ನಭ ಮಂಡಲದೊಳು ನೇಸರನು ಮುಳುಗುವ ದೃಶ್ಯ ಕೆಂಪು ಸಂಜೆಯ ತಿಳಿ ತಂಗಾಳಿಗೆ ಹಳ್ಳಿಯ ವಾತಾವರಣ ಹಿತವಾಗಿದೆ . ಪಕ್ಷಿಗಳು ಗೂಡು ಸೇರುವ ತವಕಕ್ಕೆ ಚಿಲಿಪಿಲಿ ಕಲರವ ಗದ್ದಲದ ನಡುವೆ ಕೂಲಿ ಕೆಲಸ ಮುಗಿಸಿ ಮನೆ ಸೇರಿಕೊಂಡಿದ್ದ ರಂಗಪ್ಪ.

ಪ್ರೀತಿಯ ಮಡದಿ ಕಮಲಿ ತುಂಬು ಗರ್ಭಿಣಿ.  ಕಮಲಿಗೆ ಹೇರಿಗೆ ನೋವು ಶುರುವಾಯಿತು.  “ಜೋರಾಗಿ ಚೀರತೊಡಗಿದಳು ಹೊಟ್ಟೆನೋವು… ಹೊಟ್ಟೆ ನೋವು…”  ರಂಗಪ್ಪನಿಗೆ ಗಾಬರಿ ಆಯ್ತು,  ಏನು ಮಾಡಬೇಕು ತೋಚದೆ ಹೆರಿಗೆ ಮಾಡಿಸುವ ಕಾಳವ್ವನನ್ನು ಕರೆಯಲು ಪಕ್ಕದ ರಸ್ತೆಗೆ ಒಂದೇ ಸಮನೆ ಓಡಿದ. ಗಾಬರಿಗೊಂಡಿದ್ದ ರಂಗಪ್ಪನಿಗೆ ನೋಡಿ ಅರ್ಥವಾಯ್ತು ಕಾಳವ್ವನಿಗೆ “ಕಮಲಿಗೆ ಹೆರಿಗೆ ನೋವು ಶುರುವಾಗಿದೆ ಎಂದೂ..”  ಕಾಳವ್ವ ರಂಗಪ್ಪನಿಗಿಂತಲೂ ಒಂದು  ಹೆಜ್ಜೆ ಮುಂದೆಯೇ ನಡೆದು ಮನೆ ಸೇರಿದ್ದಳು.

ಕಾಳವ್ವ ಬಂದವಳೆ,  ಬೆವರುತಿದ್ದ ಕಮಲಿಯ ತಬ್ಬಿಕೊಂಡು ಮುಖದಲ್ಲಿದ್ದ ಬೆವರನ್ನು ಒರೆಸುತ್ತ ಸಮಾಧಾನ ಮಾಡತೊಡಗಿದಳು. ಹೆರಿಗೆ ನೋವನ್ನು ಸಹಿಸಿವಂತೆ ಮನವರಿಕೆ ಮಾಡಿದಳು .

“ಕಾಳವ್ವ , ರಂಗಪ್ಪನಿಗೆ ಸ್ವಲ್ಪ ಬಿಸಿ ನೀರು ಬಟ್ಟೆ ಕೊಡಲು ಹೇಳಿದಳು..?.” ಬಟ್ಟೆ ಬಿಸಿ ನೀರು ತೆಗೆದುಕೊಂಡು, ಹೊರಗಡೆ ಕಾಯುವಂತೆ ಸೂಚಿಸಿದಳು.

“ಕಮಲಿಯ ಅರ್ಧ ಗಂಟೆಯ ಚೀರಾಟದ ನಂತರ  ಮಗುವಿನ ಅಳುವ ಸದ್ದು? ರಂಗಪ್ಪನ ಕಿವಿಗೆ ಇಂಪಾಗಿ ಯಾವುದೋ ಒಂದು ಹೇಳಲಾಗದ ಮಧುರ ಬಾಂಧವ್ಯ ಬೆಸೆದಂತೆ ಹೃದಯದೊಳಗೆ….” ಮುದ್ದಾದ ಪುಟ್ಟ ಹಸಿಗೂಸು ಕೆಲವೇ ಕ್ಷಣಗಳಲ್ಲಿ ನೋಡುವ ತವಕ ರಂಗಪ್ಪನಿಗೆ . ವಿಧಿಯಾಟವೇ ಬೇರೆಯಾಗಿತ್ತು .

istockphoto-1446887567-612x612
ಕಮಲಿ ಕೊನೆಯುಸಿರೆಳೆದಳು.

ಹೆಣ್ಣುಮಗು ಹುಟ್ಟಿತ್ತು,ಆದರೆ ಅದು ಹುಟ್ಟುತ್ತಲೇ ಕುರುಡಿಯಾಗಿತ್ತು.

ಮಗುವಿನ ಮುಖವನ್ನೇ ನೋಡದೆ ಕಮಲಿ ಪ್ರಾಣಬಿಟ್ಟಿದ್ದಳು .ದೃಶ್ಯ ಕಂಡು ಕಾಳವ್ವ ಬಿಕ್ಕಿ ಬಿಕ್ಕಿ ಅತ್ತಳು. ಅಳುವ ಸದ್ದು ಕೇಳಿ ಓಡಿಬಂದ ರಂಗಪ್ಪ, ಮಡದಿಯ ಶವವನ್ನು ತಬ್ಬಿಕೊಂಡು, “ನನ್ನನ್ನು ಬಿಟ್ಟು ಏಕೆ ಹೋದೆ ಕಮಲಿ? ಇನ್ನು ನನಗೆ ದಿಕ್ಕೇನು? ನೀನಿಲ್ಲದೆ ಹೇಗೆ ಇರಲಿ? ” ಎಂದು ಅಳುತ್ತ ಹೊರಳಾಡಿದ.ರಂಗಪ್ಪನ ಮನಸ್ಸನ್ನು ಕ್ರೌರ್ಯದ ಹಾದಿಗೆ ಸೆಳೆದಿತು. ಮಗು ಅಳುವ ಸದ್ದು ಈಗ ರಂಗಪ್ಪನಿಗೆ ಕರ್ಕಶವೇನಿಸಿ, “ದುರದೃಷ್ಟದ ಮಗು ಹುಟ್ಟುತ್ತಲೆ ನನ್ನ ಕಮಲಿಯ  ನುಂಗಿ ನೀರು ಕುಡಿದಿದೆ ? ಜೊತೆಗೆ ಹುಟ್ಟು ಕುರುಡಿಯಾಗಿದೆ   ಈ ನತದೃಷ್ಟ ಮಗು ಬೇಡ….! ನನ್ನ ಕಮಲಿಯ ಸಾವಿಗೆ ಕಾರಣವಾದ ಈ ಮಗು ಬೇಡವೇ ಬೇಡ ಎಂದು ಹಠಕ್ಕೆ ಬಿದ್ದ ರಂಗಪ್ಪ ರಾತ್ರೋರಾತ್ರಿ ಊರು ಬಿಟ್ಟು ಹೊರಟುಹೋದ ಮಗುವಿಗೆ ಅನಾಥ ಮಾಡಿ.

ತೀರಾ ವಯಸ್ಸಾದ ಕಾಳವ್ವನಿಗೆ ಎದೆಯ ಬಡಿತ ಜೋರಾಯಿತು. ಮನಸು ನೊಂದಿತ್ತು, ದೇವರಿಗೆ ಹಿಡಿ ಹಿಡಿ ಶಪಿಸಿದಳು . “ಅಯ್ಯೋ….! ದೇವರೇ ನೀನೆಷ್ಟು ಕ್ರೂರಿ..? ಅನ್ಯಾಯದ ಮೇಲೆ ಅನ್ಯಾಯ ಮಾಡುತ್ತಿರುವೆ..? ಈ ಮಗುವಿನ ದುರದೃಷ್ಟವೋ ,ಯಾವ ಜನ್ಮದ  ಕರ್ಮವೋ ಅಪ್ಪ -ಅಮ್ಮ ಇಬ್ಬರೂ ಮಗುವಿನ ಮುಖ ನೋಡಲೇ ಇಲ್ಲ.  ಇದೆಂಥ ಶಿಕ್ಷೆ ? ಹೆಣ್ಣು ಮಗು ಬೇರೆ ..? ಮಗುವನ್ನು ತಬ್ಬಿ ಸಂತೈಸಿ ಹಣೆಗೆ ಮುತ್ತನಿಟ್ಟ  ಕಾಳವ್ವನಿಗೆ  ಕೈ ನಡುಗುತಿತ್ತು . ಕಮಲಿ ಕಾಳವ್ವನಿಗೆ ಸ್ವಂತ ಮಗಳಿಗಿಂತಲೂ ಹೆಚ್ಚು ತುಂಬಾ ಪ್ರೀತಿ ಸಲುಗೆ. ಕಮಲಿ ಕೂಡ ಕಾಳವ್ವನಿಗೆ ತಾಯಿಗಿಂತ ಹೆಚ್ಚಾಗಿ ನೋಡಿಕೊಳ್ಳುತಿದ್ದಳು. ಒಳ್ಳೆಯ ನಡೆತೆ ಒಳ್ಳೆಯ ಗುಣ ಯಾರಿಗು ಕೆಡುಕು ಬಯಸದ ಕಮಲಿಗೆ ಈ ಸಾವು ನ್ಯಾಯವೇ…..? ಕಮಲಿ ಇದಿದ್ದರೆ ಈ ಮಗುವಿಗೆ ಈ ಸ್ಥಿತಿ ಬರುತ್ತಿರಲಿಲ್ಲ. ಈ ಮಗು ಅನಾಥವಾಗುತ್ತಿರಲಿಲ್ಲ , ಮಗುವಿಗೆ ತಾಯಿಯ ಅವಶ್ಯಕತೆಯಿದೆ . ನನಗು ವಯಸ್ಸಾಗಿದೆ , “ಈ ಮಗುವನ್ನು ಹೇಗೆ ನೋಡಿಕೊಳ್ಳಲಿ ..? ಮುಂದೆ ಮಗುವಿನ ಭವಿಷ್ಯವೇನು….? ಕುರುಡಿ ಹೆಣ್ಣು ಮಗುವನ್ನು ಯಾರು ಸಾಕಲು ಮುಂದೆ ಬರುವುದಿಲ್ಲ ..? ಭೂತದಂತೆ ಕಾಡುವ ಪ್ರೆಶ್ನೆಗಳು ಕಾಳವ್ವನನ್ನು ಮುಕವಾಗಿಸಿದೆ.  ನನ್ನಿಂದ ಏನೂ ಮಾಡಲಾಗದ ಅಸಾಯಕತೆ ಮತ್ತು ಪರಿಸ್ಥಿತಿ ಮನಸ್ಸನ್ನು ಗಟ್ಟಿಮಾಡಿಕೊಂಡು  ಅನಾಥಾಶ್ರಮದ ದಾರಿ ಕಡೆ ನಡೆದಳು  ಅತ್ತ ಇತ್ತ ನೋಡಿ ” ಕ್ಷಮಿಸು ಕಮಲಿ, ನಿನ್ನ ಮಗುವನ್ನು ಅನಾಥಾಶ್ರಮದ ಮುಂದೆ ಇಟ್ಟು ಹೋಗುತ್ತಿದ್ದೇನೆ ಎಂದು ಹೇಳಿ ಮಗುವನ್ನು ಬಿಟ್ಟು ಹಿಂತಿರುಗಿದಳು ಕಾಳವ್ವ ಕಣ್ಣಲಿ ನೀರು ತುಂಬಿಕೊಂಡು ”

ಅನಾಥಾಶ್ರಮದವರು ಮಗುವನ್ನು ತೆಗೆದುಕೊಂಡು “ದೃತಿ” ಎಂದು ಹೆಸರಿಟ್ಟರು. ದೃತಿ ತುಂಬಾ ಚೂಟಿಯಾಗಿದ್ದಳು. ಒಂದು ಸಲ ಹೇಳಿ ಕೊಟ್ಟ ಪಾಠ ಗಳನ್ನು ಮರೆಯದೆ ನೆನಪಿಡುವ ಅಗಾಧ ಶಕ್ತಿ ಅವಳಲ್ಲಿತ್ತು. ಎಲ್ಲ ಪ್ರೆಶ್ನೆಗಳಿಗೆ ತಟ್ಟನೆ ಉತ್ತರ ನೀಡುತಿದ್ದಳು .  ಅಂಧಶಾಲೆಯಲ್ಲಿ ಓದುವುದರಲ್ಲಿ ಇವಳೇ ಮೊದಲಿಗಳು. ಗಿಣಿಯಂತೆ ಪಟಪಟ ಮಾತನಾಡುವ ದೃತಿ ಯನ್ನು ಕಂಡರೆ ಎಲ್ಲರಿಗೂ ಪ್ರೀತಿ -ಅನುಕಂಪ. ಎಳೆ ವಯಸ್ಸಿನಲ್ಲೆ ಅಪ್ರತಿಮ ಪ್ರತಿಭೆ ಇವಳಲ್ಲಿತ್ತು. ಇವಳ ಪ್ರತಿಭೆಗೆ ಮೆಚ್ಚಿ ಹಲವು ಪ್ರಶಸ್ತಿಗಳು ಸಿಕ್ಕವು.  ಮಾಧ್ಯಮ- ಪತ್ರಿಕೆಗಳು ಸಂದರ್ಶನಗಳನ್ನು ಮಾಡಿದರು.  ಸರ್ಕಾರದಿಂದ ಅನುದಾನ ಸಿಕ್ಕಿತು. ದೊಡ್ಡವಳಾದಂತೆ,  ಕಲ್ಪನೆಯ ಜಗತ್ತಿನಲ್ಲಿ ಬಣ್ಣಗಳನ್ನು ಬೆರಸಿ ಜಗತ್ತನ್ನು ನೋಡುತ್ತಾ ಬದುಕು ಕಟ್ಟಿಕೊಂಡಳು. ದೂರಸಂಪರ್ಕ ಇಲಾಖೆ ಯಲ್ಲಿ ದೊಡ್ಡ ಹುದ್ದೆ ಪಡೆದುಕೊಂಡಳು . ಇವಳ ಪ್ರತಿ ತಿಂಗಳ ಸಂಪಾದನೆಯ ಒಂದು ಭಾಗವನ್ನು ಅನಾಥಶ್ರಮಕ್ಕೆ  ಕೊಡುತಿದ್ದಳು . ಕಣ್ಣು ಕಳೆದುಕೊಂಡ ಕುರುಡರಿಗೆ ಸ್ಫೂರ್ತಿಯಾದಳು ದೃತಿ.  ಜಗತ್ತನ್ನು ನೋಡಲು ಪರಿತಪಿಸುವ ಮಗು ಮನಸಿನ ಮುಗ್ಧ ಹೃದಯಗಳು ತನ್ನಂತೆ ಇರುವ ಎಲ್ಲರಿಗೂ ಭರವಸೆ ತುಂಬಿ ಸಾಗುತ್ತಿದ್ದಾಳೆ ದೃತಿ.

ಇಂದು ಅಧಿಕಾರಿ ಮತ್ತು ಅನಾಥಾಶ್ರಮದ ಮುಖ್ಯ ಕಾರ್ಯಕರ್ತೆ. ಬದುಕು ಕತ್ತಲಾದರೂ ಭರವಸೆಯ ದೀಪ ಹಚ್ಚಿ ಬಾಳನ್ನು ಬೆಳಕು ಮಾಡಿದ್ದಾಳೆ. ಆದರೂ ಅವಳಿಗೆ ಪ್ರತಿ ಸರಿ ಕಾಡುವ ಪ್ರೆಶ್ನೆಯೊಂದೇ ?  “ತನ್ನ ತಂದೆ -ತಾಯಿ ಎಲ್ಲಿ ಇರುವರು? ನನ್ನನ್ನು ಹೀಗೇಕೆ ಅನಾಥಳಾಗಿಸಿದರು?  ಕುರುಡಿ ಎಂಬ ಕಾರಣವ..? ಕುರುಡಿಯಾಗಿದ್ದು ನನ್ನ ತಪ್ಪಾ ? ಉತ್ತರ ಸಿಗದ ಮೌನವೊಂದೇ ಅವಳೆದೆಯಲ್ಲಿ ಜೀವಂತವಾಗಿತ್ತು.

ವಾಣಿ ಮೈಸೂರು

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ