ಶುಷ್ಕ, ನಿರ್ಜೀವ, ಸತತ ಉದುರುತ್ತಿರುವ ತಲೆಗೂದಲಿನಿಂದ ನೀವು ಟೆನ್ಶನ್ಗೆ ಒಳಗಾಗಿದ್ದೀರಾ? ಹಾಗಿದ್ದರೆ ಈಗ ನಿಮ್ಮ ಕೂದಲಿಗೆ ಪ್ರೋಟೀನ್ಟ್ರೀಟ್ಮೆಂಟ್ಅತ್ಯಗತ್ಯ….

ನಮ್ಮ ಕೂದಲಿನ 95% ಭಾಗ ಕೆರಾಟಿನ್‌ ಎಂಬ ಪ್ರೋಟೀನ್‌ ನಿಂದ ರೂಪುಗೊಂಡಿದೆ. ಈ ಪ್ರೋಟೀನ್‌ ಕೂದಲಿನ ಕ್ಯುಟಿಕಲ್ಸ್ ನ್ನು ಎಲ್ಲಾ ಕಡೆಯಿಂದಲೂ ಕವರ್‌ ಮಾಡಿ, ಒಂದು ಸುರಕ್ಷಾತ್ಮಕ ಪದರವಾಗಿ ಕಾಪಾಡುತ್ತದೆ, ಕೂದಲಿನ ಆರ್ದ್ರತೆಯನ್ನೂ ಉಳಿಸಿಕೊಡುತ್ತದೆ. ನಮ್ಮ ದೇಹದಲ್ಲಿ ಪ್ರೋಟೀನಿನ ಕೊರತೆ ಉಂಟಾದಾಗ ಯಾವ ರಾಸಾಯನಿಕ ಆರೈಕೆಯ ಅತ್ಯಧಿಕ ಬಳಕೆಯಾದಾಗ, ಕೂದಲು ಹೀಗೆ ಅಸ್ವಸ್ಥಗೊಂಡು, ನಿರ್ಜೀವವಾಗುತ್ತದೆ, ಕ್ರಮೇಣ ತನ್ನ ಸೌಂದರ್ಯ ಕಳೆದುಕೊಳ್ಳುತ್ತದೆ. ಇದರಿಂದಾಗಿ ಕೂದಲು ಬಲು ಡ್ರೈ ಆಗಿ, ಸತತ ಉದುರ ತೊಡಗುತ್ತದೆ. ಪ್ರೋಟೀನ್‌ ಟ್ರೀಟ್‌ ಮೆಂಟ್‌ ನಮ್ಮ ಕೂದಲಿಗೆ ಹೈಡ್ರೊಲೈಸ್ಡ್ ಪ್ರೋಟೀನ್‌ ಜೋಡಿಸುತ್ತದೆ ಹಾಗೂ ಮುಂದೆ ಕೂದಲಿಗೆ ಹಾನಿ ಆಗದಂತೆ ಕ್ಯುಟಿಕಲ್ಸ್ ನ ರಿಪೇರಿ ಮಾಡುತ್ತದೆ.

ಪ್ರೋಟೀನ್‌ ಟ್ರೀಟ್‌ ಮೆಂಟ್‌ ಅನೇಕ ವಿಧಗಳಲ್ಲಿ ಆಗುತ್ತದೆ. ಸೆಲೂನಿಗೆ ಹೋಗಿ ನೀವು ಕೂದಲಿಗಾಗಿ ಸಿಸ್ಟೇನ್‌/ಕೆರಾಟಿನ್ ಪ್ರೋಟೀನ್‌ ಟ್ರೀಟ್‌ ಮೆಂಟ್‌ ಪಡೆಯಬಹುದು ಅಥವಾ ಮನೆಯಲ್ಲೇ ಪ್ರೋಟೀನ್‌ ಹೇರ್‌ ಮಾಸ್ಕ್ ನಂಥ ಪ್ರೋಟೀನ್‌ ಆರೈಕೆ ಮಾಡಿಕೊಳ್ಳಬಹುದು. ಮನೆಮದ್ದಿಗಾಗಿ ಪ್ರತಿದಿನ ಸೂಕ್ತ ಪ್ರಮಾಣದ ಪ್ರೋಟೀನ್‌ ಸೇವನೆಯೂ ಅತಿ ಮುಖ್ಯ. ಇದರಿಂದ ನಿಮ್ಮ ಕೂದಲು ಸಶಕ್ತ, ಸ್ವಸ್ಥ ಆಗುತ್ತದೆ.

ಇದರ ಕುರಿತಾಗಿ ತಜ್ಞರು ಹೇಳುವುದೆಂದರೆ, ಕೆರಾಟಿನ್‌ ಟ್ರೀಟ್‌ ಮೆಂಟ್‌ ನಲ್ಲಿ ಕೂದಲಿನ ಒಳಭಾಗದಲ್ಲಿ ಬಾಂಡ್‌ ಸ್ಟ್ರಕ್ಚರ್‌ ನಲ್ಲಿ ಬದಲಾವಣೆ ತರಲು, ಕಡಿಮೆ ಪಿಂನ ಪ್ರೀಕರ್ಸರ್‌ ನಿಂದ ಹೇರ್‌ ಕ್ಯುಟಿಕ್ಸ್‌ ನ್ನು ಓಪನ್‌ ಮಾಡಬೇಕಾದುದು ಅನಿವಾರ್ಯ. ಕೆರಾಟಿನ್‌ ಟ್ರೀಟ್‌ ಮೆಂಟ್‌ ಕೂದಲನ್ನು ಸ್ವಸ್ಥವಾಗಿಸಲು ಡೈಸಲ್ಫೈಡ್‌ ಬಾಂಡ್‌ ನ್ನು ಮುರಿಯುತ್ತದೆ. ಇದು ತುಸು ಕ್ಲಿಷ್ಟಕರವಾದ ಬಾಂಡ್‌ ಬ್ರೇಕಿಂಗ್‌ ಆಗಿದೆ. ಹೀಗಾಗಿ ಇದರ ಪರಿಣಾಮ ಸಾಮಾನ್ಯವಾಗಿ 4-6 ತಿಂಗಳವರೆಗೂ ಉಳಿಯುತ್ತದೆ. ಆದರೆ ಸಿಸ್ಟೇನ್ ಟ್ರೀಟ್‌ ಮೆಂಟ್‌ ಡೈಸಲ್ಫೈಡ್‌ ಬಾಂಡ್‌ ನ್ನು ಪೂರ್ತಿ ಮುರಿಯದೆಯೇ, ಬಾಂಡ್‌ ನ್ನು ಮತ್ತೆ ವ್ಯವಸ್ಥಿತಗೊಳಿಸುತ್ತದೆ.

ಯಾರ ತಲೆಯ ನೆತ್ತಿ (ಸ್ಕಾಲ್ಪ್) ಭಾಗದ ಚರ್ಮ ಅತಿ ಸಂವೇದನಾಶೀಲ ಆಗಿರುತ್ತದೋ, ಅಲರ್ಜಿ ಇರುತ್ತದೋ, ಆಸ್ತಮಾದಂಥ ಉಸಿರಾಟದ ರೋಗವಿರುತ್ತದೋ, ಗರ್ಭವತಿ ಆಗಿದ್ದರೆ, ಸ್ತನ್ಯಪಾನ ಮಾಡಿಸುತ್ತಿದ್ದರೆ ಅಂಥವರಿಗೆ ವಿಶೇಷವಾಗಿ ಸಿಸ್ಟೇನ್‌ ಟ್ರೀಟ್ ಮೆಂಟ್‌ ಸರಿಹೊಂದುತ್ತದೆ. ಈ ಎರಡೂ ಬಗೆಯ ಚಿಕಿತ್ಸೆಗಳಲ್ಲಿ ಕೂದಲಿನಲ್ಲಿ ಕೆಮಿಕಲ್ ಬದಲಾವಣೆ ತರಲಿದೆ, ಹೀಗಾಗಿ ಹೇರ್‌ಸ್ಟ್ರೇಟ್‌ ನಿಂಗ್‌ ಗೆ ಹೋಲಿಸಿದಾಗ, ಇದು ಹೆಚ್ಚು ಪರಿಣಾಮಕಾರಿ.

ಹೆಚ್ಚಿನ ಲಾಭ

ಇದರಿಂದ ಹೆಚ್ಚಿನ ಲಾಭವಿದೆಯೇ ಎಂಬುದಕ್ಕೆ ತಜ್ಞರ ಅಭಿಪ್ರಾಯ, ಈ ಚಿಕಿತ್ಸೆ ಕೂದಲಿಗೆ ಉತ್ತಮ ವಿಧಾನ ಹಾಗೂ ನಂತರ ಸುಲಭವಾಗಿ ನಿಭಾಯಿಸಬಹುದಾಗಿದೆ. ಇದರಿಂದ ಕೂದಲು ಸ್ಟ್ರೇಟ್‌ಸ್ಮೂಥ್‌ ಆಗಲಿದೆ, ಹೀಗಾಗಿ ತಲೆ ಬಾಚುವಿಕೆ ಹಾಗೂ ಸ್ಟೈಲಿಂಗ್‌ ಸುಲಭ ಆಗಲಿದೆ. ಇದರಿಂದ ದಿನನಿತ್ಯದ ಗ್ರೂಮಿಂಗ್‌ ರೊಟೀನ್‌ ನಲ್ಲಿ ಸಮಯ ಉಳಿತಾಯಯವಾಗುತ್ತದೆ. ಕೆರಾಟಿನ್ ಟ್ರೀಟ್‌ ಮೆಂಟ್‌ ಸಿಸ್ಟೇನ್‌ ಟ್ರೀಟ್‌ ಮೆಂಟ್‌ ಗಿಂತಲೂ ಹೆಚ್ಚು ಸಶಕ್ತವಾಗಿದ್ದು, ಇದು ಗುಂಗುರು ಕೂದಲನ್ನು ಸ್ಟ್ರೇಟ್‌ ಗೊಳಿಸಲು ಹೆಚ್ಚು ನೆರವಾಗುತ್ತದೆ.

ಕೂದಲನ್ನು ಹೀಗೆ ಸಶಕ್ತಗೊಳಿಸಿ

ಇಂದಿನ ಅತ್ಯಾಧುನಿಕ ಟ್ರೆಂಡಿಂಗ್‌ ಪ್ರೋಟೀನ್‌ ಟ್ರೀಟ್‌ ಮೆಂಟ್‌ ಗಳಲ್ಲಿ ಒಂದು ಎಂದರೆ ಗೋದ್ರೆಜ್‌ ಪ್ರೊಫೆಶನ್‌ ನ ಬೊಟಾಸ್ಮೂಥ್. ಇದು ಒಂದು ವಿಧದ ಹೇರ್‌ ಬೊಟಾಕ್ಸ್ ಟ್ರೀಟ್‌ ಮೆಂಟ್‌ ಆಗಿದ್ದು, ಎಲ್ಲಾ ಬಗೆಯ ಕೂದಲಿನ ಸಿಸ್ಟೋರ್‌ರಿವೈವ್ ಮಾಡಲೆಂದೇ ಡಿಸೈನಗೊಳಿಸಲಾಗಿದೆ. ಇದು ಬ್ರೆಝಿಲಿಯನ್‌ ಫಾರ್ಮುಲೇಶನ್‌ ಟೆಕ್ನಿಕ್ಸ್ ನ್ನು ಬಳಸಿಕೊಳ್ಳುತ್ತದೆ, ಇದು ತನ್ನ ಫಾರ್ಮಾಲ್ಡಿ ಹೈಡ್‌ ಮುಕ್ತ ರಚನೆಗಳಿಗಾಗಿ ಪ್ರಸಿದ್ಧವಾಗಿದೆ.

ಈ ಚಿಕಿತ್ಸೆ ಹೆಚ್ಚೂಕಡಿಮೆ ಸುಮಾರು 3 ಘಂಟೆಗಳ ಕಾಲ ನಡೆಯುತ್ತದೆ. ಇದರ ಪರಿಣಾಮ ಸುಮಾರು 4 ತಿಂಗಳವರೆಗೂ ಉಳಿಯುತ್ತದೆ. ಈ ಪ್ರಕ್ರಿಯೆಯಲ್ಲಿ ಇಡೀ ಕೂದಲಿಗೆ ಪ್ರೋಟೀನ್‌ ಚಿಕಿತ್ಸೆಯು ಒಂದೇ ರೀತಿಯಲ್ಲಿರುತ್ತದೆ. ತಲೆಗೂದಲನ್ನು ಚೆನ್ನಾಗಿ ತೊಳೆದ ನಂತರ ಈ ಉತ್ಪನ್ನನ್ನು ಅದಕ್ಕೆ ಹಚ್ಚಿ, 13-15 ನಿಮಿಷಗಳವರೆಗೂ ತೆಳು ಪದರ ಆಗಿಸಿ, ಬ್ಲೋ ಡ್ರೈ ಪ್ರೆಸ್‌ ಮಾಡಲಾಗುತ್ತದೆ. ಇದರ ತಾಪಮಾನ 2000 ಸೆ. ಗಿಂತ ಅಧಿಕ ಆಗಿರಬಾರದು.

ಹೀಗೆ ಮತ್ತೊಮ್ಮೆ ಕೂದಲನ್ನು ತೊಳೆದು ಬ್ಲೋ ಡ್ರೈ ಮಾಡಿದ ನಂತರ, ಹೊಸ ಪ್ರೋಟೀನ್‌ ಆರೈಕೆಯಿಂದ ಕೂದಲು ಪುನರ್ಜೀವಿತಗೊಂಡು, ಸಶಕ್ತ ಆಗುತ್ತದೆ. ಇದು ಕೂದಲನ್ನು ಅತಿ ಮೃದು ಹಾಗೂ ಕಾಂತಿಯುತಗೊಳಿಸುತ್ತದೆ. ಜೊತೆಗೆ ಇದು ಕೂದಲನ್ನು ಅತಿ ಹೆಚ್ಚು ಮ್ಯಾನೇಜೆಬಲ್ ಮಾಡುತ್ತದೆ. ಇದರಿಂದ ಇಡೀ ದಿನ ಕೂದಲು ಫಳಫಳ ಹೊಳೆಯುತ್ತದೆ. ದಿನವಿಡೀ ಆಫೀಸಿನಲ್ಲಿ ದುಡಿಯುವ ಹೆಂಗಸರಿಗೆ ಈ ಆರೈಕೆ ಅತಿ ಅಗತ್ಯ. ಅವರ ಬಳಿ ಮನೆಯಲ್ಲಿ ಕೂದಲಿನ ಪ್ರತ್ಯೇಕ ಆರೈಕೆಗೆ ಪುರಸತ್ತು ಎಲ್ಲಿರುತ್ತದೆ?

ಪ್ರೋಟೀನ್ಆರೈಕೆ ಅತ್ಯಗತ್ಯ

ಸ್ವಸ್ಥ ಪೋಷಣೆ ಬಯಸುವ ಕೂದಲಿಗೆ ಪ್ರೋಟೀನ್‌ ಒಂದು ಅತ್ಯಗತ್ಯ ಪೋಷಕಾಂಶವಾಗಿದೆ. ಇದರ ಕೊರತೆಯಿಂದಾಗಿ ನಿಮ್ಮ ಕೂದಲು ಶುಷ್ಕ, ನಿರ್ಜೀವ, ಹಾನಿಗ್ರಸ್ತ, ಸತತ ಉದುರು ಕೂದಲಾಗಬಹುದು. ಕೂದಲಿನಲ್ಲಿ ಅತ್ಯಧಿಕ ಪ್ರೋಟೀನ್‌ ಹಾನಿಯ ಕಾರಣದಿಂದಲೂ ಕೂದಲು ಉದುರತೊಡಗುತ್ತದೆ. ದೈನಂದಿನ ಆಹಾರದ ಜೊತೆ ಆವಶ್ಯಕ ಸಪ್ಲಿಮೆಂಟ್ಸ್ ಬಳಸಿಕೊಂಡು, ಅತ್ಯಗತ್ಯ ಪ್ರೋಟೀನಿನ ಪೂರೈಕೆ ಆಗಬೇಕಿದೆ. ಅಂಥ ಹೆಂಗಸರ ಕೂದಲು ಮಾತ್ರವೇ ಅತಿ ಮೃದುಗೊಂಡು, ಪೋಷಣೆ ಪಡೆದಿರುವ ಸಾಧ್ಯತೆ ಇರುತ್ತದೆ. ಏನೇ ಇರಲಿ, ವಿಶ್ವದೆಲ್ಲೆಡೆ ಎಷ್ಟೋ ಮಹಿಳೆಯರು ಅಪೌಷ್ಟಿಕ ಆಹಾರ, ಹವಾಮಾನ ಪರಿಸ್ಥಿತಿ, ಇನ್ನಿತರ ಕಾರಣಗಳಿಂದ ಪ್ರೋಟೀನ್‌ ಕೊರತೆಯ ಹಿಂಸೆಗೆ ಗುರಿಯಾಗುತ್ತಾರೆ.

2017ರಲ್ಲಿ ಹಾರ್ವರ್ಡ್ ಯೂನಿರ್ಸಿಟಿಯ ಒಂದು ಅಧ್ಯಯನದ ಪ್ರಕಾರ, ಜಾಗತಿಕ ಮಟ್ಟದಲ್ಲಿ 75%ಗೂ ಅಧಿಕ ಮಂದಿಗೆ ಸಸ್ಯಗಳಿಂದಲೇ ಅಗತ್ಯ ಪ್ರಮಾಣದ ಪ್ರೋಟೀನ್‌ ಸಿಗುತ್ತದೆ, ಎಂದು ತಿಳಿದುಬಂದಿದೆ. ಆದರೆ ಮುಂದಿನ 2050ರ ಹೊತ್ತಿಗೆ ವಿಶ್ವವಿಡೀ ಸುಮಾರು 150 ಮಿಲಿಯನ್‌ ಮಂದಿಗೆ ಪ್ರೋಟೀನಿನ ಕೊರತೆಯ ಅಪಾಯವಿದೆ. ಕೂದಲಿನಲ್ಲಿ ಪ್ರೋಟೀನಿನ ಕೊರತೆಗೆ ಮತ್ತೊಂದು ಕಾರಣ ಹೇರ್‌ ಸ್ಟೈಲಿಂಗ್‌, ಕಲರಿಂಗ್‌ ಹಾಗೂ ಅನ್ಯ ಆಧಾರಿತ ಚಿಕಿತ್ಸೆಗಳಿವೆ. ಸಂಶೋಧನೆಯಿಂದ ತಿಳಿದು ಬಂದಿದ್ದು, ಕೂದಲಿಗೆ ಕಲರಿಂಗ್‌, ಸ್ಟೇಟ್‌ ನಿಂಗ್‌ ನಂಥ ರಾಸಾಯನಿಕ ಚಿಕಿತ್ಸೆ ಒದಗಿಸುವುದರಿಂದ ಕೂದಲಿನ ಪ್ರೋಟೀನ್ ಹಾಳಾಗುತ್ತದೆ ಎಂದು ದೃಢಪಟ್ಟಿದೆ. ಮತ್ತೆ ಮತ್ತೆ ಕೂದಲಿಗೆ ಕೆಮಿಕಲ್ ಯುಕ್ತ ಬಣ್ಣ ಹಾಕಿಸುವುದರಿಂದ, ಸ್ಟ್ರೇಟ್‌ ನಿಂಗ್ ಮಾಡಿಸುವುದರಿಂದ, ಕೂದಲಿನಲ್ಲಿ ಪ್ರೋಟೀನ್‌ ಹಾನಿ 356% ಹೆಚ್ಚಾಗಲಿದೆ!

ವಿಶ್ವವಿಡೀ ಹೆಂಗಸರು ಪ್ರೋಟೀನ್‌ ಕೊರತೆಯಿಂದ ಬಳಲುತ್ತಿರುವುದರಿಂದ, ಆಗಾಗ ತಮ್ಮ ಕೂದಲನ್ನು ಸ್ಟ್ರೇಟ್‌ ಯಾ ಕಲರ್ ಮಾಡಿಸುವ ಅಭ್ಯಾಸ ತೊರೆಯಬೇಕು. ಈ ಪ್ರೋಟೀನ್‌ ಕೊರತೆಯನ್ನು ನೀಗಿಸಲು, ಸಮತೋಲನ ಕಾಯ್ದುಕೊಳ್ಳಲು ಪ್ರೋಟೀನ್ ಟ್ರೀಟ್‌ ಮೆಂಟ್‌ ಅತ್ಯಗತ್ಯವಾಗುತ್ತದೆ. ಇದು ಕೂದಲಿನ ಬುಡದಿಂದಲೇ ಅಗತ್ಯ ಪ್ರಮಾಣದ ಪ್ರೋಟೀನ್‌ ನ್ನು ಒದಗಿಸುತ್ತದೆ. ಇದರಿಂದ ಅಂಥವರ ಕೂದಲು ಸಹ ದಟ್ಟ, ಸಶಕ್ತ, ಒತ್ತಾಗಿ, ಫಳಫಳ ಹೊಳೆಯುತ್ತದೆ. ಇದರಿಂದ ಸತತ ಕೂದಲು ಉದುರುವಿಕೆಯ ಸಮಸ್ಯೆಯೂ ದೂರವಾಗುತ್ತದೆ. ಸಹಜವಾಗಿ ಕೂದಲಿನ ಅಂದ ಹೆಚ್ಚಿ, ಸ್ವಸ್ಥವಾಗುತ್ತದೆ.

ಆರೈಕೆ ಯಾವಾಗ ಅಗತ್ಯ?

ಕೂದಲಿನ ಕ್ಯುಟಿಕಲ್ಸ್ ನಲ್ಲಿ ಅಧಿಕ ಗ್ಯಾಪ್‌ ಯಾ ಛೇದ ಉಂಟಾದಾಗ, ಈ ರೀತಿಯ ಪ್ರೋಟೀನ್‌ ಟ್ರೀಟ್‌ ಮೆಂಟ್ ಅತ್ಯಗತ್ಯವಾಗುತ್ತದೆ. ಈ ಚಿಕಿತ್ಸೆ ಕೂದಲಿನ ಕ್ಯುಟಿಕಲ್ಸ್ ನ ಖಾಲಿ ಜಾಗಗಳನ್ನು ತುಂಬಿಸುತ್ತದೆ, ಆರ್ದ್ರತೆ ಉಳಿಯುಂತೆ ಮಾಡುತ್ತದೆ. ಇದು ಕೂದಲನ್ನು ಸಶಕ್ತ ಹಾಗೂ ಸ್ವಸ್ಥಗೊಳಿಸುತ್ತದೆ, ಹಾಗಾಗಿ ಕೂದಲು ಉದುರುವುದು ಸಹ ನಿಂತುಹೋಗುತ್ತದೆ.

ಕೂದಲಿಗೆ ಪ್ರೋಟೀನ್‌ ಟ್ರೀಟ್‌ ಮೆಂಟ್‌ ನ್ನು ಸೆಲೂನ್‌/ಬ್ಯೂಟಿ ಪಾರ್ಲರ್‌ ಗಳಲ್ಲಿ ಪ್ರೊಫೆಶನಲ್ಸ್ ರಿಂದ ಪಡೆಯಬಹುದು. ಅನಿವಾರ್ಯವಾಗಿ ಮನೆಯಲ್ಲೇ ಮಾಡಿಕೊಳ್ಳಬೇಕಾದಾಗ ಹೇರ್‌ ಮಾಸ್ಕ್ ಯಾ ನೈಸರ್ಗಿಕ ಸಾಮಗ್ರಿ ಬಳಸಿಕೊಳ್ಳಬೇಕು.

ಮನೆಮದ್ದಿಗಾಗಿ ಬೇಕಾದ ಪ್ರೋಟೀನ್‌ ಮಾಸ್ಕ್ ತಯಾರಿಸಿಕೊಂಡ ನಂತರ, (ರೆಡಿಮೇಡ್‌ ಕೊಂಡರೂ ಸರಿ) ಈ ಕೆಳಗಿನ ವಿಧಾನ ಅನುಸರಿಸಿ :

ಮೊದಲು ನಿಮ್ಮ ಕೈ ಮೇಲೆ ಕೆಲವು ಹನಿ ಪ್ರೋಟೀನ್‌ ಮಾಸ್ಕ್ ಹಾಕಿಕೊಳ್ಳಿ. ಇದನ್ನು ನಿಮ್ಮ ಸ್ಕಾಲ್ಪ್ ಗೆ ಹಚ್ಚಿ, ಚೆನ್ನಾಗಿ ಮಸಾಜ್ ಮಾಡಿ, ಕೂದಲಿನ ತುದಿಯವರೆಗೂ ತೀಡಬೇಕು.

ಹೀಗೆ ಮಾಸ್ಕ್ ತೀಡಿಕೊಂಡ ನಂತರ, ನಿಮ್ಮ ಕೂದಲನ್ನು ಬಿಸಿಲಿಗೊಡ್ಡಿ ಒಣಗಿಸಬೇಕು. (ಡ್ರೈಯರ್‌ ಬಳಕೆ ಬೇಡ) ಇಲ್ಲವೇ ಟರ್ಕಿ ಟವೆಲ್ ‌ನ್ನು  ಬಿಸಿ ನೀರಲ್ಲಿ ಅದ್ದಿ ಹಿಂಡಿ, ಕೂದಲಿಗೆ ಬಿಗಿಯಾಗಿ ಸುತ್ತಿಡಿ. ಆಗ ಮಾತ್ರವೇ ಕೂದಲು ಪ್ರೋಟೀನ್‌ ನ್ನು ಒಳಗೆ ಎಳೆದುಕೊಳ್ಳಲು ಸಾಧ್ಯ.

ಮಾಸ್ಕ್ ತೀಡಿಕೊಂಡ ನಂತರ, ಅರ್ಧ ಗಂಟೆ ಹಾಗೇ ನೆನೆಯಲು ಬಿಡಿ. ಆ ನಂತರ ತಣ್ಣೀರಿನಿಂದ ಕೂದಲನ್ನು ತೊಳೆಯಿರಿ.

ಗಿರಿಜಾ ಪ್ರಸನ್ನ

ಕೂದಲಿಗೆ ಪ್ರೋಟೀನ್ಸ್ರೋತ

ನಿಮ್ಮ ವಯಸ್ಸು, ಆನುಂಶೀಯತೆ (ಜೆನೆಟಿಕ್ಸ್) ಇತ್ಯಾದಿ ಬದಲಾಯಿಸಲು ಸಾಧ್ಯವೇ ಇಲ್ಲ. ಆದರೆ ಸೇವಿಸುವ ಆಹಾರ ನಮ್ಮ ನಿಯಂತ್ರಣದಲ್ಲೇ ಇದೆ. ಹೀಗಾಗಿ ಪ್ರೋಟೀನ್‌ ಯುಕ್ತ ಆಹಾರವನ್ನೇ ಸೇವಿಸಬೇಕು, ಆಗ ಅದರ ಕೊರತೆ ನೀಗುತ್ತದೆ.

ಮೊಟ್ಟೆ : ಇದು ಪ್ರೋಟೀನ್‌ ಬಯೋಟಿನ್‌ ಗಳ ದೊಡ್ಡ ಸ್ರೋತ. ಕೂದಲಿನ ಉತ್ತಮ ಬೆಳವಣಿಗಾಗಿ ಇದರ ಸೂಕ್ತ ಪ್ರಮಾಣದ ಸೇವನೆ ಅತ್ಯಗತ್ಯ, ಏಕೆಂದರೆ ಕೂದಲಿನ ಬಹುತೇಕ ಭಾಗ ಪ್ರೋಟೀನ್‌ಅಂಶದಿಂದಲೇ ಕೂಡಿದೆ.

ಬೀನ್ಸ್ : ಸಸ್ಯಮೂಲದಲ್ಲಿ ಬೀನ್ಸ್ ಅಂದರೆ ಹುರುಳಿಕಾಯಿ, ಚಪ್ಪರದವರೆಯ ನಾನಾ ವಿಧ, ಅವರೆಕಾಳು, ಹೆಸರುಕಾಳು, ಹುರುಳಿಕಾಳು ಇತ್ಯಾದಿಗಳನ್ನು ಆಗಾಗ ಸೇವಿಸಬೇಕು. ಇದನ್ನು ಮೊಳಕೆ ಕಟ್ಟಿಸಿ ಸೇವಿಸಿದಷ್ಟೂ ಲಾಭ ಹೆಚ್ಚು. ಕೂದಲಿನ ರಿಪೇರಿಗೆ ಇದು ಅತ್ಯಗತ್ಯ. ಇದರ 100 ಗ್ರಾಂ ಬಳಕೆಯಿಂದ ಡೇಲಿ ಬೇಕಾಗುವ ಝಿಂಕ್‌ ನ 7% ಸುಲಭವಾಗಿ ಸಿಗುತ್ತದೆ. ಕಬ್ಬಿಣಾಂಶ, ಬಯೋಟಿನ್‌, ಫಾಲೆಟ್‌ ಗಳಂಥ ಕೂದಲಿನ ಪೋಷಕಾಂಶಗಳ ಭಂಡಾರವೇ ಇದಾಗಿದೆ.

ಮಾಂಸ : ಇದು ಪೋಷಕಾಂಶಗಳಿಂದ ತುಂಬಿರುತ್ತದೆ. ಇದರಲ್ಲಿನ ಪ್ರೋಟೀನ್‌ ಕೂದಲಿನ ಬೆಳವಣಿಗೆಗೆ ಪೂರಕ. ಇದನ್ನು ಬಳಸಲಾಗದವರು ಧಾರಾಳವಾಗಿ ಸೋಯಾ ಬಳಸಿಕೊಳ್ಳಬಹುದು. ಇದು ಅಷ್ಟೇ ಪ್ರಭಾವಶಾಲಿಯಾಗಿದೆ.

ಬೇಳೆ : ಪ್ರತಿಯೊಂದು ಬೇಳೆಯೂ ಉತ್ತಮ ಪ್ರೋಟೀನ್‌ ಸೋರ್ಸ್‌ ಆಗಿದೆ, ಹೀಗಾಗಿ ದಿನ ಬಿಟ್ಟು ದಿನ ಇದನ್ನು ಅಡುಗೆಯಲ್ಲಿ ಬಳಸಿರಿ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ