ಮಕ್ಕಳ ಉತ್ತಮ ವಿಕಾಸಕ್ಕಾಗಿ ಬ್ಯಾಲೆನ್ಸ್ಡ್ ಡಯೆಟ್ಇರಬೇಕಾದುದು ಅತ್ಯಗತ್ಯ, ಕುರಿತು ತಜ್ಞರ ಅಭಿಪ್ರಾಯ ತಿಳಿಯೋಣವೇ…….?

ಮಕ್ಕಳ ಆರೋಗ್ಯಕರ ಬೆಳವಣಿಗೆಗಾಗಿ ಪ್ರೋಟೀನ್‌, ವಿಟಮಿನ್‌, ಮಿನರಲ್ಸ್, ಕಾರ್ಬೊಹೈಡ್ರೇಟ್‌, ಕೊಬ್ಬು, ಕಬ್ಬಿಣಾಂಶ, ಫೈಬರ್‌, ಕ್ಯಾಲ್ಶಿಯಂ ಇತ್ಯಾದಿ ಎಲ್ಲಾ ಪೋಷಕಾಂಶಗಳ ಅಗತ್ಯವಿರುತ್ತದೆ. ಇವೆಲ್ಲ ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಪೂರಕವಲ್ಲದೆ, ಮಕ್ಕಳ ಎತ್ತರ ಹೆಚ್ಚಲಿಕ್ಕೂ ಸಹಾಯಕ. ಹೀಗಾಗಿ ಪ್ರತಿ ಮಗುವಿನ ದೈನಂದಿನ ಆಹಾರದಲ್ಲಿ ಈ ಅಂಶಗಳೆಲ್ಲ ಇರಲೇಬೇಕು.

ಲಾಭಕರ ಆಹಾರ

ಮಕ್ಕಳ ಬೆಳವಣಿಗೆಗೆ ಪೂರಕ ಆಗುವಂಥ ಹಾಲು, ಹಣ್ಣು, ಕಡಿಮೆ ಕೊಬ್ಬಿನಾಂಶದ ಮೊಸರು, ಬೆಣ್ಣೆ, ಮೊಟ್ಟೆ, ಮಾಂಸ (ವೈಟ್ ಮೀಟ್‌ ಬೆಟರ್‌), ತಾಜಾ ಹಸಿ ತರಕಾರಿ, ಹಸಿರು ಸೊಪ್ಪು, ಮೊಳಕೆ ಕಟ್ಟಿದ ಕಾಳು, ಡ್ರೈ ಫ್ರೂಟ್ಸ್ ಇತ್ಯಾದಿಗಳ ಜೊತೆಗೆ ಸಾವಯವ ತರಕಾರಿ ಕೊಡುವುದೂ ಅಷ್ಟೇ ಮುಖ್ಯ. ಸಾಧ್ಯವಾದಷ್ಟೂ ಮಕ್ಕಳಿಗೆ ನೀಡುವ ಎಲ್ಲಾ ತರಕಾರಿ, ಹಣ್ಣು, ಆಹಾರ ಪದಾರ್ಥಗಳು ಆಗ್ಯಾರ್ನಿಕ್‌ ಆಗಿರುವಂತೆ ನೋಡಿಕೊಳ್ಳಿ. ಇದು ಅವರ ಆರೋಗ್ಯಕರ ಬೆಳವಣಿಗೆಗೆ ಅತ್ಯಗತ್ಯ ಬೇಕು.

ಈ ಕುರಿತು ತಜ್ಞವೈದ್ಯರ ಅಭಿಪ್ರಾಯ ಎಂದರೆ, ಮಕ್ಕಳ ಉತ್ತಮ ಬೆಳವಣಿಗೆಗಾಗಿ, ಅವರ ಆಹಾರಾಭ್ಯಾಸ (ಡಯೆಟ್‌)ದತ್ತ ತೀಕ್ಷ್ಣ ನಿಗಾ ವಹಿಸಿರಿ. ಸಣ್ಣ ವಯಸ್ಸಿನ ಮಕ್ಕಳ ಆಹಾರ ಎಂದೂ ಫ್ಯಾನ್ಸಿ ಆಗದಿರಲಿ. ಮಕ್ಕಳ ಬೆಳಗಿನ ಉಪಾಹಾರ, ಅವರ ಶಾಲೆಯ ಟಿಫನ್‌ ಬಾಕ್ಸಿಗೆ ತಯಾರಿಸುವ ಆಹಾರದಲ್ಲೂ ಪ್ರೋಟೀನ್‌, ಇಡಿಯಾದ ಕಾಳು, ಬೇಳೆ, ತರಕಾರಿ, ಹಾಲು, ಹಣ್ಣು, ಹಾಲಿನ ಪದಾರ್ಥಗಳು (ಚೀಸ್‌, ಪನೀರ್‌ ಇತ್ಯಾದಿ) ಅಡಗಿರುವಂಥ ಸ್ಯಾಂಡ್ ವಿಚ್‌, ಇಡ್ಲಿ, ದೋಸೆ, ರೊಟ್ಟಿಗಳನ್ನು ಮಾಡಿಕೊಡಿ. ಜೊತೆಗೆ ಸೇಬು, ದಾಳಿಂಬೆ, ದ್ರಾಕ್ಷಿ, ಕಿತ್ತಳೆ, ಬಾಳೆಹಣ್ಣು ಇತ್ಯಾದಿ ಪೌಷ್ಟಿಕ ಆಹಾರ ಕೊಡುವುದೇ ಸರಿ.

ಮಕ್ಕಳ ಆಹಾರದಲ್ಲಿ ಪ್ರೋಟೀನ್

ಮಕ್ಕಳ ಆಹಾರದಲ್ಲಿ ಸದಾ ಪ್ರೋಟೀನಿನ (ಸಸಾರಜನಕ) ಅಂಶ ಹೆಚ್ಚಾಗಿರುವಂತೆ ನೋಡಿಕೊಳ್ಳಿ. ಅವರ ಪೋಷಣೆಗೆ ಇದು ಅತ್ಯಗತ್ಯ. ಹಾಲು, ಬೇಳೆ, ಮೊಳಕೆ ಕಟ್ಟಿದ ಕಾಳು, ಮೊಸರು, ಮೊಟ್ಟೆ, ಹಸಿ ಕಡಲೆಕಾಯಿ, ಪನೀರ್‌, ನಾನ್‌ ವೆಜ್‌, ಬಾದಾಮಿ ಇತ್ಯಾದಿ ಬಳಸಿಕೊಳ್ಳಿ. ನಿಮ್ಮ ಮಗು ಊಟ ಮಾಡಲು ರಚ್ಚೆ ಹಿಡಿಯುತ್ತದೆಯೇ? ಆಗ ನೀವು ಅದಕ್ಕೆ ಇಷ್ಟವಾಗುವಂಥ ರೀತಿಯಲ್ಲಿ ಈ ಪ್ರೋಟೀನ್‌ ಅಂಶಗಳನ್ನು ಆಹಾರದಲ್ಲಿ ಬೆರೆತುಕೊಳ್ಳುವಂತೆ ಮಾಡಿ. ನೀವು ಬೇಕ್ಡ್ ಚಿಕನ್‌, ಮೊಸರು, ಪನೀರ್‌, ತಾಜಾ ತರಕಾರಿಗಳ ತುಂಡುಗಳೊಂದಿಗೆ ಮಕ್ಕಳಿಗೆ ರಿಚ್‌ ಗ್ರಾಂಡ್‌ ಆದ, ಸತ್ವಯುತ, ಸ್ವಾದಿಷ್ಟ ಸ್ನಾಕ್ಸ್ ತಯಾರಿಸಬಹುದು. ಇದಕ್ಕಾಗಿ ಫಿಶ್‌ ಫಿಂಗರ್‌ ಸಹ ಟ್ರೈ ಮಾಡಿ ನೋಡಿ. ಮೀನಿನ ಮುಳ್ಳನ್ನು ತೆಗೆದ ನಂತರವೇ ಮಕ್ಕಳಿಗೆ ಕೊಡಬೇಕೆಂದು ನೆನಪಿರಲಿ. ಇದು ಒಮೇಗಾ-3 ಅಂಶದಿಂದ ತುಂಬಿರುತ್ತದೆ.

ಇದರ ಜೊತೆಗೆ ನೀವು ಮಕ್ಕಳಿಗೆ ಬ್ರೌನ್‌ ಬ್ರೆಡ್‌ ಗೆ ಪೀನಟ್‌ ಬಟರ್‌ ಸವರಿ ಟೋಸ್ಟ್ ಮಾಡಿ ಕೊಡಬಹುದು. ಇನ್ನಿತರ ಮೂಲಗಳೆಂದರೆ ಬಟರ್‌, ಸೂರ್ಯಕಾಂತಿ ಬೀಜ, ಬಾದಾಮಿ, ಗೋಡಂಬಿಗಳನ್ನು ಆಗಾಗ ಬಳಸುತ್ತಿರಿ. ಅಪರೂಪಕ್ಕೆ ಕೆಲವು ಮಕ್ಕಳಿಗೆ ಪೀನಟ್‌ ಅಲರ್ಜಿ ಆಗಬಹುದು, ಅಂಥವರಿಗೆ ಪೀನಟ್‌ ಬಟರ್‌ ಕೊಡಬೇಡಿ. ಪ್ರೋಟೀನ್‌ ಅಂಶದ ಕೊರತೆ ಆದರೆ ಮಕ್ಕಳ ಮೂಳೆಯ ಬೆಳವಣಿಗೆ ಸರಿಹೋಗದು ಎಂಬುದನ್ನು ನೆನಪಿಡಿ.

ಕಾರ್ಬೊಹೈಡ್ರೇಟ್ಧಾರಾಳವಿರಲಿ

ಬೆಳೆಯುವ ಮಕ್ಕಳಿಗೆ ಕಾರ್ಬೊಹೈಡ್ರೇಟ್‌ ಇಂಧನದ ಕೆಲಸ ಮಾಡುತ್ತದೆ. ಪಿಷ್ಟ (ಸ್ಟಾರ್ಚ್‌) ತುಂಬಿರುವ ಸಾಮಗ್ರಿಗಳಾದ ಆಲೂ, ಸಿಹಿಗೆಣಸು, ಜೋಳ, ಗೋಧಿ, ಅಕ್ಕಿ ಮುಂತಾದವೇ ಇದರ ಮೂಲ. ಎಂದಿನ ಇಡ್ಲಿ, ದೋಸೆ, ರೊಟ್ಟಿಗಳ ಜೊತೆ ಇದರಿಂದ ನೀವು ಅವರಿಗೆ ಕಟ್‌ ಲೆಟ್‌, ಮಿಲ್ಕ್ ಶೇಕ್‌ ಇತ್ಯಾದಿ ಮಾಡಿ ಕೊಡಿ. ಸಕ್ಕರೆ ಅಂಶ ಸಾಧ್ಯವಾದಷ್ಟೂ ಕಡಿಮೆ ಇರಲಿ. ಲ್ಯಾಕ್ಟೋಸ್‌ ಅಂಶ ತುಂಬಿರುವ ಹಾಲು, ಮಗು ಇತರ ಆಹಾರ ಸೇವಿಸದಿದ್ದಾಗ ಬಲು ಉಪಕಾರಿ. ಇದನ್ನು ಹಣ್ಣಿನ ಜೊತೆ ಬೆರೆಸಿ ಮಿಲ್ಕ್ ಶೇಕ್‌ ಮಾಡಿ ಕೊಡಿ. ಇಷ್ಟು ಮಾತ್ರವಲ್ಲದೆ, ಅನ್ನದ ಬಗೆ ಬಗೆಯ ಡಿಶ್‌, ರೊಟ್ಟಿ, ಬ್ರೆಡ್‌, ಓಟ್ಸ್, ಬೇಳೆ, ಸೇಬು, ಸ್ಟ್ರಾಬೆರಿ, ಬಾಳೆಹಣ್ಣು ಸಹ ಕೊಡಬಹುದು.

ವಿಟಮಿನ್ಸಹ ಮುಖ್ಯ

ಒಂದು ಮಗುವಿನ ಆರೋಗ್ಯಕರ ಬೆಳವಣಿಗೆ ಅದರ ಆಹಾರವನ್ನೇ ಆಧರಿಸಿದೆ. ಇದರಲ್ಲಿ ವಿಟಮಿನ್‌ ಪ್ರಮುಖ ಪಾತ್ರ ವಹಿಸುತ್ತದೆ. ವಿಟಮಿನ್‌ಮೂಳೆಗಳ ಬೆಳವಣಿಗೆಗೆ ಪೂರಕ. ಇದರಿಂದ ನಮ್ಮ ಕಣ್ಣಿನ ದೃಷ್ಟಿ ಎಷ್ಟೋ ಚುರುಕಾಗಿ, ಇಮ್ಯುನಿಟಿ ಸ್ಟ್ರಾಂಗ್‌ ಆಗುತ್ತದೆ. ಇದು ಸೋಂಕಿನಿಂದಲೂ ಮಕ್ಕಳನ್ನು ರಕ್ಷಿಸುತ್ತದೆ. ನಿಮಗೆ ಹಾಲು, ಚೀಸ್‌, ಪನೀರ್‌, ಬೆಣ್ಣೆ, ಕ್ಯಾರೆಟ್‌, ಸಿಹಿಗೆಣಸು, ಹಸಿರು ಸೊಪ್ಪುಗಳಲ್ಲಿ ಇದು ಧಾರಾಳ ಸಿಗುತ್ತದೆ. ವಿಟಮಿನ್ ‌ನಮಗೆ ಹಸಿರು ಸೊಪ್ಪಿನಿಂದ ಲೆಟ್ಯೂಸ್‌, ಎಲೆಕೋಸಿನಂಥ ಅಗಲ ಎಲೆಗಳ ಮೂಲದಿಂದ ಸಿಗುತ್ತದೆ. ಅಣಬೆ, ಹಸಿ ಬಟಾಣಿ, ವಿಟಮಿನ್‌ ಮೂಲ ಆಗಿದೆ. ಹೂಕೋಸು, ಚಿಕನ್‌, ಸಿಹಿಗೆಣಸು ವಿಟಮಿನ್‌‌ಗೆ ಮೂಲ. ಮೊಟ್ಟೆ, ಮೀನು, ಹಾಲಿನ ಉತ್ಪನ್ನಗಳು ವಿಟಮಿನ್‌ ‌ಗೆ ಮೂಲ. ಹುಳಿ ಮೂಲದ ವಸ್ತುಗಳಾದ ಟೊಮೇಟೊ, ನೆಲ್ಲಿಕಾಯಿ, ನಿಂಬೆಹಣ್ಣು, ದಾಳಿಂಬೆ, ಕಿತ್ತಳೆ, ಮೂಸಂಬಿ, ಸ್ಟ್ರಾಬೆರಿ ಇತ್ಯಾದಿಗಳಲ್ಲಿ ವಿಟಮಿನ್‌ ಸಿ ಅಡಗಿದೆ. ಬ್ರೋಕ್ಲಿಯಲ್ಲಿಯೂ ವಿಟಮಿನ್ ಮೂಲಗಳಿವೆ. ಈ ವಿಟಮಿನ್‌ ಅಂಶದ ಪದಾರ್ಥಗಳು ಮಕ್ಕಳಲ್ಲಿ ಇಮ್ಯೂನಿಟಿ ಹೆಚ್ಚಿಸಿ, ರೋಗ ನಿರೋಧಕಗಳಾಗಿ ದುಡಿಯುತ್ತವೆ.

ಮಕ್ಕಳು ಇಂಥವನ್ನು ಸುಲಭವಾಗಿ ತಿನ್ನುವುದಿಲ್ಲ ಎಂಬುದೂ ನಿಜ. ಹಾಗಾಗಿ ಅವರಿಗೆ ಇಷ್ಟವಾಗುವಂತೆ ಯಾವುದೋ ಒಂದು ವಿಧದಲ್ಲಿ ಇವನ್ನು ಬೆರೆಸಿಕೊಡುವುದೇ ಸರಿ.

ಕೊಬ್ಬಿನಾಂಶದ ಆಹಾರ

ಯಾವ ರೀತಿ ಮಕ್ಕಳಿಗೆ ಪ್ರೋಟೀನ್‌, ವಿಟಮಿನ್‌, ಕಾರ್ಬೊಹೈಡ್ರೇಟ್‌, ಕ್ಯಾಲ್ಶಿಯಂ ಮುಖ್ಯವೋ ಅದೇ ತರಹ ಅವರಿಗೆ ಕೊಬ್ಬಿನಾಂಶದ ಆಹಾರ ಅಷ್ಟೇ ಮುಖ್ಯ. ಡ್ರೈ ಫ್ರೂಟ್ಸ್, ನಟ್ಸ್ ಕಡಲೆಬೀಜ, ಅಖರೋಟ್‌, ಕೊಬ್ಬಿನಾಂಶವುಳ್ಳ ಫಿಶ್‌, ಮೀಟ್‌, ತುಪ್ಪ, ಚೀಸ್‌, ಹಾಲಿನ ಉತ್ಪನ್ನಗಳು, ಎಣ್ಣೆ ಬೀಜಗಳು, ಅವಕಾಡೋ ಇತ್ಯಾದಿ ಕೊಡಿ. ಸದಾ ಫಾಸ್ಟ್ ಫುಡ್‌, ಜಂಕ್‌ ಫುಡ್‌, ಪಿಜ್ಜಾ, ಬರ್ಗರ್‌ ಇತ್ಯಾದಿಗಳನ್ನು ಸೇವಿಸಲು ಬಿಡಬೇಡಿ. ಇದರಲ್ಲಿ ಅನಗತ್ಯ ಫ್ಯಾಟಿ ಆ್ಯಸಿಡ್ಸ್ ಹೇರಳವಾಗಿರುತ್ತವೆ.

ಕ್ಯಾಲ್ಶಿಯಂ ಝಿಂಕ್

ಮಕ್ಕಳಿಗೆ ದಿನ ಹಾಲು, ಮೊಸರು, ಡೇರಿ ಪ್ರಾಡಕ್ಟ್ಸ್ ನ್ನು ದಿನಕ್ಕೆ 3 ಹೊತ್ತಿನ ಆಹಾರದಲ್ಲೂ ಕೊಡಿ. ಹಾಲು, ಮೊಸರು ಕ್ಯಾಲ್ಶಿಯಂನ ಉತ್ತಮ ಮೂಲ. ಇದರಲ್ಲಿ ಸಾಕಷ್ಟು ಸತು (ಝಿಂಕ್‌) ಸಹ ಇರುತ್ತದೆ. ಇದರಿಂದ ಮಕ್ಕಳ ಹಲ್ಲು, ಮೂಳೆ ಸದೃಢ ಆಗುತ್ತದೆ. ಕ್ಯಾರೆಟ್‌, ಬೆಣ್ಣೆ, ಬ್ರೋಕ್ಲಿ, ಮೊಟ್ಟೆ ಸಹ ಕ್ಯಾಲ್ಶಿಯಂನಿಂದ ತುಂಬಿವೆ. ಮಕ್ಕಳಿಗೆ ಕ್ಯಾಲ್ಶಿಯಂ ಕೊರತೆ ಕಾಡದಂತೆ ಇವನ್ನು ಆಗಾಗ ಸವಿಯಲು ಕೊಡಿ. ಅದೇ ತರಹ ಎಳ್ಳು, ಕುಂಬಳ ಬೀಜ, ಕಲ್ಲಂಗಡಿ/ಕರ್ಬೂಜ ಬೀಜ, ನಟ್ಸ್ ಇತ್ಯಾದಿ ಸತುವಿನಿಂದ ತುಂಬಿದೆ. ಮಕ್ಕಳ ಸಂಪೂರ್ಣ ಪೋಷಣೆಗೆ ಇವೆಲ್ಲ ಅತ್ಯಗತ್ಯ.

ಕಬ್ಬಿಣಾಂಶದ ಮಹತ್ವ

ಮಕ್ಕಳಿಗೆ ಕಬ್ಬಿಣಾಂಶ ಹಣ್ಣು, ತರಕಾರಿ, ಹಾಲು, ಬೇಳೆ, ಕಾಳು, ದವಸ ಧಾನ್ಯಗಳಲ್ಲಿ ಹೇರಳವಾಗಿ ಸಿಗುತ್ತದೆ. ಇದರಿಂದ ಮಕ್ಕಳ ಇಮ್ಯೂನಿಟಿ ಸಿಸ್ಟಂ ಸಶಕ್ತಗೊಳ್ಳುತ್ತದೆ. ಮಕ್ಕಳು ಗಾಯಗೊಂಡಾಗ ಅದು ಬೇಗ ಸರಿಹೋಗಲು, ಪರಿಪೂರ್ಣ ಬೆಳವಣಿಗೆಗಾಗಿ ಇದು ಬೇಕೇ ಬೇಕು.

ಮೆಗ್ನೀಶಿಯಂ ಸಹ ಬೇಕು

ಬಾದಾಮಿ, ಮೊಟ್ಟೆ, ಹಾಲು, ಕರ್ಬೂಜಾ, ಕಲ್ಲಂಗಡಿ, ಕಡಲೆಬೇಳೆ/ಕಾಳು, ಎಳ್ಳು, ಅಕ್ಕಿ, ಬಾಳೆಹಣ್ಣು ಮುಂತಾದವುಗಳಲ್ಲಿ ಮೆಗ್ನೀಶಿಯಂ ಧಾರಾಳ ಅಡಗಿದೆ. ಬಾಡಿ ಮತ್ತು ಮೈಂಡ್‌ ನಡುವೆ ಸಂದೇಶ ಸುಲಭವಾಗಿ ರವಾನೆಯಾಗಲು ಮೆಗ್ನೀಶಿಯಂ ಬೇಕೇಬೇಕು. ದೇಹದಲ್ಲಿ ಇದರ ಪ್ರಮಾಣ ಸರಿಯಾಗಿದ್ದಾಗ ಮೆದುಳು ಸಕ್ರಿಯಾಗಿ ಚುರುಕಾಗಿರುತ್ತದೆ, ಮಕ್ಕಳು ಜಾಣರಾಗಿ ಚೂಟಿಯಾಗುತ್ತಾರೆ. ಇದರಿಂದ ಅವರ ನೆನಪಿನ ಶಕ್ತಿ ಚುರುಕಾಗುತ್ತದೆ.

ಜಂಕ್ಫುಡ್‌/ಫಾಸ್ಟ್ ಫುಡ್

ಮನೆಯಲ್ಲಿ ಮಕ್ಕಳ ಕೈಗೆ ಸಿಗುವಂತೆ ಜಂಕ್‌ ಫುಡ್‌/ಫಾಸ್ಟ್ ಫುಡ್ಸ್ ಇಡಲೇಬೇಡಿ. ಮನೆಯಲ್ಲಿ ಸದಾ ಹೆಲ್ದಿ ಫುಡ್‌ ತುಂಬಿರಲಿ. ಅಂಥ ಪೌಷ್ಟಿಕಾಂಶಗಳ ತಿಂಡಿ ಅವರು ಯಾವಾಗ ಬೇಕಾದರೂ ತಿಂದುಕೊಳ್ಳಲಿ, ಅದರಿಂದ ಒಳಿತೇ ಆಗುತ್ತದೆ.

ಫುಡ್ಗೆ ನಿಮ್ಮ ಹೆಸರು

ಮನೆಯಲ್ಲಿ ಹೊಸ ರುಚಿ ಮಾಡಿದಾಗ ಅದಕ್ಕೆ ನಿಮ್ಮದೇ ಸಲಹೆಯ ಹೆಸರಿಡಿ. ಮಕ್ಕಳಿಗೆ ಅದೇ ಹಳೆಯ ಉಪ್ಪಿಟ್ಟು, ಚಿತ್ರಾನ್ನದ ಹೆಸರು ಕೇಳಿ ಸಾಕಾಗಿರುತ್ತದೆ. ಹೀಗಾಗಿ ಹೊಸ ರುಚಿಯ ಮಾಡ್‌ ಹೆಸರು ಅವರಿಗೆ ಇಷ್ಟವಾಗುತ್ತದೆ. ಈ ಹೆಸರು ತುಸು ಫನಿ  ಇಂಟರೆಸ್ಟಿಂಗ್‌ ಆಗಿರಲಿ. ಬ್ರೆಡ್‌ ಆಮ್ಲೆಟ್‌ ಗೆ ಬದಲಾಗಿ ನೀವು ಇದನ್ನು `ಎಗ್ಗಿ ಬ್ರೆಡ್‌’ ಎಂದು ಹೇಳಿ. ಈ ಹೊಸ ಹೆಸರು ಕೇಳಿ ಏನೋ ಹೊಸ ಡಿಶ್‌ ಸಿಗಲಿದೆ ಎಂದು ಅವರು ಸಂಭ್ರಮಿಸುತ್ತಾರೆ. ಅದೇ ತರಹ ಬ್ರೋಕ್ಲಿಯಿಂದ ತಯಾರಾದ ಡಿಶ್‌ ಗೆ `ಬೇಬಿ ಟ್ರೀ’ ಎಂದು ಹೆಸರಿಡಿ. ಇದರಲ್ಲಿ ಹೇರಳ ವಿಟಮಿನ್ಸ್ ಇರುವುದರಿಂದ ಮಕ್ಕಳಿಗೆ ಇದು ಬಲು ಪೌಷ್ಟಿಕವಾಗಿರುತ್ತದೆ.

ಆಹಾರದ ರೂಪ ಬದಲಿಸಿ

ಮಕ್ಕಳಿಗೆ ಆಹಾರ ತಿನ್ನಿಸುವ ಮತ್ತೊಂದು ಸುಲಭ ವಿಧಾನ ಎಂದರೆ, ನೀವು ತಯಾರಿಸುವ ಏನೇ ಡಿಶ್‌ ಇರಲಿ, ಹಳೆಯ ತರಹದ್ದಲ್ಲದೆ, ರೂಪ ಬದಲಾಯಿಸಕೊಂಡು ಹೊಸದಾಗಿ ಕಾಣುವಂತಿರಲಿ! ಸ್ಯಾಂಡ್‌ ವಿಚ್‌ ನ್ನು ಸದಾ ತ್ರಿಕೋನಾಕಾರದಲ್ಲಿ ಕಂಡು ಮಕ್ಕಳಿಗೆ ಬೋರಿಂಗ್‌ ಎನಿಸುತ್ತದೆ. ಹೀಗಾಗಿ ನಿಮ್ಮ ಕಲ್ಪನೆಗೆ ತಕ್ಕಂತೆ ಸ್ಯಾಂಡ್‌ ವಿಚ್‌ ನ್ನು ವೃತ್ತಾಕಾರ, ಚೌಕ, ಆಯತಾಕಾರದಲ್ಲಿ ನೀಡಿರಿ. ಸ್ಟಾರ್‌, ಹಾರ್ಟ್‌ ಶೇಪ್‌ ಸಹ ಟ್ರೈ ಮಾಡಿ ನೋಡಿ. ಇದಕ್ಕೆ ಬೇಕಾದ ವಿವಿಧ ಶೇಪ್‌ ಕಟರ್ಸ್‌ಖರೀದಿಸಿ.

ಇದನ್ನು ಮತ್ತಷ್ಟು ಆಕರ್ಷಕಗೊಳಿಸಲು ಅದರ ಮೇಲೆ ಟೊಮೇಟೊ ಸಾಸ್‌ ನಿಂದ ಕಣ್ಣು, ತುಟಿ ಇತ್ಯಾದಿ ಬಿಡಿಸಬಹುದು. ತೆಳು ಕ್ಯಾರೆಟ್‌ ಬಳಸಿ ಹುಬ್ಬು, ಮೀಸೆ ಸಹ ಮಾಡಬಹುದು. ಇಂಥ ಕ್ರಿಯೇಟಿವ್‌ ಸ್ಯಾಂಡ್‌ ವಿಚ್‌ ನೋಡಿ ಮಕ್ಕಳು ಮತ್ತೆ ಮತ್ತೆ ಇಂಥದ್ದೇ ಬೇಕೆಂದು ಕೇಳುತ್ತಾರೆ. ಇದೇ ತರಹ ನೀವು ಸ್ಮೈಲಿ ಫೇಸ್‌ ದೋಸೆ, ಚಪಾತಿ, ವಿವಿಧ ಬಗೆಯ ಇಡ್ಲಿ (ಉದಾ. ಬಟನ್‌ ಇಡ್ಲಿ) ಸಹ ಟ್ರೈ ಮಾಡಬಹುದು.

ಬಣ್ಣಗಳ ಮಸ್ತಿ

ಮಕ್ಕಳಿಗೆ ಹಣ್ಣು ತಿನ್ನಿಸುವುದು ಅಂದ್ರೆ ಹರಸಾಹಸವೇ ಸರಿ. ಆದರೆ ಅವರಿಗೆ ಪೌಷ್ಟಿಕ ಆಹಾರ ಕೊಡಬೇಕೆಂದರೆ ಹಣ್ಣಂತೂ ಬೇಕೇ ಬೇಕು. ಹಾಗಾಗಿ ನೀವು ಹಣ್ಣುಗಳನ್ನು ಹೆಚ್ಚಿಟ್ಟು, ಅದರ ಮೇಲೆ ಎಡಿಬಲ್ ಕಲರ್ಸ್‌ ನಿಂದ ವಿವಿಧ ರಂಗು ತುಂಬಿಸಿ. ಸೇಬು ಇತ್ಯಾದಿಗಳನ್ನು ಮಂಕಿ, ಮೊಲಗಳ ರೂಪದಲ್ಲಿ ಹಚ್ಚಿ, ಒಂದಿಷ್ಟು ಬಣ್ಣ ಹಾಕಿ ಕೊಡಿ. ಪರಂಗಿ ಹಣ್ಣು ಇತ್ಯಾದಿಗಳನ್ನು ಮನೆ, ದೋಣಿ ಆಕಾರದಲ್ಲಿ ಹೆಚ್ಚಿಟ್ಟು ವಿವಿಧ ಬಣ್ಣ ಹಾಕಿ ಕೊಡಿ.

ಸಲಾಡ್ಗೆ ಡ್ರೆಸ್ಸಿಂಗ್

ಮಕ್ಕಳಿಗೆ ತಾಜಾ ಹಸಿ ತರಕಾರಿ ತಿನ್ನಲಿ ಎಂದು ಕೋಸಂಬರಿ ಮಾಡಿಕೊಟ್ಟರೆ ಅವರು ತಿಂದರೆ ತಾನೇ? ಹಾಗಾಗಿ ಸೌತೆ, ಬೀಟ್ ರೂಟ್‌, ಈರುಳ್ಳಿ, ಟೊಮೇಟೋಗಳನ್ನು ಚಿತ್ರ ವಿಚಿತ್ರ ಸ್ಟಾರ್‌, ಸರ್ಕಲ್, ತ್ರಿಕೋನಾಕಾರ ಹೀಗೆ ನಿಮ್ಮ ಕಲ್ಪನೆಗೆ ತಕ್ಕಂತೆ ಹೆಚ್ಚಿಟ್ಟು, ನೀಟಾಗಿ ಅದರ ಮೇಲೆ ಮಸಾಲೆಗಳಿಂದ  ಡ್ರೆಸ್ಸಿಂಗ್‌ ಮಾಡಿ. ಇದಕ್ಕಾಗಿ ಉಪ್ಪು, ಮೆಣಸು, ನಿಂಬೆರಸ, ಆಲಿಲ್ ‌ಆಯಿಲ್, ಚಾಟ್‌ ಮಸಾಲ, ಬ್ರೌನ್‌ ಶುಗರ್‌ ಇತ್ಯಾದಿ ಬಳಸಿಕೊಳ್ಳಿ.

ರುಚಿ ಪೌಷ್ಟಿಕತೆ ಎರಡೂ ಇರಲಿ

ಮಕ್ಕಳಿಗೆ ಈ ಬೇಕ್ಡ್ ಐಟಂ ಅಂದ್ರೆ ಇಷ್ಟ. ಹೀಗಾಗಿ ಮನೆಯಲ್ಲೇ ಮೈಕ್ರೋವೇವ್ ‌ಇರಿಸಿಕೊಂಡು ಮಫಿನ್ಸ್ ಮಾಡಿಕೊಡಿ. ಅದಕ್ಕೆ ಮಾಗಿದ ಸೇಬು, ಬಾಳೆಹಣ್ಣು, ಪರಂಗಿಹಣ್ಣು, ಸಪೋಟ ಇತ್ಯಾದಿ ಮ್ಯಾಶ್‌ ಮಾಡಿ ಬೆರೆಸಿಡಿ. ಡ್ರೈ ಫ್ರೂಟ್ಸ್ ಸಹ ಹಾಕಿ ಕೊಡಿ. ಇದರಿಂದ ಮಕ್ಕಳಿಗೆ ಬೇಕಾದ ರುಚಿ ಸಿಕ್ಕಿತು, ಪೌಷ್ಟಿಕತೆ ಬೆರೆಸಿದ ನೆಮ್ಮದಿ ನಿಮಗಾಯಿತು.

ಇದಕ್ಕಾಗಿ ನೀವು ಸ್ವಲ್ಪ ಬದಲಾಗ ಬೇಕಾಗುತ್ತದೆ. ಮಕ್ಕಳಿಗೆ ಹೆಚ್ಚಿನ ಪೌಷ್ಟಿಕ ಆಹಾರ ತಿನ್ನಿಸಲು, ಅವರ ಮುಂದೆ ನೀವು ಅಂಥದ್ದನ್ನೇ ತಿಂದು ತೋರಿಸಬೇಕು. ತಾಯಿ ತಂದೆಯರನ್ನು ರೋಲ್ ಮಾಡೆಲ್ ‌ಆಗಿ ಅನುಸರಿಸುವ ಮಕ್ಕಳು, ನಿಮ್ಮನ್ನು ನೋಡಿ ನೋಡಿ, ತಾವು ಅಂಥದ್ದನ್ನು ತಿನ್ನಬೇಕೆಂದು ಬಯಸುತ್ತಾರೆ.

ನೀವು ಹೆಲ್ಡಿ ಫುಡ್‌ ಸೇವಿಸುವುದನ್ನು ನೋಡಿದಾಗ ಮಾತ್ರ ಮಕ್ಕಳು ಹಠ ಬಿಟ್ಟು ಅವನ್ನು ತಿನ್ನುತ್ತಾರೆ. ಆದರೆ ನೀವು ಜಂಕ್‌ ಫುಡ್ ಸೇವಿಸುತ್ತಿದ್ದರೆ, ಮಕ್ಕಳು ಸಹ ಅದನ್ನೇ ಬಯಸುತ್ತಾರೆ, ಪೌಷ್ಟಿಕ ಆಹಾರ ತಿರಸ್ಕರಿಸುತ್ತಾರೆ. ಹೀಗಾಗಿ ನೀವು ಮನಸ್ಸು ಮಾಡಿದರೆ ಮಾತ್ರ ಮಕ್ಕಳು ಸರಿ ದಾರಿಗೆ ಬರಬಲ್ಲರು.

ಕಿವಿ ಮಾತು

ಮನೆಯಲ್ಲಿ ಬೇರೆ ಬೇರೆಯವರಿಗೆ ಬೇರೆ ಬೇರೆ ಆಹಾರ ಎಂದು ತಯಾರಿಸಲು ಹೋಗಬೇಡಿ. ಮನೆಯ ಎಲ್ಲರೂ ಒಂದೇ ತರಹದ ಊಟ ತಿಂದರೆ, ಮಕ್ಕಳು ಅದನ್ನೇ ಅನುಸರಿಸುತ್ತಾರೆ. ಮಕ್ಕಳಿಗೆ ಅಂಗಡಿಯ ಅತಿ ಸಿಹಿ ತಿನಿಸು ಬೇಡ, ನೀವು ಮನೆಯಲ್ಲೇ ತಯಾರಿಸಿದ ಪೌಷ್ಟಿಕ ಸಿಹಿ ತಿಂಡಿ ಸವಿಯಲು ಕೊಡಿ. ಹೊರಗಿನ ಅಪಾಯಕ್ಕಿಂತ ಮನೆ ತಿಂಡಿ ಸಾವಿರ ಪಾಲು ಮೇಲು.

ಡಾ. ಹೇಮಲತಾ ಈ ಕುರಿತು, “4-6 ವರ್ಷದ ಮಕ್ಕಳಿಗೆ 120 ಗ್ರಾಂ ಧಾನ್ಯ, 45 ಗ್ರಾಂ ಬೀನ್ಸ್, 100 ಗ್ರಾಂ ಇತರೆ ತರಕಾರಿ, 75 ಗ್ರಾಂ ಹಣ್ಣು, 400 ಮಿ.ಲೀ. ಹಾಲು, 25 ಗ್ರಾಂ ಫ್ಯಾಟ್‌ ಇತ್ಯಾದಿ ಕೊಡಿ. ಬಾಲ್ಯದಲ್ಲಿ ಇಂಥ ಉತ್ತಮ ಪೌಷ್ಟಿಕ ಆಹಾರ ಸೇವಿಸಿದರೆ ಮಾತ್ರ ಅವರ ಬೆಳವಣಿಗೆ ಸರಿಯಾಗುತ್ತದೆ. ಬೆಳೆಯುವ ಮಕ್ಕಳಿಗೆ ಮ್ಯಾಕ್ರೋ/ಮೈಕ್ರೋ ನ್ಯೂಟ್ರಿಯೆಂಟ್ಸ್ ಎರಡೂ ಸರಿ ಇದ್ದಾಗ ಮಾತ್ರ ಅವರ ಆರೋಗ್ಯ ಸುಧಾರಿಸುತ್ತದೆ. ಇಲ್ಲದಿದ್ದರೆ ಎಲ್ಲದಕ್ಕೂ ಅಲರ್ಜಿ ಎನ್ನುವಂತಾಗುತ್ತದೆ. ಇದರಿಂದ ಅವರ ದೈಹಿಕ ಮಾನಸಿಕ ಆರೋಗ್ಯ ಕುಂಠಿತಗೊಳ್ಳುತ್ತದೆ,” ಎಂದು ಎಚ್ಚರಿಸುತ್ತಾರೆ.

ಪ್ರಿಯಾಂಕಾ ಮಹದೇವ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ