ಗೆಲುವಿನ ಮಂದಹಾಸ : ನಮ್ಮ ದೇಶದಲ್ಲಿ ಮಾತ್ರ ಕೌಟುಂಬಿಕ ಶೋಷಣೆ ಎಂದುಕೊಳ್ಳದಿರಿ, ಅಮೆರಿಕಾದಲ್ಲೂ ಅದು ಢಾಳಾಗಿದೆ! ಹೀಗಾಗಿ `ಸೇಫ್ ಪ್ಯಾಕೇಜ್ ಹೀಲ್ಸ್’ ಎಂಬ ಸಂಸ್ಥೆ, ಇದರ ವಿರುದ್ಧ ಹೋರಾಡಿ ಜಯ ಸಾಧಿಸಿದ ಯುವತಿಯರಿಗೆಂದೇ, ಪ್ರತಿ ವರ್ಷ ಪ್ರಶಸ್ತಿ ನೀಡಿ ಗೌರವಿಸುತ್ತದೆ. ಎಂಥ ಗ್ಲಾಮರಸ್ ಬೆಡಗಿಯರು ಈ ಪ್ರಶಸ್ತಿ ಪಡೆದುಕೊಳ್ಳುತ್ತಾರೆ ಎಂಬುದನ್ನು ಈ ಚಿತ್ರವೇ ವಿವರಿಸುತ್ತದೆ. ವಿಶ್ವಾದ್ಯಂತ ಕೌಟುಂಬಿಕ ಶೋಷಣೆಗೆ ಒಳಗಾಗದ ಹೆಣ್ಣುಮಕ್ಕಳೇ ಇಲ್ಲ. ಇದರ ವಿರುದ್ಧ ಏನೇ ಕಾನೂನು ಕಟ್ಟಳೆಗಳಿದ್ದರೂ, ಮಾನವೀಯತೆ ಮರೆಯುವ ಗಂಡು, ಹೆಣ್ಣಿನ ಮೇಲೆ ಘನಘೋರ ಹಿಂಸೆ ಮಾಡದೆ ಇರಲಾರ!

ಬ್ಯೂಟಿ ಜೊತೆ ಆರ್ಟ್ ಸಹ : ಚೀನಾದ ಡ್ರಾಮಾ ಥಿಯೇಟರ್ ಒಂದು ಒಪೇರಾ ಪರ್ಫಾರ್ಮೆನ್ಸ್ ಕಲೆಯನ್ನು ಒಂದು ಸೆರೆಮನೆಯಲ್ಲಿ ಪ್ರದರ್ಶಿಸಿತು, ಇದರಿಂದ ಅಲ್ಲಿನ ಕೈದಿಗಳಿಗೆ ಒಂದಿಷ್ಟು ಮನಶ್ಶಾಂತಿ ಸಿಗಲಿ ಎಂಬುದು ಅವರ ಉದ್ದೇಶ. ಚೀನಾದ ಸೆರೆಮನೆಗಳು ಇತರ ದೇಶಗಳಿಗಿಂತ ಎಷ್ಟೋ ವಾಸಿ ಎಂದೇನಲ್ಲ. ಆದರೆ ಅಲ್ಲಿನ ಕೈದಿಗಳನ್ನು ಹೊಡೆದುಬಡಿದು ಮಾಡುವುದು ಎಷ್ಟೋ ತಗ್ಗಿದೆ. ಅವರಿಗೆ ವಿಧಿಸಲಾದ ಶಿಕ್ಷೆಯನ್ನಷ್ಟೇ ಅವರು ಅನುಭವಿಸಬೇಕಿದೆ.

ಬಿಸ್ ನೆಸ್ ಅಂದ್ರೆ ಈಝಿ ಅಲ್ಲ! : ಲೀ ಟರ್ನರ್ ಎಂಬ ಈಕೆ ತನ್ನದೇ ಆದ ಬಿಸ್ ನೆಸ್ ನಡೆಸುತ್ತಾ ಬಲು ಖುಷಿಯಾಗಿದ್ದಾಳೆ! ತನ್ನ ಧಂಧೆಯಲ್ಲಿ ಬರುವಂಥ ಸಮಸ್ಯೆಗಳು, ದಿನವಿಡೀ ರಾತ್ರಿಯವರೆಗೂ ಎದುರಿಸಬೇಕಾದ ಟೆನ್ಶನ್ಸ್….. ಒಂದೆರಡಲ್ಲ ಎನ್ನುತ್ತಾಳೆ. ಒಂದಿಷ್ಟು ಹಣ ಗಳಿಸಿ ಲಾಭ ಸಿಕ್ಕಿತು ಎನ್ನುವಷ್ಟರಲ್ಲಿ ಮೈಯೆಲ್ಲ ಹಣ್ಣುಗಾಯಿ ನೀರುಗಾಯಿ ಆಗಿರುತ್ತದೆ. ತನ್ನ ಪ್ರಾಡ್ ಕಾಸ್ಟ್ ನಿಂದ ಈಕೆ ತನ್ನೆಲ್ಲ ಕಷ್ಟಗಳನ್ನೂ ಸ್ಪಷ್ಟವಾಗಿ ಹಂಚಿಕೊಂಡಿದ್ದಾಳೆ, ಸಾಮಾನ್ಯವಾಗಿ ಮಹಿಳಾ ಉದ್ಯಮಿಗಳು ಇದನ್ನು ಮರೆಮಾಚುತ್ತಾರೆ.

ಯಾರು ಜವಾಬ್ದಾರರು? : ಸಾಮಾನ್ಯವಾಗಿ ಜನ ತಿಳಿಯುವುದೆಂದರೆ, ರಸ್ತೆ ಮೇಲೆ ಕಾರಿನ ಅಪಘಾತ ಬೇರೆ ವಾಹನಗಳ ಕಾರಣದಿಂದಲೇ ಆಗೋದು ಅಂತ. ಈಗ ಕಟ್ಟಡಗಳ ಕಾರಣದಿಂದಲೂ ಬಹಳಷ್ಟು ಅಪಘಾತ ಆಗುತ್ತಿರುತ್ತದೆ, ಹೀಗಾಗಿ ಇನ್ಶುರೆನ್ಸ್ ಕಂಪನಿಗಳು ಹೊಸ ಹೊಸ ಸಂಕಷ್ಟ ಎದುರಿಸಬೇಕಿದೆ. ಚಲಿಸುತ್ತಿದ್ದ ಕಾರಿನ ಮೇಲೆ ಪಕ್ಕದ ಕಟ್ಟಡದ ಒಂದು ತುಣುಕು ಧಿಡೀರ್ ಎಂದು ಬಂದುಬಿದ್ದರೆ ಏನು ಮಾಡುವುದು? ಈ ಅಪಘಾತಕ್ಕೆ ಯಾರು ಹೊಣೆ? ಇದನ್ನು ತೀರ್ಮಾನಿಸೋದು ಕಷ್ಟ. ಯಾವ ಹೆಂಗಸರು ತಾವೇ ಕಾರು ಓಡಿಸುತ್ತಾರೋ, ಇಂಥ ಅಪಘಾತ ನಡೆದಾಗ ಫ್ರೆಂಡ್ಸ್ ನೆರವು ಪಡೆಯಲೇ ಬೇಕಾಗುತ್ತದೆ.

ಐಡಿಯಾ ಈಸ್ ಗುಡ್! : ಎಷ್ಟೋ ಇಡೆಂಟ್ ಗಳಲ್ಲಿ ಹಾಕಿರಬಹುದಾದ ಸಣ್ಣಪುಟ್ಟ ಸ್ಟಾಲ್ ಗಳನ್ನು ನೀವು ಗಮನಿಸಿಯೇ ಇರುತ್ತೀರಿ, ಇವು ಹೆಂಗಸರಿಂದಲೇ ನಿರ್ವಹಿಸಲ್ಪಡುತ್ತವೆ. ಟೈಂಪಾಸ್ ಹಾಗೂ ಸಂಪಾದನೆಗೆ ಇದು ಉತ್ತಮ ದಾರಿ. ಈ ಸ್ಟಾಲ್ ಗಳಲ್ಲಿ ಮನೆಯಲ್ಲೇ ತಯಾರಿಸಿದ ವ್ಯಂಜನ ಅಥವಾ ಹೋಲ್ ಸೇಲ್ ನಿಂದ ಕೊಂಡು ತಂದು, ದರ ಹೆಚ್ಚಿಸಿ ಮಾರಾಟ ಮಾಡಬಹುದು. ಇತ್ತೀಚೆಗೆ ನ್ಯೂಜೆರ್ಸಿಯಲ್ಲಿ ಇಂಥದ್ದೇ ಸ್ಟಾಲ್ ಹೂಡಿದ್ದ ಒಬ್ಬ ವಯೋವೃದ್ಧ ಮಹಿಳೆ ಬೊಂಬಾಟ್ ಕೇಕ್ಸ್ ಮಾರಿ ದಾಖಲೆ ಸ್ಥಾಪಿಸಿದ್ದಾಳೆ. ಅವಕಾಶ ಸಿಕ್ಕಾಗ ನೀವು ಹೀಗೆ ಮಾಡಿ ನೋಡಿ. ಒಂದಿಷ್ಟು ಪ್ಲಾನಿಂಗ್ ಸಾಮಗ್ರಿ, ತಯಾರಿ ಹಾಗೂ ಶಾಪಿಂಗ್ ನಡೆಸಿದರೆ ಆಯ್ತು.

ಚಿಕಿತ್ಸೆ ಹಾಗೂ ಮಸ್ತಿ : ವಿಯೆಟ್ನಾಮ್ ಇದೀಗ ಹೆಲ್ತ್ ಟೂರಿಸಮ್ ನಗೆ ಹೆಸರಾಗಿದೆ. ಅಲ್ಲಿ ಈಗ ಅಗ್ಗದ (ಎಲ್ಲರಿಗೂ ಎಟುಕುವಂಥ) ಹಾಗೂ ಸುಲಭ ಚಿಕಿತ್ಸೆ ಸಿಗುತ್ತಿದೆ. ಭಾರತದ ಮಟ್ಟಕ್ಕೆ ಇದು ತುಸು ಕಠಿಣಕರವೇ ಹೌದು, ಏಕೆಂದರೆ ಇದಕ್ಕೆ ಮುಂಚೆಲ್ಲ ಭಾರತೀಯ ವೈದ್ಯರು ತಮ್ಮನ್ನು ತಾವು ಸ್ಪೆಷಲ್ ಎಂದೇ ಭಾವಿಸುತ್ತಿದ್ದರು. ಭಾರತ ಸರ್ಕಾರದ ರೀತಿನೀತಿಗಳೂ ಹಿಂಸಕಾರಕ. ಬಿಸ್ ನೆಸ್ ಗಿಂತ ಜಾಸ್ತಿ ಅದಕ್ಕೆ ಮೊರ್ಯಾಲಿಟಿಯದೇ ಚಿಂತೆ. ಕಿಡ್ನಿ/ಲಿವರ್ ಟ್ರಾನ್ಸ್ ಪ್ಲಾಂಟ್, ಸರೋಗೇಟ್ ಮದರ್ಸ್ ಮೆಡಿಕಲ್ ಬಿಸ್ ನೆಸ್ ಇದರ ಮಧ್ಯೆ ಜೋರಾಗಿ ನಡೆಯುತ್ತಿತ್ತು. ಆದರೆ ಈಗ ಅದು ತಗ್ಗಿದೆ, ಏಕೆಂದರೆ ಸರ್ಕಾರದ ಮೂಗು ತೂರಿಸುವಿಕೆ ಹಾಗಿದೆ. ಪ್ರವಾಸಿಗರು ಇಲ್ಲಿಗೆ ಬಂದು ಚಿಕಿತ್ಸೆ ಪಡೆಯುವುದು ಮಾತ್ರವಲ್ಲದೆ, ವಿಯೆಟ್ನಾಮ್ ನ ಪ್ರವಾಸದ ಮಸ್ತಿ ಎಂಜಾಯ್ ಮಾಡ್ತಿದ್ದಾರೆ.

ಜನತೆ ತನ್ನ ಮರ್ಜಿಯಂತೆ ನಡೆಯುತ್ತದೆ : ಅಮೆರಿಕಾದ ಹೊಸ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ದ. ಅಮೆರಿಕಾದಿಂದ ಬಂದು ಅಮೆರಿಕಾದಲ್ಲಿ ವಾಸ್ತವ್ಯ ಹೂಡಿದವರ ವಿರುದ್ಧ ವಿಷಕಾರಿ ಎಲೆಕ್ಷನ್ ಗೆದ್ದಿರಬಹುದು, ಅಂದ ಮಾತ್ರಕ್ಕೆ ಅಲ್ಲಿನ ಲ್ಯಾಟಿನ್ನರು ಕಣ್ಮರೆ ಆಗ್ತಾರೆ ಎಂದೆಣಿಸಿದ್ದರೆ ಅದು ತಪ್ಪು! ಕೊಲಂಬಿಯಾದ ಒಂದು ಗಾರ್ಮೆಂಟ್ ಕಂಪನಿ `ದಿ ಟೆನಿಸ್,’ ಅಮೆರಿಕಾದಲ್ಲಿ ಹೊಸದಾಗಿ ಸ್ಟೋರ್ ತೆರೆದಿದ್ದು, ಲ್ಯಾಟಿನ್ನರೇ ಇರಲಿ ಯಾ ಅಮೆರಿಕನ್ ಲೈಟ್, ಅವರ ಸಾಮಗ್ರಿಗಳಂತೂ ಚೆನ್ನಾಗಿ ಸೇಲ್ ಆಗುತ್ತಿವೆ. ಅಂದ್ರೆ ಬಾಂಗ್ಲಾದೇಶ, ಚೀನಾ, ವಿಯೆಟ್ನಾಮ್ ಮಾಲು ಅಲ್ಲಿ ಮಾರಾಟ ಆಗುತ್ತಿರುವಂತೆಯೇ! ನೇತಾರರು ಏನೇ ಹೇಳಿಕೊಳ್ಳಲಿ, ಅಮೆರಿಕಾದ ಜನತೆ ಮಾತ್ರ ತನ್ನ ಮರ್ಜಿಯಂತೆ ನಡೆದುಕೊಳ್ಳುತ್ತಿದೆ. ನಮ್ಮಲ್ಲಿ ಹಿಂದೂಮುಸ್ಲಿಂ ಎಂದು ಭೇದ ಎಣಿಸುವವರು ಇದನ್ನು ಗಮನಿಸಬೇಕು.





