ಸರಸ್ವತಿ*

ಕಳೆದವರ್ಷ ಆದಿತ್ಯ ಅಭಿನಯದ “ಕಾಂಗರೂ” ಚಿತ್ರ ತೆರೆಕಂಡಿತ್ತು. ಈಗ ಅದೇ ತಂಡದಿಂದ ನೂತನ ಚಿತ್ರವೊಂದು ಆರಂಭವಾಗಲಿದೆ. ಡಿಸೆಂಬರ್ 25 ರಂದು ಈ ಚಿತ್ರದ ಸ್ಕ್ರಿಪ್ಟ್ ಪೂಜೆ ನಡೆದಿದೆ.

ಚೆನ್ನಕೇಶವ ಬಿ.ಸಿ.ಕುಣಿಗಲ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ, ಅಪಾರ ವೆಚ್ಚದಲ್ಲಿ ಅದ್ದೂರಿಯಾಗಿ ಈ ಚಿತ್ರವನ್ನು ನಿರ್ಮಿಸಲು ಮುಂದಾಗಿದ್ದಾರೆ. ಕಿಶೋರ್ ಮೇಗಳಮನೆ ಕಥೆ ಮತ್ತು ಚಿತ್ರಕತೆ ಜೊತೆಗೆ ನಿರ್ದೇಶನ ಮಾಡುತ್ತಿದ್ದಾರೆ. “ಕೆ.ಜಿ.ಎಫ್” ನಂತಹ ವಿಶ್ವಪ್ರಸಿದ್ದ ಚಿತ್ರದ ಸಂಗೀತ ನಿರ್ದೇಶಕ ರವಿ ಬಸ್ರೂರ್ ಸಂಗೀತ ಸಂಯೋಜಿಸುತ್ತಿರುವ ಈ ನೂತನ ಚಿತ್ರಕ್ಕೆ ಜನಪ್ರಿಯ ಸಂಭಾಷಣೆಕಾರ ಮಾಸ್ತಿ ಸಂಭಾಷಣೆ ಬರೆಯುತ್ತಿದ್ದಾರೆ.

kangaru 1

ನಮ್ಮ “ಕಾಂಗರೂ” ಚಿತ್ರಕ್ಕೆ ತಾವೆಲ್ಲಾ ‌ನೀಡಿದ ಪ್ರೋತ್ಸಾಹಕ್ಕೆ ಆಬಾರಿ. ಇಂದು ಅದೇ ತಂಡದ ಎರಡನೇ ಪ್ರಯತ್ನಕ್ಕೆ ಚಾಲನೆ ದೊರಕಿದೆ. ಈ ನೂತನ ಚಿತ್ರಕ್ಕೆ ರವಿ ಬಸ್ರೂರ್ ಸಂಗೀತ ನೀಡುತ್ತಿರುವುದು ಹಾಗು ಮಾಸ್ತಿ ಅವರು ಸಂಭಾಷಣೆ ಬರೆಯುತ್ತಿರುವುದು ಖುಷಿಯಾಗಿದೆ. ಸದ್ಯದಲ್ಲೇ ಶೀರ್ಷಿಕೆ ಅನಾವರಣ ಮಾಡುತ್ತೇವೆ. ಅದೇ ಸಂದರ್ಭದಲ್ಲಿ ತಾರಾಬಳಗದ ಬಗ್ಗೆ ಮಾಹಿತಿ ನೀಡುತ್ತೇವೆ ಎಂದು ನಿರ್ದೇಶಕ ಕಿಶೋರ್ ಮೇಗಳಮನೆ ತಿಳಿಸಿದ್ದಾರೆ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ