ಸೆಕ್ಸ್ ರಿಲೇಶನ್ಶಿಪ್ಕುರಿತ ಚರ್ಚೆ ಅವಮಾನಕರವಲ್ಲ! ಕಂಟೆಂಟ್ಕ್ರಿಯೇಟರ್‌, ಎಂಪವರ್ಮೆಂಟ್ಅವಾರ್ಡ್

ಸೆಕ್ಸ್ ಕುರಿತಾಗಿ ಮಾತನಾಡುವುದು ನಮ್ಮಲ್ಲಿ ಟ್ಯಾಬೂ ಎಂದೇ ಭಾವಿಸಲಾಗಿತ್ತು, ಆ ಸಮಯದಲ್ಲಿ ಲೀಜಾ ಮಂಗಳಾದಾಸ್ ಸೆಕ್ಶುಯೆಲ್ ‌ಡಿಸೈನರ್‌ಆರ್ಗಸಂ ಕುರಿತಾಗಿ ತಮ್ಮ ಸೋಶಿಯಲ್ ಹ್ಯಾಂಡ್‌ ನಲ್ಲಿ ಚರ್ಚಿಸಲು ಆರಂಭಿಸಿದರು. ಅವರ ಈ ನಿರ್ಭೀತಿಯ, ಆತ್ಮವಿಶ್ವಾಸ ತುಂಬಿದ ನಡೆ, ಮುಂದೆ ಇವರನ್ನು ಎತ್ತರಕ್ಕೇರಿಸಿತು. ಹಾಗಾಗಿಯೇ ಈ ಇವೆಂಟ್‌ ನಲ್ಲಿ ಈಕೆಯನ್ನು ಡಿಜಿಟಲ್ ಕಂಟೆಂಟ್‌ ಕ್ರಿಯೇಟರ್‌ ಎಂಪವರ್ಮೆಂಟ್‌ ಅವಾರ್ಡ್‌ ನಿಂದ ಸನ್ಮಾನಿಸಲಾಯಿತು!

ಲೀಜಾರ ಉದ್ದೇಶ ಅಂದ್ರೆ, ಸೆಕ್ಸ್ ರಿಲೇಶನ್‌ ಶಿಪ್‌ ಕುರಿತು ಚರ್ಚೆ ನಡೆಸುವುದನ್ನು ಅವಮಾನಕರ, ಮುಜುಗರದ ಮಾತು ಎಂದು ಭಾವಿಸಲೇಬಾರದು. ಆಕೆ ಈ ಅತಿ ಸೂಕ್ಷ್ಮದ ಲೈಂಗಿಕ ಆರೋಗ್ಯ ಹಾಗೂ ಖುಷಿಯ ವಿಚಾರವನ್ನು ಇತರ ಎಲ್ಲಾ ಸಾಮಾನ್ಯ ವಿಚಾರಗಳಂತೆಯೇ ನೋಡಬೇಕು ಎನ್ನುತ್ತಾರೆ. ನಮ್ಮ ಭಾರತದಂಥ ದೇಶದಲ್ಲಿ ಇಂದಿಗೂ ಈ ಟಾಪಿಕ್‌ ನಾಚಿಕೆಗೇಡಿನ ವಿಚಾರವಾಗಿದೆ. ಲೀಜಾರಂಥ ಸೆಕ್ಸ್ ಎಜುಕೇಟರ್ಸ್‌ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಯತ್ನಿಸುತ್ತಾರೆ.

ಸೆಕ್ಸ್ ಎಜುಕೇಶನ್‌ ರಲ್ಲಿ ಕೊಲಂಬಿಯಾ ವಿ.ವಿ.ದಲ್ಲಿ ತಮ್ಮ ಶಿಕ್ಷಣ ಮುಗಿಸಿದ ನಂತರ, ಲೀಜಾ ಮೀಡಿಯಾ ಕಂಟೆಂಟ್‌ ಕ್ರಿಯೇಶನ್ ನಲ್ಲಿ ತಮ್ಮ ಕೆರಿಯರ್‌ ರೂಪಿಸಿಕೊಳ್ಳಲು ಮುಂಬೈ ತಲುಪಿದರು. ಭಾರತದಲ್ಲಿ ಸೆಕ್ಸ್ ಕುರಿತಾಗಿ ತಪ್ಪು ಮಾಹಿತಿ ಹಾಗೂ ಮಿಥ್ಯೆಗಳನ್ನು ಗಮನಿಸಿ, ಆಕೆ ಸೆಕ್ಸ್ ಎಜುಕೇಶನ್‌ ಕುರಿತಾಗಿ ವಿಡಿಯೋ ತಯಾರಿಸಲು ಆರಂಭಿಸಿದರು. ಆ ಕಂಟೆಂಟ್‌ ನ್ನು ಆಕೆ ಯೂಟ್ಯೂಬ್‌, ಇನ್‌ ಸ್ಟಾಗಳಲ್ಲಿ ಹಂಚಿಕೊಳ್ಳುತ್ತಾರೆ.

ಆಕೆ ಹಾರ್ರ್‌ ಕಾಲಿನ್ಸ್ ಮುಖಾಂತರ ಪ್ರಕಟಗೊಂಡ `ದಿ ಸೆಕ್ಸ್ ಬುಕ್‌ : ಎ ಜಾಯಫುಲ್ ಜರ್ನಿ ಆಫ್‌ ಸೆಲ್ಫ್ ಡಿಸ್ಕವರಿ’ ಪುಸ್ತಕ ರಚಿಸಿ, ಆ ಕೆಲಸಕ್ಕೆ ಹೆಚ್ಚಿನ ಉತ್ತೇಜನ ನೀಡಿದ್ದಾರೆ.

Leeza

ಸೆಕ್ಸ್ ಟ್ಯಾಬೂ ಕೊನೆಗೊಳ್ಳಬೇಕು

ಗೃಹಶೋಭಾ ತಂಡದೊಂದಿಗೆ ಚರ್ಚಿಸುತ್ತಾ ಆಕೆ, ಭಾರತದಲ್ಲಿ ಸೆಕ್ಸ್ ಕುರಿತಾಗಿ ಬಹಳಷ್ಟು ಕನಿಷ್ಠ ಮಾಹಿತಿ ಇದೆ. ಇದರ ಮಾಹಿತಿ ನೀಡುವುದರ ಸಂಖ್ಯೆಯೂ ಕೇವಲ ಬೆರಳೆಣಿಕೆಯಷ್ಟೇ ಇದೆ. ಆಕೆಯ ಪ್ರಕಾರ, ಹೆಚ್ಚಿನ ಸಂಖ್ಯೆಯಲ್ಲಿ ಸೆಕ್ಸ್ ಎಜುಕೇಟರ್ಸ್ ಇದ್ದಾಗ ಮಾತ್ರ ನಮ್ಮ ಸಮಾಜದಲ್ಲಿ ಸೆಕ್ಸ್ ಕುರಿತಾದ ದೃಷ್ಟಿಕೋನ ಬದಲಾಗಲು ಸಾಧ್ಯ. ಯಾರಾದರೂ ಇವರ ಕಂಟೆಂಟ್‌ ಕಾಪಿ ಮಾಡಿಕೊಂಡರೆ ಡೋಂಟ್‌ ಕೇರ್‌ ಅಂತ ಇರ್ತಾರೆ. ಅವರ ಗುರಿ ಇರುವುದೊಂದೇ, ಹೆಚ್ಚು ಹೆಚ್ಚು ಜನರನ್ನು ಈ ಕುರಿತು ಎಜುಕೇಟ್‌ ಮಾಡುವುದು. ಇಂದಿಗೂ ನಮ್ಮ ಹೆಣ್ಣುಮಕ್ಕಳಿಗೆ ತಮ್ಮ ಗುಪ್ತಾಂಗಗಳ ಕುರಿತು ವೈಜ್ಞಾನಿಕ ಮಾಹಿತಿ ಇಲ್ಲ ಎನ್ನುತ್ತಾರೆ.

ನಮ್ಮ ದೇಶದಲ್ಲಿ ಈ ಟಾಪಿಕ್‌ ಕುರಿತಾಗಿ ಚರ್ಚಿಸುವುದು ಬಹಳ ಮುಜುಗರದ ವಿಷಯ ಎನಿಸುತ್ತದೆ, ಸೋಶಿಯಲ್ ಮೀಡಿಯಾಗಳಲ್ಲಿ ಎಷ್ಟೋ ಸಲ ಇಂಥ ಕಂಟೆಂಟ್‌ಕ್ರಿಯೇಟರ್‌ ಗೆ ಬ್ಯಾಕ್‌ ಲ್ಯಾಶ್‌ ಎದುರಿಸಬೇಕಾಗುತ್ತದೆ. ಈಕೆ ಇದನ್ನು ಹೇಗೆ ನಿಭಾಯಿಸುತ್ತಾರೆ? ಆಕೆ ಆ ಕುರಿತಾಗಿ, ಹೌದು, ನಮ್ಮ ಸಮಾಜ ಈಗಲೂ ಈ ಕಂಟೆಂಟ್‌ ಬಗ್ಗೆ ಬಹಿರಂಗ ಚರ್ಚೆಗೆ ಸಿದ್ಧವಿಲ್ಲ. ಇದರ ಪರವಾಗಿ ನಿಂತವರನ್ನು ತಿರಸ್ಕರಿಸುತ್ತದೆ. ಆದರೆ ಇವರಿಗೆ ಅಪಾರ ಅಭಿಮಾನಿಗಳಿದ್ದು, ಇವರಿಂದ ಉತ್ತಮ ಮಾಹಿತಿ ಪಡೆದು, ಸಂದೇಹ ತೀರಿಸಿಕೊಳ್ಳುತ್ತಾರೆ. ಇಂಥವರಿಂದ ಇವರು ಹೆಚ್ಚಿನ ಪ್ರೋತ್ಸಾಹ ಪಡೆಯುತ್ತಾರೆ.

ಮನೆಮಂದಿಯ ನೆರವೇ ಮುಖ್ಯ

ಲೀಜಾ ಹೇಳುತ್ತಾರೆ, ಟ್ರೋಲಿಂಗ್‌ ಅನ್ನೋದು ನಮ್ಮ ಮನೆಯಿಂದಲೇ ಶರುವಾಗುತ್ತವೆ. ಯಾರಾದರೂ ಸೆಕ್ಸ್ ಬಗ್ಗೆ ಮಾತನಾಡ ಬಯಸಿದರೆ, ಎಲ್ಲಕ್ಕೂ ಮೊದಲು ಅವರ ಮನೆಯವರೇ ಅದಕ್ಕೆ ವಿರೋಧ ತೋರುತ್ತಾರೆ. ಆದರೆ ನನ್ನ ಮನೆಯವರು ಹಾಗಲ್ಲ, ನನ್ನ ಕೆಲಸದ ಎಲ್ಲಾ ವಿಷಯಕ್ಕೂ ನನ್ನ ತಾಯಿ ತಂದೆ ಮೊದಲಿನಿಂದಲೂ ಸಪೋರ್ಟ್‌ ಮಾಡುತ್ತಿದ್ದಾರೆ. ಹೀಗೆ ನಮಗೆ ನಮ್ಮವರಿಂದ ಉತ್ತಮ ಸಪೋರ್ಟ್‌ ಸಿಕ್ಕಿದರೆ, ಹೊರಗಿನವರು ಎಷ್ಟೇ ಟ್ರೋಲ್ ‌ಮಾಡಿದರೂ ಏನೂ ಅನಿಸದು.

Tanya-Narendra

ಕೆಲಸಕ್ಕೆ ಸಿಕ್ಕ ಮಹತ್ವ

ಲೀಜಾ ಕಾಸ್ಮೋ ಇಂಡಿಯಾ ಬ್ಲಾಗರ್‌ ಅವಾರ್ಡ್ಸ್ ನಲ್ಲಿ ಸೆಕ್ಶುಯೆಲ್ ‌ಹೆಲ್ತ್ ಇನ್‌ ಫ್ಲೂಯೆನ್ಸರ್‌ ಆಫ್‌ ದಿ ಇಯರ್‌, ಬೆಸ್ಟ್ ಪ್ರಾಡ್ ಕಾಸ್ಟ್ ಗಾಗಿ ಗೋಲ್ಡನ್‌ ಮೈಕಲ್ ಅವಾರ್ಡ್‌ ಹಾಗೂ ಎರಡರಲ್ಲೂ ಅತಿ ಪ್ರಭಾವಶಾಲಿ ಯುವಜನತೆಯಲ್ಲಿ ಒಬ್ಬರು ಎನಿಸಿದ್ದಾರೆ. ಇಷ್ಟು ಮಾತ್ರವಲ್ಲದೆ ಈಕೆ `ದಿ ಸೆಕ್ಸ್ ಬುಕ್‌ : ಎ ಜಾಯ್‌ ಫುಲ್ ಜರ್ನಿ ಆಫ್‌ ಸೆಲ್ಫ್ ಡಿಸ್ಕವರಿ’ ಎಂಬ ತಮ್ಮ ಪುಸ್ತಕದಲ್ಲೂ ಇದನ್ನೆಲ್ಲ ವಿವರವಾಗಿ ಚರ್ಚಿಸಿದ್ದಾರೆ. ಈಕೆ `ಲವ್ ಮ್ಯಾಟರ್ಸ್‌,’ `ದಿ ಸೆಕ್ಸ್ ಪ್ರಾಡ್‌ ಕಾಸ್ಟ್ ವಿತ್‌ ಲೀಜಾ’ ಎಂಬ ಹೆಸರಲ್ಲಿ ಆಂಗ್ಲ, ಹಿಂದಿ ಭಾಷೆಗಳಲ್ಲಿ ಪ್ರಾಡ್‌ ಕಾಸ್ಟ್ ಸಹ ನಡೆಸುತ್ತಾರೆ.

ಸಮಾಜದಲ್ಲಿ ನಡೆಯುತ್ತಿರುವ ಸಮಾನತೆಯ ವಿಷಯಕ್ಕೆ ಸಶಕ್ತ ಆಧಾರ ನೀಡುವಲ್ಲಿ ಲೀಜಾ ಸಾಕಷ್ಟು ಯಶಸ್ವಿಯಾಗಿದ್ದಾರೆ.

ಕುಂಮುಕುಮ್

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ