`ಬಿಳಿಚುಕ್ಕಿ ಹಳ್ಳಿಹಕ್ಕಿಚಿತ್ರಕ್ಕೆ ನಾಯಕಿಯಾಗಿ ಕಾಜಲ್ ಕುಂದರ್ಮತ್ತೊಮ್ಮೆ ಕನ್ನಡಿಗರನ್ನು ರಂಜಿಸಲು ಬರುತ್ತಿದ್ದಾರೆ. ಕಾಜಲ್ ಎಂದೊಡನೆ ಇವರೇನು ಬಾಲಿವುಡ್ನವರೇ….. ಎಂದು ಡೌಟ್ಆಯಿತೇ? ವಿವರಗಳಿಗಾಗಿ ಇಲ್ಲಿ ಗಮನಿಸಿ……!

`ಪೆಪೆ’ ಮತ್ತು `ಮೇಘಾ’ ಚಿತ್ರದಲ್ಲಿನ ಅಭಿನಯದಿಂದ ಕನ್ನಡಿಗರ ಮೆಚ್ಚಿಗೆ ಗಳಿಸಿರುವ ನಟಿ ಕಾಜಲ್ ಕುಂದರ್‌ `ಬಿಳಿಚುಕ್ಕಿ ಹಳ್ಳಿಹಕ್ಕಿ’ಯಲ್ಲಿ ನಾಯಕಿ ನಟಿಯಾಗಿ ನಟಿಸುತ್ತಿದ್ದಾರೆ.

`ಮಹಿರ’ ಖ್ಯಾತಿಯ ಮಹೇಶ್‌ ಗೌಡ ಸರ್‌ ನಟನೆ ಮತ್ತು ನಿರ್ದೇಶನದ `ಬಿಳಿಚುಕ್ಕಿ ಹಳ್ಳಿಹಕ್ಕಿ’ ಚಿತ್ರಕ್ಕೆ ನಾಯಕಿಯಾಗಿ ಕಾಜಲ್ ಕುಂದರ್‌ ನಟಿಸುತ್ತಿದ್ದಾರೆ.

1000142600

ತೊನ್ನು ಅಥವಾ ವೈಟ್‌ ಪ್ಯಾಚಸ್‌ (ವಿಟಿಲಿಗೊ) ಎಂಬ ಚರ್ಮ ಸಂಬಂಧಿತ ಖಾಯಿಲೆ ಸುತ್ತ ಚಿತ್ರದ ಕಥೆ ಸಾಗಲಿದ್ದು, ಅದನ್ನು ಕಮರ್ಷಿಯಲ್ ಧಾಟಿಯಲ್ಲಿ ಹೇಳುವ ಪ್ರಯತ್ನವನ್ನು ನಿರ್ದೇಶಕರು ಮಾಡಿದ್ದಾರೆ.

20241211_141418

ಈ ಚಿತ್ರ ವಿಭಿನ್ನ ಪೋಸ್ಟರ್‌ ಗಳ ಮೂಲಕ ಗಮನ ಸೆಳೆಯುತ್ತಿದ್ದು, ಚಿತ್ರಕ್ಕೆ ಈ ಮೊದಲು ವೈಷ್ಣವಿ ಗೌಡ ನಾಯಕಿ ಅಂತ ಗೊತ್ತಾಗಿತ್ತು, ಕಾರಣಾಂತರಗಳಿಂದ ಅವರ ಬದಲಿಗೆ ಕಾಜ್‌ ಕುಂದರ್‌ ಬಂದಿದ್ದಾರೆ.

ಹೊನ್ನುಡಿ ಪ್ರೊಡಕ್ಷನ್ಸ್ ಬ್ಯಾನರ್‌ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ರಿಯೋ ಆಂಟೋನಿ ಸಂಗೀತ ಮತ್ತು ಕಿರಣ್‌ ಸಿಎಟ್‌ಎಂರ ಛಾಯಾಗ್ರಹಣವಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್‌ ಹಂತದಲ್ಲಿರುವ ಚಿತ್ರತಂಡ ಶೀಘ್ರದಲ್ಲೇ ಬಿಡುಗಡೆ ದಿನಾಂಕವನ್ನು ಘೋಷಿಸಲು ಸಿದ್ಧತೆ ನಡೆಸಿದೆ.

20241211_141302

ಕಾಜಲ್ ಕುಂದರ್‌….. ಹೆಸರು ಕೇಳಿದಾಕ್ಷಣ ಪರಭಾಷಾ ನಟಿ ಎನಿಸಿದರೂ, ಇವರು ಕನ್ನಡದವರೆಂದು ಕೇಳಿ ಮೀಡಿಯಾದವರಿಗೆಲ್ಲಾ ಬಹಳ ಖುಷಿಯಾಯಿತು. ಮೂಲತಃ ಮಂಗಳೂರಿನವರಾದ ಕಾಜಲ್, ಮುಂಬೈನಲ್ಲಿಯೇ ನೆಲೆಸಿದ್ದು, ಸೊಗಸಾಗಿ ಕನ್ನಡ ಭಾಷೆಯ ಮೇಲೆ ಹಿಡಿತ ಹೊಂದಿದ್ದಾರೆ ಎಂಬುದು ಮತ್ತಷ್ಟು ಸಂತೋಷದ ವಿಷಯ.

`ಮಾಯಾ ಕನ್ನಡಿ, ಬಾಂಡ್‌ ರವಿ, ಕೆ.ಟಿ.ಎಂ, ಲೈನ್‌ ಮೆನ್‌, ಮೇಘಾ…..’ ಚಿತ್ರಗಳು ಸೇರಿದಂತೆ ಅನೇಕ ಚಿತ್ರಗಳಲ್ಲಿ ಕಾಜಲ್ ನಟಿಸಿದ್ದಾರೆ.

20241211_141155

ಸದ್ಯ ನಮ್ಮ ಕನ್ನಡ ಚಿತ್ರರಂಗದಲ್ಲಿ ಬೇಡಿಕೆಯ ನಟಿಯಾಗುವ ಎಲ್ಲಾ ಲಕ್ಷಣಗಳೂ ಕಾಜಲ್ ರಿಗೆ ಇದೆ. ಇವರಿಗೆ ಶುಭವಾಗಲಿ ಎಂದು ಗೃಹಶೋಭಾ ಹಾರೈಸುತ್ತಾಳೆ.

ಬಲು ರೊಮ್ಯಾಂಟಿಕ್‌ ಶೈಲಿಯಲ್ಲಿ ಸಾಗುವ ಈ ಚಿತ್ರ ನಗಿಸುತ್ತಲೇ ಅಳಿಸುವ, ಬಹುಕಾಲ ಕಾಡುವ, ಎಲ್ಲಾ ವಯೋಮಾನದ, ಅಭಿರುಚಿಗಳ ಪ್ರೇಕ್ಷಕರಿಗೂ ಪಥ್ಯವಾಗುವಂತೆ ಚಿತ್ರವನ್ನು ನಿರ್ದೇಶಕರು ಕಟ್ಟಿ ಕೊಟ್ಟಿದ್ದಾರೆ.

ರಾಘವೇಂದ್ರ ಅಡಿಗ ಎಚ್‌.ಎನ್

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ