ಸರಸ್ವತಿ*

ಪುಟ್ಟಣ್ಣ ಕಣಗಾಲ್ ಅವರ ನಾಗರಹಾವು ಚಿತ್ರ ಕನ್ನಡ ಚಿತ್ರರಂಗದ ಇತಿಹಾಸ ಪುಟಗಳಲ್ಲಿ ರಾರಾಜಿಸಿದಂತಹ ಯಶಸ್ವೀ ಚಿತ್ರ..ಇಂದಿಗೂ ಇಷ್ಟ ಪಟ್ಟು ನೋಡುತ್ತಾರೆ. ವಿಷ್ಣು ವರ್ಧನ್ ಅವರಂತಹ ಪ್ರತಿಭಾವಂತ ನಟನನ್ನು ಬೆಳ್ಳಿತೆರೆಗೆ ನೀಡಿತು. ಆರತಿ ಒಂದಷ್ಟು ವರ್ಷ ಕನ್ನಡ ಚಿತ್ರರಂಗವನ್ನು ಆಳಿದಂತಹ ತಾರೆಯಾಗಿ ಮೆರೆದರು. ಈ ಚಿತ್ರ ಇಡೀ ಭಾರತ ಚಿತ್ರರಂಗದಲ್ಲಿ ಸುದ್ದಿ ಮಾಡಿದಾಗ ಕೆಲವು ಭಾಷೆಗಳಿಗೂ ರೀಮೇಕ್ ಆಗಿತ್ತು. ಹಿಂದಿಯಲ್ಲಿ ಆಗಷ್ಟೇ ಬಾಬ್ಬಿ ಚಿತ್ರದ ಮೂಲಕ ಲವರ್ ಬಾಯ್ ಇಮೇಜ್ ಪಡೆದಿದ್ದ ರಿಷಿಕಪೂರನನ್ನು ಹಾಕಿ ಪುಟ್ಟಣ್ಣ ಕಣಗಾಲ್ ನಿರ್ದೇಶನದಲ್ಲೇ ಜಹರೀಲಾ ಇನ್ಸಾನ್ ಎಂಬ ಚಿತ್ರ ಬಂದಿತು. ಈ ಸಿನಿಮಾ ಯಶಸ್ಸಾಯಿತೋ ಬಿಡ್ತೋ ಗೊತ್ತಿಲ್ಲ ..ಆದರೆ ಇತ್ತೀಚೆಗೆ ನೋಡಿದಾಗ ಯಾಕಪ್ಪಾ ಪುಟ್ಟಣ್ಣ ಈ ಸಿನಿಮಾ ಒಪ್ಪಿಕೊಂಡರು ಅಂತನಿಸಿದ್ದಂತೂ ಸತ್ಯ. ಬಾಬ್ಬಿ ನಂತರ ರಿಷಿ ಒಪ್ಪಿಕೊಂಡ ಚಿತ್ರವಿದಂತೆ … ರಿಷಿ ಕಪೂರ್ ನೆನಪಿಗಾಗಿ ರಿಪಬ್ಲಿಕ್ ನ್ಯೂಸ್ ಚಾನಲಲ್ಲಿ ಆತನ ಸಹೋದ್ಯೋಗಿಗಳು ಮಾತನಾಡುತ್ತಾ ನಟ ಪೇಂತಲ್ ‘ರಿಷಿ ಜಹರೀಲಾ ಇನ್ಸಾನ್ ಚಿತ್ರವನ್ನು ಒಪ್ಪಿಕೊಂಡಾಗ ನಾನು ಬೇಡ ಅಂದಿದ್ದೆ ನಿನ್ನ ಈಗಿರುವ ಇಮೇಜಿಗೆ ಸೂಟ್ ಆಗೋದಿಲ್ಲ ಅಂದಿದ್ದೆ ಆದರೆ ರಿಷಿ ಕಪೂರ್ ಮಾಡೇ ಮಾಡ್ತೀನಿ ಅಂತ ಹಟ ಹಿಡಿದು ಮಾಡಿದ ..ಎಂಬ ಮಾತುಗಳನ್ನು ಕೇಳಿದಾಗ ಇಲ್ಲಿ ಇಮೇಜಿಗಿಂತ ಪಾತ್ರ ನಿರ್ವಹಿಸುವ ಕಲಾವಿದ ಬಹಳ ಮುಖ್ಯ ಎಂಬುದನ್ನು ಅಲ್ಯಾರೂ ಪ್ರಸ್ತಾಪಿಸುವುದಿಲ್ಲ. ತಾ.ರಾ.ಸು , ಚಿತ್ರದುರ್ಗ,ರಾಮಾಚಾರಿ, ಅಲಮೇಲು, ಚಾಮಯ್ಯ ಮೇಷ್ಟ್ರು, ಇವರೆಲ್ಲ ನಮ್ಮವರು ..ನಮ್ಮ ನೇಟಿವಿಟಿ.. ಇದೆಲ್ಲಾ ಪರಭಾಷೆಯವರಿಗೇನು ಗೊತ್ತಿರೋತ್ತೆ.. ರಾಮಾಚಾರಿ ಅಂದಕೂಡಲೇ ವಿಷ್ಣುವರ್ಧನ್ ಬಿಟ್ಟು ಬೇರೆಯವರನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ರಿಷಿ ಕಪೂರ್ ಒಬ್ಬ ಒಳ್ಳೆಯ ನಟ ನಿಜ ಆದರೆ ರಾಮಾಚಾರಿ ಪಾತ್ರ ನಿಭಾಯಿಸುವಲ್ಲಿ ಒಂದ್ ಪರ್ಸೆಂಟು ಸಮಕ್ಕೆ ಬರಲಿಲ್ಲ ..

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ