ಭಾರತೀಯ ಮಹಿಳೆಯರು ಹಬ್ಬಗಳ ಟ್ರೆಂಡ್ ಗೆ ತಕ್ಕಂತೆ ಆಧುನಿಕ ಡ್ರೆಸ್ ಹಾಗೂ ಆಭರಣಗಳನ್ನು ಖರೀದಿಸಲು ಬಯಸುತ್ತಾರೆ. ಹಾಗಾದರೆ ಈ ಸಲದ ಗೌರಿಗಣೇಶ ಹಬ್ಬಕ್ಕೆ ಈ ನವೀನ ಬಗೆಯ ಆಭರಣ ಖರೀದಿಸಿ, ಹಬ್ಬದ ಸಡಗರ ಸಂಭ್ರಮ ನಿಮ್ಮದಾಗಿಸಿಕೊಂಡು, ಬಾಗಿನ ನೀಡಿದರೆ ಎಷ್ಟು ಚೆಂದ ಅಲ್ಲವೇ? ಇಲ್ಲಿನ ಆಭರಣಗಳು ಪಾರಂಪರಿಕ ರೀತಿಯಲ್ಲಿ ತಯಾರಾಗಿದ್ದು, ಹಬ್ಬಗಳಿಗೆಂದೇ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಹೀಗಾಗಿ ಈ ಟ್ರೆಂಡಿ ಟ್ರೆಡಿಶನಲ್ ಆಭರಣಗಳು ಪ್ರತಿ ಹೆಣ್ಣಿನ ಮೊದಲ ಆಯ್ಕೆ ಎನಿಸುತ್ತದೆ.

ಗೋಲ್ಡ್ ಲೇಯರ್ಡ್ ನೆಕ್ ಲೇಸ್, ಬಳೆಗಳು, ಜುಮಕಿ, ಮಾಟ್ಲು, ಉಂಗುರ ಇತ್ಯಾದಿ ಬಗೆಬಗೆಯ ಸಾಂಪ್ರದಾಯಿಕ ಒಡವೆಗಳು ಭಾರತೀಯ ಹೆಣ್ಣನ್ನು ಹಬ್ಬಗಳ ಸಂದರ್ಭದಲ್ಲಿ ಇನ್ನಷ್ಟು ಭೂಷಣಪ್ರಾಯಳಾಗುವಂತೆ ಮಾಡುತ್ತವೆ.

ಇಂಥ ಹಬ್ಬಗಳ ಸಂದರ್ಭದಲ್ಲಿ ನವರತ್ನಗಳು, ಫಿಲಿಗ್ರಿ ವರ್ಕ್ ನಿಂದ ಸುಸಜ್ಜಿತಗೊಳಿಸಲಾದ ಈ ಆಭರಣಗಳು ನಿಮ್ಮ ಅಂದಚೆಂದಕ್ಕೆ ಅದ್ಭುತ ಹೊಳಪು ನೀಡುತ್ತವೆ. ಇಂಥ ಬಗೆಬಗೆಯ ಒಡವೆಗಳನ್ನು ಧರಿಸಿ, ಈ ಸಲದ ಗೌರಿಗಣೇಶ ಹಬ್ಬದಲ್ಲಿ ನೀವು ಏಕೆ ಮಿಂಚಬಾರದು?





