ಗ್ರೀನ್‌ ಮೆಜೆಂತಾ ಕಲರ್‌ ನ, ಅತ್ಯಾಕರ್ಷಕ ಗೋಲ್ಡನ್‌ ಎಂಬ್ರಾಯಿಡರಿಯುಳ್ಳ ಈ ಕುರ್ತಿಗಳು ಎಂಥ ಫಂಕ್ಷನ್‌/ಪಾರ್ಟಿಗಾದರೂ ಒಪ್ಪುತ್ತವೆ. ಇದರ ಜೊತೆ ಗೋಲ್ಡನ್‌ ಸ್ಯಾಂಡಲ್ಸ್, ಮ್ಯಾಚಿಂಗ್‌ ಜ್ಯೂವೆಲರಿ ಧರಿಸಿದ ಮೇಲೆ ಸೊಗಸು ಇಮ್ಮಡಿಸಿದೆ! ನೀವು ಇಂಥದ್ದು ಟ್ರೈ ಮಾಡಿ ಪಾರ್ಟಿಗೆ ಹೊರಡಬಾರದೇಕೆ?

ಸೇಜ್‌ ಗ್ರೀನ್‌ ಪ್ರಿಂಡೆಟ್‌,  ಲೈನ್‌ ಕುರ್ತಾದ ರಿಚ್‌ ಲುಕ್ಸ್ ಹೆಚ್ಚಿಸಲು, ಜೊತೆಗೆ ಹೈಹೀಲ್ಸ್ ಲೈಟ್‌ ಮೇಕಪ್‌ ಇರಲಿ. ಓಪನ್‌ ಹೇರ್‌, ಮಾಡರ್ನ್‌ ಆ್ಯಕ್ಸೆಸರೀಸ್‌ ಇವಳನ್ನು ಅತ್ಯಾಧುನಿಕಳನ್ನಾಗಿಸಿದೆ!

Fashion-B

ಈ ಆಫ್‌ ವೈಟ್‌ ಸ್ಟ್ರೇಟ್‌ ಕುರ್ತಿಗಳು, ಕಡು ಕಪ್ಪಾದ ಪ್ಯಾಂಟಿನ ಜೊತೆ ಚೆನ್ನಾಗಿ ಒಪ್ಪುತ್ತವೆ. ಇದರ ಜೊತೆ ಕಾಂಪ್ಲಿಮೆಂಟರಿಯಾಗಿ, ಮಿನಿಮಮ್ ಮೇಕಪ್‌ ಲುಕ್ಸ್ ಹಾಗೂ ಬ್ಲ್ಯಾಕ್‌ ಸ್ಯಾಂಡಲ್ಸ್, ಈ ಗೆಳತಿಯರನ್ನು ವೆರಿ ಬ್ಯೂಟಿಫುಲ್ ಆಗಿಸಿವೆ!

ಬೋಲ್ಡ್ ಪ್ರಿಂಟ್‌ ವುಳ್ಳ ಈ ಫ್ರಂಟ್‌ ಕಸೂತಿಯ ಇಂಡಿಗೋ ಲಿವಾ ಕುರ್ತಾ ಜೊತೆ ಪ್ಲಾಜೋ ಪ್ಯಾಂಟ್‌, ಇವಳನ್ನು ನಾಲ್ವರ ಗುಂಪಿನಲ್ಲಿ ಎದ್ದು ಕಾಣುವಂತೆ ಮಾಡಿದೆ. ಇದರ ಜೊತೆಗೆ ಮಾಡರ್ನ್‌ ಫುಟ್‌ ವೇರ್‌, ಲಾಂಗ್‌ ರಿಂಗ್ಸ್, ಕೈಗಳ ಉಂಗುರ, ಲೈಟ್ ಮೇಕಪ್‌ ಇವಳಿಗೆ ಹೆಚ್ಚಿನ ಆಕರ್ಷಣೆ ತಂದುಕೊಟ್ಟಿದೆ.

Fashion-C

ಈ ಆಕಾಶನೀಲಿ ಕಾಟನ್‌ ಬ್ಲೆಂಡ್‌ ಡ್ರೆಸ್‌ ಅಥವಾ ಕಸೂತಿಯುಳ್ಳ ನಿಂಬೆ ಹಸಿರಿನ ಕುರ್ತಾ ಇರಲಿ, ಇವರಿಬ್ಬರಿಗೂ ಸಾಫ್ಟ್ ಸ್ಟೈಲಿಶ್ ಲುಕ್ಸ್ ನೀಡುತ್ತಿವೆ. ಉಡುಗೆಗೆ ತಕ್ಕಂತೆ ಆ್ಯಕ್ಸೆಸರೀಸ್‌, ಲೈಟ್‌ ಮೇಕಪ್‌ ಇವರಿಗೆ ಸರಳತೆಯಲ್ಲೂ ಹೆಚ್ಚಿನ ಸೌಂದರ್ಯ ಒದಗಿಸಿದೆ!

ಹಳದಿ ಬಣ್ಣದ ಈ ಸ್ಟ್ರೇಟ್‌ ಕುರ್ತಾ ಜೊತೆ ಅಚ್ಚ ಬಿಳುಪಿನ ಸ್ಟ್ರೇಟ್‌ ಪ್ಯಾಂಟ್‌ ಹಾಗೂ ಹೈಹೀಲ್ಸ್, ಈಕೆ ಈವ್ನಿಂಗ್‌ ಪಾರ್ಟಿಗೆ ರೆಡಿ ಎಂದು ಸಾರುತಿವೆ!

Fashion-4

ಬ್ಲ್ಯಾಕ್‌ ಪ್ಲೇರ್‌ ಶಾರ್ಟ್‌ ಡ್ರೆಸ್‌ ಇವಳ ಗ್ಲಾಮರ್‌ ಹೆಚ್ಚಿಸಿದೆ!

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ