ನಿನ್ನೆ ರಾತ್ರಿ ಸುಮಾರು 11.30ಕ್ಕೆ ಅವಳ ಫೋನ್ ಬಂತು.. “ಹೇಗಿದ್ದೀರಾ?”

ನಾನು ಹೇಳಿದೆ – “ಚೆನ್ನಾಗಿದ್ದೀನಿ!”

ಅವಳು ಕೇಳಿದಳು – “ಇನ್ನು ಮಲಗಿಲ್ವಾ?”

ನಾನು ಉತ್ತರಿಸಿದೆ – “ಇಲ್ಲ.. ಇನ್ನು ಇಲ್ಲ!”

ಅವಳು ಅಂದಳು – “ಇವತ್ತು ಸಾಯಂಕಾಲ ಅಂತೂ ನೀವು ಸಖತ್ ಹ್ಯಾಂಡ್ಸಮ್ ಆಗಿ ಕಾಣಿಸ್ತಿದ್ರಿ!”

ನಾನು ಖುಷಿಯಾಗುತ್ತಾ ಹೇಳಿದೆ – “ಹೌದಾ, ಥ್ಯಾಂಕ್ಸ್!”

ಅವಳು ಮತ್ತೆ ಅಂದಳು – “ಇವತ್ತಿಗೂ ನೀವು ಎಲ್ಲರ ಮನ ಗೆಲ್ಲುತ್ತೀರಿ!”

ನಾನು ಸ್ವಲ್ಪ ಹಾರಾಡುತ್ತಾ ಹೇಳಿದೆ – “ಹೌದಾ!”

ಅವಳು ಹೇಳಿದಳು – “ಇವತ್ತು ಮನೆಯಲ್ಲಿ ಯಾರೂ ಇಲ್ಲ – ಅದಕ್ಕೆ ನಿಮ್ಮ ಹತ್ತಿರ ಮಾತನಾಡೋಣ ಅಂತ ಅನ್ಕೊಂಡೆ!”

ನಾನು ಕೇಳಿದೆ – “ಹೇಳು, ಏನು ಮಾತನಾಡಬೇಕು?”

ಅವಳು ಸ್ವಲ್ಪ ಸಂಕೋಚಪಡುತ್ತಾ ಕೇಳಿದಳು – “ನಿಮ್ಮ ಹತ್ತಿರ ಒಂದು ಸಹಾಯ ಕೇಳಲಾ, ಬೇಡ ಅನ್ನಲ್ವಲ್ಲ?”

sddefault

ನಾನು ತಕ್ಷಣ ಅಂದೆ – “ಇಲ್ಲ! ಹೇಳು ನಿನಗೆ ಏನು ಬೇಕು?”

ಅತ್ತ ಕಡೆಯಿಂದ ಧ್ವನಿ ಬಂತು – “ನನ್ನ ಮೇಲೆ ಆಣೆ ಮಾಡಿ!”

ನನ್ನ ಉತ್ತರ – “ನಿನ್ನ ಮೇಲೆ ಆಣೆ.. ಅಷ್ಟೇ ತಾನೇ! ಈಗಲಾದರೂ ಹೇಳು!”

ಅವಳು ಹೇಳಿದಳು – “ಸ್ವಲ್ಪ ನಾಚಿಕೆ ಆಗ್ತಿದೆ!”

ನಾನು ಅಂದುಬಿಟ್ಟೆ – “ಅಯ್ಯೋ! ಇದರಲ್ಲಿ ನಾಚಿಕೆ ಪಡೋದು ಏನಿದೆ.. ಮುಚ್ಚುಮರೆಯಿಲ್ಲದೆ ಹೇಳು!”

ಅವಳು ತಡಬಡಾಯಿಸುತ್ತಾ ಹೇಳಿದಳು – “ಅದು.. ಅದು ನಿಮ್ಮ ಹತ್ತಿರ

 

 

ಎಕ್ಸ್‌ಟ್ರಾ ಸಿಲಿಂಡರ್ ಇದೆಯಾ?”

10 ಬೈಗುಳ ಟ್ರಂಪ್‌ಗೆ ಮತ್ತು 20 ಖಮೇನಿಗೆ ಉದುರಿಸುತ್ತಾ, ನಾನು ತಕ್ಷಣ ಫೋನನ್ನು ಕೆಳಗೆ ಅಪ್ಪಳಿಸಿದೆ!

 

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ