ಹಬ್ಬಗಳ ಸಂದರ್ಭದಲ್ಲಿ ನಿಮ್ಮ ಮುಖ ಹೆಚ್ಚಿನ ಗ್ಲೋ ಗಳಿಸಿ ಕಾಂತಿಯುತವಾಗಿ ಲವಲವಿಕೆ ಗಳಿಸಬೇಕೇ…..?
ಶ್ರಾವಣ ಮಾಸದಿಂದ ಹಬ್ಬಗಳ ಮೇಲೆ ಹಬ್ಬಗಳು ಆರಂಭವಾಗುತ್ತವೆ! ಗೃಹಿಣಿ ಮನೆಯ ಗೃಹಾಲಂಕಾರದಲ್ಲಿ ಸದಾ ಬಿಝಿ ಆಗಿಬಿಡುತ್ತಾಳೆ. ಈ ಕೋಣೆ ಕ್ಲೀನಿಂಗ್, ಆ ಕೋಣೆ ಶೈನಿಂಗ್, ಕಿಚನ್ ಕ್ಲೀನಿಂಗ್, ಫ್ಯಾನ್ ಒರೆಸಾಟ…… ಇತ್ಯಾದಿಗಳಲ್ಲಿ ಮುಳುಗಿ ತನ್ನ ಸಮಯವನ್ನೆಲ್ಲ ಅದಕ್ಕೆ ಮೀಸಲಿಡುತ್ತಾಳೆ. ನಂತರ ಹಬ್ಬದ ಸಡಗರಸಂಭ್ರಮ ಹೆಚ್ಚಿಸಲು ಮನೆಮಂದಿಗೆಲ್ಲ ಬೇಕಾದ ಬಟ್ಟೆಬರೆ, ಒಡವೆ ಕೊಳ್ಳುವಿಕೆ, ಹಬ್ಬದ ಸಿಹಿ ತಿನಿಸುಗಳ ತಯಾರಿ ಇತ್ಯಾದಿಗಳಲ್ಲಿ ಮುಳುಗಿ ಹೋಗುತ್ತಾಳೆ. ಇಷ್ಟೆಲ್ಲ ಮಾಡುವ ತಾನು, ಹಬ್ಬದ ದಿನ ಅತಿಥಿಗಳು ಬಂದಾಗ ಅವರೆದುರು ನೀಟಾಗಿ ಕಾಣಿಸಿಕೊಳ್ಳಲು ತನ್ನ ಕುರಿತಾಗಿಯೂ ಕೇರ್ ತೆಗೆದುಕೊಳ್ಳಬೇಕು ಎಂಬುದನ್ನೇ ಮರೆಯುತ್ತಾಳೆ.
ಹಬ್ಬದ ಗಡಿಬಿಡಿಯ ತಯಾರಿಯಲ್ಲಿ ತನ್ನನ್ನು ತಾನು ಅಲಂಕರಿಸಿಕೊಳ್ಳಲು ಅವಳಿಗೆ ಹೆಚ್ಚಿನ ಬಿಡುವು ಎಲ್ಲಿಂದ ಸಿಗಬೇಕು? ತನ್ನ ಮುಖಕ್ಕೆ ಹೊಸ ಮೆರುಗು ಎಲ್ಲಿಂದ ಕೊಡಲು ಸಾಧ್ಯ? ಚಂದ್ರಮನಂಥ ಕಾಂತಿ ಗಳಿಸಿಕೊಳ್ಳುವುದು ಹೇಗೆ? ತಮ್ಮನ್ನು ತಾವೇ ನೋಡಿಕೊಳ್ಳಬೇಕು ಎಂಬುದನ್ನು ನೆನಪಿಡಬೇಕು. ಇದೆಲ್ಲದಕ್ಕೆ ಕಾರಣ ಸಮಯದ ಅಭಾವ. ಫೆಸ್ಟಿವ್ ಸೀಸನ್ ನಲ್ಲಿ ಸ್ಪೆಷಲ್ ಆಗಿ ಕಂಡುಬರಲು ಹಲವು ಉಪಾಯ ಅನುಸರಿಸಬೇಕು. ಆಗ ಮಾತ್ರ ಕಲೆರಹಿತ (ಫ್ಲಾಲೆಸ್) ಅಕಳಂಕ ರೂಪ ಲಾವಣ್ಯ ನಿಮ್ಮದಾಗಲು ಸಾಧ್ಯ.
ಈ ಕೆಳಗಿನ ಸ್ಪೆಷಲ್ ಪ್ರಾಡಕ್ಟ್ಸ್ ಕಡೆ ಗಮನಹರಿಸಿ ಗೃಹಿಣಿ ಇಂಥ ಅಪೂರ್ವ ಸೌಂದರ್ಯ ಪಡೆಯಬಹುದು. ಇದರಿಂದ ಚರ್ಮಕ್ಕೆ ವಿಶೇಷ ಕಾಂತಿ, ಹೊಳಪು, ರಂಗು, ಚೆಲುವು ಎಲ್ಲ ಕೂಡುತ್ತದೆ. ಇವುಗಳತ್ತ ತುಸು ವಿವರವಾಗಿ ಗಮನಿಸೋಣವೇ? :
ಫೇಸ್ ಮಾಸ್ಕ್
ಬೇವು, ಪ್ಲಮ್, ಬೀಟ್‌ರೂಟ್, ಅರಿಶಿನ, ಚಂದನ ಇತ್ಯಾದಿಗಳ ಫೇಸ್ ಮಾಸ್ಕ್ ಈಗ ಹಳೆಯದಾಯಿತು. ನಿಮಗೆ ಇನ್ ಸ್ಟೆಂಟ್ ಗ್ಲೋ ಬೇಕೇ? ಇದಕ್ಕಾಗಿ ಅತ್ಯಾಧುನಿಕ ಟೆಕ್ನಾಲಜಿ ಅನುಸರಿಸಿ ಬಂದಿದೆ ಫೇಸ್ ಮಾಸ್ಕ್. ಇದು ನಿಮ್ಮ ಮುಖಕ್ಕೆ ಕೇವಲ ಇನ್ ಸ್ಟೆಂಟ್ ಗ್ಲೋ ನೀಡುವುದಲ್ಲದೆ, ನಿಮ್ಮ ಮುಖದ ಪಿಗ್ಮೆಂಟೇಶನ್ನಿನ ಸಮಸ್ಯೆಗಳನ್ನೂ ದೂರ ಮಾಡುತ್ತದೆ! ಹಾಗೆಯೇ ಮುಖದ ಡೀಪ್ ಕ್ಲೀನಿಂಗ್ ನಲ್ಲೂ ನೆರವಾಗುತ್ತದೆ.
ನೀವು ಉತ್ತಮ ಫೇಸ್ ಮಾಸ್ಕ್ ಬಯಸಿದರೆ, ಪ್ರೋಟಚ್ ಕಂಪನಿಯ 3 ಇನ್ 1 ಫೇಸ್ ಮಾಸ್ಕ್ ಟ್ರೈ ಮಾಡಿ ನೋಡಿ. ಇದರ ಬೆಲೆ ಸುಮಾರು 2 ಸಾವಿರ ಆಗಬಹುದು. ಇದನ್ನು ನೀವು ವಾರಕ್ಕೆ 2-3 ಸಲ ಬಳಸಿದರೂ ಸಾಕು. ಇದು ಅಮೆಝಾನ್, ಮಿಂತ್ರಾ ಮೂಲಕ ಸುಲಭ ಲಭ್ಯ.
ನೋಸ್ ಸ್ಟ್ರಿಪ್ಸ್ ನಿಮ್ಮ ಮೂಗಿನ ಮೇಲೆ ಹೇರಳ ಬ್ಲ್ಯಾಕ್ ಹೆಡ್ಸ್ ಆಗಿವೆಯೇ? ಪಾರ್ಲರ್ ಗೆ ಹೋಗಲು ಟೈಮಿಲ್ಲ ಅಂತೀರಾ? ನೋ ಪ್ರಾಬ್ಲಂ! ನೋಸ್ ಸ್ಟ್ರಿಪ್ಸ್ ನೆರವಿನಿಂದೆ ಕೇವಲ 5 ನಿಮಿಷಗಳಲ್ಲಿ ನಿಮ್ಮ ಮೂಗಿನ ಮೇಲಿನ ಎಲ್ಲಾ ಬ್ಲ್ಯಾಕ್ ಹೆಡ್ಸ್ ನ್ನೂ ತೊಲಗಿಸಬಹುದು. ಈ ನೋಸ್ ಸ್ಟ್ರಿಪ್ಸ್ ಖಂಡಿತಾ ಪಾಕೆಟ್ ಫ್ರೆಂಡ್ಲಿ ಎನಿಸಿದೆ. ಕೇವಲ 200 ರೂ. ಬಳಸಿ ನೀವು ಪರ್ಫೆಕ್ಟ್ ಕ್ಲೀನ್ ನೋಸ್ ಪಡೆಯಬಹುದು. ಇದನ್ನು ನೀವು ಅಮೆಝಾನ್, ಮಿಂತ್ರಾ, ಫ್ಲಿಪ್ ಕಾರ್ಟ್, ಮೀಶೋ, ನೈಕಾ, ಅಜಿಯೋಗಳಿಂದ ಪಡೆಯಬಹುದು.
ಪಿಂಪಲ್ಸ್ ಪ್ಯಾಚ್
ಯೌವನದಲ್ಲಿರುವ ಹೆಣ್ಣಿಗೆ ಮೊಡವೆ ಬೇಡದ ಒಡವೆ! ಅದರಲ್ಲೂ ಹಬ್ಬಗಳು ಹತ್ತಿರ ಬಂದಾಗ, ಹಲವರ ಜೊತೆ ಬೆರೆಯಬೇಕಾದಾಗ, ಈ ಮೊಡವೆಯ ಗೊಡವೆ ನೆನೆದರೆ ಕಿರಿಕಿರಿ ಎನಿಸುತ್ತದೆ. ಹಬ್ಬದ ತಯಾರಿಯಲ್ಲಿ ಗೃಹಾಲಂಕಾರದಲ್ಲಿ ಮುಳುಗಿದ ಹೆಣ್ಣಿಗೆ ಇದನ್ನು ನಿವಾರಿಸಿಕೊಳ್ಳಲು ಪುರಸತ್ತು ಎಲ್ಲಿಂದ ಸಿಗಬೇಕು? ಹೀಗಾಗಿ ಇಂಥ ಗಡಿಬಿಡಿಯಲ್ಲಿರುವ ಹೆಂಗಸರ ಮೊಡವೆ ನಿವಾರಣೆಗೆಂದೇ ಇದೀಗ ಪಿಂಪ್ ಪ್ಯಾಚ್ ಸುಲಭ ಲಭ್ಯ.
ಇದು ಹೈಡ್ರೋ ಕೊಲೈಡ್ ನಿಂದ ತಯಾರಾಗಿದೆ. ಸ್ಯಾಲಿಸಿಲಿಕ್ ಆ್ಯಸಿಡ್ ಹಾಗೂ ಬೆನ್ ಝೈಲ್ ಪೆರಾಕ್ಸೈಡ್ ನಂಥ ಆ್ಯಂಟಿ ಆ್ಯಕ್ನೆ ಘಟಕಗಳು ಇದರಲ್ಲಿ ಹೇರಳಾಗಿವೆ. ಇದರ ಜೆಲ್ ನಂಥ ಡ್ರೆಸ್ಸಿಂಗ್ ನ್ನು ಮೊಡವೆಗಳ ಮೇಲೆ ಸವರಿದರೆ, ಅದರ ನಿವಾರಣೆ ಸುಲಭ ಸಾಧ್ಯ. ಮೊಡವೆಗಳ ಮೇಲೆ ಇದರ ಬಳಕೆಯಿಂದ ಅವು ಬೇಗ ಒಣಗಿ ಹೋಗುತ್ತವೆ. ಅದನ್ನು ನಿಧಾನವಾಗಿ ಒತ್ತುತ್ತಾ ಒಡೆಯುವಂತೆ ಮಾಡುತ್ತದೆ. ಕೆಲವು ಗಂಟೆಗಳಲ್ಲಿ ಮೊಡವೆ ಮಾಯವಾಗುತ್ತದೆ. ಜೊತೆಗೆ ಇದು ಮೊಡವೆ ಭಾಗ ಫ್ಲಾಟ್ ಆಗಿರುವಂತೆ ಮಾಡಬಲ್ಲದು. ಪಾರದರ್ಶಿ ಗುಣ ಹೊಂದಿದ ಇದು, ಮೊಡವೆಯ ಸೋಂಕು ಹರಡದಂತೆ ತಡೆಯಬಲ್ಲದು. ಹಗಲಿನ ಹೊತ್ತು ಹಾಗೂ ರಾತ್ರಿಗಾಗಿ ಇವು ಬೇರೆ ಬೇರೆ ಆಗಿರುತ್ತವೆ ಎಂಬುದನ್ನು ನೆನಪಿಡಿ. ಇದರ ಬೆಲೆ ಸುಮಾರು 2500 ರೂ. ಇದ್ದು, ಆನ್ ಲೈನ್ ನಲ್ಲಿ ಸುಲಭವಾಗಿ ಖರೀದಿಸಬಹುದು.
ಆ್ಯಕ್ನೆ ಸ್ಪಾಟ್ ಕಲರ್ ಕರೆಕ್ಟರ್
ಆ್ಯಕ್ನೆ ತುಂಬಿದ ಮುಖ ಯಾರಿಗೆ ಇಷ್ಟವಾದೀತು? ಮೇಕಪ್ ನಿಂದ ಇದನ್ನು 100% ಮರೆಮಾಚಲಾಗದು. ಹೀಗಾಗಿ ಅತಿ ಕಡಿಮೆ ಸಮಯದಲ್ಲಿ ಬ್ಯೂಟಿಫುಲ್ ಆಗಿ ಕಾಣಿಸಿಕೊಳ್ಳುವುದು ಮ್ಯಾಜಿಕ್ಕೇ ಸರಿ. ಇಂಥದ್ದೇ ಒಂದು ಸ್ಮಾರ್ಟ್ ಪ್ರಾಡಕ್ಟ್ ಆಗಿದೆ, ಆ್ಯಕ್ನೆ ಸ್ಪಾಟ್ ಕರೆಕ್ಟರ್, ಇದು ನಿಮ್ಮ ಮುಖದಲ್ಲಿನ ಎಲ್ಲಾ ಆ್ಯಕ್ನೆಗಳನ್ನೂ ಮರೆಮಾಚುವಲ್ಲಿ ಸಹಾಯಕ.
ಇದನ್ನು ಬಳಸಲಿಕ್ಕಾಗಿ, ಮೊದಲು ನೀವು ಮುಖಕ್ಕೆ ಪ್ರೈಮರ್ ತೀಡಿರಿ. ನಂತರ ಗ್ರೀನ್ ಕಲರ್ ಕರೆಕ್ಟರ್ ಯೂಸ್ ಮಾಡಿ. ಇದನ್ನು ಬಳಸಲು ನೀವು ಮೊದಲು ಎಲ್ಲಕ್ಕೂ ಚಿಕ್ಕ ಸೈಝಿನ ಕನ್ಸೀಲರ್ ಬ್ರಶ್ ಬಳಸಬೇಕು. ಇದರ ಬೆಲೆ ಸುಮಾರು 250/ ರೂ. ಇದನ್ನು ಆನ್ ಲೈನ್ ನಲ್ಲಿ ಸುಲಭವಾಗಿ ಕೊಳ್ಳಬಹುದು.
ಆ್ಯಂಟಿರಿಂಕಲ್ ಐ ಸೀರಮ್ ಪ್ಯಾಚ್
ಆಫೀಸ್ ಹಾಗೂ ಮನೆ ಎರಡೂ ಕಡೆ ದುಡಿಯುತ್ತಾ ನಿಮ್ಮ ಕಂಗಳ ಕೆಳಗೆ ಕಪ್ಪು ವೃತ್ತಗಳು ಹೆಚ್ಚಾಗಿಯೇ? ಇದಕ್ಕಾಗಿ ನೀವು ಆ್ಯಂಟಿರಿಂಕಲ್ ಐ ಸೀರಮ್ ಪ್ಯಾಚ್ ಬಳಸಿ ಇಂಥ ಡಾರ್ಕ್ ಸರ್ಕಲ್ ನ್ನು ಸುಲಭವಾಗಿ ನಿವಾರಿಸಿಕೊಳ್ಳಬಹುದು. ಇದರ ಬೆಲೆ ಸುಮಾರು 300/ ರೂ. ಆಗುತ್ತದೆ. ಆನ್ ಲೈನ್‌ಆಫ್ ಲೈನ್ ಎರಡೂ ಕಡೆ ಇದು ಲಭ್ಯ.
ಐಬ್ರೋ ರಿಮೂವರ್ ಟ್ರಿಮರ್
ಹಬ್ಬಗಳ ಸಂದರ್ಭದಲ್ಲಿ ಪಾರ್ಲರ್ ಗೆ ಹೋಗಲು ಸಮಯವಿಲ್ಲದಿದ್ದರೆ ನೋ ಪ್ರಾಬ್ಲಂ, ಈ ಐಬ್ರೋ ರಿಮೂವರ್ ಟ್ರಿಮರ್ ಖರೀದಿಸಿ. ಇದು ನಿಮಗೆ ಕೇವಲ ಐದೇ ನಿಮಿಷಗಳಲ್ಲಿ ಪರ್ಫೆಕ್ಟ್ ಐಬ್ರೋ ಹಾಗೂ ಅಪ್ಪರ್ ಲಿಪ್ಸ್ ಫಿನಿಶಿಂಗ್ ನೀಡುತ್ತದೆ. ಹೀಗೆ ಇದನ್ನು ಬಳಸಿ ನಿಮ್ಮ ಬಿಗಡಾಯಿಸಿದ ಐಬ್ರೋ ಶೇಪ್ ನ್ನು ಸುಂದರಗೊಳಿಸಿ, ಅತ್ಯಾಕರ್ಷಕ ಲುಕ್ಸ್ ನೀಡಬಹುದು.
ಬಾಥ್ ಗ್ಲೌಸ್
ಹಬ್ಬದ ಗಡಿಬಿಡಿ ಮಧ್ಯೆ ನೀವು ಪೆಡಿಕ್ಯೂರ್ ಮೆನಿಕ್ಯೂರ್ ಮಾಡಿಸಲಾಗದೆ ಬೇಸರಗೊಂಡಿದ್ದೀರಾ? ಕೈಕಾಲುಗಳ ಫ್ಲಾಲೆಸ್ ಬ್ಯೂಟಿಗಾಗಿ ಈಗ ಬಳಸಿಕೊಳ್ಳಿ ಬಾಥ್ ಗ್ಲೌಸ್.
ಇದರ ನೆರವಿನಿಂದ ನೀವು ನೀಟಾಗಿ ನಿಮ್ಮ ಬಾಡಿ ಸ್ಕ್ರಬ್ ಮಾಡಿಕೊಳ್ಳಬಹುದು. ಇದು ನಿಮ್ಮ ದೇಹವನ್ನು ಗ್ಲೋಯಿಂಗ್‌ಸಾಫ್ಟ್ ಮಾಡುತ್ತದೆ. ಇದರ ಬಳಕೆಯಿಂದ ಟ್ಯಾನಿಂಗ್ ಬಾಧೆಯೂ ತಪ್ಪುತ್ತದೆ. ಇದರ ಆರಂಭಿಕ ಬೆಲೆ 600/ ರೂ. ಇದ್ದು, ಹೆಲ್ತ್ ಗ್ಲೋ ಔಟ್‌ಲೆಟ್ ಗಳಲ್ಲಿ ಪಡೆಯಿರಿ.
ಫುಟ್ ಮಾಸ್ಕ್
ಮುಖದ ಕೇರ್ ತೆಗೆದುಕೊಂಡಂತೆಯೇ ಪಾದಗಳ ಕಡೆಗೂ ಗಮನವಿರಲಿ. ಮನೆಯಲ್ಲಿ ಕುಳಿತೇ ನೀವು ಬಲು ಬೇಗ ಇದನ್ನು ಮಾಡಬಹುದು. ಇದನ್ನು ಕಾಲಿಗೆ ಧರಿಸಿ, ನಿಮ್ಮ ಕಾಲನ್ನು ಬ್ಯೂಟಿಫುಲ್ ಮಾಡಿ. ಈ ಫುಟ್ ಮಾಸ್ಕ್ ನಿಮ್ಮ ಪಾದಗಳ ಮಾಯಿಶ್ಚರೈಸ್ ಸಹ ಮಾಡುತ್ತದೆ. ಬೆಲೆ ಕೇವಲ 200/ ರೂ. ಆನ್/ಆಫ್ ಲೈನ್ ಎರಡೂ ಕಡೆ ಲಭ್ಯ.
– ಪ್ರಿಯಾಂಕಾ





