ಈ ಜೀವನ ಸುಖವಾಗಿರಲು….
ಇತ್ತೀಚೆಗೆ ನಮ್ಮ ದೇಶದ ಒಂದು ಹೈಕೋರ್ಟ್, ಒಬ್ಬ ದುಃಖಿತ ಪತಿಗೆ ಡೈವೋರ್ಸ್ ಕುರಿತಾಗಿ ತೀರ್ಪು ನೀಡುತ್ತಾ, ಯಾವ ಪತ್ನಿ ಪತಿಗೆ ಸೆಕ್ಸ್ ಸುಖ ನೀಡಲು ನಿರಾಕರಿಸುತ್ತಾಳೋ, ಅದು ಹಿಂದೂ ವಿವಾಹ ಕಾಯಿದೆ 1955ರ ಪ್ರಕಾರ ಕ್ರುಯಾಲಿಟಿ ಎನಿಸುತ್ತದೆ. ಪತಿಪತ್ನಿ ಸಂಬಂಧ ಸೆಕ್ಸ್ ನ್ನು ಆಧರಿಸಿದೆ. ಈ ತೀರ್ಪು ತುಸು ವಿಚಿತ್ರ ಅನಿಸಬಹುದು, ಯಾವ ರೀತಿ ಗಂಡು ವಿವಾಹೇತರ ಸಂಬಂಧದಲ್ಲಿ ಸೆಕ್ಸ್ ಸುಖ ನೀಡುವ, ಪಡೆಯುವ ಹಕ್ಕು ಹೊಂದಿದ್ದಾನೋ, ಅದೇ ರೀತಿ ಹೆಣ್ಣೂ ಹೊಂದಿರುತ್ತಾಳೆ.
ಸೆಕ್ಸ್, ಮಕ್ಕಳ ಜನನ ಮಾತ್ರವೇ ಮದುವೆಯ ಉದ್ದೇಶ ಎಂಬ ತಪ್ಪನ್ನು ನಾವೆಲ್ಲರೂ ಮಾಡುತ್ತೇವೆ. ಇದು ನಮ್ಮ ಧರ್ಮ, ಅದರ ಮಾನ್ಯತೆ, ಸಂಸ್ಕಾರಗಳ ಕೊಡುಗೆ ಆಗಿದೆ. ನಮ್ಮ ದೇಶದ ಪ್ರತಿ ಧರ್ಮ ಹೆಣ್ಣಿಗೆ ನೀಡುವ ಆದೇಶ ಎಂದರೆ, ಮದುವೆ ಮಾಡಿಕೊಳ್ಳಿ, ಪತಿಗೆ ಗುಲಾಮರಾಗಿರಿ, ಅವನಿಗೂ ಸೆಕ್ಸ್, ಮಕ್ಕಳ ನಂಬಿಕೆ ನೀಡಿ ಇತ್ಯಾದಿ. ಇದನ್ನೇ ಈ ಹೈಕೋರ್ಟ್ ಸಹ ಹೇಳಿದೆ.
ವಿವಾಹದ ಕಾನೂನು ಕಟ್ಟಳೆ, ಇದರ ಮೂಲ ಉದ್ದೇಶ ಏನೇ ಇರಲಿ, ಇಂದು ಕಾನೂನಿನ ಕಟ್ಟುನಿಟ್ಟು ಹೇಗಿದೆ ಎಂದರೆ, ಪತಿ ಪತ್ನಿ ಸಂಬಂಧ, ಒಬ್ಬ ವ್ಯಕ್ತಿ ಹಾಗೂ ಅವನ ದೇಶದ ಜೊತೆಗಿನ ಹಕ್ಕು ಎಂಬಂತೆ ಆಗಿಹೋಗಿದೆ. ಅಂದ್ರೆ ದೇಶದ ಏಕೈಕ ಕರ್ತವ್ಯ ನಾಗರಿಕರು ನೆಲೆ ನಿಲ್ಲಲು ಒಪ್ಪಿಗೆ ನೀಡುವುದಕ್ಕಿಂತ ಹೆಚ್ಚಾಗಿ ಅವರ ಸುರಕ್ಷತೆ, ನೌಕರಿಯ ಗ್ಯಾರಂಟಿ, ಶಿಕ್ಷಣದ ಅವಕಾಶ, ಆರೋಗ್ಯ ಕಾಳಜಿ, ಸಾರಿಗೆ ಸಂವಹನಕ್ಕಾಗಿ ಬೇಕಾದ ಅನುಕೂಲ….. ಇತ್ಯಾದಿಗಳಂತೆಯೇ ವಿವಾಹ ಎಂಬುದು ಪತಿಪತ್ನಿಯರನ್ನು ಪರಸ್ಪರ ಬೆಸೆಯುವುದಲ್ಲದೆ, ಸಮಾಜಕ್ಕೆ ಸಂಬಂಧಿಸಿದ ಬಹಳಷ್ಟು ಹಕ್ಕುಗಳನ್ನೂ ನೀಡುತ್ತದೆ.
ಇದೊಂದು ಕೇವಲ ಧಾರ್ಮಿಕ ಕಾಂಟ್ರಾಕ್ಟ್ ಆಗಿ ಉಳಿದಿಲ್ಲ, ಇದೀಗ ಕಾನೂನುಬದ್ಧ ಕಾಂಟ್ರಾಕ್ಟ್ ಆಗಿದೆ. ಇದನ್ನು ವಿಶ್ವದೆಲ್ಲೆಡೆ ಯಾವುದೇ ಧರ್ಮ ಮುರಿಯಲಾಗದು, ಅಂಥ ಕಾಂಟ್ರಾಕ್ಟ್ ಇದು. ಇಸ್ಲಾಮಿಕ್ ದೇಶಗಳಲ್ಲೂ ತಲಾಖ್ ನ ಡಿಕ್ರಿಗಾಗಿ, ಯಾವುದಾದರೂ ಕೋರ್ಟ್ ಗೆ ಹೋಗಲೇಬೇಕು.
ಮದುವೆ ಅಂದ್ರೆ ಸೆಕ್ಸ್ ಅನುಭವಿಸಲು ಲೈಸೆನ್ಸ್ ಆಗಿ ಉಳಿದಿಲ್ಲ. ಇದು ಜೊತೆ ಜೊತೆಗೆ ವಾಸಿಸಲು, ಪರಸ್ಪರ ರೆಪ್ರೆಸೆಂಟ್ ಮಾಡಲು ಹಕ್ಕು ಒದಗಿಸುತ್ತದೆ. ಒಬ್ಬ ಸಂಗಾತಿ ಸತ್ತರೆ ಯಾ ಅಂಗವಿಕಲರಾದರೆ, ಅವರ ಹಕ್ಕೆಲ್ಲ ಕಟ್ಟಿಕೊಂಡ ಸಂಗಾತಿಗೆ ತಕ್ಷಣ ತಂತಾನೇ ವರ್ಗವಾಗುತ್ತದೆ. ಹಾಗಾಗಿ ಮದುವೆಯನ್ನು ಸೆಕ್ಸ್ ಗೆ ಮೂಲ ಎಂದು ಭಾವಿಸುವುದು ಈ ದೃಷ್ಟಿಯಿಂದ ತಪ್ಪು ಮಾತ್ರವಲ್ಲ, ಭಯಂಕರ ಅಪರಾಧವಾದೀತು, ಆದರೆ ಕೋಟ್ಯಂತರ ಹೆಂಗಸರು, ತಾವು ಗಂಡನಿಗೆ ಸೆಕ್ಸ್ ಸುಖ ನೀಡಲೇಬೇಕೆಂಬ ಭ್ರಮೆಯಲ್ಲೇ ಬದುಕುತ್ತಿದ್ದಾರೆ.
ಎಷ್ಟೋ ಹೆಂಗಸರು ಯಾವುದೋ ಕಾರಣಕ್ಕೆ ಈ ಸುಖ ನೀಡಲಾಗದಿದ್ದರೆ ಅಂದ್ರೆ ತಮ್ಮ ರೋಗ, ಸ್ಥೂಲತೆ, ದೂರ ಇರಬೇಕಾದ ಅನಿವಾರ್ಯತೆ, ಪತಿಯ ಅನಗತ್ಯ ಬೇಡಿಕೆಗಳು ಇತ್ಯಾದಿ ಪೂರೈಸಲಾಗದಿದ್ದರೆ ಬಹಳ ಗಿಲ್ಟ್ ಫೀಲ್ ಮಾಡಿಕೊಳ್ಳುತ್ತಾರೆ. ಮದುವೆಯ ಅರ್ಥ ಸದಾ ಜೊತೆಗಿರುವುದು ಮುಖ್ಯ, ಇದು ಬೇರೆ ಎಲ್ಲಾ ವಿಧಗಳಿಗಿಂತಲೂ ಅತ್ಯಗತ್ಯ. ಮದುವೆ ಅಂದ್ರೆ ಕೇವಲ ಒಬ್ಬ ವಿಧ್ಯುಕ್ತ ಲೈಂಗಿಕ ಸಂಗಾತಿಯನ್ನು ಪಡೆಯುವುದಷ್ಟೇ ಅಲ್ಲ, ಜೀವನದ 2-3 ಗಂಟೆಗಳಿಗೂ ಹೆಚ್ಚು ಕಾಲ ಪರಸ್ಪರ ಜೊತೆ ನೀಡಿ, ಪರಸ್ಪರ ಅವಲಂಬಿತ ಆಗಿರುತ್ತಾರೆ.
ಎಷ್ಟೋ ಮದುವೆಗಳು ಸೆಕ್ಸ್ ನಲ್ಲಿನ ಮೋಸದಿಂದಾಗಿ ಮುರಿದು ಬೀಳುತ್ತವೆ. ಇದಂತೂ ಖಂಡಿತಾ ತಪ್ಪು. ಸೆಕ್ಸ್ ಎಂಬುದು ಜೀವನದ ಒಂದು ಭಾಗ ಮಾತ್ರ, ಪತಿ/ಪತ್ನಿಯರ ವಿವಾಹೇತರ ಸಂಬಂಧ, ಮದುವೆಯ ಬಾಂಧವ್ಯ ಮುರಿಯುವ ಸಾಧನ ಆಗಬಾರದು. ಪ್ರತಿ ಧರ್ಮ ಗಂಡಸರಿಗೆ ಇಂಥ ಸ್ವೈರತೆಯ ಹಕ್ಕು ನೀಡಿದೆ.
ಅವರು ಎಲ್ಲಿ ಬೇಕಾದರೂ ಊರು ಮೇಯಬಹುದು, ಆದರೆ ಪತ್ನಿ ಎಂದಾದರೂ ಅಪರೂಪಕ್ಕೆ ಅದನ್ನು ತಿರಸ್ಕರಿಸಿದರೆ ಯಾ ಸಂದರ್ಭವಶಾತ್ ಪರಪುರುಷನ ಕೂಡಿದ್ದೇ ಆದರೆ…. ಆಕೆಯನ್ನು ಪತಿವತಿ ಎಂದೇ ಸಾರಲಾಗುತ್ತದೆ. ಇದು ಸಮಾಜದ ಪಕ್ಷಪಾತ ನೀತಿಗೆ ಸ್ಪಷ್ಟ ನಿಲುವು. ವಿಶ್ವದ ಪ್ರತಿ ದೇಶದ ಪ್ರತಿ ನಗರದಲ್ಲೂ ರೆಡ್ ಲೈಟ್ ಏರಿಯಾ ಇದ್ದೇ ಇದೆ, ಅಲ್ಲಿ ವೇಶ್ಯಾವೃತ್ತಿ ಸಾರಾಸಗಟಾಗಿ ಮುಂದುವರಿಯುತ್ತಿರುತ್ತದೆ. ಮದುವೆಯಾದ ಹೆಣ್ಣು ಪತಿವ್ರತೆಯಾಗಿ ಮನೆಯೊಳಗೆ ಉಳಿಯಬೇಕು, ಅವಳ ಪತಿ ಇಂಥವರ ಸಂಗ ಅರಸಿ ಸುತ್ತಬಹುದು.
ಇದೆಂಥ ನ್ಯಾಯ?
ಸೆಕ್ಸ್ ಸುಖ ನೀಡಿ ವೇಶ್ಯೆ ಗಳಿಸುವ ಹಣದಲ್ಲಿ ಲೇಶ ಭಾಗ ಅದೇ ಸುಖ ನೀಡುವ ಪತ್ನಿಗೆ ಸಿಗದು! ಮನೆ, ಗಾಡಿ, ಸುತ್ತಾಟ, ಬಂಗಲೆ ಇತ್ಯಾದಿಗಳನ್ನು ಪತಿ ತನಗಾಗಿ ಮಾಡಿಕೊಳ್ಳುತ್ತಾನೆ, ಕೇವಲ ಪತ್ನಿಗಾಗಿ ಅಲ್ಲ. ಈ ಸಮಾಜ ಮದುವೆ ಹಾಗೂ ಸೆಕ್ಸ್ ನ್ನು ಹೇಗೆ ಮಾಡಿದೆ ಎಂದರೆ, ಇಲ್ಲಿ ಪತ್ನಿ ಸೆಕ್ಸ್ ಸುಖ ನೀಡಲೇಬೇಕು, ಆದರೆ `ಅಂಥ’ ಹೆಣ್ಣಿನ ತರಹ ಸುಖಿ ಅಲ್ಲ, ತಂತ್ರ ಮೊದಲೇ ಇಲ್ಲ!
ಮದುವೆ ಎಂಬುದು ಅರ್ಥೈಸಿಕೊಂಡರೆ ಮಾನವ ಜನಾಂಗದ ಒಂದು ಅತ್ಯುತ್ತಮ ಸಂಸ್ಥೆ, ಇದು ಸದೃಢ ಸ್ಟೆಬಿಲಿಟಿ ನೀಡಬಲ್ಲದು, ಬದುಕಲು ಒಂದು ಆಧಾರ, ತನ್ನ `ನಿಜ ಸಂಗಾತಿ’ ಎನಿಸುವ ಒಂದು ಜೀವ ಬೇಕೇಬೇಕು. ಆದರೆ ಅದು ಒಂದೇ ಮೂಲದ ಸುಖದ ಗುತ್ತಿಗೆಯಾದರೆ, ಅದರ ಕುರಿತಾಗಿ ಅನೇಕ ಪ್ರಶ್ನೆಗಳೇಳುತ್ತವೆ. ಅನಾದಿ ಕಾಲದಿಂದ ರಾಜಮಹಾರಾಜರು ಧರ್ಮ ಹೇಳಿದಂತೆ ಇದನ್ನು ಬಲವಂತಾಗಿ ಹೆಂಗಸರ ಮೇಲೆ ಹೇರುತ್ತಿದ್ದರು. ಗಂಡಸರು ಹೆಂಗಸರಿಂದ ಬೇಕಾದಷ್ಟು ಇಂಥ ಲಾಭ ಪಡೆದಿದ್ದಾರೆ. ನಾಮರ್ದರು ಸಹ ಕಟ್ಟಿಕೊಂಡವಳನ್ನು ಬಿಟ್ಟು ಇಟ್ಟುಕೊಂಡವಳನ್ನು ಬದಲಾಯಿಸುತ್ತಿರುತ್ತಾರೆ. ಪೌರಾಣಿಕ ಕಥೆಗಳಲ್ಲಂತೂ ಪಾಪದ ಪತ್ನಿ, ಪತಿಯ ಮಾನರಕ್ಷಣೆಗಾಗಿ ಅವನು ಸೂಚಿಸಿದ ಪರಪುರುಷನನ್ನು ಕೂಡಿದ್ದೂ ಇದೆ!
ಆದರೆ ಧರ್ಮ ಇದಕ್ಕೆಲ್ಲ ತೇಪೆ ಹಾಕಿತು. ಇಂಥ ಎಷ್ಟೋ ಸಂತಾನಗಳು ಸದ್ಬಳಕೆಗೆ ಬಂದ, ಏಕೆಂದರೆ ಅಲ್ಲಿ ಬೇರಾವುದೋ ಪುರುಷಾರ್ಥ ನೆರವೇರಬೇಕಿತ್ತು. ಅದರಿಂದ ಗಂಡನಿಗೇ ಹೆಚ್ಚು ಲಾಭವಿತ್ತು. ವಿವಾಹಿತ ಗಂಡಸು, ತನ್ನ ವಿವಾಹೇತರ ಸಂತಾನ ಹಾಗೂ ಅದನ್ನು ಹೆತ್ತವಳನ್ನು ಕಡೆಗಣಿಸುತ್ತಿದ್ದ. ಅತ್ತ ಪೌರಾಣಿಕ ಪುರುಷರಾಗಲಿ (ಶಕುಂತಲೆಯ ಕಥೆ, ಮೇನಕಾ ವಿಶ್ವಾಮಿತ್ರರ ಈ ಸಂತಾನ ಕಾಡಲ್ಲೇ ಕಡೆಗಣಿಸಲ್ಪಟ್ಟು ನಂತರ ಕಣ್ವರ ಸಾಕುಮಗಳಾಗ ಬೇಕಾಯಿತು), ಐತಿಹಾಸಿಕ ಪುರುಷರಾಗಲಿ, ಇತ್ತ ಮಾಡರ್ನ್ ಗಂಡಸರಾಗಲಿ ಇದಕ್ಕೆ ಹೊರತಲ್ಲ.
ಮದುವೆಯ ಅರ್ಥ ಸೆಕ್ಸ್ ಮೂಲಕ ಪರಸ್ಪರ ಪೂರಕರಾಗಬೇಕು ಅಂತ. ಪ್ರತಿಯೊಂದು ಸುಖ ದುಃಖ ಅರ್ಥ ಮಾಡಿಕೊಂಡರೇ ನೈಜ ಸಂಗಾತಿ, ಅಂಥವರ ಜೊತೆ ಬಾಳಿದರೆ ಮಾತ್ರ ಅದು ಬದುಕು, ಅದಿಲ್ಲದೆ ಜೀವನ ವ್ಯರ್ಥ. ಸೆಕ್ಸ್ ಕಾರಣವಾಗದೆ ಬೇರೆ ಕಾರಣದಿಂದ ಈ ಕರಾರು ಮುರಿದಾಗ, ಅದು ಬೇರೆ ವಿಚಾರ. ಒಬ್ಬರು ಮನೆ ಬಿಟ್ಟಾಗ ಹೀಗಾಗಬಹುದು. ಒಬ್ಬರ ಅಭಿಪ್ರಾಯ ತೀರಾ ಹದಗೆಟ್ಟಾಗ ಬೇರ್ಪಡಲಿ. ಇಬ್ಬರ ಯೋಚನಾಸರಣಿ, ಟೆಂಪರ್ಮೆಂಟ್ ವಿರುದ್ಧ ದಿಕ್ಕಿಗೆ ತಿರುಗಿದರೆ ಮುರಿಯಲಿ, ಮನೆಯ ಹಣ ಬೇರೆಲ್ಲೋ ಪೋಲಾದರೆ ಮುರಿಯಲಿ. ಅತ್ತೆ ಮನೆಯವರ ಮೂಗು ತೂರಿಸುವಿಕೆಯಿಂದ ಮುರಿಯಲಿ, ಆದರೆ ಸೆಕ್ಸ್ ಒಂದೇ ಇದಕ್ಕೆ ಕಾರಣ ಆಗಬಾರದು.
ಯಾರನ್ನು ಮದುವೆ ಆಗಿದ್ದಾರೋ ಅವರನ್ನು ತಮ್ಮಂತೆ ಮಾಡಿಕೊಳ್ಳುವುದು ಪ್ರತಿಯೊಬ್ಬರ ಡ್ಯೂಟಿ, ಪರಸ್ಪರರಲ್ಲಿ ಬೆರೆತುಹೋಗುವ ಕಸೆ ಇಬ್ಬರಿಗೂ ಇರಬೇಕು. ಮದುವೆ ಅಂದ್ರೆ ಕೇವಲ ಇಬ್ಬರು ವ್ಯಕ್ತಿಗಳು ಒಂದೇ ಸೂರಿನಡಿ, ಒಂದೇ ಹಾಸಿಗೆಯಲ್ಲಿ ಮಲಗುವುದಲ್ಲ, ಪರಸ್ಪರರಿಗಾಗಿ ಜೀವ ತೆರುವುದಕ್ಕೂ ಸಿದ್ಧರಿರಬೇಕು. ಇದನ್ನು ಪ್ರಾಮಾಣಿಕತೆಯಿಂದ ಅಳವಡಿಸಿಕೊಳ್ಳಬೇಕಷ್ಟೆ, ಸೇನೆಯಲ್ಲಿ ಶಿಸ್ತನ್ನು ಕಲಿಸುವ ಹಾಗೇ! 3-4 ತಿಂಗಳು ಸೇನೆಯಲ್ಲಿ ದುಡಿದ ನಂತರ, ಯುದ್ಧದ ಸಂದರ್ಭದಲ್ಲಿ, ಶತ್ರುಗಳ ಗುಂಡಿನ ಪರಿವೆ ಇಲ್ಲದೆ, ಸಂಗಡಿಗರನ್ನು ರಕ್ಷಿಸಲು, ತನ್ನ ಪ್ರಾಣವನ್ನೇ ಸೈನಿಕ ಒತ್ತೆ ಇಡುವಂತೆ ನಿಜ ಜೀವನದ ಸಂಗಾತಿಗಾಗಿ ತುಡಿತ ಇರಬೇಕು. ಇದನ್ನು ಅನೇಕ ದೇಶಗಳ ಇತಿಹಾಸದಲ್ಲೂ ಗಮನಿಸಿದ್ದೇವೆ. ಕೆಲವು ಗಂಟೆಗಳ ಕಾಲ ಜೊತೆಗಿದ್ದ ಸಂಗಡಿಗರಿಗಾಗಿ ಜೀವ ತೊರೆಯಬಹುದಾದರೆ, ಬಾಳೆಲ್ಲ ಜೊತೆಗಿರುವ ಸಂಗಾತಿಗಾಗಿ ಏಕೆ ಜೀವ ಬಿಡಬಾರದು? ಮರುಳುಗಾಡಲ್ಲಿ ಒಂದೇ ರೊಟ್ಟಿ ಹಂಚಿ ತಿನ್ನುವ, ಶತ್ರು ಪಾಳ್ಯದಲ್ಲಿ ಸಿಕ್ಕಿಬಿದ್ದಾಗ ಒಂದೇ ಹಳ್ಳದಲ್ಲಿ ಪರಸ್ಪರ ತಬ್ಬಿ ಬದುಕುಳಿಯುವ, ನಿದ್ದೆಗೆಟ್ಟು ಪರಸ್ಪರ ಗಮನಿಸಿಕೊಳ್ಳುವ ಹಾಗಿರುವಾಗ, ಕೈ ಹಿಡಿದವರಿಗಾಗಿ ಏಕೆ ಜೀವ ಮುಡಿಪಿಡಬಾರದು?
ಮದುವೆ ಅಂದ್ರೆ ಕೇವಲ ಕೊಡು ಕೊಳ್ಳುವ ವ್ಯವಹಾರವಲ್ಲ, ಸದಾ ಕೊಡುವಂಥ ವಿಚಾರದ ಬಗ್ಗೆ ಚಿಂತಿಸಿ, ಆಗ ಮಾತ್ರ ಜೀವನ ಸುಖಕರ ಆದೀತು. ಪರಸ್ಪರರ ಮೇಲೆ ಹಕ್ಕು ಚಲಾಯಿಸುವ ದಬ್ಬಾಳಿಕೆ ಬೇಡ, ಇಬ್ಬರೂ ಪರಸ್ಪರ 36 ಅಲ್ಲ 63 ಎಂಬಂತಿರಬೇಕು! ಜೊತೆಗಿರುವಷ್ಟು ದಿನ ನಗುನಗುತ್ತಾ ಕಷ್ಟಸುಖ ಹಂಚಿಕೊಳ್ಳಿ, ಈ ಭಾವನೆ ನೂರು ಕಾಲ ಉಳಿದೀತು. ಪರಸ್ಪರ ಕಷ್ಟಸುಖ ಹಂಚಿಕೊಳ್ಳುವ ಪ್ರಾಮಾಣಿಕತೆ ಇರಲಿ. ಆಗ ದುಃಖ ಕಡಿಮೆ ಆದೀತು, ದುಃಖ ಭರಿಸುವ ಶಕ್ತಿ ಬಂದೀತು. ಪರಸ್ಪರ ಆಗಾಗ ಸ್ಪೇಸ್ ನೀಡಿ. ಇಬ್ಬರಿಗೂ ಸಮಾನ ಸ್ವಾತಂತ್ರ್ಯವಿರಲಿ, ಆಗ ಮಾತ್ರ ಇಬ್ಬರ ವ್ಯಕ್ತಿತ್ವ ವಿಕಾಸ ಕಂಡೀತು. ಚಂಡಮಾರುತ ಎದ್ದಾಗ 2 ದೊಡ್ಡ ಮರಗಳು ಪರಸ್ಪರ ಹೆಚ್ಚಿನ ರಕ್ಷಣೆ ನೀಡಬಲ್ಲ. ಪತ್ನಿ ಒಬ್ಬಂಟಿ ಬಳ್ಳಿ ಆಗಿ ನಿಂತುಬಿಟ್ಟರೆ, ಪ್ರಳಯದಲ್ಲಿ ಕೊಚ್ಚಿಹೋದಾಳು, ಸೂರ್ಯನ ಅತಿ ತೀಕ್ಷ್ಣ ಕಿರಣ ಸುಟ್ಟೀತು. ಪತಿ ಎಂಬ ಮರದ ಆಸರೆಯೊಂದಿಗೆ ಸುಖ ಕಾಣುವುದೇ ವಿವೇಕ. ಆದ್ದರಿಂದ ಧರ್ಮ, ಸಮಾಜ, ಹೃದಯದ ಬಡಿತಗಳಿಗಲ್ಲ…. ಹೆಣ್ಣು ತನ್ನ ಬುದ್ಧಿ ವಿವೇಕಕ್ಕೆ ತಕ್ಕಂತೆ ನಡೆಯಬೇಕು.
ಜನ ಬೇಕೆಂದೇ ನಿಯಮ ಮುರಿಯುವುದಿಲ್ಲ
ಬೇಕಾದರೆ ಮನಸ್ಸು ಒಪ್ಪಲಿ ಬಿಡಲಿ, ಈಗ ಎಲ್ಲರೂ ನಗರದಲ್ಲೇ ಬದುಕಬೇಕೆಂದು ಆಸೆ ಪಡುತ್ತಾರೆ ಎಂಬುದು ನಿಶ್ಚಿತ. ಅಲ್ಲಿ ಎಷ್ಟೇ ಕೊಳಕು ತುಂಬಿರಲಿ, ಪರಿಸರ ಮಾಲಿನ್ಯವಿರಲಿ, ಟ್ರಾಫಿಕ್ ಸಮಸ್ಯೆ ಎಷ್ಟೇ ದಟ್ಟವಾಗಿರಲಿ, ಎಷ್ಟೇ ಜನರಿದ್ದೂ ಒಂಟಿತನ ಕಾಡುತ್ತಿರಲಿ, ದುಬಾರಿ ಸೈಟ್ ಕೊಳ್ಳಬೇಕಾದ ಅನಿವಾರ್ಯತೆ ಇರಲಿ, ನಗರಜೀವನವೇ ಅಚ್ಚುಮೆಚ್ಚು! ನಮ್ಮ ದೇಶದ ಹಳ್ಳಿಗಳಲ್ಲಿ ವಾಸ, ಈಗ ಅಸಂಭವ ಎಂಬಂತಾಗಿದೆ. ಏಕೆಂದರೆ ನಗರಗಳಲ್ಲಿನ ಸೌಲಭ್ಯಗಳು ಹಳ್ಳಿಗಳಲ್ಲಿ ಇಲ್ಲವೇ ಇಲ್ಲ! ಇದಕ್ಕೆ ಭಾರತ ಮಾತ್ರವಲ್ಲ, ಅಮೆರಿಕಾ ಸಹ ಹೊರತಲ್ಲ.
ಹೀಗಾಗಿ ಈಗ ನಗರಗಳಲ್ಲಿ ಎತ್ತರೆತ್ತರದ ದುಬಾರಿ, ಕಮರ್ಶಿಯಲ್ ಕಟ್ಟಡಗಳ ನಿರ್ಮಾಣ ಅನಿವಾರ್ಯ ಆಗಿದೆ. ಈ ಎತ್ತರದ ಕಟ್ಟಡ ಮುಂದೆ ಯಾವುದೇ ಸಂದರ್ಭದಲ್ಲಿ ಕಷ್ಟದ ಮಳೆ ಸುರಿಸಬಹುದು. ಇದು ನಗರಗಳು ಬೆಳೆಯಲು ಅನಿವಾರ್ಯ. ಸಾಮಾನ್ಯ ಜನರ ಬದಲಾಗುತ್ತಿರುವ ಜೀವನಶೈಲಿಗೆ ತಕ್ಕಂತೆ ಟೆಕ್ನಿಕಲಿ ಇದು ಸುಲಭ ಸಾಧ್ಯ. ಎಷ್ಟೋ ರಾಜ್ಯ ಸರ್ಕಾರಗಳು ಈಗಲೂ ಸಹ ಹಳೆಯ ಕಂದಾಚಾರದ ಕಾನೂನು ಅನುಸರಿಸುತ್ತಾ, ಜನರನ್ನು ತಮ್ಮ ಸೈಟ್ ವಿಸ್ತರಿಸಲು ಬಿಡದೆ, ಅಲ್ಲಿ ಎತ್ತರದ ಕಟ್ಟಡ ಕಟ್ಟಲು ಬಿಡದೆ ಸತಾಯಿಸುತ್ತಿವೆ. ಇದು ಬಹು ದೊಡ್ಡ ಲಂಚಕೋರತನ, ಅಪ್ರಾಮಾಣಿಕತೆಗಳಿಗೆ ಜನ್ಮ ನೀಡುತ್ತದೆ.
ನಗರಗಳಲ್ಲಿ ಫ್ಲೋರ್ ಏರಿಯಾ ಪ್ರತಿ ಚದುರಡಿ ಲೆಕ್ಕದಲ್ಲೇ ಮಾರಲ್ಪಟ್ಟು, ಬಿಲ್ಡಿಂಗ್ ಮಾಫಿಯಾ ಅದನ್ನು ಕಪಿಮುಷ್ಟಿಯಲ್ಲಿ ಹಿಡಿದಿರುವುದು ಮಹಾ ಅನ್ಯಾಯ. ಈಗ ನಗರದಿಂದ ದೂರಾದ ಹಳ್ಳಿಗಳಲ್ಲಿ, ನಗರ ನಿಗಮ ಹಾಗೂ ರಾಜ್ಯ ಸರ್ಕಾರಗಳ ನಿಯಮ ಎಲ್ಲಿ ನಡೆಯುವುದಿಲ್ಲವೋ, ಅಲ್ಲೆಲ್ಲ ಜನ ತಮ್ಮ ಹರಡಿಕೊಂಡಿರುವ ಮನೆಗಳನ್ನು ಮುರಿಸಿ, ಸಣ್ಣ ಆದರೆ ಎತ್ತರದ ಕಟ್ಟಡಗಳನ್ನು ನಿರ್ಮಿಸುತ್ತಿದ್ದಾರೆ. ಸರ್ಕಾರಿ ನಿಯಮ ಇಲ್ಲಿ ಮಾಡುವುದಿಷ್ಟೆ, ಸೈಟ್ ಮಾಲೀಕರು ಬೇಗ ಆ ಕಟ್ಟಡ ಪೂರ್ಣಗೊಳಿಸಲು, ಸರಿಯಾದ ಟೆಕ್ನಿಕ್ ಅನುಸರಿಸಿದ್ದಾರೆಯೇ ಇಲ್ಲವೇ ಗಮನಿಸದೆ ನಿರ್ಲಕ್ಷಿಸುತ್ತದೆ. ಮುಂದೆ ಆ ಕಟ್ಟಡದಲ್ಲಿ ಎಲ್ಲೆಲ್ಲೋ ಬಿರುಕು ಕಾಣಿಸಿಕೊಂಡು, ಸೊಟ್ಟಂಪಟ್ಟ ಆಗುವ ಸಾಧ್ಯತೆ ಸುಳ್ಳಲ್ಲ.
ಈ ನಿಮಯಗಳನ್ನು ಸಾಧಾರಣ ಏಕರೂಪವಾಗಿ ಇರಿಸಿಕೊಳ್ಳುವುದನ್ನು ತುಸು ಬದಲಾಯಿಸಿದಾಗ, ಪ್ರತಿ ಕಾಲೋನಿಯಲ್ಲೂ ಸಾವಿರಾರು ಮನೆ/ಕಟ್ಟಡ ತಲೆಯೆತ್ತಬಲ್ಲದು. ಜನ ತಾವೇ ಪಾರ್ಕಿಂಗ್‌ವ್ಯವಸ್ಥೆ ಮಾಡಿಕೊಳ್ಳಬಲ್ಲರು. ಆದರೆ ಪ್ರತಿ ಹೆಜ್ಜೆಗೂ ಸರ್ಕಾರದ ಕುಂಡಲಿ ಹರಡಿರುವುದರಿಂದ, ಜನ ಬೇಸತ್ತು ನಿಟ್ಟುಸಿರಿಡುತ್ತಾರೆ. ಆಸೆಪಟ್ಟರೂ ಸಹ ತಮ್ಮಿಚೆಯ ಮನೆ ಕಟ್ಟಿಕೊಳ್ಳಲಾಗದೆ ಒದ್ದಾಡುತ್ತಾರೆ. ಜೊತೆಗೆ ಸುತ್ತಮುತ್ತಲಿನ ಪ್ರದೇಶವನ್ನು ಶುಚಿಯಾಗಿ ಇಟ್ಟುಕೊಳ್ಳಲಾಗದೆ ಕಷ್ಟಪಡುತ್ತಾರೆ.
ಸರ್ಕಾರಕ್ಕೆ ಗೊತ್ತಿರುವುದೊಂದೇ, ನಗರದ ಮಂದಿ ಚಿನ್ನದ ಮೊಟ್ಟೆ ಇಡುವ ಕೋಳಿಗಳು! ಇವನ್ನು ಸತಾಯಿಸಿ, ಬೇಕಾದ್ದು ವಸೂಲು ಮಾಡಿ, ನಂತರ ತಿನ್ನಬಹುದು. ಒಂದು ಪಕ್ಷ ಮನೆಗಳು ಜಾಸ್ತಿಯಾದರೆ, ಅಗ್ಗವಾದರೆ, ಜನ ವಾಸಿಸಲು ಯೋಗ್ಯವಾದರೆ, ಜನ ಅಂಜಿಕೆ ಇಲ್ಲದೆ ನೆಮ್ಮದಿಯಾಗಿರಬಹುದು ಎಂಬುದನ್ನು ಸರ್ಕಾರ ಮರೆಯುತ್ತದೆ. ಆಗ ಮಾತ್ರ ಜನ ಹೆಚ್ಚಿನ ಸಂಪಾದನೆಯತ್ತ ಗಮನಹರಿಸಬಲ್ಲರು. ಆಗ ಇಡೀ ನಗರ ಶ್ರೀಮಂತವಾಗುತ್ತದೆ. ಆಗ ಸರ್ಕಾರಕ್ಕೆ ನಾನಾ ಮೂಲಗಳಿಂದ ಹೆಚ್ಚಿನ ತೆರಿಗೆ ಲಭಿಸುತ್ತದೆ.
ಹರಿಯಾಣಾ ಸರ್ಕಾರ ಇತ್ತೀಚೆಗೆ ತನ್ನ ಕಡೆಯ ಮನೆಗಳಿಗೆ, ಮೇಲೆ ಇನ್ನೊಂದು ಮಹಡಿ ಮನೆ ಕಟ್ಟಿಕೊಳ್ಳಲು ಅನುಮತಿ ನೀಡಿದ್ದೇ ತಡ, ಅಲ್ಲಿನ ಸೈಟ್ ಬೆಲೆ ಗಗನಕ್ಕೇರಿತು. ಇದರಿಂದ ಸರ್ಕಾರದ ಬೊಕ್ಕಸ ತುಂಬಿಕೊಂಡಿತು. ಅನುಮತಿ ಕೊಡದೆ ಇದ್ದಿದ್ದರೆ ಆಗಲೂ ಮಹಡಿ ಏಳುತ್ತಿತ್ತು, ಆದರೆ ಲಂಚ ರೂಪದಲ್ಲಿ ಅದನ್ನು ಅಧಿಕಾರಿಗಳು ಸ್ವಾಹಾ ಮಾಡುತ್ತಿದ್ದರು.
ಜನ ಎಂಥ ಅನುಕೂಲಕರ ಮನೆಗಳಲ್ಲಿ ವಾಸಿಸಬಹುದು, ಟ್ರಾಫಿಕ್ ನಿಂದ ಬಚಾವಾಗಬಹುದು, ನಲ್ಲಿ ನೀರು ವ್ಯವಸ್ಥೆ ಅವರೇ ಮಾಡಿಕೊಳ್ಳುತ್ತಾರೆ, ಇತ್ಯಾದಿ ಯೋಚನೆಗಳು ಸರ್ಕಾರಕ್ಕೇ ಗೊತ್ತು ಎಂದು ನಾವು ಅಂದುಕೊಂಡರೆ, ಅದು ಖಂಡಿತಾ ತಪ್ಪು. ಜನ ಸರ್ಕಾರಿ ಅಧಿಕಾರಿಗಳಿಗಿಂತ ಬುದ್ಧಿವಂತರು, ತಮ್ಮ ಹಿತವನ್ನು ಚೆನ್ನಾಗಿ ಬಲ್ಲವರು. ಅಕ್ರಮಸಕ್ರಮ ಕಟ್ಟಡಗಳ ನಿರ್ಮಾಣದ ಕುರಿತಾಗಿ ವಿಚಾರಗಳು ಈ ರೀತಿ ಕೊನೆಯಾಗಬೇಕು. ಅಂದ್ರೆ ಇಂದಿನ ಸಮಾಜ ನೈತಿಕ ಅನೈತಿಕ ಸಂತಾನಗಳ ನಡುವೆ ವ್ಯತ್ಯಾಸ ಗುರುತಿಸದಂತೆ!





