ರಾಘವೇಂದ್ರ ಅಡಿಗ ಎಚ್ಚೆನ್.

2025ನೇ ವರ್ಷ ಮುಗಿಯುತ್ತಾ ಬಂದಿದ್ದು ಈ ವರ್ಷ ತೆರೆಗೆ ಬಂದ ನೂರಾರು ಚಿತ್ರಗಳ ಪೈಕಿ ಕೆಲವೇ ಕೆಲವು ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಗೆದ್ದಿದ್ದರೂ ಇನ್ನಷ್ಟು ಚಿತ್ರಗಳು ಪ್ರೇಕ್ಷಕರ , ಚಿತ್ರ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿದೆ. ಅಂತಹಾ ಕೆಲವು ಚಿತ್ರಗಳು ಅದರ ಹಿಂದಿನ ನಿರ್ದೇಶಕರ ಪರಿಶ್ರಮ ಕುರಿತು ನಾವಿಲ್ಲಿ ತಿಳಿಯೋಣ..
ಕೇಶವ ಮೂರ್ತಿ ನಿರ್ದೇಶನ ಮಾಡಿರುವ ‘ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು’ ಸಿನಿಮಾ ಕಳ್ಳತನದ ಕಥೆ ಇರುವ ಸಿನಿಮಾ. ಹಾಗಂತ ಒಳ್ಳೆಯ ಮತ್ತು ಕೆಟ್ಟ ಪಾತ್ರಗಳ ಬಗ್ಗೆ ಜಡ್ಜ್ಮೆಂಟಲ್ ಆದಂತಹ ಸಿನಿಮಾ ಅಲ್ಲ. ಮಾಮೂಲಿ ಸಿನಿಮಾಗಳಿಗಿಂತಲೂ ಡಿಫರೆಂಟ್ ಆಗಿ ಈ ಚಿತ್ರ ಮೂಡಿಬಂದಿತ್ತು.ಹೊಸಬರು ಮತ್ತು ಅನುಭವಿಗಳು ಸೇರಿ ಈ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ. ಸಿನಿಮಾದ ಥೀಮ್ ಮತ್ತು ಅದನ್ನು ಪ್ರಸ್ತುತಪಡಿಸಿದ ರೀತಿಯಿಂದ ಸಿನಿಮಾ ವೀಕ್ಷಿಸಿದ್ದ ಪ್ರೇಕ್ಷಕರಿಗೆ ಇಷ್ಟವಾಗಿತ್ತು.

image (4)

ನಿರ್ದೇಶಕ ಕುಲದೀಪ್ ಕಾರಿಯಪ್ಪಅವರ ‘ನೋಡಿದವರು ಏನಂತಾರೆ’ ಸಿನಿಮಾ ಒಂದು ಭಿನ್ನವಾದ ಪ್ರಯತ್ನ . ನಟ ನವೀನ್ ಶಂಕರ್ ಅಭಿನಯದಲ್ಲಿ  ಭಾವ ತೀವ್ರತೆಗೆ ಹೆಚ್ಚು ಒತ್ತು ನೀಡಿರುವ ಈ ಸಿನಿಮಾವನ್ನು ನಿಧಾನಗತಿಯಲ್ಲಿ ಕಟ್ಟಿಕೊಡಲಾಗಿದ್ದರೂ ಚಿತ್ರಪ್ರೇಮಿಗಳಿಗೆ ಇಷ್ತವಾಗಿತ್ತು. ಈ ಮೂಲಕ ನಿರ್ದೇಶಕರು ಕನ್ನಡದ ಭರವಸೆಯ ನಿರ್ದೇಶಕರು ಎನಿಸಿಕೊಂಡರು.
ನಟ ರಕ್ಷಿತ್ ಶೆಟ್ಟಿ ತಮ್ಮ ಪರಂವಃ ಪಿಕ್ಚರ್ಸ್ ಮೂಲಕ ನಿರ್ಮಿಸಿದ್ದ ಚಿತ್ರ ‘ಮಿಥ್ಯ’. ಹೆತ್ತವರನ್ನು ಕಳೆದುಕೊಂಡ ಮಿಥುನ್ ಎಂಬ ಹುಡುಗನ ಹೊಸ ಕನಸ್ಸಿನ ಕಥಾಹಂದರ ಹೊಂದಿರುವ ಈ ಚಿತ್ರ ಹಲವು ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರಶಂಸೆ ಗಳಿಸಿತ್ತು.  ಸುಮಂತ್ ಭಟ್ ನಿರ್ದೇಶನದ ಈ ಚಿತ್ರ ಈವರ್ಷ ಬಿಡುಗಡೆಯಾಗಿ ಚಿತ್ರ ವಿಮರ್ಶಕರ ಮೆಚ್ಚುಗೆ ಗಳಿಸಿದ ಚಿತ್ರಗಳ ಸಾಲಿನಲ್ಲಿದೆ.

image (5)

ವಿನೋದ್ ಪ್ರಭಾಕರ್, ಸೋನಲ ಮಾಂಟರೋ ಅಭಿನಯದ ನವೀನ್ ರೆಡ್ಡಿ ನಿರ್ದೇಶನದ ಮಾದೇವ ಸಿನಿಮಾ ಈ ವರ್ಷದ ಜೂನ್ ನಲ್ಲಿ ತೆರೆಕಂಡು ಐವತ್ತು ದಿನ ಪೂರೈಸಿ ಯಶಸ್ವಿಯಾಗಿತ್ತು. ಈ ಮೂಲಕ ವಿನೋದ್ ಪ್ರಭಾಕರ್ ತಮ್ಮೊಳಗಿನ ನಟನಾ ಸಾಮರ್ಥ್ಯದ ಪ್ರದರ್ಶನ ಮಾಡಿದ್ದರು.  ಇದು ಈವರ್ಷ ಗಮನ ಸೆಳೆದ ಚಿತ್ರಗಳ ಪೈಕಿ ಒಂದೊಳ್ಳೆಯ ಸಿನಿಮಾ ಎನ್ನಬಹುದು.
‘ರಾಮಾ ರಾಮಾ ರೆ’, ‘ಒಂದಲ್ಲಾ ಎರಡಲ್ಲಾ’ ಸಿನಿಮಾಗಳ ಖ್ಯಾತಿಯ ನಿರ್ದೇಶಕ ಡಿ.ಸತ್ಯಪ್ರಕಾಶ್‌ ನಿರ್ದೇಶನದ ಎಕ್ಸ್‌ ಆಂಡ್‌ ವೈ ಚಿತ್ರ ವಿಭಿನ್ನ ಶೈಲಿಯ ಕಥೆಯೊಂದಿಗೆ ಬಂದು ಈ ವರ್ಷದಲ್ಲಿ ತೆರೆಗೆ ಬಂದ ವಿಶಿಷ್ಟ ಸಿನಿಮಾಗಳ ಪೈಕಿ ಒಂದಾಗಿ ಕಾಣಿಸಿಕೊಂಡಿದೆ.

image (6)

ಪುನೀತ್ ರಂಗಸ್ವಾಮಿ ನಿರ್ದೇಶನದ, ನಟ ರಾಣಾ ಮತ್ತು ಪ್ರಿಯಾಂಕಾ ಆಚಾರ್ ಅಭಿನಯದ ಏಳುಮಲೆ ಎನ್ನುವ ಅದ್ಭುತ ಸಿನಿಮಾ ಈ ವರ್ಷ ಜುಲೈನಲ್ಲಿ ತೆರೆಗೆ ಬಂದಿದ್ದು  · ಆರಂಭದಿಂದ ಕೊನೆಯವರೆಗೂ ಎಲ್ಲೂ ಬೋರ್ ಹೊಡೆಸದಂತೆ ಉತ್ತಮವಾದ ಸಿನಿಮಾ ಆಗಿತ್ತು. ನೈಜ ಘಟನೆಯ ಆಧಾರದಲ್ಲಿ ಪ್ರೀತಿ, ಕುತೂಹಲ ಮತ್ತು ತಿರುವುಗಳನ್ನು ಒಳಗೊಂಡ ಕಥಾಹಂದರದೊಂದಿಗೆ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನದಲ್ಲಿ ಯಶಸ್ವಿಯಾಗಿತ್ತು.
ನೈಜ ಘಟನೆಗಳಿಂದ ಪ್ರೇರಿತವಾಗಿ ತಯಾರಾದ ಸಿನಿಮಾ  ‘ಹೆಬ್ಬುಲಿ ಕಟ್’  ರಿಯಲಿಸ್ಟಿಕ್ ಆಗಿ ಮೂಡಿಬಂದ ಜೊತೆಗೆ ಸಾಕಷ್ಟು ಮನರಂಜನೆ ಕೂಡ ಇದ್ದ ಚಿತ್ರವಾಗಿತ್ತು. ಹೊಸ ನಿರ್ದೇಶಕ ಭೀಮರಾವ್ ಅವರು ಈ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದರು. ಕಂಟೆಂಟ್ ಮೂಲಕ ಸುದ್ದಿ ಮಾಡಿದ ಕನ್ನಡ ಚಿತ್ರಗಳ ಪೈಕಿ ಈ ವರ್ಷದ ಒಂದು ತಾಪ್ ಸಿನಿಮಾ ಆಗಿ  ʼಹೆಬ್ಬುಲಿ ಕಟ್ʼ.ನಿಂತಿತ್ತು. ಉತ್ತರ ಕರ್ನಾಟಕ ಭಾಗದ ಪ್ರತಿಭೆಗಳ ಈ ಚಿತ್ರಕ್ಕೆ ಸತೀಶ್ ನೀನಾಸಂ ಸಾಥ್ ಕೊಟ್ಟಿದ್ದರು. ಸತೀಶ್ ಪಿಕ್ಚರ್ ಹೌಸ್ ಬ್ಯಾನರ್‌ನಡಿ ʼಹೆಬ್ಬುಲಿ ಕಟ್ʼ ಚಿತ್ರ ಅರ್ಪಣೆ ಮಾಡಲಾಗಿತ್ತು.
ಈ ವರ್ಷದ ಅಚ್ಚರಿಯ ಗೆಲುವು ಸಾಧಿಸಿದ ಸು ಫ್ರಮ್ ಸೋ ಮೂಲಕ ಡೈರೆಕ್ಟರ್ ಜೆ ಪಿ ತುಮ್ಮಿನಾಡ್ ತಾವೊಬ್ಬ ಭರವಸೆಯ ನಿರ್ದೇಶಕರಾಗಿ ಗುರುತಿಸಿಕೊಡರು. ರಾಜ್ ಬಿ ಶೆಟ್ಟಿ ಅಭಿನಯದ ‘ಸು ಫ್ರಮ್ ಸೋ’ ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಗಳಿಕೆ ಮಾಡಿ, ಹೊಸ ಹೊಸ ದಾಖಲೆಗಳನ್ನು ಬರೆದಿತ್ತು.
ವಿರೇನ್ ಸಾಗರ್ ಬಗಾಡೆ ನಿರ್ದೇಶನದ ‘ಕೈಟ್ ಬ್ರದರ್ಸ್’ ಸಿನಿಮಾ ಕೂಡ ಸಾಕಷ್ಟು ಗಳಿಕೆ ಕಾಣದಿದ್ದರೂ ಗಮನ ಸೆಳೆದ ಚಿತ್ರಗಳ ಸಾಲಿನಲ್ಲಿದೆ.  ಮಕ್ಕಳ ದಿನಾಚರಣೆಯ ಪ್ರಯುಕ್ತ ನವೆಂಬರ್‌ 14ರಂದು ಚಿತ್ರ ತೆರೆಗೆ ಬಂದಿತ್ತು, ಪ್ರಣೀಲ್‌ ಮತ್ತು ಸಮರ್ಥ ಎಂಬ ಪುಟಾಣಿಗಳಿಬ್ಬರೂ ಅಚ್ಚ ಉತ್ತರ ಕರ್ನಾಟಕ ಭಾಷೆಯ ಮಾತುಗಳು, ನಟನೆ ಪ್ರೇಕ್ಷಕರ ಮನಗೆದ್ದಿತ್ತು.
ಲಿಖಿತ್ ಶೆಟ್ಟಿ, ಖುಷಿ ರವಿ ಹಾಗೂ ತೇಜಸ್ವಿನಿ ಶರ್ಮಾ, ರಂಗಾಯಣ ರಘು ನಟನೆಯ ‘ಫುಲ್ ಮೀಲ್ಸ್’ ಈ ವರ್ಷ ತೆರೆಗೆ ಬಂದ ಉತ್ತಮ ಮನರಂಜನಾ ಚಿತ್ರಗಳಲ್ಲಿ ಒಂದಾಗಿದೆ. ವೆಡ್ಡಿಂಗ್ ಫೋಟೋಗ್ರಾಫರ್ ನೊಬ್ಬ ಪ್ರೀತಿಯ ಬಲೆಗೆ ಬೀಳುವ ತ್ರಿಕೋನ ಪ್ರೇಮ ಕಥಾಹಂದರವನ್ನು ಹೊಂದಿರುವ  ಎನ್ ವಿನಾಯಕ ನಿರ್ದೇಶಿಸಿರುವ ‘ಫುಲ್ ಮೀಲ್ಸ್’ ಚಿತ್ರಕ್ಕೆ ಪ್ರೇಕ್ಷಕರಿಂದ ಫುಲ್ ಮಾರ್ಕ್ ಸಿಕ್ಕಿತ್ತು. ಅಲ್ಲದೆ ನಿರ್ದೇಶಕ ವಿನಾಯಕ್ ತಾವೊಬ್ಬ ಭರವಸೆಯ ನಿರ್ದೇಶಕರಾಗಿ ಬೆಳೆಯುವ ಲಕ್ಷಣವನ್ನು ತೋರಿಸಿದ್ದರು.
ಇನ್ನು ಈ ವರ್ಷ ತೆರೆಕಂಡ “ಲವ್ ಯೂ ಮುದ್ದು” “ಪಾಠಶಾಲಾ”, “ಕಂಗ್ರಾಜುಲೇಷನ್ಸ್ ಬ್ರದರ್” ಲವ್ ಒಟಿಪಿ, ಫಾರೆಸ್ಟ್, ಅಪಾಯವಿದೆ ಎಚ್ಚರಿಕೆ, ಭಾವ ತೀರ ಯಾನ, ಅನಾಮಧೇಯ ಅಶೋಕ್ ಕುಮಾರ್, ಎಲ್ಲೋ ಜೋಗಪ್ಪ ನಿನ್ನರಮನೆ ಇನ್ನೂ ಕೆಲವು ಸಿನಿಮಾಗಳು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಇದಲ್ಲದೆ  ತಾಯಿ ಕಸ್ತೂರ್‌ ಗಾಂಧಿ, ಅಮೃತಮತಿ , ಪದ್ಮಗಂದಿ ಅಂತಹಾ ಮಹತ್ವದ ಕಲಾತ್ಮ ಚಿತ್ರಗಳು ಈ ವರ್ಷ ತೆರೆಕಂಡವು.

ಇನ್ನು ಭಾರೀ ನಿರೀಕ್ಷೆ ಹುಟ್ಟಿಸಿಯೂ ನಿರಾಸೆಯಾಗುವಂತೆ ಮಾಡಿದ ಕೆಲವಾರು ಸಿನಿಮಾಗಳೂ ಈ ವರ್ಷ ತೆರೆಕಂಡವು. ಅವುಗಳ ಪೈಕಿ ನಾಗಶೇಖರ್ ನಿರ್ದೇಶನದ ಶ್ರೀನಗರ ಕಿಟ್ಟಿ, ರಚಿತಾ ರಾಮ್ ಅಭಿನಯದ “ಸಂಜು ವೆಡ್ಸ್ ಗೀತಾ 2” ಮೊದಲ ಸ್ಥಾನ ಪಡೆಯುತ್ತದೆ. ಎರಡು ಬಾರಿ ರಿಲೀಸ್ ಮಾಡಲಾಯಿತಾದರೂ ಚಿತ್ರ ನಿರೀಕ್ಷಿತ ಯಶಸ್ಸು ಕಾಣಲಿಲ್ಲ.  ಲೂಸ್ ಮಾದ ಯೋಗಿ ನಟನೆಯ “ಸಿದ್ಲಿಂಗು 2” ಸಹ ಕುತೂಹಲ ಮೂಡಿಸಿದ್ದು ನಿಜವಾದರೂ ಬಿಡುಗಡೆ ನಂತರ ನಿರಾಶೆ ಉಂಟುಮಾಡಿತು. ಇದರೊಡನೆ ಯೋಗರಾಜ್ ಭಟ್ ನಿರ್ದೇಶನದ “ಮನದ ಕಡಲು”, ಯಶ್ ತಾಯಿ ಪುಷ್ಪಾ ಅರುಣ್ ಕುಮಾರ್ ನಿರ್ಮಾಣದ ಪ್ರಥಮ ಚಿತ್ರ “ಕೊತ್ತಲವಾಡಿ” ಸಿಂಪಲ್ ಸುನಿ ನಿರ್ದೇಶನದ “ಗತವೈಭವ” ಸಿನಿಮಾಗಳು ನಿರೀಕ್ಷೆ ಮುಡಿಸಿ ನಿರಾಶೆಗೊಳಿಸಿದ ಚಿತ್ರಗಳ ಸಾಲಿನಲ್ಲಿದೆ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ