ಕ್ರಾಪ್ಟಾಪ್ಕ್ಯಾರಿ ಮಾಡುವ ಆಧುನಿಕ ವಿಧಾನ ತಿಳಿದುಕೊಂಡು, ನಿಮ್ಮ ಸಂಗಾತಿ ಜೊತೆ ಸಲದ ವ್ಯಾಲೆಂಟೈನ್ಸ್ ಡೇ ಸಂಭ್ರಮಾಚರಣೆ ಸ್ಮರಣೀಯವಾಗಿರುವಂತೆ ಮಾಡಿಕೊಳ್ಳಿ….!

ಕ್ರಾಪ್‌ ಟಾಪ್‌ ಅಂದ್ರೆ ಹಾಫ್‌ ಶರ್ಟ್‌, ಬೆಲ್ಲಿ ಶರ್ಟ್‌ ಯಾ ಕಟ್‌ ಆಫ್‌ ಶರ್ಟ್‌. ಈ ಕ್ರಾಪ್‌ ಟಾಪ್‌ ನಿಂದಾಗಿ ಧರಿಸುವ ಹೆಣ್ಣಿನ ಸೊಂಟ, ಹೊಟ್ಟೆಯ ಆಕಾರ ಆಕರ್ಷಕವಾಗಿರುವಂತೆ ಎಲ್ಲರಿಗೂ ಗೋಚರಿಸುತ್ತದೆ. ಹೆಣ್ಣಿನ ದೇಹದ ನಡುಭಾಗದ ಆಕರ್ಷಣೆ ಹೆಚ್ಚಿಸುವ ಡ್ರೆಸ್ಸೇ ಕ್ರಾಪ್‌ ಟಾಪ್‌ ಎಂದರೂ ಅಡ್ಡಿಯಿಲ್ಲ. ಯಾವ ಹುಡುಗಿಯರಿಗೆ ತಮ್ಮ ದೇಹದ ಈ ಭಾಗವನ್ನು ಹೈಲೈಟ್ ಮಾಡಬೇಕೆನಿಸುತ್ತದೋ ಅಂಥವರು ಬಿಂದಾಸ್‌ ಆಗಿ ಕ್ರಾಪ್‌ ಟಾಪ್‌ ಧರಿಸಿ ಫ್ಲಾಂಟ್‌ಮಾಡಬಹುದು.

1980ರ ದಶಕದಿಂದ ಈ ಕ್ರಾಪ್‌ ಟಾಪ್‌, ಫ್ಯಾಷನ್‌ ಲೋಕದ ಸ್ಟೈಲಿಶ್‌ ಪ್ರತೀಕ ಎನಿಸಿದೆ. ಅಂತಾರಾಷ್ಟ್ರೀಯ ಗಾಯಕಿ ಮೆಡೋನಾ ಮೊದಲ ಬಾರಿಗೆ ಇದನ್ನು ಧರಿಸಿ, ಶೋ ನೀಡಿದ್ದಲ್ಲದೆ, ತನ್ನ `ಲಕೀ ಸ್ಟಾರ್‌’ ಆಲ್ಬಂನಲ್ಲೂ ಇಂಥ ನೆಟೆಡ್‌ ಡ್ರೆಸ್‌ ಧರಿಸಿ ಮಿಂಚಿದ್ದಾಳೆ.

Crop-Top

ಆರಂಭದ ದಿನಗಳು

ಸ್ಲೀವ್ ಲೆ‌ಸ್‌ ಬ್ಲೌಸ್‌ ಧರಿಸಿ ಬೋರಾದ ಹೆಂಗಸರು, ಹೊಸತೇನನ್ನೋ ಬಯಸಿ, ಈ ತರಹದ ಕ್ರಾಪ್‌ ಟಾಪ್‌ ಧರಿಸಿ ತಮ್ಮ ಹೊಟ್ಟೆ, ಸೊಂಟದ ಪ್ರದರ್ಶನಕ್ಕೆ ಮುಂದಾಗಿ ಗ್ಲಾಮರ್‌ ಗೆ ಹೊಸ ವ್ಯಾಖ್ಯಾನ ಬರೆದರು. 1970-80ರ ದಶಕದಲ್ಲಿ ಪಾಪ್‌ ಕಲ್ಚರ್ ಹೆಚ್ಚುತ್ತಿದ್ದಂತೆ, ಕ್ರಾಪ್‌ ಟಾಪ್‌ ಎಲ್ಲೆಡೆ ಭವ್ಯ ಸ್ವಾಗತ ಪಡೆಯಿತು. ಇದರ ಆರಂಭದ ದಿನಗಳಲ್ಲಿ ಗಂಡಸರು ಸಹ ಇದನ್ನು ಹೆಮ್ಮೆಯಿಂದ ಜಿಮ್ ನಲ್ಲಿ ಧರಿಸುತ್ತಿದ್ದರು. ತಮ್ಮ ಹೊಟ್ಟೆಯ 6 ಪ್ಯಾಕ್‌ ಪ್ರದರ್ಶನಕ್ಕೆ ಇದು ಅವರಿಗೆ ಬೇಕಾಗಿತ್ತು. ಕೆಲವರು ಶರ್ಟ್ ಲೆಸ್‌ ಆಗಿ ಜಿಮ್ ನಲ್ಲಿ  ವರ್ಕ್‌ ಔಟ್‌ ಮಾಡುವುದೂ ಇತ್ತು. ಅಂಥವರಿಗೆ ಅನುಕೂಲಲಾಗಲೆಂದೇ ಲೆಂತ್‌ ಶರ್ಟ್‌ ನ ಕೆಳಭಾಗ ಕತ್ತರಿಸಿ, ಅದಕ್ಕೆ ಆಧುನಿಕ ಕ್ರಾಪ್‌ ಟಾಪ್‌ ರೂಪ ನೀಡಲಾಯಿತು. ಮುಂದೆ ಅದೇ ಫ್ಯಾಷನ್‌ ಎನಿಸಿ, ಹೆಂಗಸರೂ ಇದನ್ನೇ ಫಾಲೋ ಮಾಡತೊಡಗಿದರು.

ಬಾಲಿವುಡ್‌ ನಲ್ಲಿ ಕ್ರಾಪ್‌ ಟಾಪ್‌ ಎಂಟ್ರಿ ಬಹಳ ಹಿಂದಕ್ಕಾಯಿತು. 1973ರ `ಬಾಬಿ’ ಚಿತ್ರದಲ್ಲಿ ಡಿಂಪಲ್ ಕಪಾಡಿಯಾ ಇದನ್ನು ಮೊದಲ ಬಾರಿಗೆ ಧರಿಸಿ, ಪಡ್ಡೆ ಹುಡುಗರಿಗೆ ಹುಚ್ಚೆಬ್ಬಿಸಿದಳು. ಹಾಗಾಗಿ ಅಂದಿನ ಕಾಲೇಜು ಹುಡುಗಿಯರು ಇದಕ್ಕೆ ಬಲು ಬೇಗ ಮಾರುಹೋಗಿ, ಮುಂಬೈ ದೆಹಲಿಯಲ್ಲಿ ವ್ಯಾಪಕ ಪ್ರಚಾರ ಪಡೆಯಿತು. ಮುಂದೆ ಅದು ಕ್ರಮೇಣ 80ರ ಹೊತ್ತಿಗೆ ಎಲ್ಲಾ ಮಹಾನಗರಗಳಲ್ಲೂ ಎಂಟ್ರಿ ಪಡೆಯಿತು. ಕೆಲವೊಂದು ಸಣ್ಣ ಪುಟ್ಟ ಬದಲಾವಣೆಗಳೊಂದಿಗೆ ಫ್ಯಾಷನ್‌ ಮರುಕಳಿಸುತ್ತಲೇ ಇರುತ್ತದೆ. ಹಾಗೆಯೇ ಕ್ರಾಪ್‌ ಟಾಪ್‌ ಜೊತೆಗೂ ಆಯ್ತು. ಈಗಂತೂ ಇದು ಎಲ್ಲರ ಅಚ್ಚುಮೆಚ್ಚಿನ ಡ್ರೆಸ್‌ ಆಗಿದೆ.

ಬಗೆ ಬಗೆಯ ಕ್ರಾಪ್‌ ಟಾಪ್ಸ್ 200-800 ರೂ.ಗಳವರೆಗಿನ ರೇಂಜ್‌ ನಲ್ಲಿ ಕ್ರಾಪ್‌ ಟಾಪ್‌ ಎಲ್ಲೆಡೆ ಲಭ್ಯ. ನಿಮ್ಮ ನಗರದ ಸಣ್ಣಪುಟ್ಟ ಅಂಗಡಿಗಳಿಂದ ಮಹಾ ಮಾಲ್ ವ‌ರೆಗೂ ಎಲ್ಲೆಲ್ಲೂ ಸಿಗುತ್ತದೆ. ಎಲ್ಲಾ ದೊಡ್ಡ ದೊಡ್ಡ ಫ್ಯಾಷನ್‌ ಬ್ರಾಂಡ್‌ ಗಳಲ್ಲೂ ಲಭ್ಯ. ಇದು ಹಲವು ಡಿಸೈನ್‌ ಗಳಲ್ಲಿ ಲಭ್ಯ. ಸ್ಲೀವೇ ಲೆ‌ಸ್‌ ಕ್ರಾಪ್‌ ಟಾಪ್‌, ಲಾಂಗ್‌ ಸ್ಲೀವ್ ಕ್ರಾಪ್‌ಟಾಪ್‌, ಬ್ಯಾಕ್‌ ಲೆಸ್‌ ಕ್ರಾಪ್‌ ಟಾಪ್‌, ಬ್ಯಾಗೀ ಕ್ರಾಪ್‌ ಟಾಪ್‌, ಆಫ್‌ ಶೋಲ್ಡರ್‌ ಕ್ರಾಪ್‌ ಟಾಪ್‌, ವಿಂಟರ್‌ ಕ್ರಾಪ್‌ ಟಾಪ್‌, ಟರ್ಟಲ್ ನೆಕ್‌ ಕ್ರಾಪ್‌ ಟಾಪ್‌ ಇತ್ಯಾದಿ.

ಇದರ ಹೊರತಾಗಿ ಹಾಫ್‌ ಕ್ರಾಪ್‌ ಟಾಪ್‌ ತನ್ನ ವಿಶಿಷ್ಟ ಕಟ್ಸ್ ಅಂದ್ರೆ, ಸೊಂಟದ ಧಾರಾಳ ಪ್ರದರ್ಶನಕ್ಕೆ ಖ್ಯಾತಿ ಹೊಂದಿದೆ. ಟ್ರೈಯಾಂಗಲ್ ಕ್ರಾಪ್‌ ಟಾಪ್‌ ನ ಕೆಳಭಾಗವಂತೂ ತ್ರಿಕೋನದ ಆಕಾರದಲ್ಲಿ ಎಲ್ಲವನ್ನೂ ತೋರಿಸುತ್ತದೆ. ಕಾಲ್‌ ನೆಕ್‌ ಕ್ರಾಪ್ ಟಾಪ್‌ ನ ಕುತ್ತಿಗೆಯ ಸುತ್ತಲೂ ಒಂದಿಷ್ಟು ಬಟ್ಟೆ ಅಂತ ಇರುತ್ತದೆ. ಡೀಪ್‌ ನೆಕ್‌ ಕ್ರಾಪ್‌ ಟಾಪ್‌ ಅತಿ ಗ್ಲಾಮರಸ್‌ ಆದರೆ, ಡೆನಿಂ ಕ್ರಾಪ್‌ ಟಾಪ್‌ ಅತಿ ಸ್ಟೈಲಿಶ್‌ ಎನಿಸುತ್ತದೆ.

ಕ್ರಾಪ್‌ ಟಾಪ್‌ ಒಂದು ಮಲ್ಟಿಪರ್ಪಸ್‌ ಔಟ್‌ ಫಿಟ್‌ ಆಗಿದೆ, ಇದನ್ನು ಬೇರೆ ಬೇರೆ ವಿಧಾನಗಳಲ್ಲಿ, ಹಲವು ಇತರ ಡ್ರೆಸ್‌ ಗಳ ಜೊತೆ ಸುಲಭವಾಗಿ ಧರಿಸಬಹುದು. ಕಾಲೇಜು ಕನ್ಯೆಯರ ಪಾಲಿಗೆ ಇದು ಭಯಂಕರ ಕ್ರೇಜ್‌ ಆಗಿದೆ. ಏಕೆಂದರೆ ಇದು ಬಲು ಕಂಫರ್ಟೆಬಲ್ ಆಗಿರುವುದರ ಜೊತೆ, ಸಾಕಷ್ಟು ಕೂಲ್‌ಗ್ಲಾಮರಸ್‌ ಸಹ ಹೌದು. ಇಷ್ಟು ಮಾತ್ರವಲ್ಲ, ಇದನ್ನು ಯಾವ ವಯಸ್ಸಿನ ಹೆಂಗಸಾದರೂ ತನ್ನ ಜೀನ್ಸ್, ಸ್ಕರ್ಟ್‌, ಶಾರ್ಟ್ಸ್ ಟ್ರೌಸರ್ಸ್‌ ಯಾ ಪ್ಲಾಜೋಗಳ ಜೊತೆ ಮಿಕ್ಸ್ ಮ್ಯಾಚ್‌ ಮಾಡಿ, ಸಂದರ್ಭಕ್ಕೆ ತಕ್ಕಂತೆ ಧರಿಸಬಹುದು.

ಕ್ರಾಪ್‌ ಟಾಪ್‌ ನ ಒಂದು ವೈಶಿಷ್ಟ್ಯವೆಂದರೆ, ಇದನ್ನು ವೆಸ್ಟರ್ನ್‌ ಡ್ರೆಸೆಸ್‌ ಜೊತೆ ಮಾತ್ರವಲ್ಲದೆ, ಟ್ರೆಡಿಷನ್‌ ಔಟ್‌ ಫಿಟ್ಸ್ ಆದ ಸೀರೆ, ಲೆಹಂಗಾ, ಸಲ್ವಾರ್‌ ಸೂಟ್‌ ಯಾ ಎಥ್ನಿಕ್‌ ಡ್ರೆಸೆಸ್‌ ಜೊತೆಗೂ ಧರಿಸಬಹುದಾಗಿದೆ. ಕ್ರಾಪ್‌ ಟಾಪ್‌ ನ ಉದ್ದಳತೆ ಹೆಚ್ಚುಕಡಿಮೆ ಬ್ಲೌಸ್‌ ನಷ್ಟೇ ಇರುತ್ತದೆ. ಹೀಗಾಗಿ ಇದನ್ನು ಸೀರೆ ಯಾ ಲೆಹಂಗಾ ಜೊತೆ ಬ್ಲೌಸ್‌ ತರಹ ಧರಿಸಿ, ಇದಕ್ಕೆ ಹೊಸ ಲುಕ್ಸ್ ಕೊಡಬಹುದು.

ಹಾಗೆಯೇ ನಿಮ್ಮ ಮನ ಬಯಸುವ ಯಾವುದೇ ಬಗೆಯ ಡ್ರೆಸ್‌ ಜೊತೆಗಾದರೂ ಇದನ್ನು ಧರಿಸಿ, ನೀವು ಸ್ಟೈಲ್ ‌ದೀವಾ ಎನಿಸಬಹುದು.

Nora

ಕ್ರಾಪ್ಟಾಪ್ನ್ನು ಹೀಗೆ ಧರಿಸಿ

ನೀವು ನಿಮ್ಮ ಲಾಂಗ್‌ ಸ್ಕರ್ಟ್‌ ನ್ನು ಫ್ಲೇಯರ್ಡ್‌ ಯಾ ಆಫ್‌ ಶೋಲ್ಡರ್‌ ಕ್ರಾಪ್‌ ಟಾಪ್‌ ಜೊತೆ ಸ್ಟೈಲಾಗಿ ಧರಿಸಿರಿ. ಇದರಿಂದ ನಿಮ್ಮ ಲುಕ್ಸ್ ಎಷ್ಟೋ ಅಪ್‌ ಡೇಟ್‌ ಆಗುತ್ತದೆ. ಮಿಡೀ, ಡೆನಿಂ ಯಾ ಮ್ಯಾಕ್ಸಿ ಸ್ಕರ್ಟ್‌ ಜೊತೆ ಸಹ ಕ್ರಾಪ್‌ ಟಾಪ್‌ ಮಾಡ್‌ಸ್ಟೈಲಿಶ್ ಎನಿಸುತ್ತದೆ. ಕ್ರಾಪ್‌ ಟಾಪ್‌ಜೀನ್ಸ್ ಕಾಂಬೋ ಎಲ್ಲಕ್ಕೂ ಬೆಸ್ಟ್, ಕಂಫರ್ಟೆಬಲ್ ಟ್ರೆಂಡಿ ಆಗಿದೆ. ಇದು ಪ್ರತಿಯೊಂದು ಬಗೆಯ ಜೀನ್ಸ್ ಗೂ ಚೆನ್ನಾಗಿ ಸೂಟ್‌ ಆಗುತ್ತದೆ. ಅದು ಹೈ ವೇಯ್ಸ್ಟ್, ಫ್ಲೇಯರ್ಡ್‌, ಬೂಟ್‌ ಕಟ್‌ ಯಾ ಮಾವ್‌ ಜೀನ್ಸ್ ಆಗಿರಬಹುದು. ಇದೇ ತರಹ ಕ್ರಾಪ್‌ ಟಾಪ್‌ ಜೊತೆ ಪ್ಲಾಜೋವನ್ನು ಸ್ಟೈಲಿಶ್‌ ಆಗಿ ಧರಿಸಿ, ಸಾಕಷ್ಟು ಕೂಲ್‌ಎಲಿಗೆಂಟ್‌ ಎಂದು ತೋರ್ಪಡಿಸಿಕೊಳ್ಳಬಹುದು. ಡೇಲಿವೇರ್‌ ಗಾಗಿ ಇದನ್ನು ಸಿಂಪಲ್ ಕ್ರಾಪ್‌ ಟಾಪ್‌ ಆಗಿ ರೆಗ್ಯುಲರ್‌ ಪ್ಲೇನ್‌ ಯಾ ಪ್ರಿಂಟೆಡ್‌ ಪ್ಲಾಜೋ ಜೊತೆ ಟ್ರೈ ಮಾಡಿ. ಯಾವುದೇ ಸ್ಟೈಲ್ ಇವೆಂಟ್‌ ಯಾ ಪಾರ್ಟಿಗಾಗಿ ಶಿಫಾನ್‌ ಕ್ರಾಪ್‌ ಟಾಪ್‌ ಜೊತೆ ಹೆವಿ ಸಿಲ್ಕ್ ಪ್ಲಾಜೋ ಆರಿಸಿದರೆ, ನೀವು ಬಲು ಕ್ಯೂಟ್‌ ಎನಿಸುವಿರಿ. ಇದನ್ನು ಶಾರ್ಟ್ಸ್ ಜೊತೆ ಧರಿಸಿದರೆ ಬಬ್ಲಿ ಲುಕ್ಸ್ ನಿಮ್ಮದಾಗುತ್ತದೆ. ಮಾಲ್ ‌ನಲ್ಲಿ ಬಾಯ್‌ ಫ್ರೆಂಡ್‌ ಜೊತೆ ಓಡಾಟ, ಬೀಚ್‌ ಬದಿಯಲ್ಲಿ ಸುತ್ತಾಟ, ಪಾರ್ಕಿನಲ್ಲಿ ತಿರುಗಾಟ ಎಲ್ಲಕ್ಕೂ ಹೊಂದುತ್ತದೆ.

ನೀವು ವ್ಯಾಲೆಂಟೈನ್ಸ್ ಡೇಟ್‌ ಗಾಗಿ ಹೊರಟಿದ್ದೀರಿ, ಅಂದ ಮೇಲೆ ಗ್ಲಾಮರಸ್‌ ಡ್ರೆಸ್‌ ಬೇಕಲ್ಲವೇ? ಇಂಥ ಸಂದರ್ಭಕ್ಕೆ ಸ್ಟೈಲಿಶ್ ಪ್ರೆಸೆಂಟೆಬಲ್ ಆಗಿರಲು, ಹೆಚ್ಚು ಯೋಚಿಸಲು ಹೋಗದೆ ತಕ್ಷಣ ಪೆನ್ಸಿಲ್ ಸ್ಕರ್ಟ್‌ ಜೊತೆಗೆ ಇದನ್ನು ಧರಿಸಿರಿ. ನೀವು ಧೋತಿ/ಹ್ಯಾರಮ್ ಪ್ಯಾಂಟ್‌ ಜೊತೆಗೂ ಇದನ್ನು ಧರಿಸಬಹುದು. ಇದೇ ತರಹ ಪೇಪ್ಲಂ ಸ್ಕರ್ಟ್‌ಕ್ರಾಪ್‌ ಟಾಪ್‌ ಸ್ಟೈಲಿಶ್ ಮಾತ್ರವಲ್ಲದೆ, ಎಲ್ಲಕ್ಕೂ ಉತ್ತಮ ಫ್ಯಾಷನೆಬಲ್ ವಿಧಾನ ಆಗಿದೆ. ಇಷ್ಟು ಮಾತ್ರವಲ್ಲದೆ ನೀ ಲೆಂತ್‌ ವುಳ್ಳ ಫ್ಲೇಯರ್ಡ್‌ ಯಾ  ಲೈನ್‌ ಸ್ಕರ್ಟ್‌ ಜೊತೆಗೂ, ಒಂದು ಪರ್ಫೆಕ್ಟ್ ಫಿಟಿಂಗ್‌ ನ ಕ್ರಾಪ್‌ ಟಾಪ್‌ ನಿಮಗೆ ಯೂನಿಕ್‌ ಲುಕ್‌ ತಂದುಕೊಡಬಲ್ಲದು.

ಮ್ಯಾಕ್ಸಿ ಸ್ಕರ್ಟ್‌ ಯಾ ಕ್ರಾಪ್‌ ಟಾಪ್‌ ವಸಂತ ಋತುವಿನ ಸಂದರ್ಭಕ್ಕೆ ಬಲು ಸೊಗಸೆನಿಸುತ್ತದೆ. ನೀವು ಪ್ರಿಂಟೆಡ್‌ ಸ್ಕರ್ಟ್‌ಪ್ಲೇನ್ ಕ್ರಾಪ್‌ ಟಾಪ್‌ ಯಾ ಪ್ಲೇನ್‌ ಸ್ಕರ್ಟ್‌ ವಿತ್‌ ಪ್ರಿಂಟೆಡ್‌ ಟಾಪ್‌ ಧರಿಸಬಹುದು. ಎಲ್ಲಿಯವರೆಗೆ ನೀವು ನಿಮ್ಮ ಕ್ರಾಪ್‌ ಟಾಪ್‌ ಗೆ ಮ್ಯಾಚಿಂಗ್‌ ಆಗುವ ಸೆಟ್‌ ನ್ನು ಫ್ಲಾಂಟ್‌ ಮಾಡಲು ಬಯಸುವುದಿಲ್ಲವೇ, ಅಲ್ಲಿಯವರೆಗೂ ಇದರಲ್ಲಿ ಒಂದನ್ನು ಪ್ಲೇನ್‌ ಆಗಿಯೇ ಇರಿಸಿಕೊಳ್ಳಿ. ಮಾಕ್ಸಿ ಸ್ಕರ್ಟ್‌ ನೊಂದಿಗೆ ಆಫ್‌ ಶೋಲ್ಡರ್‌, ಫುಲ್ ಸ್ಲೀವ್ಸ್, ಲೂಸ್‌ ಯಾ ಫ್ಲೇಯರ್ಡ್‌ ಇತ್ಯಾದಿ ಯಾವುದೇ ಬಗೆಯ ಕ್ರಾಪ್‌ ಟಾಪ್‌ ನ್ನು ಜೊತೆಗೆ ಧರಿಸಬಹುದು.

ಎಥ್ನಿಕ್ಡ್ರೆಸ್ಗಳ ಜೊತೆ

ಎಥ್ನಿಕ್‌  ಡ್ರೆಸ್‌ ಗಳಾದ ಲೆಹಂಗಾ, ಸೀರೆಗಳ ಜೊತೆ ಕ್ರಾಪ್‌ ಟಾಪ್‌ ನ್ನು ಹಾಯಾಗಿ ಧರಿಸಬಹುದು. ಯಾವ ಬಗೆಯ ಫಂಕ್ಷನ್ನೇ ಇರಲಿ, ಸಾಮಾನ್ಯವಾಗಿ ಹೆಂಗಸರು ರೇಷ್ಮೆ ಸೀರೆ ಯಾ ಲೆಹಂಗಾ ಧರಿಸ ಬಯಸುತ್ತಾರೆ. ಸಿಂಪಲ್ ಲೆಹಂಗಾವನ್ನು ಮತ್ತಷ್ಟು ಸ್ಟೈಲಿಶ್‌ ಆಗಿಸಲು, ಕ್ರಾಪ್‌ ಟಾಪ್‌ ಟ್ರೈ ಮಾಡಬಹುದು. ನೀವು ಲೆಹಂಗಾ ಜೊತೆ ಪ್ಲೇರ್‌ ಯಾ ಆಫ್‌ ಶೋಲ್ಡರ್‌ ಕ್ರಾಪ್‌ ಟಾಪ್ ಧರಿಸಬಹುದು. ಈ ಲುಕ್‌ ನಿಮ್ಮ ಬ್ಯೂಟಿಗೆ ಹೆಚ್ಚಿನ ಕಳೆ ತಂದುಕೊಡುತ್ತದೆ. ಇದಕ್ಕಾಗಿ ನೀವು ಡಾರ್ಕ್‌ ಕಲರ್‌ ಲಿಪ್‌ ಸ್ಟಿಕ್ ತೀಡಿಕೊಳ್ಳಿ. ಜೊತೆಗೆ ಎಲಿಗೆಂಟ್‌ ಲಾಂಗ್‌ ಇಯರ್‌ ರಿಂಗ್ಸ್ ಚೆನ್ನಾಗಿ ಹೊಂದುತ್ತದೆ.

ಒನ್‌ ಶೋಲ್ಡರ್‌ ಕ್ರಾಪ್‌ ಟಾಪ್‌ ನಿಮಗೆ ಅತ್ಯುತ್ತಮ ಇಂಡೋವೆಸ್ಟರ್ನ್‌ ಲುಕ್‌ ನೀಡುತ್ತದೆ. ಬಯಸಿದರೆ ಇದನ್ನೂ ಸಹ ನೀವು ಲೆಹಂಗಾ ಜೊತೆ ಧರಿಸಬಹುದು. ಇದೇ ತರಹ ಸೀರೆಯ ಎಥ್ನಿಕ್‌ ಲುಕ್‌ ಗೆ ವೆಸ್ಟರ್ನ್‌ ಟಚ್‌ ನೀಡಲು, ಸ್ಮಾರ್ಟ್‌ ಕ್ರಾಪ್‌ ಟಾಪ್‌ ನ್ನು ಬ್ಲೌಸ್‌ ತರಹ ಧರಿಸಿರಿ. ಇದರಿಂದ ನೀವು ನಾಲ್ವರಲ್ಲಿ ಎದ್ದು ಕಾಣುವಿರಿ. ಸೀರೆ ಜೊತೆ ಆಫ್‌ ಶೋಲ್ಡರ್‌ರಫ್ಡ್‌ ಕ್ರಾಪ್‌ ಟಾಪ್ ಇತ್ತೀಚೆಗೆ ಭಾರಿ ಟ್ರೆಂಡ್‌ ಆಗುತ್ತಿದೆ.

ಜ್ಯಾಕೆಟ್ಜೊತೆ ಧರಿಸಲು

ಕ್ರಾಪ್‌ ಟಾಪ್‌ ಧರಿಸಲು ಇಷ್ಟ, ಆದರೆ ಹೊರಗಿನ ವಾತಾವರಣ ತುಸು ಥಂಡಿ ಎನಿಸುತ್ತಿದ್ದರೆ, ಆಗ ಇದನ್ನು ಒಂದು ಸ್ಟೈಲಿಶ್ ಜ್ಯಾಕೆಟ್‌ ಜೊತೆ ಧರಿಸಿರಿ. ಈ ರೀತಿ ನೀವು ಕ್ರಾಪ್‌ ಟಾಪ್‌ ಧರಿಸಿದ್ದರಿಂದ, ಈ ಥಂಡಿ ವಾತಾವರಣಕ್ಕೆ ನಿಮ್ಮ ಸ್ಟೈಲ್ ಸ್ಟೇಟ್‌ ಮೆಂಟ್‌ ಏನೇನೂ ಕುಂದದು. ನೀವು ಲೆದರ್‌ ಜ್ಯಾಕೆಟ್‌, ಡೆನಿಂ ಶರ್ಟ್‌ ಯಾ ಒಂದು ಲೆಂತೀ ಜ್ಯಾಕೆಟ್‌ ಸಹ ಬಳಸಿಕೊಳ್ಳಬಹುದು. ಆಗ ಇದು ಒಂದು ಸ್ಪೆಷಲ್ ಮೋನೋಕ್ರೋಮ್ ಡ್ರೆಸ್‌ ಆಗುತ್ತದೆ.

ಇಂದಿನ ಆಧುನಿಕ ತರುಣಿಯರ ಅಚ್ಚುಮೆಚ್ಚಿನ ಡ್ರೆಸ್‌ ಎಂದರೆ ಕ್ರಾಪ್‌ ಟಾಪ್‌. ಆದರೆ ಇದನ್ನು ನಿಮ್ಮ ದೈಹಿಕ ರಚನೆ ಹಾಗೂ ಸ್ಟೈಲ್ ‌ಗೆ ತಕ್ಕಂತೆ ಸೂಕ್ತವಾಗಿ ಆರಿಸಬೇಕಷ್ಟೆ. ಕ್ರಾಪ್‌ ಟಾಪಿನ ಮುಖ್ಯ ಉದ್ದೇಶ ನಿಮ್ಮ ಸುಂದರ, ಸದೃಢ, ಸ್ಲಿಮ್ ಆದ ಆಕರ್ಷಕ ಸೊಂಟ, ಹೊಟ್ಟೆಯ ಭಾಗವನ್ನು ತೋರಿಸಿಕೊಳ್ಳುವುದಾಗಿದೆ. ಆದರೆ ನೀವು ಸ್ಥೂಲಕಾಯ ಹೊಂದಿದ್ದರೆ ಅಥವಾ ಅಗತ್ಯಕ್ಕಿಂತ ಅತಿ ತೆಳ್ಳಗಿದ್ದರೆ, ಇದರ ತಂಟೆಗೆ ಹೋಗಬೇಡಿ. ಆಕರ್ಷಕವಾಗಿ ಕಾಣುವ ಬದಲು ಅಸಹ್ಯಕರ ಎನಿಸಬಾರದು. ಇಡೀ ದೇಹದ ಮೈಕಟ್ಟಿಗೆ ತಕ್ಕಂತೆ ಸೊಂಟದ ಗಾತ್ರ ಪ್ರಮಾಣಬದ್ಧವಾಗಿ ಇರಬೇಕು, ಅಂದ್ರೆ ನೀವು ಸ್ಲಿಮ್ ಟ್ರಿಮ್ ಆಗಿದ್ದರೆ ಮಾತ್ರ ಇದು ಚೆಂದ, ಇಲ್ಲದಿದ್ದರೆ ಬೇಡ. ನಿಮ್ಮ ಮೈಕಟ್ಟಿಗೆ ಇಂಥ ಡ್ರೆಸ್‌ ಹೊಂದುತ್ತದೆಯೇ ಎಂದು ನಿಮ್ಮ ಆಪ್ತರೆದುರು ಹಾಕಿಕೊಂಡು ತೋರಿಸಿ, ನಿಮ್ಮ ಕ್ಲೋಸ್‌ ಫ್ರೆಂಡ್ಸ್ ಬೇಡ ಎಂದರೆ ಹಠ ತೊಟ್ಟು ಇಂಥವನ್ನು ಧರಿಸಬೇಡಿ.

ಪ್ರತಿನಿಧಿ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ