– ರಾಘವೇಂದ್ರ ಅಡಿಗ ಎಚ್ಚೆನ್.
ಸ್ಯಾಂಡಲ್‌ವುಡ್‌ನ ಜನಪ್ರಿಯ ನಟ ‘ಡಾಲಿ’ ಧನಂಜಯ್ ಅವರ ಮನೆಯಲ್ಲಿ ಈಗ ಹಬ್ಬದ ವಾತಾವರಣ. ಧನಂಜಯ್ ಹಾಗೂ ಅವರ ಪತ್ನಿ ಧನ್ಯತಾ ಇಂದು (ಮೇ 2, ಶನಿವಾರ) ಮುಂಜಾನೆ ಗಂಡು ಮಗುವನ್ನು ಬರಮಾಡಿಕೊಂಡಿದ್ದಾರೆ. ಆ ಮೂಲಕ ಧನಂಜಯ್ ಅವರ ಬಾಳಿನಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ.
ಮುಂಜಾನೆ 5 ಗಂಟೆಗೆ ಮಗುವಿನ ಜನನ ಇಂದು ಮುಂಜಾನೆ ಸುಮಾರು 5 ಗಂಟೆಯ ಸುಮಾರಿಗೆ ಧನ್ಯತಾ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ. ಮಗು ಜನಿಸಿದ ಬೆನ್ನಲ್ಲೇ ಧನಂಜಯ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಈ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದು, ಮಗುವಿನ ಪುಟ್ಟ ಕೈಗಳನ್ನು ಹಿಡಿದಿರುವ ಭಾವನಾತ್ಮಕ ಫೋಟೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಮದುವೆ ಮೆರವಣಿಗೆ ವೇಳೆ ನುಗ್ಗಿದ ಮಾಜಿ ಪ್ರಿಯತಮೆ; ವರನಿಗೆ ಧರ್ಮದೇಟು..

ಮುಂದೇನಾಯ್ತು..? ಯಶಸ್ಸಿನ ಅಲೆಯಲ್ಲಿ ಧನಂಜಯ್ ಡಾಲಿ ಧನಂಜಯ್ ಅವರಿಗೆ ವೃತ್ತಿಜೀವನ ಮತ್ತು ವೈಯಕ್ತಿಕ ಜೀವನ ಎರಡರಲ್ಲೂ ಇದು ಅತ್ಯಂತ ಸುಸಮಯ ಎನ್ನಬಹುದು. 2025ರ ಫೆಬ್ರವರಿ 16ರಂದು ವೈದ್ಯೆ ಧನ್ಯತಾ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಧನಂಜಯ್, ಮದುವೆಯಾದ ಮೊದಲ ವರ್ಷದ ಸಂಭ್ರಮದಲ್ಲೇ ತಂದೆಯಾಗಿದ್ದಾರೆ. ಇನ್ನು ವೃತ್ತಿಜೀವನದಲ್ಲಿ ಅವರು ನಿರ್ಮಿಸಿರುವ ‘ಜೆರಾಕ್ಸ್’ (Xerox) ವೆಬ್ ಸರಣಿಯು ಜೀ5ನಲ್ಲಿ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಾಣುತ್ತಿದ್ದು, ಈ ಸಂಭ್ರಮದ ನಡುವೆಯೇ ಮಗುವಿನ ಆಗಮನವಾಗಿದೆ.
ಹರಿದು ಬಂದ ಶುಭಾಶಯಗಳ ಮಹಾಪೂರ ಧನಂಜಯ್ ತಂದೆಯಾದ ಸುದ್ದಿ ತಿಳಿಯುತ್ತಿದ್ದಂತೆಯೇ ಅಭಿಮಾನಿಗಳು, ಚಿತ್ರರಂಗದ ಗಣ್ಯರು ಹಾಗೂ ಆಪ್ತರು ಸೋಷಿಯಲ್ ಮೀಡಿಯಾದಲ್ಲಿ ಅಭಿನಂದನೆಗಳ ಮಳೆ ಸುರಿಸುತ್ತಿದ್ದಾರೆ. ನಮ್ಮ ಡಾಲಿ ಈಗ ಅಪ್ಪ ಆದ್ರು, ಜೂನಿಯರ್ ಡಾಲಿ ಬಂದಾಯ್ತು ಎಂದು ಅಭಿಮಾನಿಗಳು ಸಂಭ್ರಮ ವ್ಯಕ್ತಪಡಿಸುತ್ತಿದ್ದಾರೆ.





