ಕಳೆದೆರಡು ದಿನಗಳಿಂದ ಹಾಸಿಗೆಯಿಡಿದಿದ್ದ  ನಕುಲ್  ಹೆಂಡತಿಯನ್ನು ಕರೆದು,   ಬೆನ್ನು ನೋವು ಸಹಿಸಲು ಆಗುತ್ತಿಲ್ಲ , ಸಾಯುವ ಅನುಭವವಾಗ್ತಿದೆ ?  ಒಂದು ಹೆಜ್ಜೆಯಿಡಲು ಶಕ್ತನಿಲ್ಲ , ಇನ್ನು ಈ ಮಾತ್ರೆಗಳನ್ನೂ ಸೇವಿಸಿ ಪ್ರಯೋಜನವಿಲ್ಲ . ‘ಆಸ್ಪತ್ರೆ ಗೆ ಹೋಗೋಣ ನಡಿ” ಎಂದು, ಹೆಂಡತಿಯ ಜೊತೆಗೆ ಹೊರಟ ನಕುಲ್ .

ಪರೀಕ್ಷೆಗಳ ರಿಪೋರ್ಟ್ ನೋಡಿದ  ಡಾಕ್ಟರ್,   “ನಿಮ್ಮ ಪತಿಗೆ ಬೆನ್ನಿನ ನರಗಳ ಸಮಸ್ಯೆಯಿದೆ, ಅಪರೇಷನ್ ಮಾಡಬೇಕು” ಅವರ ಮಾತು ಮುಗಿಯುವ ಮೊದಲೇ, ತೃಪ್ತಿಗೆ ಆಕಾಶವೇ ಕಳಚಿದಂತಾಯಿತು. ಅಯ್ಯೋ….! ದೇವರೇ, ಇದೆಂತಹ ಸ್ಥಿತಿ ನಕುಲ್ ತರುವ ಹಣ ಮನೆ ಬಾಡಿಗೆ ಮತ್ತು ಮನೆಯ ಖರ್ಚಿಗೆ ಸರಿ ಹೊಂದುತ್ತದೆ , ಇನ್ನು ಕೂಡಿಡುವುದೆಲ್ಲಿ ? ಅವಳದೇ ಲೋಕದ ಲಹರಿಯಲ್ಲಿ ಆಲೋಚಿಸುತಿದ್ದ ತೃಪ್ತಿ. ಜೋರಾದ ದ್ವನಿಯಲ್ಲಿ ಡಾಕ್ಟರ್ , ಬೇಗ ಹಣ ರೆಡಿ ಮಾಡಿಕೊಳ್ಳಿ….!?”  ಎಂದೇಳಿದಾಗ ವಾಸ್ತವಕ್ಕೆ ಬಂದಳು.

ಹಣ ಹೇಗೆ ಹೊಂದಿಸಲಿ  ಎನ್ನುವ ಆತಂಕ. ಬಂಧು ಬಳಗದವರು ಕೈ ಚೆಲ್ಲಿದರು. ದಾರಿಯೇ ಕಾಣದು. ಕೊನೆಗೆ ಮದುವೆಯಲ್ಲಿ ತವರು ಮನೆಯವರು ಮತ್ತು ಗಂಡನ ಮನೆಯವರು ಕೊಟ್ಟ ಒಡವೆಗಳನ್ನು ಮಾರಿ ಆಪರೇಷನ್ ಮಾಡಿಸಿದಳು.

ನಕುಲ್ ಗೆ ಮೂರು ತಿಂಗಳು ಬೆಡ್ ರೆಸ್ಟು….! ಮಲಗಿದ್ದಲ್ಲೇ ಸೇವೆ ಮಾಡಬೇಕು. ತೃಪ್ತಿಯ ಜೊತೆಗೆ ನಕುಲ್ ತಾಯಿ ಮಗನನ್ನು ನೋಡಿಕೊಳುತ್ತಿದ್ದರು. ಮನೆ ನಡೆಸುವಲ್ಲಿ ಕಷ್ಟವಾಗುತ್ತಿದೆ ಎಂದು  ತೃಪ್ತಿ ಮೊದಲ ಬಾರಿ ಹೊರಗಡೆ ಕೆಲಸಕ್ಕೆ ಹೊರಟಳು.  ಬಟ್ಟೆ ಅಂಗಡಿಯಲ್ಲಿ ಕೆಲಸ. ಹೊಸತು ಅನ್ನಿಸುತ್ತಿದೆ ಈ ಜಗತ್ತು .  ಕೆಲಸ ಬರದೆ ಪರದಾಡುತ್ತಿದ್ದಾಗ ಜೊತೆಯಲ್ಲಿ ಕೆಲಸ ಮಾಡುವವರ ಹಾಸ್ಯ, ಒತ್ತಡ ಹೊಸದೇ ಆದರೂ ಗಂಡನಿಗಾಗಿ ಸಹಿಸಿದಳು. ಆರು ತಿಂಗಳು ಕಳೆದರು ನಕುಲ್ ನ ಚೇತರಿಕೆಯಲ್ಲಿ ಸುಧಾರಣೆ ಕಾಣಲಿಲ್ಲ. ಹೀಗೆ ವರ್ಷಗಳೇ ಕಳೆದು ಹೋಯಿತು.

ನಕುಲ್ ಹೆಂಡತಿಗೆ ಹೇಳದ …! “ತೃಪ್ತಿ ನನ್ನಿಂದ ಯಾವ ಸುಖವನ್ನು ನೀನು ಕಾಣಲಿಲ್ಲ…? ನನ್ನನ್ನು ಬಿಟ್ಟು ನೀನು ಬೇರೆ ಮದುವೆಯಾಗು…..? ನನ್ನ ಜೀವನ ಹೇಗೋ ಆಗುತ್ತದೆ”  ತೃಪ್ತಿ ಗಂಡನ ಮಾತಿಗೆ ಅಳುತ್ತ, ಇದ್ದರು ನಿಮ್ಮೊಡನೆ ಸತ್ತರು ನಿಮ್ಮ ಜೊತೆಗೆ”  ಭರವಸೆಯಿದೆ ನೀವು ಮೊದಲಿನಂತೆ ಆಗುತ್ತೀರೆಂದು! ಸಮಾಧಾನಪಡಿಸಿದಳು ಗಂಡನಿಗೆ.

ರಾತ್ರಿ ಹಗಲೆನ್ನದೆ ಪ್ರತಿ ನಿತ್ಯ ಬೆನ್ನು ಹಾಗೂ ಕಾಲುಗಳಿಗೆ ಎಣ್ಣೆ ಮೆಸ್ಸೇಜ್ ಮಾಡಿದಳು. ನಕುಲ್ ಸಲ್ಪ ಸಲ್ಪ ನಡೆದಾಡಲು ಶುರು ಮಾಡಿಕೊಂಡ. ನಕುಲ್ ನ ಸತತ ಪ್ರಯತ್ನ, ಅಮ್ಮ-ಮಡದಿಯ ಹಾರೈಕೆಯಲ್ಲಿ ಚೇತರಿಸಿಕೊಂಡ. ಹೆಂಡತಿಯ ಕೈ ಹಿಡಿದುಕೊಂಡು ತನ್ನ ಹಣೆಗೆ ಹೊತ್ತಿ ನಿನ್ನ ಹಸ್ತರೇಖೆಗಳು ಅದೃಷ್ಟ ಮಾಡಿವೆ. ಅದಕ್ಕೆ ದೇವರು ನನಗೆ ಮರುಜನ್ಮ ಕೊಟ್ಟ…! ನಿನ್ನಂತ ಮುತ್ತಿನಂತ ಹೆಂಡತಿಯನ್ನು ಪಡೆದ ನಾನು ಅದೃಷ್ಟಶಾಲಿಯೆಂದು ತೃಪ್ತಿಗೆ ತನ್ನಪ್ಪುಗೆಯಲ್ಲಿ ಬಂಧಿಸಿ ಹಣೆಗೆ ಮತ್ತಿನ ಮಳೆಗೆರೆದ.

ವಾಣಿ ಮೈಸೂರು

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ