ರಾಘವೇಂದ್ರ ಅಡಿಗ ಎಚ್ಚೆನ್.

ಬಿಗ್ ಬಾಸ್ ಕನ್ನಡ ಸೀಸನ್ 12ರ ಫಿನಾಲೆಗೆ 1 ವಾರವಷ್ಟೇ ಬಾಕಿಯಿದೆ. ಸುಮಾರು 100 ದಿನಗಳ ಕಾಲ ಸತತವಾಗಿ ಮನರಂಜನೆ ನೀಡಿದ ಈ ಶೋನ ಜನವರಿ 17 ಮತ್ತು 18ರಂದು ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಇದೀಗ ಬಿಗ್ ಬಾಸ್ 12ರ ನಿರೂಪಣೆ ವೇಳೆ ರಣಹದ್ದು ಬಗ್ಗೆ ತಪ್ಪಾದ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ನಟ ಕಿಚ್ಚ ಸುದೀಪ್ ಹಾಗೂ ಬಿಗ್ ಬಾಸ್ ವಿರುದ್ಧ ಪರಿಸರ ಪ್ರಿಯರು ದೂರು ನೀಡಿದ್ದಾರೆ.

ಕರ್ನಾಟಕ ರಣಹದ್ದು ಸಂರಕ್ಷಣಾ ಟ್ರಸ್ಟ್ ರಾಮನಗರದ ಅರಣ್ಯಾಧಿಕಾರಿಗಳಿಗೆ ದೂರು ನೀಡಿದೆ. ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ರಣಹದ್ದು ಬಗ್ಗೆ ಕಿಚ್ಚ ಸುದೀಪ್ ತಪ್ಪಾದ ಮಾಹಿತಿ ಹರಡಿದ್ದಾರೆ ಎಂದು ಆರೋಪಿಸಲಾಗಿದೆ.
ಶೋ ವೇಳೆ ವಿವಿಧ ಪ್ರಾಣಿಗಳ ಫೋಟೋವನ್ನು ನೀಡಿ ಸ್ಪರ್ಧಿಗಳು ಸಹ ಸ್ಪರ್ಧಿಗಳ ಮನಸ್ಥಿತಿಯನ್ನು ಬಿಂಬಿಸಿ ಫೋಟೋ ಹಾಕಬೇಕು ಎಂದು ಹೇಳಲಾಗುತ್ತದೆ. ಆಗ ಸ್ಪರ್ಧಿಯೊಬ್ಬರ ಕುತ್ತಿಗೆಗೆ ರಣಹದ್ದು ಫೋಟೋವೊಂದನ್ನ ಹಾಕಿಸಿ ಹೊಂಚುಹಾಕಿ ಸಂಚು ಮಾಡಿ ಕರೆಕ್ಟ್ ಟೈಂ ಲಬಕ್ ಅಂತ ಹಿಡಿಯುವವರು ಯಾರು? ಎಂದು ಕೇಳಿದ್ದರು‌. ಈ ಪ್ರಶ್ನೆ ಇದೀಗ ವಿವಾದಕ್ಕೆ ಕಾರಣವಾಗಿದೆ.

ರಣಹದ್ದು ಯಾವುದೇ ಜೀವಿಗೆ ಹಾನಿ‌ ಮಾಡುವ ಪಕ್ಷಿ ಅಲ್ಲ. ಅದು ಸತ್ತ ಪ್ರಾಣಿಗಳನ್ನ ಮಾತ್ರ ತಿಂದು ಪರಿಸರದ ಸಮತೋಲನ ಕಾಪಾಡುವ ಪಕ್ಷಿ. ಇದು ಯಾವುದೇ ಪ್ರಾಣಿಗಳಿಗೆ ಹಾನಿ ಮಾಡುವುದಿಲ್ಲ. ಇಂತಹ ಪಕ್ಷಿ ಬಗ್ಗೆ ಜನಪ್ರಿಯ ನಟ ಸುದೀಪ್ ಅವರು ತಪ್ಪು ಮಾಹಿತಿ ನೀಡಿರುವುದು ಸರಿಯಲ್ಲ ಎಂದು ಪರಿಸರ ಪ್ರಿಯರು ವಾದವಾಗಿದೆ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ