ಬಿಗ್ ಬಾಸ್ OTT 3 ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದ ವಡಾ ಪಾವ್ ಹುಡುಗಿ ಚಂದ್ರಿಕಾ ದೀಕ್ಷಿತ್, ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ಬಗ್ಗೆ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ.
ಚಂದ್ರಿಕಾ ದೀಕ್ಷಿತ್ ತಮ್ಮ ಪತಿ ಯುಗಮ್ ಗೆರಾ ಅವರೊಂದಿಗಿನ ನಿರಂತರ ಬಿರುಕುಗಾಗಿ ಸುದ್ದಿಯಲ್ಲಿದ್ದಾರೆ. ಈಗ ಮತ್ತೊಮ್ಮೆ, ಚಂದ್ರಿಕಾ ತಮ್ಮ ವೃತ್ತಿಪರ ಜೀವನದ ಬಗ್ಗೆ ಬಹಿರಂಗಪಡಿಸಿದ್ದಾರೆ. ಉದ್ಯಮಿಯೊಬ್ಬರು ಒಂದು ರಾತ್ರಿ ಆತನೊಂದಿಗೆ ಕಳೆಯಲು 50 ಲಕ್ಷ ರೂಪಾಯಿ ಆಫರ್ ನೀಡಿದ್ದರು ಎಂದು ಹೇಳಿದ್ದಾರೆ.
ಚಂದ್ರಿಕಾ ದೀಕ್ಷಿತ್ ಸಂದರ್ಶನದಲ್ಲಿ ಉದ್ಯಮಿಯೊಬ್ಬರು ತನ್ನೊಂದಿಗೆ ಒಂದು ರಾತ್ರಿ ಕಳೆಯಲು ದೊಡ್ಡ ಮೊತ್ತದ ಹಣ ನೀಡಿರುವುದಾಗಿ ಹೇಳಿಕೊಂಡಿದ್ದಾರೆ.
ಸಿದ್ಧಾರ್ಥ್ ಕಣ್ಣನ್ ತಮ್ಮ ಸಂದರ್ಶನದಲ್ಲಿ ಚಂದ್ರಿಕಾಗೆ ಇದಕ್ಕೆ ಸಂಬಂಧಿಸಿದ ಪ್ರಶ್ನೆಯನ್ನು ಕೇಳಿದ್ದರು. ಈ ಬಗ್ಗೆ ಮಾತನಾಡಿದ ಚಂದ್ರಿಕಾ, ನನ್ನ ಬಳಿ ಪುರಾವೆಗಳು ಮತ್ತು ಇಮೇಲ್‌ಗಳಿವೆ. ಒಬ್ಬ ಪ್ರಮುಖ ಉದ್ಯಮಿ ನನಗೆ, ‘ಎಂದು, ಯಾವಾಗ ಅಂತ ನೀವು ನಿರ್ಣಯಿಸಿ, ಆದರೆ ಸ್ಥಳವನ್ನು ನಾನು ತೀರ್ಮಾನಿಸುತ್ತೇನೆ. ನಾನು ನಿಮಗೆ 50 ಲಕ್ಷ ರೂಪಾಯಿಗಳನ್ನು ಕೊಡುತ್ತೇನೆ. ಆದ್ದರಿಂದ ನಿಮಗೆ ಏನು ಬೇಕು ಎಂದು ಹೇಳಿ ಎಂದು ಕೇಳಿದ್ದರು. ಈ ಬಗ್ಗೆ ಮತ್ತಷ್ಟು ವಿಷಯ ಬಹಿರಂಗಪಡಿಸಿ ವಡಾ ಪಾವ್ ಗರ್ಲ್‌ನ ಗೆಳೆಯ ಸೈಫಿ, ಅವಳಿಗೆ ಇಮೇಲ್ ಬಂದಿದ್ದು ನಿಜ. ಒಬ್ಬ ಉದ್ಯಮಿ ಚಂದ್ರಿಕಾಳನ್ನು ದುಬೈಗೆ ಆಹ್ವಾನಿಸಿದ್ದರು ಎಂದು ಹೇಳಿದ್ದಾರೆ.
ರಾಜಿ ಮಾಡಿಕೊಳ್ಳದಿದ್ದರೆ ಏನು ನಡೆಯಲ್ಲ. ತನ್ನ ವೃತ್ತಿಜೀವನ ಇಲ್ಲಿಗೆ ಅಂತ್ಯಗೊಳ್ಳುತ್ತದೆ ಎಂದರು. ಚಂದ್ರಿಕಾಳ ಈ ವಿಚಾರಗಳನ್ನು ಬಹಿರಂಗಪಡಿಸುತ್ತಿದ್ದಂತೆ ಅನೇಕ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನು ಕೆಲವರು ಸುಳ್ಳು ಎಂದು ತಳ್ಳಿಹಾಕಿದರೆ, ಪಾಡ್‌ಕ್ಯಾಸ್ಟ್ ಸಮಯದಲ್ಲಿ, ಚಂದ್ರಿಕಾ ತನ್ನ ಮಗನನ್ನು ಬೆಳೆಸಲು ಯಾರೊಂದಿಗಾದರೂ ಮಲಗುತ್ತೇನೆ ಎಂದು ಹೇಳಿದ್ದರು. ಆದಾಗ್ಯೂ, ಈ ಹೇಳಿಕೆಯು ಟ್ರೋಲಿಂಗ್‌ಗೂ ಕಾರಣವಾಗಿತ್ತು.





