–  ರಾಘವೇಂದ್ರ ಅಡಿಗ ಎಚ್ಚೆನ್.

ಕುಮಾರ್ ಬಂಗಾರಪ್ಪ, ದೊಡ್ಡಣ್ಣ, ರಾಗಿಣಿ ದ್ವಿವೇದಿ ಮುಂತಾದವರು ಭಾಗಿಯಾಗಿರುವ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರ ಶೂಟಿಂಗ್ ಈಗಾಗಲೇ ಸಂಪೂರ್ಣವಾಗಿದೆ. ಚಿತ್ರದ ಕಥೆ ಗ್ರಾಮೀಣ ಪಡಿತರ ವ್ಯವಸ್ಥೆ ಮತ್ತು ಅದರ ಸುತ್ತ ನಡೆಯುವ ಅವ್ಯವಹಾರಗಳನ್ನು ಹತ್ತಿರದಿಂದ ತೆರೆದಿಡುತ್ತದೆ.
ಕೇಂದ್ರ ಜಲ ಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಅನೇಕ ಚಿತ್ರರಂಗ ಮತ್ತು ರಾಜಕೀಯ ಗಣ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದರು. ಅವರು ಸಿನಿಮಾ ತಂಡದ ಪ್ರಯತ್ನವನ್ನು ಮೆಚ್ಚಿ ಶುಭ ಹಾರೈಸಿದರು.
ನಟಿ ರಾಗಿಣಿ ದ್ವಿವೇದಿ ‘ಪಾರ್ವತಿ’ ಎಂಬ ಪಾತ್ರದಲ್ಲಿ ಚಿತ್ರದಲ್ಲಿ ಕಾಣಿಸುತ್ತಿದ್ದಾರೆ. ನಟ ಕುಮಾರ್ ಬಂಗಾರಪ್ಪ  ಹೇಳಿರುವಂತೆ, ಪಡಿತರ ವ್ಯವಸ್ಥೆ ಕುರಿತಂತೆ ಮೂಡಿಬರುವ ಸಮಸ್ಯೆಗಳನ್ನು ಮನರಂಜನೆಯ ಮೂಲಕ ಪ್ರೇಕ್ಷಕರಿಗೆ ತಲುಪಿಸುವುದು ಈ ಸಿನಿಮಾದ ಉದ್ದೇಶವಾಗಿದೆ.
ಚಿತ್ರವನ್ನು ಜಯಶಂಕರ ಟಾಕೀಸ್ ನಿರ್ಮಿಸುತ್ತಿದ್ದು, ತೇಜು ಮೂರ್ತಿ ಮತ್ತು ಪದ್ಮಾವತಿ ಚಂದ್ರಶೇಖರ್ ಸಹ ಜಂಟಿ ನಿರ್ಮಾಪಕರಾಗಿದ್ದಾರೆ. ಸಂಗೀತದ ಜವಾಬ್ದಾರಿ ಅನಂತ್ ಆರ್ಯನ್, ಕಥೆ–ಸಂಭಾಷಣೆ ಬಿ. ರಾಮಮೂರ್ತಿ, ಛಾಯಾಗ್ರಹಣ ಮತ್ತು ನಿರ್ದೇಶನ ಸಾತ್ವಿಕ್ ಪವನ್ ಕುಮಾರ್.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ