ಇಂದಿನ ಆಧುನಿಕ ನವ ವಧು, ತನ್ನ ಲುಕ್ಸ್ಪರ್ಫೆಕ್ಟ್ ಆಗಿರಲೆಂದು ಏನೆಲ್ಲ ಮಾಡಬೇಕು ಎಂದು ತಿಳಿಯೋಣವೇ….?
ಕಾಲಕ್ಕೆ ತಕ್ಕಂತೆ ಮೇಕಪ್ ಟ್ರೆಂಡ್ ನಲ್ಲಿ ಎಷ್ಟೋ ಬದಲಾವಣೆಗಳು ಆಗಿವೆ. ಅದು ಸಾಧಾರಣ ರಾಂಪ್ ಯಾ ಬ್ರೈಡಲ್ ಮೇಕಪ್ ಆಗಿರಬಹುದು. ಇತ್ತೀಚಿನ ಬ್ರೈಡಲ್ ಮೇಕಪ್ ಟ್ರೆಂಡ್ ನಲ್ಲಿ ಬಣ್ಣವನ್ನು ಹೈಲೈಟ್ ಮಾಡುವುದಕ್ಕಿಂತ, ಮುಖಚಹರೆಯನ್ನು ಹೈಲೈಟ್ ಮಾಡುವುದೇ ಹೆಚ್ಚು.
ಮೇಕಪ್ ಟ್ರೆಂಡ್
ಈ ಕುರಿತಾಗಿ ಆಧುನಿಕ ವಿಧಾನದಲ್ಲಿ ಹಲವು ಬಗೆಗಳುಂಟು. ಮುಖ್ಯ ಬ್ರೈಡಲ್ ಮೇಕಪ್ ನಲ್ಲಿ ಸಿಮರ್ ವುಳ್ಳ ಯಾ ಗ್ಲಾಸಿ ಮೇಕಪ್ ಹೆಚ್ಚು ಜನಪ್ರಿಯ. ಯಾವುದೇ ಮೇಕಪ್ ನ ಉತ್ತಮ ಪರಿಣಾಮ, ಮೇಕಪ್ ಮಾಡುವ ಪಳಗಿದ ಕೈಗಳನ್ನು ಆಧರಿಸಿದೆ. ಸಾಮಾನ್ಯವಾಗಿ ಬ್ರೈಡಲ್ ಮೇಕಪ್ ನ ಆರಂಭ ಬೇಸ್ ನಿಂದ ಆಗುತ್ತದೆ, ಇದರ ಬದಲು ಐ ಮೇಕಪ್ ನಿಂದ ಇದನ್ನು ಆರಂಭಿಸಿದರೆ ಉತ್ತಮ ಫಿನಿಶಿಂಗ್ ಬರುತ್ತದೆ, ಎಂಬುದು ಸೌಂದರ್ಯ ತಜ್ಞರ ಅಭಿಪ್ರಾಯ.
ಬ್ರೈಡಲ್ ಐ ಮೇಕಪ್ ನಲ್ಲಿ ಇತ್ತೀಚೆಗೆ ಸಿಸರ್ಸ್ ಐ ಮೇಕಪ್ ನ ಟ್ರೆಂಡ್ ಗಾಢವಾಗುತ್ತಿದೆ. ಅಂದ್ರೆ ಕಂಗಳ ಮೇಕಪ್ ನ ಆರಂಭದಲ್ಲಿ ಐ ಬೇಸ್ ನಿಂದ ಮಾಡಬೇಕಾಗುತ್ತದೆ, ಆಗ ಮೇಕಪ್ ನಂತರ ಕಂಗಳ ಮೇಲೆ ಗೆರೆಗಳು ಮೂಡುವುದಿಲ್ಲ. ಮಾರುಕಟ್ಟೆಯಲ್ಲಿ ನಿಮಗೆ ಕೇವಲ ಕೆಲವೇ ಬ್ರಾಂಡ್ ಗಳಿಂದ ಮಾತ್ರ ಐ ಬೇಸ್ ಲಭ್ಯವಿವೆ.
ಐ ಬೇಸ್
ನಂತರ ಐಬ್ರೋನ ಕೆಳಗಿನ ಭಾಗವನ್ನು ಲೈಟ್ ಕಲರ್ ನ ಐ ಶ್ಯಾಡೋದಿಂದ ಹೈಲೈಟ್ ಮಾಡಬೇಕು. ಇದರ ಕಲರ್ ವಧುವಿನ ಮುಹೂರ್ತದ ಸೀರೆಗೆ ಮ್ಯಾಚ್ ಆಗುವಂತಿರಬೇಕು. ಇದಾದ ಮೇಲೆ ಐಲಿಡ್ ಮೇಲೆ ಡಾರ್ಕ್ ಕಲರಿನ ಐ ಶ್ಯಾಡೋ ಹಾಗೂ ಕಲರ್ ಪೆನ್ಸಿಲ್ ನಿಂದ ಐ ಲೈನರ್ ಎಳೆಯಬೇಕು. ನಂತರ ಹೈಲೈಟಿಂಗ್ ಗಾಗಿ, ನೀವು ಬಳಸುತ್ತಿರುವ ಬಣ್ಣಕ್ಕೆ ಅನುಸಾರ, ಲೈನರ್ ಮೇಲೆಯೂ ಎಳೆಯಬಹುದು. ಸ್ವಲ್ಪ ಭಾಗವನ್ನು ಐ ಲಿಡ್ ನ ನಡು ಭಾಗಕ್ಕೂ ನ್ಯಾಚುರಲ್ ಕಲರಿನ ಐ ಶ್ಯಾಡೋ ಹಚ್ಚುತ್ತಾ, ಅದನ್ನೂ ಮರ್ಜ್ ಮಾಡಿಬಿಡಿ. ನಂತರ ಮೊದಲ ಲೈನರ್ ಮೇಲೆ ಬ್ಲ್ಯಾಕ್ ಐ ಲೈನರ್ ತೀಡುತ್ತಾ ಅದನ್ನು ಮತ್ತಷ್ಟು ಡಾರ್ಕ್ ಗೊಳಿಸಿ. ಕಂಗಳ ಕೆಳಗಿನ ಭಾಗಕ್ಕೆ ಕಾಡಿಗೆ ತೀಡಿದ ನಂತರ, ಅದರ ಮೇಲೆ ಕಲರ್ ಫುಲ್ ಪೆನ್ಸಿಲ್ ನಿಂದ ಮತ್ತೊಮ್ಮೆ ತೀಡಿ, ಕೊನೆಯಲ್ಲಿ ಮಸ್ಕರಾ ಹಚ್ಚಿರಿ.
ಐ ಮೇಕಪ್
ಇದಾದ ನಂತರ, ಕಂಗಳನ್ನು ಬಿಟ್ಟು ಇಡೀ ಮುಖವನ್ನು ಕ್ಲೆನ್ಸಿಂಗ್ ಮಿಲ್ಕ್ ನಿಂದ ಶುಚಿಗೊಳಿಸಿ. ನಂತರ ಟೋನರ್ ಮಾಯಿಶ್ಚರೈಸರ್ ಹಚ್ಚಬೇಕು. ಆಮೇಲೆ ಬೇಸ್ ತೀಡಬೇಕು. ಬೇಸ್ ನ್ನು ಬ್ರಶ್ ನೆರವಿನಿಂದ ತೀಡಿರಿ. ಇದರಿಂದ ಮುಖದಲ್ಲಿ ಅಲ್ಲಲ್ಲಿ ಗೆರೆ ಮೂಡದು. ಮುಖ ಮತ್ತು ಕುತ್ತಿಗೆಯ ಬಣ್ಣದಲ್ಲಿ ತುಸು ವ್ಯತ್ಯಾಸವಿದ್ದರೆ, ಸ್ಕಿನ್ ಟೋನ್ ಆಧಾರದಿಂದ ಬೇರೆ ಬೇರೆ ಬೇಸ್ ಕಲರ್ ಬಳಸಿಕೊಳ್ಳಬೇಕು.
ಇದಾದ ನಂತರ ಅಗತ್ಯ ಜಾಗಗಳಲ್ಲಿ ಕನ್ಸೀಲರ್ ಬಳಸಿರಿ. ಮುಖ ಚಹರೆಗೆ ಸೂಕ್ತ ಶೇಪ್ ನೀಡಲು ಸಹ ಕನ್ಸೀಲರ್ ಬಳಸಿಕೊಳ್ಳಿ. ಅದಾದ ಮೇಲೆ ಕಾಂಪ್ಯಾಕ್ಟ್ ಹಚ್ಚಿರಿ, ಅದನ್ನು ತುಸು ಒದ್ದೆ ಮಾಡಿಯೂ ಬಳಸಿಕೊಳ್ಳಬಹುದು.
ನವ ವಧುವಿಗೆ ಮ್ಯಾಟ್ ಲಿಪ್ ಸ್ಟಿಕ್ ಬದಲು ಶೈನಿಂಗ್ ವುಳ್ಳ ಲಿಪ್ ಸ್ಟಿಕ್ ತೀಡುವುದೇ ಸರಿ. ಲಿಪ್ ಸ್ಟಿಕ್ ಕೇಕ್ ನ್ನು ಹತ್ತಿಯ ನೆರವಿನಿಂದ ಮುಖದ ಮೇಲೆ ಹಚ್ಚಿರಿ. ನಂತರ ಸ್ಪಂಜ್ ನೆರವಿನಿಂದ ಅದನ್ನು ಮುಖ ಪೂರ್ತಿ ಹರಡಿಬಿಡಿ. ಲಿಪ್ ಮೇಕಪ್ ಗಾಗಿ, ಲಿಪ್ ಲೈನರ್ ನಿಂದ ತುಟಿಗಳ ಮೇಲೆ ಔಟ್ ಲೈನ್ ಮಾಡಿ. ಅದರ ಒಳಭಾಗಕ್ಕೆ ಶೈನಿಂಗ್ ವುಳ್ಳ ಲಿಪ್ ಸ್ಟಿಕ್ ತೀಡಿರಿ. ಲಿಪ್ ಸ್ಟಿಕ್ ನ ನಂತರ ಕೆನ್ನೆಗಳಿಗೆ ಬ್ಲಶ್ ಆನ್ ತೀಡಿ, ಫೈನ್ ಟಚ್ ಕೊಡಿ.
ಬಿಂದಿಗಳಲ್ಲಿ ಇತ್ತೀಚೆಗೆ ಸ್ಟರ್ಡ್ ರೌಂಡ್ ಡಿಸೈನ್ ಬಿಂದಿಗಳು ಹೆಚ್ಚು ಫ್ಯಾಷನ್ನಿನಲ್ಲಿವೆ. ಮುಖ ತುಸು ಅಗಲವಾಗಿದ್ದರೆ, ರೌಂಡ್ ಬದಲು ಉದ್ದನೇ ಡಿಸೈನರ್ ಬಿಂದಿ ಇರಿಸಿ. ಐ ಬ್ರೋ ಮೇಲ್ಭಾಗದಲ್ಲಿ ಎಂದೂ ಬಿಂದಿ ಇರಿಸಬೇಡಿ ಇತ್ತಿಚೆಗೆ ಇದು ಫ್ಯಾಷನ್ ನಲ್ಲಿಲ್ಲ.
ಹೇರ್ ಸ್ಟೈಲ್ : ಬ್ರೈಡಲ್ ಮೇಕಪ್ ಗೆ ಲಕ್ಷಣವಾದ ಹೇರ್ ಸ್ಟೈಲ್ ಇದ್ದಾಗ ಮಾತ್ರ ಅದು ಪರಿಪೂರ್ಣ ಎನಿಸುತ್ತದೆ. ನವ ವಧುವಿಗೆ ಹೈಬನ್ ಸಹ ಚೆನ್ನಾಗಿ ಒಪ್ಪುತ್ತದೆ. ಆದರೆ ಸಮಯದ ಅಭಾವ ಅಥವಾ ಕೂದಲು ತುಸು ಗಿಡ್ಡ ಎನಿಸಿದರೆ, ನೀವು ರೌಂಡೆಡ್ ಫ್ಲವರ್ ಬನ್ ಸಹ ಟ್ರೈ ಮಾಡಬಹುದು. ಇದಕ್ಕಾಗಿ ಮೊದಲು ಮುಂಭಾಗದ ಕೂದಲಿನಲ್ಲಿ ಪಫ್‌ಮಾಡಿಕೊಳ್ಳಬೇಕು. ಹಿಂಭಾಗದ ಕೂದಲಿನಿಂದ ಪೋನಿ ಮಾಡಿ. ಆದರ ಮೇಲೆ ಕೃತಕ ಕೂದಲು ಇರಿಸಿ, ಬ್ಯಾಂಡ್ ಜೊತೆ ಕಟ್ಟಿಬಿಡಿ.
ನಂತರ ಕೂದಲನ್ನು 2 ಭಾಗ ಮಾಡಿಕೊಂಡು ತುಸು ಸಡಿಲವಾದ ಜಡೆ ಹೆಣೆಯಿರಿ, ಕೆಳಗೆ 2 ಇಂಚು ಕೂದಲನ್ನು ಹಾಗೇ ಬಿಡಿ. ಇದಾದ ನಂತರ ಕೂದಲಿನ ಒಂದು ತುದಿಯನ್ನು ಹಿಡಿದುಕೊಂಡು, ಇನ್ನೊಂದು ತುದಿಯನ್ನು ಮೇಲ್ಭಾಗಕ್ಕೆ ಕೊಂಡೊಯ್ದು, ಅವೆರಡರ ಒಂದು ಬಂಚ್ ರೆಡಿ ಮಾಡಿ. ಅದನ್ನು ರೌಂಡ್ ಶೇಪ್ ನಲ್ಲಿ ಫೋಲ್ಡ್ ಮಾಡಿ, ಎಲ್ಲಾ ಬದಿಗೂ ಬರುವಂತೆ ಪಿನ್ ಅಪ್ ಮಾಡಿ. ಉಳಿದ ಕೂದಲನ್ನು ಮಧ್ಯ ಭಾಗದಲ್ಲಿ ಶೇಪ್ ನಲ್ಲಿ ಫೋಲ್ಡ್ ಮಾಡುತ್ತಾ ಪಿನ್ ಅಪ್ ಮಾಡಿ.
ಮೇಕಪ್‌ಹೇರ್ ಸ್ಟೈಲ್ ಕಂಪ್ಲೀಟ್ ಆದ ನಂತರ, ಒಡವೆ ಧರಿಸಿ. ಸೀರೆಯ ಸೆರಗನ್ನು ಕೊಂಡೆವರೆಗೂ ಕೊಂಡೊಯ್ದು ಪಿನ್ ಅಪ್ ಮಾಡಿದರೆ ಗೆಟಪ್ ಚೆನ್ನಾಗಿರುತ್ತದೆ.
ಗ್ಲಾಸಿ ಪೌಟ್ : ಇತ್ತೀಚಿನ ಬ್ರೈಡಲ್ ಮೇಕಪ್ ನಲ್ಲಿ ತುಟಿಗಳಿಗೆ ನ್ಯಾಚುರಲ್ ಗ್ಲಾಸಿ ಲುಕ್ ನೀಡುವುದೇ ಹೆಚ್ಚು ಜನಪ್ರಿಯ. ಪೀಚ್, ಪಿಂಕ್, ರೆಡ್ ಕಲರ್ ಗಳಲ್ಲಿ ಗ್ಲಾಸಿ ಲುಕ್ಸ್ ಗಾಗಿ ಮೊದಲ ಆಯ್ಕೆಗಳಾಗಿವೆ. ತುಟಿಗಳ ಆರ್ದ್ರತೆ ಹೆಚ್ಚು ಹೊತ್ತು ಉಳಿಯಲಿ ಎಂಬ ದೂರದೃಷ್ಟಿಯಿಂದಲೂ ಹೀಗೆ ಮಾಡುತ್ತಾರೆ.
ಸ್ಕಿನ್ ಬೇಸ್ ಮೇಕಪ್ : ಶೈನ್ ಫ್ರೀ ಪೌಡರಿ ಮೇಕಪ್ ಇದೀಗ ಹೆಚ್ಚು ಚಾಲ್ತಿಯಲ್ಲಿಲ್ಲ. ಇದರ ಬದಲಾಗಿ ಈಗ ಗ್ಲೋಯಿ, ಕ್ರೀಮೀ ಮೇಕಪ್ ಹೆಚ್ಚು ಟ್ರೆಂಡಿಯಾಗಿದೆ. ಯಾವುದು ಸ್ಕಿನ್ ಟೋನ್ ಗೆ ಹೆಚ್ಚು ಮ್ಯಾಚ್ ಆಗುತ್ತದೋ ಅಂಥದ್ದನ್ನೇ ಆರಿಸತೊಡಗುತ್ತಾರೆ. ಇದರಲ್ಲಿನ ವೈಶಿಷ್ಟ್ಯ ಎಂದರೆ, ಫೌಂಡೇಶನ್ ಮಾಯಿಶ್ಚರೈಸಿಂಗ್ ಆಗಿರಲೇಬೇಕು.
ಮಿನಿಮಲಿಸ್ಟಿಕ್ ಲುಕ್ಸ್ : ಕೆಲವು ವಧುಗಳು ಇಂಥದ್ದೇ ಬೇಕು ಎಂದು ಮೇಕಪ್ ಆರ್ಟಿಸ್ಟ್ ಗೆ ಹೇಳಿ ಇದನ್ನು ಮಾಡಿಸುತ್ತಾರೆ. ಇದರಲ್ಲಿ ಹೆವಿ ಮೇಕಪ್, ಭಾರಿ ಜ್ಯೂವೆಲರಿ, ಗಾಡಿ ಬಣ್ಣದ ರೇಷ್ಮೆ ಸೀರೆ ಇತ್ಯಾದಿ ಎಲ್ಲವೂ ಭಾರಿ ಭಾರಿಯಾಗಿಯೇ ಇರುತ್ತದೆ. ಏನೇ ಇರಲಿ, ಲುಕ್ಸ್ ನಿಮ್ಮ ಪರ್ಸನಲ್ ಆಯ್ಕೆ ಆಗಿರಲಿ, ನೀವು ನಿಮ್ಮ ಫಿಟ್ ನೆಸ್ ಕಡೆ ಗಮನ ಹರಿಸದೆ ಇದ್ದುಬಿಟ್ಟರೆ, ಇವೆಲ್ಲ ವ್ಯರ್ಥ ಆದೀತು.
– ಪ್ರತಿನಿಧಿ.





