ಎಲ್ಲೆಲ್ಲೂ ಥಂಡಿಯ ಸೀಸನ್ನಲ್ಲಿ, ನೀವು ಸ್ಟೈಲಿಶ್‌, ಬ್ಯೂಟಿಫುಲ್, ಗ್ಲಾಮರಸ್ಆಗಿ ಮಿಂಚಬಯಸಿದರೆ, ಅಗತ್ಯ ಸಲಹೆಗಳನ್ನು ಅನುಸರಿಸಿ……!

ಚಳಿಗಾಲ ಬರುತ್ತಿದ್ದಂತೆ  ನಮ್ಮ ಸುತ್ತಮುತ್ತಲಿನ ವಾತಾವರಣ ಬಹಳಷ್ಟು ಬದಲಾಗುತ್ತದೆ. ನಮ್ಮ ಆಹಾರ ವಿಹಾರ, ಇರುಸರಿಕೆ, ಲೈಫ್‌ ಸ್ಟೈಲ್‌, ಡ್ರೆಸ್‌ ನಿಂದ ಹಿಡಿದು ಮೇಕಪ್‌ ನಲ್ಲೂ ಬದಲಾವಣೆ ಮೂಡುತ್ತದೆ. ಇದು ಅಗತ್ಯ ಕೂಡ, ಏಕೆಂದರೆ ಥಂಡಿ ಋತು ಪ್ರತಿಯೊಂದರಲ್ಲೂ ಪರಿವರ್ತನೆ ಬೇಡುತ್ತದೆ. ಈ ಸೀಸನ್‌ ನಲ್ಲಿ ಥಂಡಿಯಿಂದ ಬಚಾವಾಗಲು ಕ್ರಮ ಅನುಸರಿಸುವಂತೆ ನಾವು ಸ್ಟೈಲಿಶ್‌, ಬ್ಯೂಟಿಫುಲ್, ಗ್ಲಾಮರಸ್‌ ಆಗಿ ಕಂಡುಬರಲು ಸಹ ಹಲವು ಬದಲಾವಣೆಗಳನ್ನು ಅಗತ್ಯ ಮಾಡಿಕೊಳ್ಳಬೇಕಿದೆ. ಇದು ಹಲವು ಪಾರ್ಟಿ, ಮದುವೆಗಳ ಸೀಸನ್‌ ಕೂಡ ಹೌದು. ನೀವು ನಿಮ್ಮ ಸ್ಟೈಲ್ ಮೇಂಟೇನ್‌ ಮಾಡುತ್ತಾ, ಫ್ಯಾಷನೆಬಲ್, ಗ್ಲಾಮರಸ್ ಆಗಿ ಮಿಂಚಲು ಬಯಸಿದರೆ, ಈ ವಿಂಟರ್‌ ಫ್ಯಾಷನ್‌ಮೇಕಪ್‌ ಗೆ ಸಂಬಂಧಿಸಿದ ಸಲಹೆಗಳನ್ನು ಅಗತ್ಯ ಅನುಸರಿಸಬೇಕು :

ಆಕರ್ಷಕ ವಿಂಟರ್ಫ್ಯಾಷನ್

ಜೀನ್ಸ್ ಜೊತೆ ಲಾಂಗ್ಜ್ಯಾಕೆಟ್‌ : ಚಳಿಗಾಲದ ಈ ದಿನಗಳಲ್ಲಿ ಲಾಂಗ್‌ ಜ್ಯಾಕೆಟ್‌ ಬಹಳ ಚಾಲ್ತಿಯಲ್ಲಿರುತ್ತದೆ. ಹೆಚ್ಚು ಹೆಚ್ಚು ತರುಣಿಯರು ಸ್ಟೈಲಿಶ್‌ ಲುಕ್ಸ್ ಪಡೆಯಲು ಇದನ್ನು ಅನುಸರಿಸುತ್ತಾರೆ. ನೀವು ಇದನ್ನು ಬಯಸುವುದಾದರೆ ಜೀನ್ಸ್ ಫುಲ್ ಸ್ಲೀವ್ ಶರ್ಟ್‌, ಸ್ವೆಟರ್‌ ಯಾ ಟೀಶರ್ಟ್‌ ಜೊತೆ ಆ್ಯಂಕಲ್ ಲೆಂತ್‌ ಯಾ ನೀಲೆಂತ್‌ ಲಾಂಗ್‌ ಕೋಟ್‌ ಧರಿಸಿರಿ. ಇವು ಎಲ್ಲಾ ತರಹದ ಬಣ್ಣಗಳಲ್ಲಿ ಲಭ್ಯ, ನಿಮ್ಮನ್ನು ಚಳಿಯಿಂದ ರಕ್ಷಿಸಲು ಸಮರ್ಥ. ಇದರ ಜೊತೆಗೆ ಫುಟ್‌ ವೇರ್‌ ಗಾಗಿ ಶೂಸ್‌, ಆ್ಯಂಕಲ್ ಲೆಂತ್‌ ಬೂಟ್ಸ್, ತಲೆಗೆ ಟೋಪಿ ಹಾಗೂ ಕಂಗಳಿಗೆ ಗಾಗಲ್ಸ್ ಚೆಂದ ಎನಿಸುತ್ತದೆ.

ಹೈ ವೆಯ್ಸ್ಟ್ ಟ್ರೌಸರ್ಸ್ಜೊತೆ ಸ್ವೆಟರ್‌ : ಚಳಿಗಾಲದ ಥಂಡಿ ತಪ್ಪಿಸಿ, ಸ್ಟೈಲಿಶ್‌ ಆಗಿಯೂ ಮಿಂಚಲು, ಬಾಟಮ್ ಸ್ಟೈಲ್ ‌ಹೈ ವೆಯ್ಸ್ಟ್ ಪ್ಯಾಂಟ್‌ಸ್ವೆಟರ್‌ ಧರಿಸಿ. ಇದರ ಜೊತೆಗೆ ಆ್ಯಂಕಲ್ ಲೆಂತ್‌ ಬೂಟ್ಸ್ ನಿಮಗೆ ಪರ್ಫೆಕ್ಟ್ ಚಾಯ್ಸ್ ಆಗುತ್ತದೆ. ನೀವು ತುಸು ಸಡಿಲವಾದ ಸ್ವೆಟರ್‌, ಫ್ರಿಲ್ ‌ಸ್ಟೈಲ್ ‌ಸ್ವೆಟರ್‌ ಹಾಗೂ ಸ್ಟೈಲಿಶ್‌ ಸ್ಲೀವ್ ‌ನ ಸ್ವೆಟರ್‌ ಇತ್ಯಾದಿಗಳನ್ನೂ ಈ ಟ್ರೌಸರ್‌ ಜೊತೆ ಧರಿಸಬಹುದು.

ಸ್ವೆಟರ್ಜೊತೆ ಸ್ಕರ್ಟ್‌ : ಪ್ಯಾಂಟ್‌ ಯಾ ಜೀನ್ಸ್ ಜೊತೆ ಸ್ವೆಟರ್‌ ಧರಿಸುವುದು ಮಾತ್ರವಲ್ಲದೆ, ನೀವು ಸ್ಕರ್ಟ್‌ ಜೊತೆಯೂ ಇವನ್ನು ಧರಿಸಬಹುದು. ಇದಕ್ಕಾಗಿ ನೀವು ಉಲ್ಲನ್‌ ಸ್ಕರ್ಟ್‌ ಸಹ ಆರಿಸಿಕೊಳ್ಳಬಹುದು. ಸ್ಟೈಲಿಶ್‌ ಆಗಿ ಕಂಡಬರಲು ನೀವು ಲೆಂಥ್‌ ಸ್ಕರ್ಟ್ ಜೊತೆ ಸ್ವೆಟರ್‌ ಧರಿಸಿರಿ. ಇದರ ಹೊರತಾಗಿ, ಹೈ ನೆಕ್‌ ಸ್ವೆಟರ್‌ ಜೊತೆ ಸಹ ಸ್ಕರ್ಟ್‌ ಸಾಕಷ್ಟು ಬ್ಯೂಟಿಫುಲ್ ಎನಿಸುತ್ತದೆ. ಇದರೊಂದಿಗೆ ನೀವು ಫುಟ್‌ ವೇರ್‌ ಗಾಗಿ ಥೈ ಹೈ ಬೂಟ್‌ ಧರಿಸಬಹುದು.

ಸ್ಟಾಕಿಂಗ್ಸ್ ಜೊತೆ ಶಾರ್ಟ್ಡ್ರೆಸ್‌ : ಚಳಿಗಾಲ ಬಂದೊಡನೆ ಹೆಚ್ಚು ಮಂದಿ ಯುವತಿಯರು ಶಾರ್ಟ್‌ ಡ್ರೆಸ್‌ ಧರಿಸಲು ತುಸು ಹಿಂಜರಿಯುತ್ತಾರೆ. ಆದರೆ ನೀವು ಒಂದು ಬ್ಯೂಟಿಫುಲ್ ವಿಧಾನ ಅನುಸರಿಸಿದರೆ, ಯಾವುದೇ ಥಂಡಿಯ ಕಾಟವಿಲ್ಲದೆ ಶಾರ್ಟ್‌ ಡ್ರೆಸ್‌ ಧರಿಸಬಹುದಾಗಿದೆ. ಚಳಿಗಾಲದಲ್ಲಿ ಶಾರ್ಟ್‌ ಡ್ರೆಸ್‌ ಧರಿಸಲು ಎಲ್ಲಕ್ಕೂ ಮೊದಲು, ಈ ಡ್ರೆಸ್‌ ನ ಒಳಗೆ ಥರ್ಮಲ್ ವೇರ್ ಟಾಪ್‌ ಧರಿಸಿರಿ ಹಾಗೂ ಮಂಡಿ ಭಾಗಕ್ಕೆ ಉಲ್ಲನ್‌ ಸ್ಟಾಕಿಂಗ್ಸ್ ಧರಿಸಿರಿ. ಇದರ ಜೊತೆ ನೀವು ಲೆಂತ್‌ ಬೂಟ್ಸ್, ಕುತ್ತಿಗೆಗೆ ಮಫ್ಲರ್ ಹಾಗೂ ಡ್ರೆಸ್‌ ಮೇಲುಗಡೆ ಡೆನಿಂ ಯಾ ಲೆದರ್‌ ಜ್ಯಾಕೆಟ್‌ ಧರಿಸಿದರೆ ನಿಮ್ಮ ಲುಕ್ಸ್ ಸುಪರ್ಬ್‌ ಆಗುತ್ತದೆ. ಈ ಸೀಸನ್‌ ನಲ್ಲಿ ಕ್ಯಾಶುಯೆಲ್ ಡ್ರೆಸ್‌ ಜೊತೆ ನೀವು ಡೆನಿಂ ಜ್ಯಾಕೆಟ್‌ ಧರಿಸಬಹುದು. ಇದು ನಿಮ್ಮ ಔಟ್‌ ಫಿಟ್‌ ಗೆ ಹೆಚ್ಚಿನ ಸ್ಟೈಲಿಶ್‌ ಲುಕ್‌ ನೀಡುತ್ತದೆ. ನೀವು ಈ ಡೆನಿಂ ಜ್ಯಾಕೆಟ್‌ ನ್ನು ಟ್ರೆಂಡಿ ಉಲ್ಲನ್‌ ಕ್ರಾಪ್‌ ಟಾಪ್‌ ಹಾಗೂ ಟೀಶರ್ಟ್‌ ಇತ್ಯಾದಿಗಳ ಜೊತೆಯೂ ಧರಿಸಬಹುದು.

ಉಲ್ಲನ್ಲಾಂಗ್ಡ್ರೆಸ್‌ : ನೀವು ನಿಮ್ಮ ಮನ ಬಯಸು ಉಲ್ಲನ್‌ ಲಾಂಗ್‌ ಡ್ರೆಸ್‌ ಆರಿಸಿಕೊಳ್ಳಿ. ಇದರ ಜೊತೆ ಜೊತೆಗೆ ನೀವು ಶಾರ್ಟ್‌ ಜ್ಯಾಕೆಟ್‌ ಯಾ ಕೋಟ್‌ ಧರಿಸಬಹುದು. ಇದು ನಿಮಗೆ ಸ್ಟೈಲಿಶ್‌ ಲುಕ್‌ ನೀಡುವ ಜೊತೆಗೆ, ನಿಮ್ಮನ್ನು ಸಾಕಷ್ಟು ಬೆಚ್ಚಗೂ ಇಡುತ್ತದೆ.

ಸೀರೆ ಜೊತೆ ಓವರ್ಕೋಟ್‌ : ಚಳಿಗಾಲದಲ್ಲಿ ನೀವು ಮದುವೆ ಅಟೆಂಡ್‌ ಮಾಡುವಂತಿದ್ದರೆ, ರೇಷ್ಮೆ ಸೀರೆಯಂತೂ ಉಡಲೇಬೇಕು. ಹಾಗಾಗಿ ಇದರ ಜೊತೆ ಮ್ಯಾಚಿಂಗ್‌ ಓವರ್‌ ಕೋಟ್‌ ಧರಿಸಬಹುದು. ಇದು ನಿಮ್ಮ ಟ್ರೆಡಿಶನ್‌ ಲುಕ್‌ ಗೆ ಒಂದು ಮಾಡ್‌ ಟಚ್ ನೀಡಬಲ್ಲದು, ಜೊತೆಗೆ ಚಳಿಯ ಕಾಟದಿಂದಲೂ ತಪ್ಪಿಸುತ್ತದೆ. ಪ್ರಿಂಟೆಂಡ್‌ ಯಾ ಕಸೂತಿಗೊಳಿಸಲಾದ ಜ್ಯಾಕೆಟ್‌ ನ್ನು ಸಹ ನೀವು ಸೀರೆ ಉಟ್ಟು, ಅದರ ಮೇಲೆ ಧರಿಸಬಹುದು.

ಲೆಹಂಗಾ ವಿತ್ಜ್ಯಾಕೆಟ್‌ : ನೀವು ಚಳಿಗಾಲದಲ್ಲಿ ಮದುವೆ ಅಟೆಂಡ್‌ ಮಾಡುತ್ತಿದ್ದರೆ ಹಾಗೂ ಲೇಟೆಸ್ಟ್ ಫ್ಯಾಷನ್‌ ಟ್ರೆಂಡ್ಸ್ ಜೊತೆ ಬ್ಯೂಟಿಫುಲ್ ಸ್ಟೈಲಿಶ್‌ ಆಗಿ ಕಾಣಬಯಸಿದರೆ, ಲೆಹಂಗಾ ಜೊತೆ ಲಾಂಗ್‌ ಉಲ್ಲನ್‌ ಜ್ಯಾಕೆಟ್‌ ನಿಮಗೆ ಬೆಸ್ಟ್ ಆಪ್ಶನ್‌ ಎನಿಸುತ್ತದೆ. ಈ ಡ್ರೆಸ್‌ ನಿಮಗೆ ಬೆಸ್ಟ್ ಎಲಿಗೆಂಟ್‌ಗ್ರೇಸ್‌ ಫುಲ್ ಲುಕ್ಸ್ ನೀಡುವುದರ ಜೊತೆ, ನಿಮ್ಮನ್ನು ಚಳಿಯಿಂದಲೂ ರಕ್ಷಿಸುತ್ತದೆ. ಉಲ್ಲನ್ ಜ್ಯಾಕೆಟ್‌ ಜೊತೆ ನೀವು ಬಯಸಿದರೆ ಭಾರಿ ಕಸೂತಿಯುಳ್ಳ ಲೆಹಂಗಾ ಸಹ ಧರಿಸಬಹುದು ಅಥವಾ ಸೀರೆ ಜೊತೆಯೂ ಈ ಕಾಂಬೋ ಬಲು ಸ್ಟೈಲಿಶ್‌ ಲುಕ್ಸ್ ನೀಡುತ್ತದೆ.

ಪುಲ್ಲೋವರ್ಜೊತೆ ಮ್ಯಾಚಿಂಗ್ಪ್ಯಾಂಟ್‌ : ನಿಮ್ಮ ಆಯ್ಕೆಗೆ ತಕ್ಕಂತೆ ಮೆಚ್ಚಿನ ಬಣ್ಣದ ಪುಲ್ಲೋವರ್ ಜೊತೆ ಮ್ಯಾಚಿಂಗ್ ಪ್ಯಾಂಟ್‌ ಹಾಗೂ ಹೈ ಹೀಲ್ಸ್ ಇದ್ದರೆ, ನಿಮಗೆ ಉತ್ತಮ ಲುಕ್ಸ್ ದೊರಕುತ್ತದೆ. ಇದೊಂದು ಕ್ಯಾಶ್ಯುಯೆಲ್ ಡ್ರೆಸ್‌ ಆಗಿದ್ದು, ಕಂಫರ್ಟೆಬಲ್ ಸ್ಮಾರ್ಟ್‌ ಲುಕ್ಸ್ ನೀಡುತ್ತದೆ. ನೀವು ಸೀರೆ ಜೊತೆ ಸಹ, ಬ್ಲೌಸ್‌ ಬದಲಿಗೆ ಪುಲ್ಲೋವರ್‌ ಧರಿಸಬಹುದು.

ಬ್ಲೇಝರ್ನಿಂದ ಸ್ಮಾರ್ಟ್ಲುಕ್ಸ್ : ಚಳಿಗಾಲಕ್ಕೆ ಬ್ಲೇಝರ್‌ ಒಂದು ಉತ್ತಮ ಆಯ್ಕೆ. ಇದರ ವೈಶಿಷ್ಟ್ಯವೆಂದರೆ, ಸ್ಟೈಲಿಶ್‌ ಲುಕ್ಸ್ ನೀಡುವುದು ಮಾತ್ರವಲ್ಲದೆ, ಇಂಡಿಯನ್‌ವೆಸ್ಟರ್ನ್‌ ಎರಡೂ ಬಗೆಯ ಡ್ರೆಸೆಸ್‌ ಗೂ ಸೂಕ್ತವಾಗಿ ಹೊಂದುತ್ತದೆ. ಬ್ಲೇಝರ್‌ ನ್ನು ನೀವು ಶರ್ಟ್‌, ಟೀಶರ್ಟ್‌, ಟ್ಯೂನಿಕ್‌, ಸೀರೆ, ಲೆಹಂಗಾ, ಸ್ಕರ್ಟ್‌ ಇತ್ಯಾದಿ ಯಾವುದರ ಜೊತೆಗಾದರೂ ಧರಿಸಬಹುದಾಗಿದೆ.

ಸ್ಟೈಲಿಶ್ಲುಕ್ಸ್ ಗಾಗಿ ಸ್ಕಿನ್ನಿ ಜೀನ್ಸ್ : ವಿಂಟರ್‌ ನಲ್ಲಿ ನೀವು ನಿಮ್ಮ ಡೇಲಿ ವೇರ್‌ ಗಾಗಿ ಸ್ಕಿನ್ನಿ ಜೀನ್ಸ್ ನ್ನು ಅಗತ್ಯ ಇರಿಸಿಕೊಳ್ಳಿ. ಇದಕ್ಕಾಗಿ ವಿಶೇಷ ಸಂರಕ್ಷಣೆಯ ಅಗತ್ಯವೇನೂ ಇಲ್ಲ. ಇದನ್ನು ಧರಿಸಿದಷ್ಟೂ ನಿಮ್ಮ ಸ್ಟೈಲಿಶ್‌ ಗೆಟ್‌ ಅಪ್‌ ಎದ್ದು ಕಾಣುತ್ತದೆ. ವಿಂಟರ್‌ ನಲ್ಲಿ ನೀವು ಸ್ಕಿನ್ನಿ ಜೀನ್ಸ್ ಜೊತೆ ಟೀಶರ್ಟ್‌, ಶರ್ಟ್‌, ಟ್ಯೂನಿಕ್‌, ಕೋಟ್‌ ಇತ್ಯಾದಿ ಧರಿಸಬಹುದು.

ಉಲ್ಲನ್ಸ್ಕಾರ್ಫ್ನಿಂದ ಹೆಚ್ಚು ಆಕರ್ಷಣೆ : ವಿಂಟರ್‌ ನಲ್ಲಿ ಉಲ್ಲನ್‌ ಸ್ಕಾರ್ಫ್‌ ಕೇವಲ ಸ್ಟೈಲಿಶ್‌ ಆ್ಯಕ್ಸೆಸರೀಸ್‌ ಆಗಿ ಮಾತ್ರ ಉಳಿದಿಲ್ಲ, ಬದಲಿಗೆ ನಿಮ್ಮನ್ನು ಥಂಡಿಯಿಂದಲೂ ರಕ್ಷಿಸುತ್ತದೆ. ಹೀಗಾಗಿ ಚಳಿಗಾಲದಲ್ಲಿ ಉಲ್ಲನ್‌ ಸ್ಕಾರ್ಫ್‌ ನ್ನು ನಿಮ್ಮ ಸ್ಟೈಲ್ ‌ಸ್ಟೇಟ್‌ ಮೆಂಟ್‌ ಆಗಿಸಿಕೊಳ್ಳಿ. ನೀವು ವೆಸ್ಟರ್ನ್‌ ಯಾ ಇಂಡಿಯನ್‌ ಡ್ರೆಸ್‌ ಧರಿಸಿ, ಜೊತೆಗೆ ಉಲ್ಲನ್‌ ಸ್ಕಾರ್ಫ್‌ ಜೊತೆ ನಿಮ್ಮ ಡ್ರೆಸ್ ಮತ್ತಷ್ಟು ಸ್ಟೈಲಿಶ್‌ ಆಗಿ ಕಂಗೊಳಿಸುತ್ತದೆ. ಇದನ್ನು ನೀವು ಸೀರೆ, ಸಲ್ವಾರ್‌ ಕಮೀಜ್‌, ಮಾಡ್‌ ಡ್ರೆಸ್‌, ಜೀನ್ಸ್, ಟೀಶರ್ಟ್‌ ಇತ್ಯಾದಿ ಯಾವುದೇ ಉಡುಗೆ ಜೊತೆಗಾದರೂ ಧರಿಸಬಹುದಾಗಿದೆ.

ಓವರ್ಕೋಟ್‌ : ವಿಂಟರ್‌ ಫ್ಯಾಷನ್‌ ನಲ್ಲಿ ಓವರ್‌ ಕೋಟ್‌ ಗೆ ತನ್ನದೇ ಆದ ಮಹತ್ವವಿದೆ. ಫಾರ್ಮ್‌ ಲುಕ್ಸ್ ಗಾಗಿ ಬ್ಲ್ಯಾಕ್‌, ಬ್ರೌನ್, ಗ್ರೇ, ಆಫ್‌ ವೈಟ್‌ ಇತ್ಯಾದಿ ಬಣ್ಣಗಳ ಓವರ್‌ ಕೋಟ್‌ ಧರಿಸಬಹುದು. ಕ್ಯಾಶುಯೆಲ್ ‌ಲುಕ್ಸ್ ಗಾಗಿ ಪಿಂಕ್‌, ಪರ್ಪಲ್, ಯೆಲ್ಲೋ, ರೆಡ್‌ ಇತ್ಯಾದಿ ಬ್ರೈಟ್‌ ಕಲರ್ಸ್‌ ನ ಓವರ್‌ ಕೋಟ್‌ ಆರಿಸಿಕೊಳ್ಳಿ.

ಕಾರ್ಡಿಗನ್‌ : ಚಳಿಯಿಂದ ತಪ್ಪಿಸಿಕೊಳ್ಳಲು ಕಾರ್ಡಿಗನ್‌ ಎಲ್ಲಕ್ಕಿಂತ ಸುರಕ್ಷಿತ, ಜನಪ್ರಿಯ ಆಯ್ಕೆಯಾಗಿದೆ. ಕಾರ್ಡಿಗನ್‌ ನ ವೈಶಿಷ್ಟ್ಯವೆಂದರೆ, ನೀವು ಇದನ್ನು ಟ್ರೆಡಿಶನಲ್ ವೆಸ್ಟರ್ನ್‌ ಎರಡೂ ತರಹದ ಡ್ರೆಸೆಸ್‌ ಜೊತೆ ಧರಿಸಬಹುದು.

ಟರ್ಟಲ್ ನೆಕ್‌ : ಇದನ್ನು ಧರಿಸಲು ಚಳಿಗಾಲವೇ ಸರಿ. ಥಂಡಿಯಿಂದ ರಕ್ಷಿಸುವ ಜೊತೆ, ಈ ನೆಕ್‌ ಲೈನ್‌ ಬಹಳ ಸ್ಟೈಲಿಶ್‌ ಆಗಿಯೂ ಮಿಂಚುತ್ತದೆ. ನೀವು ಸಹ ಈ ವಿಂಟರ್‌ ನಲ್ಲಿ ಟರ್ಟಲ್ ನೆಕ್‌ ಲೈನ್‌ ವುಳ್ಳ ಡ್ರೆಸ್‌, ಟೀಶರ್ಟ್‌, ಬ್ಲೌಸ್‌ ಇತ್ಯಾದಿ ಅಗತ್ಯ ಧರಿಸಿರಿ.

ಗೌನ್‌ : ಚಳಿಗಾಲದಲ್ಲಿ ಗೌನ್‌ ಸಹ ಉತ್ತಮ ಆಯ್ಕೆ ಎನಿಸುತ್ತದೆ. ವಿಶೇಷವಾಗಿ ಇದನ್ನು ಪಾರ್ಟಿ ಫಂಕ್ಷನ್‌ ಗಳಲ್ಲಿ ಧರಿಸಿರಿ. ಮುಖ್ಯವಾಗಿ ರೆಡ್‌, ಬ್ಲ್ಯಾಕ್‌, ಪರ್ಪಲ್, ಬೇಬಿ ಪಿಂಕ್‌, ಗೋಲ್ಡನ್‌, ಸಿಲ್ವರ್‌ ಇತ್ಯಾದಿ ಬ್ರೈಟ್‌ ಬಣ್ಣಗಳ ಗೌನ್‌ ಧರಿಸಿರಿ.

ಪ್ಯಾಂಟ್ಸೂಟ್ಜೊತೆ ಬ್ಲೇಝರ್‌ : ಆಫೀಸಿಗಾಗಿ ಫಾರ್ಮಲ್ ಡ್ರೆಸ್‌ ಧರಿಸ ಬಯಸಿದರೆ, ಪ್ಯಾಂಟ್‌ ಸೂಟ್‌ ನಿಂದ ಸ್ಟೈಲಿಶ್‌ ಆಗಿ ಮಿಂಚಿರಿ. ಇತ್ತೀಚಿನ ಆಧುನಿಕ ತರುಣಿಯರು, ಇದರೊಂದಿಗೆ ಬ್ಲೇಝರ್‌ ಧರಿಸ ಬಯಸುತ್ತಾರೆ. ಬ್ಲೇಝರ್‌ ಜೊತೆ ಮ್ಯಾಚಿಂಗ್ ಪ್ಯಾಂಟ್‌ ಇದೀಗ ಟ್ರೆಂಡ್‌ ಆಗಿದೆ. ನೀವು ನಿಮ್ಮ ಸೂಟ್‌ ನ್ನು ಪ್ಯಾಂಟ್‌ ಯಾ ಜೀನ್ಸ್ ಜೊತೆ ತೊಟ್ಟು, ಜೊತೆಗೆ ಬ್ಲೇಝರ್‌ ಧರಿಸಿರಿ.

ಹೊಸ ಲುಕ್ಸ್ ಗಾಗಿ ನಿಮ್ಮ ಕೋಟ್ಗೆ ಇರಲಿ ಬೆಲ್ಟ್ : ಕೋಟ್‌ ಎಲ್ಲರೂ ಮೆಚ್ಚಿ ಧರಿಸುವ ಡ್ರೆಸ್‌. ಹೀಗಾಗಿ ಇದು ಬಲು ಸಾಧಾರಣ ಆಗಿಹೋಗಿದೆ. ಒಮ್ಮೊಮ್ಮೆ ಬೋರಿಂಗ್‌ ಎನಿಸಿದರೂ ಆಶ್ಚರ್ಯವಿಲ್ಲ. ಹೀಗಾಗಿ ಚಳಿಗಾಲದಲ್ಲಿ, ನಿಮ್ಮ ಹಳೆಯ ಬೋರಿಂಗ್ ಕೋಟ್‌ ಗೆ ಸ್ಟೈಲಿಶ್‌ಹೊಸ ಲುಕ್ಸ್ ನೀಡಲು, ನೀವು ಇದಕ್ಕೆ ಮಾಡ್‌ ಬೆಲ್ಟ್ ಅಗತ್ಯ ಧರಿಸಿರಿ. ಇದು ನಿಮ್ಮನ್ನು ನಾಲ್ವರಲ್ಲಿ ಎದ್ದು ಕಾಣುವಂತೆ ಮಾಡಬಲ್ಲದು.

ನಿಮ್ಮ ಡ್ರೆಸ್ಗೆ ತಕ್ಕಂತೆ ಒಡವೆ ಇರಲಿ : ನಿಮ್ಮ ಡ್ರೆಸ್‌ ಜೊತೆ ಪರ್ಸನಾಲಿಟಿ ಹೆಚ್ಚು ಮಿಂಚಬೇಕಲ್ಲವೇ? ಇದಕ್ಕಾಗಿ ಸೂಕ್ತ ಒಡವೆಗಳ ಆಯ್ಕೆ ಅತ್ಯಗತ್ಯ. ನಿಮ್ಮ ಡ್ರೆಸ್‌ ಗೆ ಮ್ಯಾಚ್‌ ಆಗುವಂಥ ಒಡವೆ, ಆ್ಯಕ್ಸೆಸರೀಸ್‌ ಇರಿಸಿಕೊಳ್ಳಿ. ಹೀಗಾದಾಗ ಗುಂಪಿನಲ್ಲಿ ಎಲ್ಲರಿಗಿಂತ ಚೆನ್ನಾಗಿ ಮಿಂಚಬಲ್ಲಿರಿ.

ಸೂಟ್ಗೆ ನೀಡಿ ಹೊಸ ಲುಕ್‌ : ಇವುಗಳೆಲ್ಲದರ ಜೊತೆ ನೀವು ಪ್ರತ್ಯೇಕವಾಗಿ ಸೂಟ್‌ ಧರಿಸಿ ಮಿಂಚ ಬಯಸಿದರೆ, ಅದರ ಮೇಲೆ ನೀವು ಡಿಸೈನರ್‌ ಉಲ್ಲನ್‌ ದುಪಟ್ಟಾ ಯಾ ಸ್ಟೈಲಿಶ್‌ ಶಾಲು ಧರಿಸಬಹುದು. ಇದು ನಿಮ್ಮ ಲುಕ್ಸ್ ನ್ನು ಎಂದಿಗಿಂತ ಬಲು ಡಿಫರೆಂಟ್‌ಎಲಿಗೆಂಟ್‌ ಮಾಡುತ್ತದೆ.

ವಿಂಟರ್ಗೆ ಬೇಕಾಗುವ ಫುಟ್ವೇರ್

ನೀವು ಧರಿಸುವ ಫುಟ್‌ ವೇರ್‌, ನಿಮ್ಮ ಓವರ್‌ ಆಲ್ ಔಟ್‌ ಫಿಟ್‌ ಗೆ ಹೆಚ್ಚಿನ ಆಕರ್ಷಣೆ ಒದಗಿಸಬಲ್ಲದು. ನೀವು ಎಷ್ಟೇ ದುಬಾರಿ, ಬ್ಯೂಟಿಫುಲ್, ಮಾಡ್‌ ಡ್ರೆಸ್‌ ಧರಿಸಿದ್ದರೂ, ಅದಕ್ಕೆ ಸೂಕ್ತವಾಗುವಂಥ ಫುಟ್‌ ವೇರ್‌ ಧರಿಸದಿದ್ದರೆ, ನಿಮ್ಮ ಪರ್ಸನಾಲಿಟಿಯಲ್ಲಿ ಒಂದು ಪ್ಲಸ್‌ ಪಾಯಿಂಟ್‌ ಇರುವುದಿಲ್ಲ. ಚಳಿಗಾಲದಲ್ಲಿ ನೀವು ನಿಮ್ಮ ಡೆಲ್ ವೆರಿಸೆಸ್‌ ಕುರಿತು ಎಷ್ಟು ಯೋಚಿಸುತ್ತೀರೋ, ಅಷ್ಟೇ ಕಾಳಜಿಯನ್ನು ನಿಮ್ಮ ಫುಟ್‌ ವೇರ್‌ ಗೂ ಕೊಡಬೇಕು. ಈ ಸೀಸನ್‌ ನಲ್ಲಿ ನಿಮ್ಮ ಡ್ರೆಸ್‌ಗೆ ತಕ್ಕಂತೆ ಫುಟ್‌ ವೇರ್‌ ಇರದಿದ್ದರೆ, ನೀವು ಔಟ್‌ ಆಫ್‌ ಫ್ಯಾಷನ್‌ ಆಗಿ ಹೋಗುತ್ತೀರಿ. ಹೀಗಾಗಿ ಕಾಲಕ್ಕೆ ತಕ್ಕಂತೆ ನಿಮ್ಮ ಡ್ರೆಸ್‌ ಗೆ ಪೂರಕ ಆಗುವಂತೆ ಶೂಸ್‌, ಬೂಟ್‌, ಸ್ಯಾಂಡಲ್ಸ್ ಇರಲಿ. ಹೀಗಾಗಿ ಇಂಥವನ್ನು ನಿಮ್ಮ ಸ್ಟೈಲಿಂಗ್‌ ಲಿಸ್ಟ್ ಗೆ ಅಗತ್ಯವಾಗಿ ಸೇರಿಸಿಕೊಳ್ಳಿ. ಇದಕ್ಕಾಗಿ ಬೇಕಾಗುವ ಟ್ರೆಂಡಿ  ಸ್ಟೈಲಿಶ್‌ ಫುಟ್‌ ವೇರ್‌ ಕುರಿತು ವಿವರವಾಗಿ ತಿಳಿಯೋಣ.

ಹೀಲ್ಸ್ ವುಳ್ಳ ಬೂಟ್ಸ್ : ಇಂಥ ಬೂಡ್ಸ್ ನಿಮಗೆ ಪ್ರತ್ಯೇಕ ಸ್ಮಾರ್ಟ್‌ ಲುಕ್ಸ್ ನೀಡುತ್ತವೆ. ನೀವು ಮಿಡಿ ಸ್ಟೈಲ್ ‌ಡ್ರೆಸ್‌ ಜೊತೆ ಬೂಟ್ಸ್ ಧರಿಸ ಬಯಸಿದರೆ, ನಿಮ್ಮ ಬಳುಕುವ ಬಡ ನಡುವಿಗೆ ಅಗಲದ ಬೆಲ್ಟ್ ನ್ನು ಅಗತ್ಯ ಬಿಗಿಯಿರಿ. ಇದರಿಂದ ನಿಮ್ಮ ಲುಕ್ಸ್ ಮತ್ತಷ್ಟು ಕ್ಲಾಸಿಕ್‌ ಎನಿಸುತ್ತದೆ. ಇದರಿಂದ ನಿಮ್ಮ ಫಿಗರ್‌ ಹೆಚ್ಚು ಸ್ಟೈಲಿಶ್‌ಬ್ಯೂಟಿಫುಲ್ ಆಗುತ್ತದೆ. ಇದರ ಜೊತೆ ಹೀಲ್ಸ್ ವುಳ್ಳ ಬೂಟ್ಸ್ ಧರಿಸಿರಿ.

ಆ್ಯಂಕಲ್ ಬೂಟ್ಸ್ : ಈ ಬೂಟ್ಸ್ ನಿಮ್ಮ ಆ್ಯಂಕಲ್ ಏರಿಯಾ ಕವರ್‌ ಮಾಡುತ್ತದೆ. ಹೀಗಾಗಿ ಇವು ಆ್ಯಂಕಲ್ ಲೆಂತ್‌ ಬೂಟ್ಸ್ ಎಂದೇ ಪ್ರಸಿದ್ಧಿ! ನೀವು ಹೆಚ್ಚು ಆಕರ್ಷಕ ಲುಕ್‌ ಬಯಸಿದರೆ, ನೀವು ಈ ಬೂಟ್ಸ್ ನ್ನು ರಿಪ್ಡ್ ಜೀನ್ಸ್ ಜೊತೆ ಅಗತ್ಯ ಧರಿಸಿರಿ. ಇದನ್ನು ನೀವು ಯಾವುದೇ ತರಹದ ಡ್ರೆಸ್‌ ಜೊತೆ ಧರಿಸಬಹುದು. ಇದನ್ನು ಧರಿಸಿದಾಗ ಎಂದೂ ಸಾಕ್ಸ್ ಮರೆಯಬಾರದು. ಇದರಿಂದ ನಿಮ್ಮ ಲುಕ್ಸ್ ಬಹಳ ಸುಧಾರಿಸುತ್ತದೆ. ಇದು ನಿಮ್ಮನ್ನು ಥಂಡಿಯಿಂದ ರಕ್ಷಿಸಿ, ಹೆಚ್ಚಿನ ಗ್ಲಾಮರ್‌ ಒದಗಿಸುತ್ತದೆ.

ಬ್ಲ್ಯಾಕ್ಪಂಪ್ಸ್ : ಕ್ಲಾಸಿಕ್‌ ಬ್ಲ್ಯಾಕ್‌ ಪಂಪ್ಸ್ ನ ಫ್ಯಾಷನ್‌ ಎವರ್‌ ಗ್ರೀನ್‌ ಎನಿಸಿದೆ. ಇದನ್ನು ನೀವು ಯಾವುದೇ ಬಗೆಯ ಡ್ರೆಸ್ ಜೊತೆಗಾದರೂ ಧರಿಸಬಹುದು. ನೀವು ಬಯಸಿದರೆ ಇದನ್ನು ಫಾರ್ಮಲ್ ಪೆನ್ಸಿಲ್ ‌ಸ್ಕರ್ಟ್‌ ಯಾ ನೈಟ್‌ ಔಟ್‌ ಬೆಲ್ ‌ಬಾಟಮ್ ಜೊತೆಯೂ ಧರಿಸಬಹುದು.

ತೆಳು ಸ್ಟ್ರಾಪ್ವುಳ್ಳ ಹೀಲ್ಸ್ : ಇಂಥ ಹೀಲ್ಸ್ ನೋಡಲು ಬಲು ಆಕರ್ಷಕ, ಜೊತೆಗೆ ಇವು ತರುಣಿಯರಿಗೆ ಬಲು ಅಚ್ಚುಮೆಚ್ಚು. ಇಗವುಳ ಸ್ಟ್ರಾಪ್‌ ಬಲು ತೆಳು ಆಗಿರುತ್ತದೆ. ನೀವು ಬಯಸಿದರೆ ಸಿಂಗ್‌ ಸ್ಟ್ರಾಪ್‌ ಹೋಲ್ಡಿಂಗ್‌ ನ ಶೂಸ್‌ ಅಥವಾ ಮಲ್ಟಿಪ್ಲ್ ಸ್ಟ್ರಾಪ್ ವುಳ್ಳ ಶೂಸ್‌ ಧರಿಸಬಹುದು. ನೀವು ಈ ಹೀಲ್ಸ್ ನ್ನು ಸಾಲಿಡ್‌ ಕಲರ್‌ ಜೊತೆ ಧರಿಸಿದರೆ, ಇವು ಮತ್ತಷ್ಟು ಆಕರ್ಷಕವಾಗಿ ಕಾಣುತ್ತವೆ.

ವೈಟ್ಸ್ನೀಕರ್ಸ್‌ : ಚಳಿಗಾಲದ ಥಂಡಿಯಿಂದ ಪಾರಾಗಲು ಇದು ಬೆಸ್ಟ್ ಆಯ್ಕೆ. ಇವು ಕಂಫರ್ಟೆಬಲ್ ಮಾತ್ರವಲ್ಲದೆ, ಪಾದಕ್ಕೆ ಆರಾಮ ಸಹ ನೀಡುತ್ತವೆ. ಇದಕ್ಕೆ ಸರಿಸಾಟಿಯಾದ ಮತ್ತೊಂದು ಬಗೆಯ ಫುಟ್‌ ವೇರ್‌ ಇಲ್ಲ ಎಂದೇ ಹೇಳಬೇಕು. ಇದನ್ನು ನೀವು ಜೀನ್ಸ್, ಟ್ರೌಸರ್ಸ್‌ ಯಾ ಬೇರೆ ಯಾವುದೇ ಬಗೆಯ ಇತರ ಡ್ರೆಸ್‌ ಜೊತೆಯೂ ಧರಿಸಬಹುದು.

ಥೈ ಹೈ ಬೂಟ್ಸ್ : ಚಳಿಗಾಲದ ಮಾಡ್‌ ಡ್ರೆಸ್‌ ಜೊತೆ ಸೂಕ್ತ ಫುಟ್‌ ವೇರ್‌ ಎಂದರೆ ಥೈಹೈ ಬೂಟ್ಸ್. ಇದರಿಂದ ನಿಮ್ಮ ಪರ್ಸನಾಲಿಟಿ ಮತ್ತಷ್ಟು ಮಿಂಚಲಿದೆ. ನೀವು ಓವರ್‌ ಸೈಜ್‌ ಹುಡಿ ಧರಿಸುವಿರಾದರೆ, ಅದರ ಜೊತೆ ಅಗತ್ಯ ಥೈಹೈ ಬೂಟ್ಸ್ ಧರಿಸಿರಿ. ಇವು ವೆರಿ ಕಂಫರ್ಟೆಬಲ್ ಮಾತ್ರವಲ್ಲದೆ, ನೋಡಲಿಕ್ಕೂ ಕೂಲ್ ಎನಿಸುತ್ತವೆ. ಶಾರ್ಟ್‌ ಡ್ರೆಸ್‌ ಜೊತೆ ಸದಾ ಲಾಗ್‌ ಹೈಟ್‌ ನ ಬೂಟ್ಸ್ ಧರಿಸಿರಿ. ಇದರ ಹೈಟ್‌ ಸುಮಾರು 6 ಇಂಚು ಇದ್ದು, ಬೋಲ್ಡ್ ಲುಕ್ಸ್ ಒದಗಿಸುತ್ತವೆ.

ಪಾಪ್ಕಲರ್ಹೀಲ್ಸ್ : ನೀವು ಫನ್‌ ಲುಕ್ಸ್ ಬಯಸುವುದಾದರೆ, ಅಗತ್ಯವಾಗಿ ಪಾಪ್‌ ಕಲರ್‌ ಹೀಲ್ಸಾ ಧರಿಸಿರಿ. ಇದು ಕೆಲವು ಆಯ್ದ ಔಟ್‌ ಫಿಟ್ಸ್ ಜೊತೆ ಬಲು ಪರ್ಫೆಕ್ಟ್ ಎನಿಸುತ್ತದೆ. ಮುಖ್ಯವಾಗಿ ಇದು ನ್ಯೂಟ್ರಲ್ ಕಲರ್‌ ಡ್ರೆಸೆಸ್‌ ಜೊತೆ ಬೆಸ್ಟ್ ಆಯ್ಕೆ ಎನಿಸಿದೆ. ನೀವು ಇದರಲ್ಲಿ ನಿಯಾನ್‌ ಗ್ರೀನ್‌ ನಿಂದ ಹಿಡಿದು, ಕ್ಯಾಂಡಿ ಪಿಂಕ್‌ ಪಂಪ್‌ ಹೀಲ್ಸ್ ಇತ್ಯಾದಿಗಳವರೆಗೂ ಆರಿಸಿಕೊಳ್ಳಬಹುದು.

ಕಿಟನ್ಹೀಲ್ಸ್ : ಗ್ಲಾಮರಸ್‌ ಲುಕ್ಸ್ ಪಡೆಯುವುದಕ್ಕಾಗಿ ನೀವು ಈ ಸಲದ ಚಳಿಗಾಲದಲ್ಲಿ ಕಿಟನ್‌ ಹೀಲ್ಸ್ ಟ್ರೈ ಮಾಡಿ ನೋಡಿ. ಈ ಹೀಲ್ಸ್ ನಿಮ್ಮ ಲುಕ್ಸ್ ನ್ನು ಸ್ಟೈಲಿಶ್‌ಗ್ಲಾಮರಸ್‌ ಆಗಿಸುವುದರ ಜೊತೆ ನಿಮ್ಮ ಹೈಟ್‌ ಕೂಡ ತುಸು ಎತ್ತರಿಸಿದಂತೆ ಕಂಡುಬರುತ್ತದೆ. ಈ ಹೀಲ್ಸ್ ನ್ನು ನೀವು ನಿಮ್ಮ ಯಾವುದೇ ವೆಸ್ಟ್ರನ್‌ ಡ್ರೆಸೆಸ್‌ ಜೊತೆ ಹೊಂದಿಸಿಕೊಂಡು ಧರಿಸಬಹುದು.

ವೆಜ್‌  ಹೀಲ್ಸ್ : ಈ ಚಳಿಗಾಲದ ಋತುವಿಗೆ ನಿಮಗೆ ವೆಜ್‌ ಹೀಲ್ಸ್ ಹೆಚ್ಚಿನ ಸ್ಟೈಲಿಶ್‌ ಲುಕ್ಸ್ ಒದಗಿಸುತ್ತದೆ. ಇದು ಸುಂದರ ಮಾತ್ರವಲ್ಲದೆ ಬಲು ಸಶಕ್ತ, ಕಂಫರ್ಟೆಬಲ್ ಸಹ ಹೌದು. ಬೂಟ್ಸ್ ಗೆ ಹೋಲಿಸಿದರೆ ಇದು ಹೆಚ್ಚು ಸುರಕ್ಷಿತ ಹಾಗೂ ಸ್ಮಾರ್ಟ್ ಎನಿಸುತ್ತದೆ.

ಪಂಪ್ಸ್ ಹೀಲ್ಸ್ : ಇವು ನೋಡಲು ಬಲು ಟ್ರೆಂಡಿ ಎನಿಸುತ್ತವೆ, ಕೂಲ್ ‌ಆಗಿ ಕಾಣಿಸುತ್ತವೆ. ಇವನ್ನು ಯಾವುದೇ ಬಗೆಯ ಡ್ರೆಸ್‌ ಜೊತೆ ಆರಾಮವಾಗಿ ಧರಿಸಬಹುದು. ಆದರೆ ಎಲ್ಲಕ್ಕಿಂತ ಇವು ಫಾರ್ಮಲ್ ಡ್ರೆಸ್‌ ಜೊತೆ ಪರ್ಫೆಕ್ಟ್ ಎನಿಸುತ್ತವೆ. ಬಯಸಿದರೆ ನೀವು ಇದನ್ನು ಜ್ಯಾಕೆಟ್‌ ಜೊತೆ ಸಹ ಧರಿಸಬಹುದು.

ಬ್ಲ್ಯಾಕ್ಬೂಟ್ಸ್ : ಮುಖ್ಯವಾಗಿ ಇವು ನಿಮಗೆ ಒಂದು ಫ್ಯಾಷನ್‌ ಸ್ಟೇಟ್‌ ಮೆಂಟ್‌ ತರಹ ಕೆಲಸ ಮಾಡುತ್ತದೆ. ತಮ್ಮ ಲುಕ್ಸ್ ಜೊತೆ ಹೊಸ ಹೊಸ ಪ್ರಯೋಗ ಮಾಡಬಯಸುವ ಕಿಶೋರಿಯರಿಗೆ ಈ ಬೂಟ್ಸ್ ಪರ್ಫೆಕ್ಟ್ ಚಾಯ್ಸ್. ಬ್ಲ್ಯಾಕ್‌ ಬೂಟ್ಸ್ ನಿಮಗೆ ಹೆಚ್ಚಿನ ಕೂಲ್ ‌ಲುಕ್ಸ್ ನೀಡುತ್ತದೆ.

ಗ್ಲಾಡಿಯೇಟರ್ಸ್ಯಾಂಡಲ್ಸ್ : ವೆಸ್ಟರ್ನ್‌ ಯಾ ಇಂಡಿಯನ್‌ ಔಟ್‌ ಫಿಟ್ಸ್ ಇರಲಿ, ಎಲ್ಲದಕ್ಕೂ ಸ್ಯಾಂಡಲ್ಸ್ ಚೆನ್ನಾಗಿ ಹೊಂದುತ್ತವೆ. ಇಂದಿನ ಮಾರುಕಟ್ಟೆಯಲ್ಲಿ ನಿಮಗೆ ಇದರಲ್ಲಿ ಹಲವು ಬಗೆ ಲಭ್ಯವಿವೆ. ನಿಮ್ಮ ಡ್ರೆಸ್‌ ಗೆ ಮ್ಯಾಚ್‌ ಆಗುವಂತೆ ನೋಡಿ ಆರಿಸಿಕೊಳ್ಳಿ.

ಚಳಿಗಾಲದಲ್ಲಿನ ಮೇಕಪ್

ಚಳಿಗಾಲದಲ್ಲಿ ನಮ್ಮ ಚರ್ಮ ಬಲು ಬೇಗ ಡ್ರೈ ಆಗುತ್ತದೆ, ಆಗ ಮೇಕಪ್‌ ಮಾಡಿಕೊಳ್ಳುವುದು ಕಷ್ಟ ಸಾಧ್ಯ. ಡ್ರೈ ಸ್ಕಿನ್‌ ಕಾರಣ ಥಂಡಿಯಲ್ಲಿ ಮೇಕಪ್‌ ಮಾಡಿಕೊಂಡಾಗ, ಮುಖ ಬಲು ಬೇಗ ಹೆಚ್ಚು ಡ್ರೈ ನಿರ್ಜೀವವಾಗಿ ತೋರುತ್ತದೆ. ಪ್ರತಿ ಸೀಸನ್ನಿನ ಮೇಕಪ್ ವಿಭಿನ್ನ ಆಗಿರುವುದರಿಂದ, ಚಳಿಗಾಲದ ಮೇಕಪ್‌ ಆದಷ್ಟೂ ಬ್ರೈಟ್‌ ಆಗಿರಲಿ. ಬೇಸಿಗೆಯಲ್ಲಿ ಯಾವ ಬಣ್ಣಗಳನ್ನು ಅವಾಯ್ಡ್ ಮಾಡಲಾಗಿತ್ತೋ, ಅಂಥವನ್ನು ಈಗ ಧಾರಾಳ ಬಳಸಬಹುದು. ಇದಕ್ಕಾಗಿ ಕೆಲವು ಸಲಹೆಗಳನ್ನು ಅಗತ್ಯ ಗಮನಿಸುವುದು :

ಸ್ಟೆಪ್ಬೈ ಸ್ಟೆಪ್ಮೇಕಪ್ಮಾಯಿಶ್ಚರೈಸ್ಮಾಡಿ : ಚಳಿಗಾಲದಲ್ಲಿ ಎಲ್ಲಕ್ಕೂ ಮೊದಲು ಚರ್ಮವನ್ನು ನೀಟಾಗಿ ಮಾಯಿಶ್ಚರೈಸ್ ಮಾಡಿ. ಆಗ ಮೇಕಪ್‌ ಮಾಡಿದರೆ, ಚರ್ಮ ಡ್ರೈ ಎನಿಸದು. ಚರ್ಮದೊಳಗೆ ಮೇಕಪ್‌ ಪ್ರಾಡಕ್ಟ್ ವಿಲೀನಗೊಳ್ಳಲು ಸಹ ಇದು ಸಹಕಾರಿ. ಇದಕ್ಕಾಗಿ ಮಾಯಿಶ್ಚರೈಸರ್‌ ನಿಂದ ಮುಖವನ್ನು 4-5 ನಿಮಿಷ ಮಾಯಿಶ್ಚರೈಸ್‌ ಮಾಡಿ, ಇದರಿಂದ ಸ್ಕಿನ್‌ ಎಷ್ಟೋ  ಸಾಫ್ಟ್ ಆಗುತ್ತದೆ. ನೀವು ಚಳಿಗಾಲದಲ್ಲಿ ಮೇಕಪ್‌ ಗೆ ಮುನ್ನ, ಹಸಿ ಹಾಲಿನಲ್ಲಿ ಹತ್ತಿ ಅದ್ದಿಕೊಂಡು ನಿಮ್ಮ ಮುಖವನ್ನು ನೀಟಾಗಿ ಒರೆಸಿಕೊಂಡರೆ, ಅದು ಹೆಚ್ಚು ಶುಭ್ರಗೊಳ್ಳುತ್ತದೆ.

ಫೇಸ್ಸೀರಂ ಹಚ್ಚಿಕೊಳ್ಳಿ : ಈ ಸೀಸನ್ನಿನಲ್ಲಿ ಫೇಸ್‌ ಸೀರಂ ಹಚ್ಚುವಿಕೆ ಎಷ್ಟೋ ಉತ್ತಮ ಎನಿಸುತ್ತದೆ. ಇದರಿಂದ ನಿಮ್ಮ ಚರ್ಮ ಹೆಚ್ಚು ಆರ್ದ್ರತೆ ಗಳಿಸುತ್ತದೆ, ಜೊತೆಗೆ ಹೆಚ್ಚು ಮೃದು ಹಾಗೂ ಕಾಂತಿಯನ್ನೂ ಸಹ.

ಪ್ರೈಮರ್ತೀಡಿರಿ : ನೀವು ಚಳಿಗಾಲಕ್ಕೆ ಅನುಸಾರ, ಚರ್ಮವನ್ನು ಡ್ರೈಗೊಳಿಸದಂಥ ಪ್ರೈಮರ್‌ ನ್ನೇ ಬಳಸಿರಿ. ನಿಮ್ಮ ಚರ್ಮ ಅಗತ್ಯಕ್ಕಿಂತ ಹೆಚ್ಚು ಡ್ರೈ ಆಗಿದ್ದರೆ, ನೀವು ಪೆಟ್ರೋಲಿಯಂ ಜೆಲ್ಲಿ ಬೇಸ್ಡ್ ಪ್ರೈಮರ್‌ ನ್ನು ಬಳಸುವುದು ಲೇಸು.

ಕನ್ಸೀಲರ್ ಬಳಕೆ : ನಿಮ್ಮ ಕಂಗಳ ಸುತ್ತಮುತ್ತ ಡಾರ್ಕ್‌ ಸರ್ಕಲ್ಸ್ ಇದ್ದರೆ, ಮುಖದಲ್ಲಿ ಅಲ್ಲಲ್ಲಿ ಕಲೆ ಕಾಣಿಸುತ್ತಿದ್ದರೆ, ಅವನ್ನೆಲ್ಲ ಅಡಗಿಸಲು ಸೂಕ್ತ ಕನ್ಸೀಲರ್‌ ನ್ನು ಬಳಸಿಕೊಳ್ಳಿ. ಲಿಕ್ವಿಡ್‌ ಯಾ ಕ್ರೀಮೀ ಕನ್ಸೀಲರ್‌ ಯೂಸ್‌ ಮಾಡಿ. ಫೌಂಡೇಶನ್‌ ನಿಂದ ಲೈಟ್ ಶೇಡ್‌ ನ ಕನ್ಸೀಲರ್‌ ತೀಡಿರಿ. ಇದನ್ನು ಚೆನ್ನಾಗಿ ಕಂಗಳ ಸುತ್ತಮುತ್ತ ತೀಡುತ್ತಾ, ಮರ್ಜ್‌ ಮಾಡಿಸಿ.

ಫೌಂಡೇಶನ್ಹಚ್ಚಿಕೊಳ್ಳಿ : ಚಳಿಗಾಲದಲ್ಲಿ ಉತ್ತಮ ಗ್ಲೋ ಪಡೆಯಲು, ಕ್ರೀಮೀ ಯಾ ಆಯಿಲ್ ಬೇಸ್ಡ್ ಫೌಂಡೇಶನ್‌ ಯೂಸ್‌ ಮಾಡಿ. ಅಕಸ್ಮಾತ್‌ ಇದು ಬೇಡ ಎನಿಸಿದರೆ CC ಕ್ರೀಂ ಹಚ್ಚಿಕೊಳ್ಳಬಹುದು.

ಶ್ಯಾಡೋ 

ಲೈನರ್ಬಳಕೆ : ನೀವು ಚಳಿಗಾಲದಲ್ಲಿ ಇವೆರಡನ್ನೂ ಬಳಸ ಬಯಸಿದರೆ, ಹೆಚ್ಚು ಬ್ಲ್ಯಾಕ್‌ಬ್ರೌನ್‌ ಕಲರ್ಸ್‌ ಯಾ ಪಿಂಕ್‌, ಪರ್ಪಲ್, ಚಾಕಲೇಟ್‌ ಬ್ರೌನ್‌, ಫಾರೆಸ್ಟ್ ಗ್ರೀನ್‌, ನೇವಿ ಬ್ಲೂಗಳಂಥ ಬಣ್ಣಗಳ ಐಶ್ಯಾಡೋ ಬಳಸಿಕೊಳ್ಳಿ. ಇದರಿಂದ ಕಂಗಳು ಎಷ್ಟೋ ಸುಂದರ ಆಗುತ್ತವೆ.

ಇದಾದ ನಂತರ ನೀವು ಕಾಡಿಗೆ, ಐ ಲೈನರ್‌ ತೀಡಿಕೊಳ್ಳಿ. ಕಾಡಿಗೆ ಹರಡಿಕೊಳ್ಳಬಹುದು ಎಂದೆನಿಸಿದರೆ, ನೀವು ಅದನ್ನು ತೀಡುವ ಮೊದಲು, ಕಂಗಳ ಅತ್ತಿತ್ತ ಲೈಟ್‌ ಆಗಿ ಫೇಸ್‌ ಪೌಡರ್‌ ಯಾ ಇತರ ಪೌಡರ್‌ ಸಿಂಪಡಿಸಿ. ಇದರಿಂದ ಕಾಡಿಗೆ ಹರಡದು. ನಂತರ ನೀವು ಮಸ್ಕರಾ ಹಚ್ಚಿಕೊಳ್ಳಬಹುದು.

ಬ್ಲಶ್ಹೈಲೈಟ್ಹಚ್ಚಿರಿ : ಚಳಿಗಾಲದಲ್ಲಿ ಅತಿಯಾದ ಡಾರ್ಕ್‌ ಬ್ಲಶ್‌ ನ ಬಳಕೆ ಬೇಡ. ವೆರಿ ಲೈಟ್‌ ಬ್ಲಶ್‌ ಹಚ್ಚಿಕೊಳ್ಳಿ ಹಾಗೂ ಇದರ ಮೇಲೆ ತುಸು ಹೈಲೈಟರ್‌ ತೀಡಿರಿ. ಬಯಸಿದರೆ ನೀವು ಇವೆರಡನ್ನೂ ಮಿಕ್ಸ್ ಮಾಡಿ, ಲೈಟ್‌ ಆಗಿ ತೀಡಬಹುದು.

ಕೊನೆಯಲ್ಲಿ ಲಿಪ್ಸ್ಟಿಕ್ಟಚ್‌ : ಮೇಕಪ್‌ ಕಂಟ್ರೋಲ್‌ ಮಾಡುವುದಕ್ಕಾಗಿ ನೀವು ಅಗತ್ಯ ಲಿಪ್‌ ಸ್ಟಿಕ್‌ ತೀಡಬೇಕು. ಚಳಿಗಾಲದಲ್ಲಿ ಡಾರ್ಕ್‌ ಲಿಪ್‌ ಸ್ಟಿಕ್‌ ಹೆಚ್ಚು ಜನಪ್ರಿಯ. ಹೀಗಾಗಿ ನೀವು ಡಾರ್ಕ್‌ ಶೇಡ್ಸ್ ನ ಮೆರೂನ್‌, ರೆಡ್‌, ಪಿಂಕ್‌, ಕಾಫಿ ಬ್ರೌನ್‌ ಲಿಪ್‌ ಸ್ಟಿಕ್ ತೀಡಿಕೊಳ್ಳಿ. ಇದನ್ನು ಹಚ್ಚಿಕೊಳ್ಳುವ ಮೊದಲು ನಿಮ್ಮ ತುಟಿಗಳನ್ನು ಚೆನ್ನಾಗಿ ಮಾಯಿಶ್ಚರೈಸ್‌ ಗೊಳಿಸಲು ಮರೆಯದಿರಿ. ನಿಮ್ಮ ಲಿಪ್‌ ಸ್ಟಿಕ್‌ ಯಾ ಬಣ್ಣದಲ್ಲಿದೆಯೋ, ಅದಕ್ಕೆ ತುಸು ಭಿನ್ನ ಬಣ್ಣದ ಲಿಪ್‌ ಲೈನರ್‌ ತೀಡಿರಿ. ಇದರಿಂದ ನಿಮ್ಮ ತುಟಿಗಳಿಗೆ ಪರ್ಫೆಕ್ಟ್ ಲುಕ್‌ ಸಿಗುತ್ತದೆ.

ನೇಲ್ ಪಾಲಿಶ್‌ : ಇದಕ್ಕಾಗಿ ನೀವು ಡಾರ್ಕ್‌ ಬಣ್ಣಗಳ ರೆಡ್‌, ಬರ್ಗಂಡಿ, ಪರ್ಪಲ್, ನೇವಿ ಬ್ಲೂ ಇತ್ಯಾದಿಗಳನ್ನು ಬಳಸಿ ಮಿಂಚಬಹುದು. ಇನ್ನು ಬಳಸುವ ಮೊದಲು, ನೀವು ನಿಮ್ಮ ಉಗುರಿಗೆ ಸೂಕ್ತ ಆಕಾರ ನೀಡಿ ಮುಂದುವರಿದರೆ ಲೇಸು.

ವಿಂಟರ್‌ ಸೀಸನ್‌ ನಲ್ಲಿ ಹೆವಿ ಮೇಕಪ್‌ ನಿಂದ ಮುಖ ಕೇಕೀ (ಹೆಚ್ಚು ಲೇಪನಗಳ ಬ್ಯಾಡ್‌ ಲುಕ್ಸ್) ಆಗಿ ಕಾಣಿಸುತ್ತದೆ. ಹೀಗಾಗಿ ಮಿನಿಮಮ್ ನ್ಯಾಚುರಲ್ ಮೇಕಪ್‌ ಎಷ್ಟೋ ಬೆಟರ್‌ ಎನಿಸುತ್ತದೆ.

ನಾನ್ಆಯ್ಲಿ ಮಾಯಿಶ್ಚರೈಸರ್ಆರಿಸಿ : ಡ್ರೈನೆಸ್‌ ತಪ್ಪಿಸಲು ಮಾಯಿಶ್ಚರೈಸರ್‌ ನ ಬಳಕೆ ಅನಿವಾರ್ಯ. ಇದನ್ನು ಅವಾಯ್ಡ್ ಮಾಡಿದರೆ ಚರ್ಮದ ಸಮಸ್ಯೆ ಉಲ್ಬಣಿಸುತ್ತದೆ. ಆದರೆ ಹೆಚ್ಚಿನ ಮಾಯಿಶ್ಚರೈಸರ್‌, ಚರ್ಮವನ್ನು ಆಯ್ಲಿ ಡಾರ್ಕ್‌ ಮಾಡುವ ಸಾಧ್ಯತೆ ಇರುವುದರಿಂದ, ಮೇಕಪ್‌ ಲುಕ್ಸ್ ಕೆಟ್ಟದಾಗಬಾರದು. ಹೀಗಾಗಿ ನಾನ್‌ ಆಯ್ಲಿ ಮಾಯಿಶ್ಚರೈಸರ್‌ ನ್ನು ಬಳಸುವುದೇ ಉತ್ತಮ ಉಪಾಯ.

ಫೇಶಿಯಲ್ ಆಯಿಲ್ ಬಳಸಲು ಮರೆಯದಿರಿ : ಮಿನಿಮಮ್ ಮೇಕಪ್‌ ಗಾಗಿ ಫೇಶಿಯಲ್ ಆಯಿಲ್ ‌ನ ಬಳಕೆ ಬೆಟರ್‌ ಎನಿಸುತ್ತದೆ. ಇದಕ್ಕಾಗಿ ನೀವು ನ್ಯಾಚುರಲ್ ಆಯಿಲ್ಸ್ ಬಳಸಿದರೆ ಅದು ಇನ್ನೂ ಒಳ್ಳೆಯದು.

ಪಂಕಜಾ ಪ್ರದೀಪ್

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ