– ರಾಘವೇಂದ್ರ ಅಡಿಗ ಎಚ್ಚೆನ್.
ಚಿತ್ರ: ‘ಸೀಟ್ ಎಡ್ಜ್‘
ನಿರ್ಮಾಣ: ಗಿರಿಧರ್ ಟಿ ವಸಂತಪುರ
ನಿರ್ದೇಶನ: ಚೇತನ್ ಶೆಟ್ಟಿ
ತಾರಾಂಗಣ: ಸಿದ್ದು ಮೂಲಿಮನಿ , ರವೀಕ್ಷಾ, ರಾಘು ರಾಮಣ್ಣ ಕೊಪ್ಪ, ಗಿರಿ ಶಿವಣ್ಣ ಮೊದಲಾದವರು
:
ಐಟಿ ಕೆಲಸ ಬಿಟ್ಟು ವ್ಲಾಗರ್ ಆಗಿ ಜೀವನದಲ್ಲಿ ಏನಾದರೂ ಸಾಧಿಸಬೇಕು ಎನ್ನುವ ಛಲ ಹೊಂದಿನ ಯುವಕ ಸಿದ್ದು(ಸಿದ್ದು ಮೂಲಿಮನಿ) ಕೆಲವು ವಿಡಿಯೋಗಳನ್ನು ಮಾಡಿ ಜನಪ್ರಿಯಗುತ್ತಾನೆ. ನಂತರ ದೆ ಘೋಸ್ಟ್ ಹಂಟಿಂಗ್ ವಿಡಿಯೋ ಮಾಡುವ ಮೂಲಕ ಸೀಟ್ ಎಡ್ಜ್’ ಎಂಬ ಹೊಸ ಯೂಟ್ಯೂಬ್ ಚಾನಲ್ ಪ್ರಾರಂಭಿಸುತ್ತಾನೆ. ಈ ಕೆಲಸ ಅವನನ್ನು ಘೋಸ್ಟ್ ಟೌನ್ ಎನ್ನುವ ಜಾಗಕ್ಕೆ ಕರೆದೊಯ್ಯುತ್ತದೆ. ಅಲ್ಲೊಂದು ರಾತ್ರಿ ಭೂತ ಬಂಗಲೆಯಲ್ಲಿ ಕಳೆದು ಅಲ್ಲಿನ ಅನುಭವಗಳನ್ನು ವಿಡಿಯೋ ಮಾಡುವ ಆಲೋಚನೆ ಅವನದು. ಮುಂದೆ….? ಸಿದ್ದು ಘೋಸ್ಟ್ ಟೌನ್‌ಗೆ ಹೋಗಿದ್ದೇಕೆ…? ಅಲ್ಲಿನ ಭೂತ ಬಂಗಲೆಯ ಕಥೆ ಏನು….? ಸಿದ್ದು ಎಲ್ಲದರಿಂದ ಪಾರಾಗಿ ಬಂದನಾ? ತಿಳಿಯಲು ನೀವು ತೆರೆಮೇಲೆ ಸೀಟ್ ಎಡ್ಜ್ ಸಿನಿಮಾ ನೋಡಬೇಕು.
ವ್ಲಾಗರ್ ಗಳು ತಾವು ಹೆಸರು ಗಳಿಸಲು ಏನೇನೆಲ್ಲಾ ಮಾಡುತ್ತಾರೆ? ಯಾವೆಲ್ಲಾ ರಿಸ್ಕ್ ತೆಗೆದುಕೊಳ್ಳುತ್ತಾರೆ ಎನ್ನುವುದನ್ನು ನಿರ್ದೇಶಕರು ಈ ಸಿನಿಮಾದಲ್ಲಿ ತೋರಿಸಿದ್ದಾರೆ. ಆದರೆ ಪ್ರಾರಂಭದ ಕೆಲ ಸಮಯ ಹಾಸ್ಯದಿಂದ ಕೂಡಿ ನಗಿಸಿ ರಂಜಿಸುವ ಚಿತ್ರಕಥೆ ಸಿನಿಮಾ ಮುಂದುವರಿದಂತೆಲ್ಲಾ ಸಹಜತೆಯನ್ನು ಕಳೆದುಕೊಳ್ಳುತ್ತದೆ.
ನಟನೆಯ ವಿಷಯದಲ್ಲಿ ಸಿದ್ದು ಮೂಲಿಮನಿ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ನಾಯಕಿ ರವೀಕ್ಷಾ, ರಾಘು ರಾಮಣ್ಣ ಕೊಪ್ಪ, ಗಿರಿ ಶಿವಣ್ಣ ಎಲ್ಲರೂ ತಮ್ಮ ತಮ್ಮ ಪಾತ್ರಗಳನ್ನು ಚೆನ್ನಾಗಿ ನಿಭಾಯಿಸಿದ್ದಾರೆ.
ಆಕಾಶ್ ಪರ್ವ ಸಂಗೀತದಲ್ಲಿ ಹಾಡುಗಳು ಹಿತವಾಗಿದ್ದರೂ ಮನಸ್ಸಿನಲ್ಲಿ ಉಳಿಯುವುದಿಲ್ಲ. ಕಥೆಗೆ ತಕ್ಕಂತೆ ಸಂಗೀತ ಮೂಡಿ ಬಂದಿದೆ. ಭೂತ ಬಂಗಲೆಯ ಚಿತ್ರಣ ಸೊಗಸಾಗಿದೆ.





