– ರಾಘವೇಂದ್ರ ಅಡಿಗ ಎಚ್ಚೆನ್.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ  ಜೈದೇವ್‌ ಪತ್ನಿ ದಿಯಾ ಪಾತ್ರದಲ್ಲಿ ಶ್ವೇತಾ ಗೌಡ  ಅವರು ನಟಿಸಿದ್ದಾರೆ. ಅಮೃತಧಾರೆ ಧಾರಾವಾಹಿಯಲ್ಲಿ ದಿಯಾ ಮನೆ ಬಿಟ್ಟು ಹೋಗಿದ್ದಾಳೆ. ಆದರೆ ರಿಯಲ್‌ ಲೈಫನಲ್ಲಿ ಮದುವೆ ಆಗುತ್ತಿದ್ದಾರೆ.
ಈ ಹಿಂದೆ ‘ಪುಣ್ಯವತಿ’ ಧಾರಾವಾಹಿಯಲ್ಲೂ ಅವರು ನಟಿಸಿದ್ದರು. ರಾಧಿಕಾ ಧಾರಾವಾಹಿಯಲ್ಲಿಯೂ ನಟಿ ನಟಿಸಿದ್ದರು. ದಿಯಾ ಪಾತ್ರಧಾರಿ ಶ್ವೇತಾ ಗೌಡ ಅವರು ಎಂಗೇಜ್‌ ಆಗಿದ್ದಾರೆ, ಮದುವೆ ಆಗಲು ರೆಡಿ ಆಗಿದ್ದಾರೆ. ಪ್ರಿ ವೆಡ್ಡಿಂಗ್‌ ಫೋಟೋಶೂಟ್‌ ಕೂಡ ಮಾಡಿಸಿಕೊಂಡಿದ್ದಾರೆ.
ಮೇ 14ರಂದು ಇವರು ಮದುವೆ ಆಗಲಿದ್ದಾರೆ. ಯದುವೀರ್‌ ಸುನೀಲ್‌ ಚಂದ್ರ ಜೊತೆ ಇವರು ಎಂಗೇಜ್‌ ಆಗಿದ್ದಾರೆ ಎನ್ನಲಾಗಿದೆ. ಅಂದಹಾಗೆ ಯದುವೀರ್‌ ಯಾರು? ವೃತ್ತಿ ಏನು ಎನ್ನೋದು ಕೂಡ ರಿವೀಲ್‌ ಆಗಿಲ್ಲ. ಈ ಬಗ್ಗೆ ಶ್ವೇತಾ ಅವರೇ ಮಾಹಿತಿ ಕೊಡಬೇಕಿದೆ. ಇನ್ನೊಂದು ಕಡೆ ಮದುವೆ ಬಳಿಕ ಅವರು ನಟಿಸ್ತಾರಾ? ಇಲ್ಲವಾ ಎಂದು ಕೂಡ ಮಾಹಿತಿ ಇಲ್ಲ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ