ಸರಸ್ವತಿ *

ಈ ಹಿಂದೆ ಭಾವಚಿತ್ರ ಎಂಬ ಸಿನಿಮಾ ನಿರ್ದೇಶಿಸಿದ್ದ ಗಿರೀಶ್ ಸದ್ದಿಲ್ಲದೆ ಮತ್ತೊಂದು ಚಿತ್ರವನ್ನು ತೆರೆಗೆ ತರುವ ಸಿದ್ದತೆ ನಡೆಸಿದ್ದಾರೆ. ಆ ಚಿತ್ರದ ಹೆಸರು ಫ್ಯಾನ್ ವಾರ್.

ವುಡ್ ಕ್ರೀಪರ್ ಫಿಲಂಸ್ ಮೂಲಕ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಗಿರೀಶ್ ಅವರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

fanwar

ಆವಾಹಯಾಮಿ, ಭಾವಚಿತ್ರ, ಗ್ಯಾಂಗ್ ಸ್ಟರ್ ಅಲ್ಲ ಫ್ರಾಂಕ್ ಸ್ಟರ್ ನಂತರ ಗಿರೀಶ್ ಅವರ ನಿರ್ದೇಶನದ 4 ನೇ ಚಿತ್ರವಿದು. ವಿಲೇಜ್ ಬ್ಯಾಕ್ ಡ್ರಾಪ್ ನಲ್ಲಿ ಮೂಡಿಬರುತ್ತಿರುವ ಈ ಚಿತ್ರವು ಕ್ರಿಕೆಟ್ ಹಾಗೂ ಸಿನಿಮಾ ಫ್ಯಾನ್ಸ್ ಸುತ್ತ ನಡೆಯುವ ಕಥಾಹಂದರ ಒಳಗೊಂಡಿದೆ. ಈಗಾಗಲೇ ಕೊರಟಗೆರೆ, ಮಧುಗಿರಿ, ಗೌರಿಬಿದನೂರು, ಸುತ್ತಮುತ್ತ 35 ದಿನಗಳ ಕಾಲ 90ರಷ್ಡು ಭಾಗದ ಚಿತ್ರೀಕರಣ ನಡೆಸಲಾಗಿದ್ದು, ಹತ್ತು ದಿನಗಳ ಶೂಟಿಂಗ್ ಮಾತ್ರವೇ ಬಾಕಿಯಿದೆ.

ಚಿತ್ರದಲ್ಲಿ 4 ಹಾಡುಗಳಿದ್ದು ಗೌತಂ ಶ್ರೀವತ್ಸ ಅವರ ಸಂಗೀತ ಸಂಯೋಜನೆಯಿದೆ, ಜಶ್ವಂತ್ ಅವರ ಛಾಯಾಗ್ರಹಣ, ರತೀಶ್ ಅವರ ಸಂಕಲನ ಈ ಚಿತ್ರಕ್ಕಿದೆ. ಒಂದಷ್ಟು ರಿಯಲ್ ಲೈಫ್ ಘಟನೆಗಳನ್ನು ಇನ್ ಸ್ಪೈರ್ ಆಗಿ ತೆಗೆದುಕೊಂಡು ಈ ಚಿತ್ರ ನಿರ್ದೇಶಿಸಿರುವುದಾಗಿ ಗಿರೀಶ್ ಹೇಳಿದ್ದಾರೆ. ಅಲ್ಲದೆ ಚಿತ್ರದ ನಾಯಕನಾಗಿಯೂ ಗಿರೀಶ್ ಅವರೇ ನಟಿಸಿದ್ದಾರೆ‌. ಉಳಿದಂತೆ ಒಂದಷ್ಟು ಸ್ಥಳೀಯ ಪ್ರತಿಭೆಗಳನ್ನು ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ