ಕೆಲಸದ ಗಡುವನ್ನು ಹೆಚ್ಚಿಸಬೇಕು

ಬೆಳಗ್ಗೆ 9 ಗಂಟೆಯಿಂದ ರಾತ್ರಿ 9ರವರೆಗೆ, ಕೆಲಸದ ಗುಡುವು ವಾರದಲ್ಲಿ 6 ದಿನ ಇದ್ದರೆ ಅದು ಸರಿಯೋ ತಪ್ಪೋ ಎಂಬುದರ ಬಗ್ಗೆ ವಿಶ್ವದಲ್ಲಿ ಎಲ್ಲೆಡೆ ವಿವಾದ ಎದ್ದಿದೆ. ಇದು ಕಾರ್ಮಿಕರ ಹಿತಾಸಕ್ತಿಗಳಿಗೆ ವಿರುದ್ಧ ಎಂದು ಭಾವಿಸಲಾಗುತ್ತಿದೆ. ಹೀಗಾಗಿ ಬಹಳಷ್ಟು ಮ್ಯಾನೇಜರ್ಸ್‌, ಕ್ವಾಲಿಟಿ ವರ್ಕ್‌ಕ್ವಾಂಟಿಟಿ ಟೈಂ ಹೋಲಿಸಿ, ಈ ಕಾನ್ಸೆಪ್ಟ್ ನ್ನು ತಿರಸ್ಕರಿಸುತ್ತಿದ್ದಾರೆ.

ಒಂದೇ ಸಮನೆ ದುಡಿಮೆ ಎಂಥವರನ್ನೂ ದಣಿಸುತ್ತದೆ ಎಂಬುದು ನಿಜ. ಆದರೆ ಇಂದಿನ ಗಟ್ಟಿ ಮನೆಗಳು, ಸಾಮಗ್ರಿ ಸರಂಜಾಮು ತುಂಬಿದ ಮನೆಗಳು, ವಿದ್ಯುತ್‌, ಇಂಟರ್‌ ನೆಟ್‌, ಗಾಡಿಗಳು, ರೈಲು, ವಿಮಾನ…. ಇತ್ಯಾದಿ ಎಲ್ಲವೂ 9/9/6 ಕೊಡುಗೆ ಎಂಬುದನ್ನು ಮರೆಯಬಾರದು.

ಎಲ್ಲಾ 365 ದಿನಗಳಲ್ಲೂ 24 ಗಂಟೆ ಸತತ ಸಿಗಲಿರುವ ಸೌಲಭ್ಯಗಳು ತಮಗೆ ತಾವೇ ಆಕಾಶದಿಂದ ಇಳಿದು ಬರಲಿಲ್ಲ. ಎಷ್ಟೋ ಜನರ ಸತತ ದುಡಿಮೆಯಿಂದಲೇ ಇದೆಲ್ಲ ಸಿಕ್ಕಿದ್ದು. ಕೆಲವರು ಬಲವಂತದಿಂದ ಗುಲಾಮರಾದರೆ, ಹಲವರು ತಾವೇ ಒಪ್ಪಿಕೊಂಡು ಹೀಗೆ ದುಡಿದಿದ್ದರಿಂದ ಇಂದು ಎಲ್ಲರಿಗೂ ಸುಖ ಸೌಲಭ್ಯ ಸಿಗುತ್ತಿದೆ.

ಹೀಗೆ ಎಲ್ಲಾ ಸೌಲಭ್ಯ ಪಡೆದ ಮಂದಿ ಹೇಳುವುದೆಂದರೆ, ಅವರ ಜೀವನ ರಾಜ, ಅವನ ಸಭಿಕರು, ಪುರೋಹಿತರಂತೆಯೇ ಆಗಿಬಿಡಬೇಕು ಅಂತ. ಯೂರೋಪಿನಲ್ಲಂತೂ ವಾರಕ್ಕೆ 4 ದಿನಗಳಷ್ಟೇ ಕೆಲಸ ಇರಬೇಕು ಎಂದು ಬೇಡಿಕೆ ಮುಂದಿಡುತ್ತಾರೆ.  ಕಾನ್ಸೆಪ್ಟ್ ಅವರಿಗೆ ಬೇಕಿಲ್ಲ. ಧಾರಾಳ ಸುಖ ಸೌಲಭ್ಯಗಳು ತುಂಬಿರಬೇಕೆಂದೇ ಬೇಡಿಕೆ ಇಡುತ್ತಾರೆ. ಮನೆಗಳಲ್ಲಿ ಕುಳಿತು ವಿಡಿಯೋ ಗೇಮ್ಸ್ ಆಡುತ್ತಾ, ಬಾರ್‌ ಗಳಲ್ಲಿ ಪೆಗ್‌ ಮೇಲೆ ಪೆಗ್‌ ಏರಿಸುತ್ತಾ ಇರಬೇಕೆಂದು ಬಯಸುತ್ತಿದ್ದಾರೆ.

9/9/6 ಯಾ 90 ಗಂಟೆಗಳ ಕೆಲಸ ಅವ್ಯವಹಾರಿಕ ಎನಿಸುತ್ತದೆ, ಪ್ರಾಕ್ಟಿಕ್‌ ಅಲ್ಲ. ಆದರೆ ಕೆಲಸದ ಗಡುವು ಹೆಚ್ಚಬೇಕು ಎಬುದೇನೋ ಸರಿ, ಅದರಲ್ಲೂ ಹೆಚ್ಚಿನ ಸುಖ ಸೌಲಭ್ಯ ಕೇಳುವವರಿಗೆ ಇದು ಕಡ್ಡಾಯ. ಶಿಲಾಯುಗದಲ್ಲಿ ಮಾನವ ಬೆಂಕಿ ಕಂಡುಹಿಡಿದ, ಪ್ರಾಣಿಗಳನ್ನು ಪಳಗಿಸಿಕೊಂಡು, ತನ್ನ ಜೊತೆ ದುಡಿಮೆಗೆ ಹಚ್ಚಿದ. ಇಂದು ಕಾರ್ಖಾನೆಗಳು ಎಲ್ಲೆಲ್ಲೂ ಹೆಚ್ಚಿನ ಲಾಭ ಧಾರಾಳವಾಗಿದೆ. ಈ ಕಾರ್ಖಾನೆಗಳು ಪ್ರಕೃತಿಯ ಕಂಟ್ರೋಲ್ ‌ಮೀರಿದಂತೆ, ಪ್ರಕೃತಿ ಇದಕ್ಕೆ ಜವಾಬು ನೀಡತೊಡಗಿದೆ. ಹೀಗಾಗಿ ಇದೇ ಲೈಫ್‌ ಸ್ಟೈಲ್ ‌ಉಳಿಸಿಕೊಳ್ಳಲು ಹೆಚ್ಚು ಹೆಚ್ಚು ಕೆಲಸ ಅನಿವಾರ್ಯವಾಗಿದೆ.

ಕಳೆದ 40 ವರ್ಷಗಳಲ್ಲಿ ಚೀನಾ ಅತಿ ಹೆಚ್ಚು ಪ್ರಗತಿ ಸಾಧಿಸಿತು, ಬಲವಂತ, ಗುಲಾಮಗಿರಿ ಹೇರದೆ ಕಾರ್ಮಿಕರಿಂದ ಕೆಲಸ ತೆಗೆಯಿತು. ಇದು ಹೆಚ್ಚಿನ ಗಡುವಿನ ಕೆಲಸದಿಂದ ಸಾಧ್ಯವಾಯಿತು. ಯೂರೋಪ್‌ ವಿಶ್ವವನ್ನೇ ಗೆಲ್ಲಲು ಕಾರಣ, ಅಲ್ಲಿನ ಮಂದಿ ಹಡಗು ಹತ್ತಿ, ಗಂಟೆಗಳನ್ನು ಲೆಕ್ಕಿಸದೆ ಸತತ ದುಡಿದರು. ಅಮೆರಿಕಾ ಅಲ್ಲಿನ ಗುಲಾಮರಿಂದ 90 ಗಂಟೆಗಳ ಕಾಲ ಸತತ ದುಡಿಸಿತು, ಆಗ ಅದಕ್ಕೆ ಯಶಸ್ಸು ದಕ್ಕಿತು. ಶ್ರಮಿಕರ ಹಿತ ಬಯಸುವ ರಷ್ಯಾದ ಕಮ್ಯುನಿಸ್ಟ್ ಪಕ್ಷ, ಕೆಲಸಕ್ಕೆ ಆದ್ಯತೆ ನೀಡದೆ, ಬಾಯಿ ಮುಚ್ಚಿಕೊಂಡಿರುವ ನೀತಿ ಅನುಸರಿಸಿತು. ಹೀಗಾಗಿ ಅದು ಯೂರೋಪಿನ ದೇಶಗಳಂತೆ ಮುಂದುವರಿಯಲಿಲ್ಲ.

ಭಾರತದ ಬಗ್ಗೆ ಹೇಳುವುದೇ ಬೇಡ. ಕಳೆದ 1000 ಸಾವಿರ ವರ್ಷಗಳಿಂದ ಒಂದಿಷ್ಟು ಕೆಲಸ ಮಾಡದೆ ತಪಸ್ಸು ಮಾಡಿ ದೇವರನ್ನು ಪ್ರಸನ್ನಗೊಳಿಸಿದವರ ಗುಣಗಾನ ಮಾಡಲಾಗುತ್ತದೆ. ಋಷಿ ಮುನಿಗಳು ಎಂದೂ ಕೆಲಸ ಮಾಡಲಿಲ್ಲ, ಆದರೆ ಸಮಾಜದಲ್ಲಿ ವಂದನೀಯರು. ರಾಜ ಸಹ ಯುದ್ಧ ಮಾಡುತ್ತಿದ್ದ, ಪೂಜೆ ಮಾಡುತ್ತಿದ್ದ, ಮೋಜು ಉಡಾಯಿಸುತ್ತಿದ್ದವನೇ ಹೊರತು ಕೆಲಸ ಮಾಡಲಿಲ್ಲ.

ಇದೀಗ ಕುಂಭಮೇಳವನ್ನೇ ನೋಡಿ, ಕೋಟ್ಯಂತರ ಮಂದಿ ಗಂಗಾ ಜಲದಲ್ಲಿ ಮಿಂದೇಳಲು ತಮ್ಮ ದಿನದ 2022 ಗಂಟೆಗಳನ್ನು ದಂಡ ಮಾಡುತ್ತಿದ್ದಾರೆ. ಇಂಥವರು 90 ಗಂಟೆಗಳ ಕೆಲಸದ ವಿಚಾರವನ್ನೇ ಗಟ್ಟಿಯಾಗಿ ಹಿಡಿಯುತ್ತಾರಲ್ಲದೆ ಬೇರೇನಲ್ಲ.

ಪ್ರಾಚೀನ ಕಾಲದಿಂದಲೂ ಹೆಂಗಸರು 90 ಗಂಟೆಗೂ ಹೆಚ್ಚು ಕಾಲ ದುಡಿಯುತ್ತಲೇ ಇದ್ದಾರೆ. ಆದರೆ ಯಾರೂ ಅವರಿಗಾಗಿ ಕಂಬನಿ ಮಿಡಿಯಲಿಲ್ಲ. ಬೆಳಗ್ಗೆ 6 ಗಂಟೆಯಿಂದ ರಾತ್ರಿ 11 ಗಂಟೆವರೆಗೆ ದುಡಿಯುತ್ತಿದ್ದ ಅವರಿಗೆ ತಿರಸ್ಕಾರ, ಹೊಡೆತ ಕಟ್ಟಿಟ್ಟ ಬುತ್ತಿ! ಅವರ ತರಹ ದುಡಿಯಿರಿ ಎಂದರೆ ಗಂಡಸರಿಗೇಕೆ ಕೋಪ?

ಜನತೆಯನ್ನು ಲೂಟಿ ಹೊಡೆಯುವ ದಂಧೆ

ಹರಿದ ಮುಕ್ಕಾದ ನೋಟ್‌ ಗಳು ಮನೆಮಂದಿಗೆ ದೊಡ್ಡ ತಲೆನೋವು. ವಿಶ್ವದ ಕೆಲವೇ ದೇಶಗಳಲ್ಲಿ ಒಂದಾದ ಭಾರತದಲ್ಲಿ ಚಿಲ್ಲರೆ ಕರೆನ್ಸಿಗಾಗಿ ನಿತ್ಯ ಜಗಳ ತಪ್ಪಿದ್ದಲ್ಲ. ಇದಕ್ಕೆ ಕಾರಣ ಸರ್ಕಾರದ ಧೋರಣೆ, ಅದರ ಕೈಲಾಗದ ಹೇಡಿತನ. ಅದರ ಕಾರಣ ದೇಶವಿಡೀ ತುಂಬಿರುವ ಗುಡಿಸಲುಗಳಲ್ಲಿ ಸಮಸ್ಯೆ ಎದುರಿಸಬೇಕಾಗಿದೆ. ಹರಿದ ನೋಟು, ಚಲಾವಣೆಗೆ ಬಾರದ ನೋಟು ಇರಿಸಿಕೊಂಡು ಹೆಣಗಬೇಕಿದೆ.

ಈ ಕುರಿತಾಗಿ ಒಂದು ಜಾಹೀರಾತು ಹೊರಡಿಸಿದ ರಿಸರ್ವ್ ಬ್ಯಾಂಕ್‌, ಯಾವುದೇ ಬ್ಯಾಂಕಿಗೆ ಹೋಗಿ ಹರಿದು ಮುಕ್ಕಾದ ನೋಟುಗಳನ್ನು ಬದಲಾಯಿಸಿಕೊಳ್ಳಬಹುದು ಎಂದಿದೆ. ಬಣ್ಣ ಬಣ್ಣದ, 3 ಮಕ್ಕಳಿರುವ ಈ ಜಾಹೀರಾತಿನ ಮೂಲಕ ಹರಿದ ನೋಟಿನ ಸಮಸ್ಯೆ ಬಾಲಿಶ ಎಂದು ಸಾರಿದೆ. ಆದರೆ ಇಲ್ಲಿನ ಹಕೀಕತ್ತು ಎಂದರೆ, ಈ ಜಾಹೀರಾತನ್ನು ಪ್ರಕಟಿಸಬೇಕಾದ ಅನಿವಾರ್ಯತೆ ಬಂದಿರುವುದೇ, ಈ ಸಮಸ್ಯೆ ಅತಿ ಹೆಚ್ಚಾಗುತ್ತಾ ಹೊರಟಿದೆ. ಕೈಯಿಂದ ಕೈಗೆ ಬದಲಾಯಿಸಲಾಗುವ ನೋಟು ಅತಿ ಕೊಳಕಾಗಿ, ಮಡಿಚಿರುವುದರಿಂದ ಬೇಗ ಹಾಳಾಗುತ್ತಿವೆ. ಉಳಿದಂತೆ ಆನ್‌ ಲೈನ್‌ ಪೇಮೆಂಟ್ಸ್ ನಡೆದರೂ, ಅದಕ್ಕಿಂತ ಈ ನೋಟಿನ ಚಲಾವಣೆಯೇ ಹೆಚ್ಚು.

ಬ್ಯಾಂಕುಗಳ ಬಳ ಹೋಗಿ ಹಣ ಡ್ರಾ ಮಾಡುವಾಗ, ಉತ್ತಮ ನೋಟು ಕೊಡಿ ಎಂದು ಪಡೆಯುವುದು ಭಗೀರಥ ಪ್ರಯತ್ನವಾಗಿದೆ. ರಿಸರ್ವ್ ಬ್ಯಾಂಕುಗಳಲ್ಲಿ ಈ ಸೌಲಭ್ಯ ಇದೆ. ಆದರೆ ಕೇವಲ 100-200ರ ಹರಕಲು ನೋಟು ಬದಲಾಯಿಸಲು ಜನ ಆಟೋಗೆ 500 ತೆರಬೇಕಾಗಿರುವುದು ವಿಪರ್ಯಾಸ.

ಇದಕ್ಕಾಗಿ ರಿಸರ್ವ್ ‌ಬ್ಯಾಂಕಿನ ಏಜೆಂಟರು ಮಾರುಕಟ್ಟೆಯ ಗಲ್ಲಿ ಗಲ್ಲಿಗಳಲ್ಲೂ ಇರುತ್ತಾರೆ. ಇದಂತೂ ಜನತೆಯನ್ನು ಹಾಡುಹಗಲೇ ಲೂಟಿ ಹೊಡೆಯುವ ದಂಧೆಯೇ ಆಗಿದೆ. 2016ರಿಂದ ಮೋದಿ ಇದಕ್ಕೆ ಸರ್ಕಾರಿ ಸಂರಕ್ಷಣೆ ಒದಗಿಸಿದ್ದಾರೆ. ಆಗ ಉಂಟಾದ ನೋಟು ಬದಲಾವಣೆಯೇ ಇದಕ್ಕೆ ಮೂಲ. ಇದು ಜನತೆಯ ಅಭಿಮಾನವೋ ಅಥವಾ ಮೂರ್ಖತನವೋ ಗೊತ್ತಿಲ್ಲ, ಮೋದಿ ಇದಕ್ಕೆ ಲೂಪ್‌ ಹೋಲ್ಸ್ ಪ್ಯಾಚ್‌ ಮಾಡಲೇ ಇಲ್ಲ. ಇದಾದ ಮೇಲೆ ಮೋದಿ ಮತ್ತೊಮ್ಮೆ ,ಇನ್ನೊಮ್ಮೆ ಚುನಾವಣೆ ಗೆದ್ದು ಬಂದದ್ದೂ ಆಯ್ತು. ರಿಸರ್ವ್ ‌ಬ್ಯಾಂಕ್‌ ಈ ಆ್ಯಡ್‌ ನೀಡಿ ತಿಪ್ಪೆ ಸಾರಿಸಿಕೊಂಡಿದೆ.

ಅಸಲಿಗೆ ಇಂಥ ನೋಟುಗಳ ಪ್ರಕರಣದಲ್ಲಿ ಸರ್ಕಾರಗಳು ಸದಾ ನಿರ್ಲಕ್ಷ್ಯ ವಹಿಸಿದೆ. 2025 ವರ್ಷಗಳ ಹಿಂದೆಯೂ ಸಹ ಚಿಲ್ಲರೆ ಹಣದ ಕೊರತೆ ಅಗಾಧವಾಗಿ ಕಾಡುತ್ತಿತ್ತು. ಜನ ತಮ್ಮ ಅಂಗಡಿಗಳಲ್ಲಿ ನಿಯಮಿತ ಗ್ರಾಹಕರಿಗೆ ಪ್ಲಾಸ್ಟಿಕ್‌ ನಾಣ್ಯ ಕೊಟ್ಟು ಮರುಪಾವತಿ ಮಾಡಿಕೊಳ್ಳುತ್ತಿದ್ದರು. ಇಂದು ಇದಕ್ಕೆ ಪರ್ಯಾಯವಾಗಿ ಬಿಜೆಪಿ ಪೇಮೆಂಟ್ಸ್ ಇವೆ, ಇದಕ್ಕೆ ಸ್ಮಾರ್ಟ್‌ ಫೋನ್ ಅತ್ಯಗತ್ಯ. ಹಾಗೆಯೇ ಮೊಬೈಲ್ ‌ಬ್ಯಾಂಕಿಂಗ್‌ ನಿಂದ ಬೇಕಾದಷ್ಟು ಫ್ರಾಡ್‌ ಕೇಸು ಹೆಚ್ಚುತ್ತಿವೆ. ಹರಕಲು ನೋಟು ಬದಲಾಯಿಸುವ ಜವಾಬ್ದಾರಿ ಹೊತ್ತು ರಿಸರ್ವ್ ‌ಬ್ಯಾಂಕ್‌, ಮಾರ್ಕೆಟ್‌ ಗೆ ಬೇಗ ಬೇಗ ಹೊಸ ನೋಟು ಒದಗಿಸುವುದಿಲ್ಲ. ಬಿಜೆಪಿ ಪೇಮೆಂಟ್ ಜಾರಿಗೊಳಿಸಿ, ಫ್ರಾಡ್‌ ಗಳಿಂದ ತಪ್ಪಿಸಿಕೊಳ್ಳಿ ಎಂದು ಮತ್ತೊಂದು ಜಾಹೀರಾತು ಹೊರಡಿಸುತ್ತದೆ.

ತನ್ನ ಕೈಲಾಗದ ಹೇಡಿತನವನ್ನೇ ತನ್ನ ಹಿರಿಮೆ ಎಂದು ಭಾವಿಸುವ ರಿಸರ್ವ್ ‌ಬ್ಯಾಂಕ್‌, ಯಾ ಮಂದಿರ, ಚರ್ಚು, ಮಸೀದಿಗಳಿಗೂ ಕಡಿಮೆ ಇಲ್ಲ. ಅಲ್ಲೆಲ್ಲ ಮಾನವರ ಪ್ರತಿ ಕೆಲಸವನ್ನೂ ಪಾಪಕಾರ್ಯ ಎಂದು ಘೋಷಿಸಿ, ಇಂಥ ಕಡೆ ಬಂದು ಕಾಣಿಕೆ ಅರ್ಪಿಸಿ, ಪಾಪ ಕಳೆದುಕೊಳ್ಳಿ ಎಂದು ಸಾರುವಂತೆಯೇ ರಿಸರ್ವ್ ‌ಬ್ಯಾಂಕ್‌ ವರ್ತಿಸುತ್ತಿದೆ. ಅದು ಹೊಸ ನೋಟುಗಳನ್ನು ಬೇಗ ಇಶ್ಯು ಮಾಡುವುದಿಲ್ಲ, ಬದಲಿಗೆ ಬ್ಯಾಂಕಿಗೆ ಬಂದು ಹರಕಲು ನೋಟು ಬದಲಾಯಿಸಿ ಎನ್ನುತ್ತಿದೆ. ಸಾಮಾನ್ಯ ಜನತೆ ಬ್ಯಾಂಕಿಗೆ ಬಂದು ಹರಕಲು ನೋಟು ಬದಲಾಯಿಸಿಕೊಳ್ಳೋಣ ಎಂದರೆ, ಅವು ತಮ್ಮ ಹಳೆಯ ಖಾತೆದಾರರಿಗೂ ಸರಿಯಾಗಿ ಒದಿಗಸಲಾರದಷ್ಟು ಹೀನಾಯವಾಗಿವೆ. ಎಲ್ಲಾ ಮಂದಿರ, ಮಸೀದಿ, ಚರ್ಚುಗಳ ಕಥೆಯೂ ಇಷ್ಟೇ…. ಅಲ್ಲಿನ ದೇವರುಗಳಿಗೆ ಜನತೆಯ ಕಷ್ಟ ಪರಿಹರಿಸಲಾಗದು, ಅವನ ಹೆಸರು ಹೇಳಿ ಹರಕೆಯ ನೆಪದಲ್ಲಿ ಹಗಲುದರೋಡೆ ನಡೆಯುತ್ತಲೇ ಇರುತ್ತದೆ.

ಬಿಸಿ ತುಪ್ಪ ನುಂಗುವುದೊಂದೇ ದಾರಿ

ಸುಪ್ರೀಂ ಕೋರ್ಟ್‌ ಮತ್ತೊಮ್ಮೆ ಹಳೆಯ ಕಾನೂನನ್ನೇ ರಿಪೀಟ್‌ ಮಾಡಿದೆ, ಎಲ್ಲಿಯವರೆಗೂ ಮದುವೆ ಸಂಪೂರ್ಣ ಮುರಿದಿಲ್ಲವೇ, ಒಬ್ಬ ಹೆಣ್ಣಿನ ಮಗು ಅವಳ ವಿವಾಹಿತ ಗಂಡನ ಮಗುವೊಂದೇ ಸಿಂಧುವಾಗುತ್ತದೆ. ಆದರೆ ಯಥಾರ್ಥ ಬೇರೆಯೇ ಇದ್ದು, DNA ಟೆಸ್ಟ್ ಮೂಲಕ ಅದು ಅವಳ ಪ್ರೇಮಿಯ ಮಗು ಆಗಿರಬಹುದು ಎಂದು ಸಾಬೀತು ಪಡಿಸಬಹುದಾಗಿದೆ. ಇಲ್ಲಿ ಕಾನೂನಿನ ವ್ಯವಸ್ಥೆ ಎಂದರೆ ಯಾವ ಮಗು ಅನೈತಿಕ ಸಂತಾನವೇ ಅಲ್ಲ! ಆ ಹೆಣ್ಣು ಪತಿಯಲ್ಲದೆ ಬೇರೆ ವಿವಾಹೇತರ ಸಂಬಂಧ ಹೊಂದಿದ್ದರೂ ಸಹ ಆ ಮಗುವಿಗೆ ಇವಳ ಪತಿಯ ಆಸ್ತಿಯಲ್ಲಿ ಹಕ್ಕು ಸಿಕ್ಕೇ ಸಿಗುತ್ತದೆ.

ಈ ಕಾನೂನಿನ ವ್ಯವಸ್ಥೆ ಅದರ ಮಟ್ಟಕ್ಕೆ ಸರಿ ಇರಬಹುದು, ವಿವಾಹದ ವ್ಯವಸ್ಥೆ ಇರುವವರೆಗೂ ಇದನ್ನು ಒಪ್ಪಲೇ ಬೇಕಾಗುತ್ತದೆ. ಇಂದು DNA ಟೆಸ್ಟ್ ಎಷ್ಟು ತೀವ್ರವಾಗಿದೆ ಎಂದರೆ, ಅಸಲಿ/ನಕಲಿ ತಂದೆಯರ ಪತ್ತೆ ಸುಲಭವಾಗಿದೆ. ಆದರೆ ಅದರ ದುರುಪಯೋಗ ಆಗದಂತೆ ವೈದ್ಯರು ಪ್ರಾಮಾಣಿಕರಾಗಿರಬೇಕಷ್ಟೆ. ತನಗೆ ಒಲ್ಲದ ಪತ್ನಿಯನ್ನು ಧಿಕ್ಕರಿಸಲು, ಪತಿ ತನ್ನ ಪತ್ನಿಯಿಂದ ಹುಟ್ಟಿದ ಮಗುವನ್ನು ತಿರಸ್ಕರಿಸಲು ಇದನ್ನೇ ನೆಪ ಆಗಿಸಿಕೊಳ್ಳಬಾರದು. ಹೀಗಾಗಿ ಕಾನೂನಿನ ಈ ಪ್ರಾವಿಷನ್‌ ಇಲ್ಲಿ ಖಂಡಿತಾ ಮಾನ್ಯ ಎಷ್ಟೋ ಪ್ರಕರಣಗಳಲ್ಲಿ ಪತಿಗೆ ಪತ್ನಿ ಹೆತ್ತ ಮಗುವಿನ ಮೇಲೆ ಸಂದೇಹ ಇರುತ್ತದೆ. ಆ ಸಂದೇಹ ಏನೇ ಇದ್ದರೂ, ಈ ಮಗುವಿಗೆ ತನ್ನ ಹೆಸರೇ ಸಿಗಲಿದೆ ಎಂದು ಗೊತ್ತಿದ್ದರೂ ಆ ಪತಿ, ತನ್ನ DNA ಟೆಸ್ಟ್ ಮಾಡಿಸಲು ಒತ್ತಾಯಿಸುವುದಿಲ್ಲ. ಇಲ್ಲಿ ಪತಿ ಪತ್ನಿಯರ ಜಗಳದಲ್ಲಿ ಕೂಸು ಬಡವಾಗುತ್ತದೆ. ಪುರಾಣ ಕಥೆಗಳನ್ನು ಗಮನಿಸಿದಾಗಲೂ, ಎಷ್ಟೋ ಮಂದಿ ಪತ್ನಿಯನ್ನು ಸಂದೇಹಿಸಿ ತೊರೆದಿದ್ದಾರೆ. ಅವಳು ಹೆತ್ತ ಮಗುವಿಗೆ ತಮ್ಮ ಹೆಸರು ಕೊಟ್ಟಿಲ್ಲ.

1955-56ರ ಹಿಂದೂ ವ್ಯಕ್ತಿಗತ ಕಾನೂನಿನಲ್ಲಿ ಸುಧಾರಣೆಗೂ ಮೊದಲೇ, ಎಷ್ಟೋ ತಂದೆಯರು ತಮ್ಮ ಮಕ್ಕಳ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದರು. ಅಂಥ ಮಕ್ಕಳನ್ನು ನಿರ್ದಯವಾಗಿ ಅನಾಥಾಲಯಗಳಿಗೆ ದಬ್ಬಿಬಿಡುತ್ತಿದ್ದರು. ಈಗಂತೂ ಹೀಗೆಲ್ಲ ಮಾಡಲು ಸಾಧ್ಯವೇ ಇಲ್ಲ.

ಅಂದ ಹಾಗೆ ಒಂದು ಹೊಸ ಪ್ರಕರಣದಲ್ಲಿ, ಒಬ್ಬ ವಿವಾಹಿತ ಹೆಣ್ಣು ಕೋರ್ಟಿಗೆ ಹೋಗಿ, ಪರಪುರುಷನೊಂದಿಗೆ ತಾನು ಸಂಬಂಧ ಹೊಂದಿದ್ದು, ತನ್ನ ಮಗು ಪತಿಯದಲ್ಲ…. ಅವನದೇ ಎಂದು ಹೇಳಿ, ಆ ಒರಿಜಿನಲ್ ತಂದೆಯಿಂದ ಮಗುವಿನ ಪಾಲನೆಯ ಜೀವನಾಂಶ ಬೇಡಿದಳು. ಆ ಪರಪುರುಷ ಇದನ್ನು ಒಪ್ಪದೇ ಅದು ತನ್ನ ಮಗುವೇ ಅಲ್ಲ ಎಂದ. ತಾನು DNA ಟೆಸ್ಟ್ ಗೂ ಸಿದ್ಧನಿಲ್ಲ ಎಂದ. ಸುಪ್ರೀಂ ಕೋರ್ಟ್‌ ಅವನ ಬೇಡಿಕೆ ಒಪ್ಪಿ, ಈ ವಿವಾಹಿತೆ ಪರಪುರುಷನೇ ತನ್ನ ಮಗುವಿನ ಒರಿಜಿನಲ್ ತಂದೆ ಎಂದು ಹೇಳಲಾಗದು ಎಂದಿತು. ಆ ಮಗುವಿನ  ತಂದೆ ಅವಳ ಗಂಡನೇ ಎಂದಿತು.

ಅವಳ ಗಂಡನಂಥವರಿಗೆ ಈ ಕಾನೂನು ತಪ್ಪು ಎನಿಸಬಹುದು, ತಾನೇ ಆ ಮಗುವಿನ (ಪತ್ನಿ ಖಚಿತಪಡಿಸಿದ್ದರೂ) ಜವಾಬ್ದಾರಿ ಹೊರಬೇಕಿರುವುದು ಅಸಹನೀಯ ಎನಿಸುತ್ತದೆ. ಆದರೆ ಮದುವೆಯ ಈ ಸೈಡ್‌ ಎಫೆಕ್ಟ್ ಬಿಸಿ ತುಪ್ಪವಾಗಿದ್ದು, ಉಗುಳಲಾರದೇ ನುಂಗಲೇಬೇಕಿದೆ!

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ