– ರಾಘವೇಂದ್ರ ಅಡಿಗ ಎಚ್ಚೆನ್.
ಕೆಡಿ ಸಿನಿಮಾ ಭರ್ಜರಿ ಓಪನಿಂಗ್ ಪಡೆದು ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡುತ್ತಿದೆ. ಜೋಗಿ ಪ್ರೇಮ್ ನಿರ್ದೇಶನದಲ್ಲಿ, ಧ್ರುವ ಸರ್ಜಾ ಅಭಿನಯದ ಈ ಸಿನಿಮಾ ಮೊದಲ ದಿನವೇ ಹೌಸ್‌ಫುಲ್ ಪ್ರತಿಕ್ರಿಯೆ ಪಡೆದುಕೊಂಡಿದೆ.
ಸಿನಿಮಾ ನೋಡಿದ ಪ್ರೇಕ್ಷಕರಿಗೆ ಕ್ಲೈಮ್ಯಾಕ್ಸ್‌ನಲ್ಲಿ ಸರ್ಪ್ರೈಸ್ ಸಿಕ್ಕಿದ್ದು, ‘ಕೆಡಿ 2’ ಘೋಷಣೆ ಭಾರೀ ಎಕ್ಸೈಟ್ ಮೂಡಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಪ್ರೇಮ್, “100 ಪರ್ಸೆಂಟ್ ಸೀಕ್ವೆಲ್ ಬರುತ್ತದೆ. ಆದರೆ ಮೊದಲು ಬೇರೆ ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗಲಿ. ಆಮೇಲೆ ಮುಂದಿನ ಪ್ಲ್ಯಾನ್ ಹೇಳುತ್ತೇನೆ” ಎಂದು ಸ್ಪಷ್ಟಪಡಿಸಿದ್ದಾರೆ.
ಯುಎಫ್ಓ ಸಮಸ್ಯೆಯಿಂದ ಬೆಳಗಿನ ಶೋಗೆ ಅಡಚಣೆ ಉಂಟಾದರೂ, ಬಳಿಕ ಎಲ್ಲಾ ಕಡೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. “ಪ್ರೇಕ್ಷಕರು ‘ಕೆಡಿ 2’ ಕೇಳುತ್ತಿದ್ದಾರೆ. ಅದಕ್ಕಾಗಿ ಒಂದು ವರ್ಷ ಸಮಯ ತೆಗೆದುಕೊಳ್ಳುತ್ತೇನೆ” ಎಂದು ಪ್ರೇಮ್ ತಿಳಿಸಿದ್ದಾರೆ.
ಸೀಕ್ವೆಲ್‌ನಲ್ಲಿ ಕಿಚ್ಚ ಸುದೀಪ್ ಪಾತ್ರದ ಬಗ್ಗೆ ಕುತೂಹಲ ಹೆಚ್ಚಾಗಿದ್ದರೂ, ಪ್ರೇಮ್ ‘ಕಾದು ನೋಡಿ’ ಎಂದಷ್ಟೇ ಉತ್ತರಿಸಿದ್ದಾರೆ.
ಇನ್ನು ಮಚ್ಚು ಹಿಡಿದು ಕಾಣಿಸಿಕೊಂಡ ಧ್ರುವ ಸರ್ಜಾ ಸ್ಟೈಲ್ ಅಭಿಮಾನಿಗಳ ಮೆಚ್ಚುಗೆ ಪಡೆದಿದ್ದು, “ಫುಲ್ ಟೈಮ್ ಮಚ್ಚು ಹಿಡಿಯಲು ರೆಡಿ. ಆದರೆ ಎಲ್ಲ ನಿರ್ದೇಶಕರೂ ಪ್ರೇಮ್ ಆಗಲ್ಲ” ಎಂದು ಧ್ರುವ ಸರ್ಜಾ ಹೇಳಿದ್ದಾರೆ.





