು ನಿಮ್ಮ ದೇಶವೇ ವಾರ್ಡ್‌ ರೋಬ್‌ ನ್ನು ಖಾಲಿ ಮಾಡಿಬಿಡಿ. ಯಾವುದೇ ವಿಖ್ಯಾತ ವಿದೇಶೀ ಬ್ರಾಂಡ್‌ ನ ಕಲೆಕ್ಷನ್ ಅದರಲ್ಲಿ ಇರಿಸಿಕೊಳ್ಳಿ, ಆಗ ಡೈನಿಂಗ್‌ ಟೇಬಲ್ ನಲ್ಲಿ ನಿಮ್ಮ ನೇಮ್ ಡ್ರಾಪಿಂಗ್‌ ಸಲೀಸಾದೀತು!

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ