ಈಗಾಗಲೇ ಸಣ್ಣಪುಟ್ಟ ಪಾತ್ರಗಳಲ್ಲಿ ಬಂದು, ಇದೀಗ ಪೂರ್ಣ ಪ್ರಮಾಣದ ನಾಯಕಿಯಾಗಿ ಕನ್ನಡದಲ್ಲಿ ನಟಿಸುತ್ತಿರುವ ಅಪ್ಪಟ ಕನ್ನಡತಿ ಯಶಾ ಶಿವಕುಮಾರ್ಇಲ್ಲಿ ತಮ್ಮ ಬಗ್ಗೆ ಏನು ಹೇಳಿಕೊಂಡಿದ್ದಾರೆ.....? 

ಯಶಾ ಶಿವಕುಮಾರ್‌ ಕನ್ನಡದ ಒಬ್ಬ ಅಪರೂಪದ ನಟಿ. ಹರಿಪ್ರಸಾದ್‌ ಜಯಣ್ಣ ನಿರ್ದೇಶನದಲ್ಲಿ ಯೋಗರಾಜ್‌ ಭಟ್‌ ಮತ್ತು ರವಿ ಶಾಮನೂರ್‌ ಜಂಟಿಯಾಗಿ ನಿರ್ಮಿಸುತ್ತಿರುವ `ಪದವಿಪೂರ್ವ' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು.

ಶಿವರಾಜ್‌ ಕುಮಾರ್‌, ಪೃಥ್ವಿ ಅಂಬಾರ್‌ ಮುಖ್ಯ ಭೂಮಿಕೆಯಲ್ಲಿರುವ `ಬೈರಾಗಿ,' ಧನಂಜಯ ಅಭಿನಯದ `ಮಾನ್‌ ಸೂನ್‌ ರಾಗ' ಸಿನಿಮಾಗಳಲ್ಲಿ ಈಗಾಗಲೇ ಸಣ್ಣ ಪುಟ್ಟ ಪಾತ್ರಗಳ ಮೂಲಕ ಕಾಣಿಸಿಕೊಂಡಿದ್ದರು. ಆ ಪೈಕಿ `ಮಾನ್‌ ಸೂನ್‌ ರಾಗ' ಇವರಿಗೆ ಹೆಚ್ಚಿನ ಹೆಸರು ತಂದುಕೊಟ್ಟಿತು. ಮಾಡೆಲಿಂಗ್‌ ಮಾಡುತ್ತಿದ್ದ ಇವರು ಬೆಂಗಳೂರಿನ ಹುಡುಗಿ. ಮೂಡಬಿದರೆ ಆಳ್ವಾಸ್‌ ಕಾಲೇಜ್‌ ನಲ್ಲಿ ಎಂಜಿನಿಯರಿಂಗ್‌ ಮಾಡಿದ್ದು, ಆ ಸಮಯದಲ್ಲೇ ರಾಜ್‌ ಬಿ ಶೆಟ್ಟಿಯವರ `ಸೌಂಡ್ಸ್ ಲೈಟ್ಸ್' ಎನ್ನುವ ತುಳು ಸಿನಿಮಾಗೆ ನಾಯಕಿಯಾಗಿ ಆಯ್ಕೆ ಆಗಿದ್ದರು.

ಸೌಂದರ್ಯ ಸ್ಪರ್ಧೆಗಳಲ್ಲಿ ಮುಂದು

2019ರ ವರ್ಷದಲ್ಲಿ `ಫ್ಯಾಷನ್‌ ಎಬಿಸಿಡಿ' ಸಂಸ್ಥೆ ಆಯೋಜಿಸಿದ್ದ `ಮಿಸ್‌ ಬೆಂಗಳೂರು 2019, ಮಿಸ್‌ ಕರ್ನಾಟಕ ಇಂಟರ್‌ ನ್ಯಾಷನಲ್ 2019' ಹಾಗೂ ಮುಂಬೈನಲ್ಲಿ ನಡೆದ `ಮಿಸ್‌ ಗ್ಲೋರಿ ಆಫ್‌ ಗ್ಯಾಲಕ್ಸಿ 2019' ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾಗಿದ್ದರು.

ನಾಟ್ಯ ಕಲೆಯಲ್ಲಿ ಪ್ರವೀಣೆ

ಇವರು ನೃತ್ಯ ಕಲಾವಿದೆಯೂ ಹೌದು. ಭರತನಾಟ್ಯ, ಕಥಕ್‌, ಫ್ರೀ ಸ್ಟೈಲ್‌, ಮಣಿಪುರಿ, ಜಾನಪದ ಕಲಾ ನೃತ್ಯಗಳಲ್ಲಿ ಇವರು ಪರಿಣಿತರಾಗಿದ್ದಾರೆ. ದೇಶದ ಅತ್ಯಂತ ಸುಪ್ರಸಿದ್ಧ ವಸ್ತ್ರ ವಿನ್ಯಾಸಕರು ಮತ್ತು ಛಾಯಾಗ್ರಾಹಕರುಗಳೊಂದಿಗೆ ಕೆಲಸ ಮಾಡಿರುವ ಅನುಭವವನ್ನೂ ಇವರು ಹೊಂದಿದ್ದಾರೆ. ತೆಲುಗಿನಲ್ಲೂ ಮಿಂಚುತ್ತಿರುವ ಯಶಾಕನ್ನಡ ಮಾತ್ರವಲ್ಲದೆ, ತೆಲುಗಿನಲ್ಲಿ ಕೂಡ ಯಶಾ ಅಭಿನಯಿಸಿದ್ದಾರೆ. ಸಾಯಿರಾಮ್ ಶಂಕರ್‌ ನಾಯಕನಾಗಿರುವ ಸಿನಿಮಾದಲ್ಲಿ ಯಶಾ ನಾಯಕಿಯಾಗಿ ಅಭಿನಯಿಸಿದ್ದಾರೆ.

`ದಂತಕಥೆ' ಎನ್ನುವ ಸಿನಿಮಾದಲ್ಲಿ ಸಹ ಅವರದು ಪ್ರಮುಖ ಪಾತ್ರ. ಉತ್ತಮ ಕಂಟೆಂಟ್‌ ಇರುವಂಥ, ಜನರ ಮನಸ್ಸಿನಲ್ಲಿ ಉಳಿಯುವ ಪಾತ್ರ ಮಾಡುವ ಆಸೆ ಇವರು ನಟಿ ಯಶಾ. ಇಷ್ಟಾನಿಷ್ಟಗಳು ಈಕೆಗೆ ಸ್ನೇಹಿತರೆಂದರೆ ತುಂಬಾ ಇಷ್ಟ. ಹಾಗೆಯೇ ನಾಯಿ ಅಂದ್ರೆ ಬಹಳ ಇಷ್ಟ. ಶಾಪಿಂಗ್‌ ಕ್ರೇಜ್‌ ಇದೆ. ಡ್ಯಾನ್ಸ್ ಅಂದ್ರೆ ಪಂಚಪ್ರಾಣ ಎನ್ನುವುದು ವಿಶೇಷ.

ಹುಟ್ಟಿ ಬೆಳೆದದ್ದೆಲ್ಲಾ ಬೆಂಗಳೂರಿನಲ್ಲೇ, ಓದಿದ್ದೂ ಅಲ್ಲಿಯೇ. ಮೊದಲಿನಿಂದಲೂ ನನಗೆ ನಟನೆ, ಭರತನಾಟ್ಯದಲ್ಲಿ ಆಸಕ್ತಿ ಇತ್ತು. ಡಿಗ್ರಿ ಮಾಡಲು ಮೂಡಬಿದಿರೆಯ ಆಳ್ವಾಸ್‌ ಕಾಲೇಜಿಗೆ ಸೇರಿದೆ. ಅಲ್ಲಿ ಕಥಕ್‌, ಮಣಿಪುರಿ ಮೊದಲಾದ ನೃತ್ಯಗಳನ್ನು ಕಲಿತುಕೊಂಡೆ.

ತುಳು ಚಿತ್ರದಲ್ಲೂ ನಟನೆ

ಜೊತೆಗೆ ತುಳು ಭಾಷೆಯನ್ನೂ ಚೆನ್ನಾಗಿ ಕಲಿತುಕೊಂಡೆ. ಇದರಿಂದಾಗಿ ನನಗೆ ರಾಜ್‌. ಬಿ. ಶೆಟ್ಟಿ ಅವರ ತಂಡ ನಿರ್ಮಾಣ ಮಾಡುತ್ತಿರುವ `ರಾಜ್‌ ಸೌಂಡ್ಸ್ ಲೈಟ್ಸ್' ಎನ್ನುವ ತುಳು ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತು, ಎನ್ನುತ್ತಾರೆ.

ಇಲ್ಲಿಂದ ನನ್ನ ಸಿನಿ ಜರ್ನಿ ಶುರುವಾಯಿತು. ಇದಾದ ನಂತರ ನಾನು ಮಾಡೆಲಿಂಗ್‌ ನಲ್ಲಿ ಇರುವಾಗಲೇ ಯೋಗರಾಜ್‌ ಭಟ್‌ ರನ್ನು ಭೇಟಿಯಾಗಿ ಆಡಿಷನ್‌ ಕೊಟ್ಟು ಬಂದಿದ್ದೆ, ಕೆಲವು ದಿನಗಳ ನಂತರ ಅವರು ಕಾಲ್ ‌ಮಾಡಿ ನಾನು ಆಯ್ಕೆಯಾಗಿರುವ ವಿಷಯ ತಿಳಿಸಿದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ