- ರಾಘವೇಂದ್ರ ಅಡಿಗ ಎಚ್ಚೆನ್.

ಚೌಕೀದಾರ್, ಭುವನಂ ಗಗನಂ ಖ್ಯಾತಿಯ ನಟ ಪೃಥ್ವಿ ಅಂಬಾ‌ರ್ ಇದೇ ಮೊದಲ ಬಾರಿಗೆ ನಿರ್ದೇಶನ ಮಾಡಿರುವ ಚಿತ್ರ 'ಬುಲ್‌ಡಾಗ್'.
ಡಾರ್ಕ್ ಡ್ಯೂಮರ್ ಜಾನರ್ ನಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ ಪೃಥ್ವಿ ಅಂಬಾರ್ ಅವರೇ‌ ನಾಯಕನಾಗಿ ನಟಿಸಿದ್ದಾರೆ.

IMG-20260503-WA0013

ದಿಯಾ ಚಿತ್ರದ ಮೂಲಕ ಜನಪ್ರಿಯತೆ ಪಡೆದು ತುಳು ಹಾಗೂ ಕನ್ನಡ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಪೃಥ್ವಿ ಅಂಬಾರ್ ಸದ್ದಿಲ್ಲದೆ ತಮ್ಮ ಚೊಚ್ಚಲ ನಿರ್ದೇಶನದ 'ಬುಲ್‌ಡಾಗ್' ಚಿತ್ರದ ಅಂತಿಮ ಹಂತದ ಶೂಟಿಂಗ್ ಪೂರೈಸಿ ಪೋಸ್ಟ್ ಪ್ರೊಡಕ್ಷನ್‌ಗೆ ಸಿದ್ಧತೆ ನಡೆಸುತ್ತಿದ್ದಾರೆ.
'ಬುಲ್ ಡಾಗ್' ಒಂದೂರಿನ ನಾಲ್ವರು ಹುಡುಗರ ಕಥೆ. ಈ ನಾಲ್ವರು ಯಾವುದೋ ಕಾರಣಕ್ಕೆ ಬೆಂಗಳೂರಿಗೆ ಬರುತ್ತಾರೆ. ಎರಡು ತಿಂಗಳ ಅಂತರದಲ್ಲಿ ನಡೆಯುವ ಈ ಕಥೆಯಲ್ಲಿ ಬೆಂಗಳೂರಿಗೆ ಬಂದವರು ಮಾಡುವ ಎಡವಟ್ಟುಗಳು ಮತ್ತು ಅವರು ವಾಪಸ್ ಊರಿಗೆ ಹೋಗುವವರೆಗೆ ನಡೆಯುವ ಘಟನೆಗಳ ಸುತ್ತ ಹೆಣೆದಂಥ ಕಥೆ.

IMG-20260503-WA0013

ಈ ಚಿತ್ರದಲ್ಲಿ ನಟ ಪೃಥ್ವಿ ಅಂಬಾರ್ 'ಬುಲ್‌ಡಾಗ್' ಎಂಬ ಪಾತ್ರವನ್ನೇ ಮಾಡುತ್ತಿದ್ದಾರೆ. ವಿಶೇಷವೆಂದರೆ ಇದು ಎರಡು ಭಾಷೆಗಳಲ್ಲಿ ತಯಾರಾಗುತ್ತಿರುವ ಸಿನಿಮಾವಲ್ಲ, ಬದಲಾಗಿ ಚಿತ್ರದಲ್ಲೇ ಕನ್ನಡ ಮತ್ತು ತುಳು ಎರಡೂ ಭಾಷೆಗಳನ್ನು ಬಳಸಲಾಗಿದೆ. ಚಿತ್ರದ ಪಾತ್ರಗಳು ಬೆಂಗಳೂರಿನಲ್ಲಿದ್ದಾಗ ಕನ್ನಡದಲ್ಲಿ ಮತ್ತು ಊರಿನಲ್ಲಿದ್ದಾಗ ತುಳುವಿನಲ್ಲಿ ಮಾತನಾಡುತ್ತವೆ. ಹಾಗಾಗಿ ಇದನ್ನು ಕೇವಲ ತುಳು ಅಥವಾ ಕನ್ನಡ ಸಿನಿಮಾ ಎಂದು ಪ್ರತ್ಯೇಕಿಸಲು ಸಾಧ್ಯವಿಲ್ಲ, ಈ ಚಿತ್ರದ ಎರಡೂ ಭಾಷೆಗಳಿಗೆ ಇಂಗ್ಲಿಷ್ ಸಬ್‌ ಟೈಟಲ್ ಬಳಸುವ ವಿಭಿನ್ನ ಪ್ರಯೋಗವನ್ನು ನಿರ್ದೇಶಕ ಪೃಥ್ವಿ ಅಂಬಾರ್ ಅವರು ಮಾಡುತ್ತಿದ್ದಾರೆ. 'ಸು ಫ್ರಮ್ ಸೋ' ಸೇರಿದಂತೆ ಕನ್ನಡ, ತುಳು ಹಾಗೂ ಮಲಯಾಳಂನ ಹಲವಾರು ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ.

IMG-20260503-WA0008
ಮೊದಲಿನಿಂದಲೂ ನನಗೆ ಸಿನಿಮಾ ಮಾಡುವ ಆಸೆ ಇತ್ತು. ಹಾಗಾಗಿ ನಾನೇ ಒಂದು ತಂಡ ಕಟ್ಟಿ ಕೆಲಸ ಆರಂಭಿಸಿದೆ. ಕಾಮಿಡಿ ನನ್ನ ಫೇವರಿಟ್ ಸಬ್ಜೆಕ್ಟ್.  ಇದರಲ್ಲಿ ಹಾಸ್ಯದ ಜೊತೆಗೆ ಸ್ವಲ್ಪ ಡಾರ್ಕ್ ಹ್ಯೂಮರ್ ಪ್ರಯೋಗ ಮಾಡಿದ್ದೇನೆ. ನೈಜ ಘಟನೆಗಳು ಹಾಗೂ ನಾನು ಹುಟ್ಟಿ ಬೆಳೆದ ಪರಿಸರದ ವ್ಯಕ್ತಿಗಳೇ ಈ ಕಥೆ ಮತ್ತು ಪಾತ್ರಗಳಿಗೆ ಸ್ಫೂರ್ತಿ' ಎಂದು ನಿರ್ದೇಶಕ  ಪೃಥ್ವಿ ಅಂಬಾರ್ ವಿವರಿಸಿದ್ದಾರೆ.

IMG-20260503-WA0007

ಅಸ್ಟ್ರಾ ಪ್ರೊಡಕ್ಷನ್ಸ್ ಅಡಿ ಲಾಂಚು ಲಾಲ್ ಅವರ ನಿರ್ಮಾಣದ ಈ ಚಿತ್ರಕ್ಕೆ ಚೆಂತುಮೆಪ್ಪಯರ್ ಅವರ ಕ್ಯಾಮೆರಾ ವರ್ಕ್, ನಿಶಾನ್ ರೈ ಅವರ ಸಂಗೀತ ಸಂಯೋಜನೆ, ಗಣೇಶ್ ನೀರ್ಚಲ್ ಅವರ ಸಂಕಲನವಿದೆ. ಸಿಹಿ ಗೌಡ,ಆರಾಧನಾಭಟ್, ಪ್ರಜ್ವಲ್ ಪೈ, ನವೀನ್ ಡಿ ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ಪ್ರಕಾಶ್ ತುಮ್ಮಿನಾಡ್ ಪ್ರಮುಖ ಪಾತ್ರದಲ್ಲಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ