ರಾಘವೇಂದ್ರ ಅಡಿಗ ಎಚ್ಚೆನ್.

ವಿವಾದ ಸೃಷ್ಟಿಸಿಲು ಸಿದ್ಧವಾಗಿರುವ ವಿರೋಧಿಗಳಿಗೆ ಕಿಚ್ಚ ಸುದೀಪ್ ವಾರ್ನಿಂಗ್ ಕೊಟ್ಟಿದ್ದಾರೆ. ಹುಬ್ಬಳ್ಳಿ ನೆಹರು ಮೈದಾನದಲ್ಲಿ ಮಾರ್ಕ್ ಚಿತ್ರದ ಪ್ರಿ ರಿಲೀಸ್ ಈವೆಂಟ್ ನಡೆಯಿತು. ಈ ವೇಳೆ  ಮಾತನ್ನಾಡಿರುವ ಸುದೀಪ್, ಈ ತಿಂಗಳ 25 ರಂದು ಮಾರ್ಕ್ ಚಿತ್ರ ಬಿಡುಗಡೆ ಆಗಲಿದೆ. ಆದರೆ ಕೆಲವರು ಈ ಸಮಯಕ್ಕಾಗಿ ಕಾಯುತ್ತಿದ್ದಾರೆ. ಅವರಿಗೆ ಹೇಳೋದು ಇಷ್ಟೇ, ಯುದ್ಧಕ್ಕೆ ನಾವು ಸಿದ್ಧ  ಈ ಜರ್ನಿಯಲ್ಲಿ, ಥಿಯೇಟರ್ನಲ್ಲಿ ಒಂದು ಸಿನಿಮಾ ಬಿಡುಗಡೆ ಆಗುತ್ತೆ. ಆದರೆ ಹೊರಗಡೆ ಒಂದು ಪಡೆ ಯುದ್ಧಕ್ಕೆ ರೆಡಿ ಆಗ್ತ ಇದೆ. ಈ ವೇದಿಕೆ ಮೇಲೆ ನಿಂತು ಹೇಳ್ತಾ ಇದ್ದೀನಿ. ಯುದ್ಧಕ್ಕೆ ಸಿದ್ಧ. ಯಾಕೆಂದರೆ ನಾವು ನಮ್ಮ ಮಾತಿಗೆ ಬದ್ಧ. ಎಂದು ಕಿಚ್ಚ ಖಡಕ್ಕಾಗಿ ಹೇಳಿದ್ದಾರೆ.
ವೇದಿಕೆ ಮೇಲೆ ಮಾತನಾಡಿದ ಸುದೀಪ್ ಅವರು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. “2003ರ ನಂತರ ಇಲ್ಲಿಗೆ ಬಂದು ಕಾರ್ಯಕ್ರಮ ಮಾಡಲು ಇವತ್ತೇ ಅವಕಾಶ ಸಿಕ್ಕಿದ್ದು. ಹುಬ್ಬಳ್ಳಿಯ ಪ್ರೀತಿ ಮತ್ತು ಬೆಂಬಲ ಯಾವತ್ತೂ ಮರೆಯಲು ಸಾಧ್ಯವಿಲ್ಲ. ಇಲ್ಲಿಂದ ಆಡುವ ಮಾತು ಇಡೀ ಕರ್ನಾಟಕಕ್ಕೆ ತಟ್ಟಲಿದೆ” ಎಂದು ಭಾವುಕರಾಗಿ ನುಡಿದರು.
“ಕೆಲವೊಮ್ಮೆ ಸೈಲೆಂಟ್ ಆಗಿರೋದು ಒಳ್ಳೆಯದೋ ಕೆಟ್ಟದ್ದೋ ಗೊತ್ತಿಲ್ಲ. ನನ್ನ ಸ್ನೇಹಿತರು ನೀವೆಲ್ಲ ಚೆನ್ನಾಗಿರಬೇಕು ಎಂಬ ಉದ್ದೇಶದಿಂದ, ನಾವೆಲ್ಲರೂ ಚೆನ್ನಾಗಿರಬೇಕು ಎಂಬ ಉದ್ದೇಶಗೋಸ್ಕರ ನಾನು ಬಾಯಿ ಮುಚ್ಚಿಕೊಂಡು ಇದ್ದೇ ಹೊರತು, ಬಾಯಿ ಇಲ್ಲ ಅಂತಲ್ಲ.
“ಬಹಳಷ್ಟು ಕಲ್ಲಿನ ತೂರಾಟ, ನಿನ್ನ ಸಹನೆಯಿಂದಾಗಿ ನಿಮ್ಮ ಮೇಲೆ ಬೀಳುತ್ತಲೇ ಇರುತ್ತೆ. ಅದನ್ನು ತಾವು ತಡ್ಕೊಂಡು ಬರ್ತಾನೇ ಇದ್ದೀರಿ. ಈಗ ಹೇಳ್ತಾ ಇದ್ದೀನಿ. ಅದನ್ನು ತಡಿಯೋ ತನಕ ತಡ್ಕೊಂಡು ಇರಿ. ಮಾತನ್ನಾಡೋ ಟೈಮ್ನಲ್ಲಿ ಮಾತನ್ನಾಡಿ.
“ಮಾರ್ಕ್ ಒಂದು ಅದ್ಭುತವಾದ ಸಿನಿಮಾ. ವಿಜಯ್ ಕಾರ್ತಿಕೇಯ ತಾವು ಎಲ್ಲಿದ್ದರೂ ಥ್ಯಾಂಕ್ಯೂ. ಡಿಸೆಂಬರ್ 25 ರಂದು ಸಿನಿಮಾ ರಿಲೀಸ್ ಆಗ್ತಿದೆ. ಹುಬ್ಬಳ್ಳಿ ಥಿಯೇಟರ್ನಲ್ಲಿ ಕೇಳಿ ಬರುವ ಕೂಗು ನನಗೆ ಬೆಂಗಳೂರಿನಲ್ಲಿ ಕೇಳಿಸಬೇಕು. ” ಎಂದು ಸುದೀಪ್ ಹೇಳಿದರು.
ಚಿತ್ರತಂಡದ ಸದಸ್ಯರು, ತಂತ್ರಜ್ಞರು ಮತ್ತು ಗಣ್ಯರ ಸಮ್ಮುಖದಲ್ಲಿ ನಡೆದ ಈ ಕಾರ್ಯಕ್ರಮವು ‘ಮಾರ್ಕ್’ ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ