- ರಾಘವೇಂದ್ರ ಅಡಿಗ ಎಚ್ಚೆನ್.

ಪ್ರಸ್ತುತ ಚಂದನವನದಲ್ಲಿ ಬೆರಳಣಿಕೆಯಷ್ಟು ಮಕ್ಕಳ ಚಿತ್ರಗಳು ಬರುತ್ತಿವೆ. ಆ ಸಾಲಿಗೆ *’ಚಿಕ್ಕವರು ಕೋಣರಲ್ಲ’* ಸೇರ್ಪಡೆಯಾಗಿದೆ. ಹೆಚ್‌ಯುಇ ಆರ್ಟ್ಸ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ *ಪ್ರಕಾಶ್ ಚಿನ್ನಪ್ಪ ಸಿನಿಮಾಕ್ಕೆ ಕಥೆ, ಚಿತ್ರಕಥೆ, ನಿರ್ದೆಶನ ಜತೆಗೆ ಬಂಡವಾಳ* ಹೂಡಿದ್ದಾರೆ. ಇವರೊಂದಿಗೆ ನೇತ್ರಬಾಬು-ಶ್ವೇತ-ಜಮೀಲ-ನಾಜಿಯ ಖಾಜಿ-ಸತೀಶ್ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ. ಮೊನ್ನೆಯಷ್ಟೇ ಮಾಧ್ಯಮದವರಿಗೆ ವಿಶೇಷ ಪ್ರದರ್ಶನ ಹಾಗೂ ಟ್ರೇಲರ್ ಬಿಡುಗಡೆ ಸಮಾರಂಭವು ಶ್ರೀ ರೇಣುಕಾಂಬ ಸ್ಟುಡಿಯೋದಲ್ಲಿ ಅದ್ದೂರಿಯಾಗಿ ನಡೆಯಿತು.

IMG-20260503-WA0028

ಮುಖ್ಯ ಪಾತ್ರದಲ್ಲಿ ಚಿಣ್ಣರುಗಳಾದ ಸೆಹರಿ, ತಿಷ್ಯ, ಹನ್ಸಿಕಾ, ಶ್ರೀವಾಸ್, ವಿಯಾನ್, ಶ್ರೀಗೌರಿ ಮತ್ತು ಶ್ರೀವಾಸ್ ಅಭಿನಯಸಿದ್ದಾರೆ. ಉಳಿದಂತೆ ಹಿರಿಯ ಕಲಾವಿದರುಗಳಾದ ರಮೇಶ್‌ಭಟ್, ಸುಂದರರಾಜ್ ಹಾಗೂ ಅನಿತಾಭಟ್ ಅಭಿನಯ ಸಿನಿಮಾಕ್ಕೆ ಕಳಸ ಇಟ್ಟಂತೆ ಆಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕರು, ಐದರಿಂದ ಹನ್ನೊಂದು ವರ್ಷದವರೆಗಿನ ಮಕ್ಕಳಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತದೆ.

IMG-20260503-WA0027

ಆ ವಯಸ್ಸಿನ ಮಕ್ಕಳು ತುಂಬ ಬುದ್ದಿಶಾಲಿಗಳು ಆಗಿದ್ದು, ಅವರ ಚಿಂತರೆ, ರೀತಿ, ನೀತಿ ಮತ್ತು ಆಲೋಚನೆಗಳೇ ವಿನೂತನವಾಗಿರುತ್ತದೆ. ಇಪ್ಪತ್ತು ವರ್ಷಗಳ ನಂತರ ಜಗತ್ತು ಯಾವ ತರಹ ಬದಲಾವಣೆ ಆಗುತ್ತದೆ. ಗ್ಲೋಬಲ್ ವಾರ್ಮಿಂಗ್ ಆದಾಗ, ಮಕ್ಕಳು ತಮ್ಮ ಜಾಗವನ್ನು ಉಳಿಸಿಕೊಳ್ಳಲು ಹೇಗೆಲ್ಲ ಸಾಹಸ ಮಾಡುತಾರೆ. ಇದರ ಮಧ್ಯೆ ಹಿರಿಯ ನಾಗರಿಕರ ಅಣ್ಣ-ತಮ್ಮ ನಡುವೆ ಪ್ರೀತಿ ಹಾಗೂ ಪರಸ್ಪರ ತಿಳುವಳಿಕೆಯಿಂದ ಹಳೆಯ ಭಿನ್ನಾಭಿಪ್ರಾಯಗಳನ್ನು ಹೇಗೆ ಬಗೆಹರಿಸುತ್ತಾರೆ.

IMG-20260503-WA0021

ಕೊನೆಗೆ ಆರು ಮಕ್ಕಳು ಹಿರಿಯರಿಗೆ ಗೌರವ ನೀಡುತ್ತಾ, ಬದಲಾವಣೆ ತರುವ ಮೂಲಕ ಜ್ಞಾನ ಮತ್ತು ಸಂಸ್ಕಾರದ ಸಮತೋಲನವನ್ನು ಹೇಗೆ ಎತ್ತಿ ಹಿಡಿಯುತ್ತಾರೆ ಎಂಬುದನ್ನು ಸಿನಿಮಾದಲ್ಲಿ ಅರ್ಥಪೂರ್ಣ ಸನ್ನಿವೇಶಗಳೊಂಂದಿಗೆ ತೋರಿಸಲಾಗಿದೆ ಎಂಬುದಾಗಿ ಪ್ರಕಾಶ್ ಚಿನ್ನಪ್ಪ ಮಾಹಿತಿ ತೆರೆದಿಟ್ಟರು.

IMG-20260503-WA0026

ರಮೇಶ್‌ಭಟ್, ಸುಂದರರಾಜ್ ಹಾಗೂ ಅನಿತಾಭಟ್ ಚಿತ್ರೀಕರಣದ ಅನುಭವಗಳನ್ನು ಹಂಚಿಕೊಂಡು, ಮಕ್ಕಳೊಂದಿಗೆ ತಾವು ಮಕ್ಕಳಾಗಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು. ಪ್ರಸನ್ನ-ಚಂದ್ರಶೇಖರ ಭಟ್ ಸಾಹಿತ್ಯದ ಎರಡು ಹಾಡುಗಳಿಗೆ ಉತ್ತಮ್‌ಕುಮಾರ್ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ-ಸಂಕಲನ ರಿಷಿಕೇಶ್, ಹಿನ್ನಲೆ ಶಬ್ದ ವಿವಾನ್ ಸೂರ್ಯ, ನೃತ್ಯ ರಕ್ಷ ಅವರದಾಗಿದೆ. ಸಾಗರ, ಹೊಸಬಾಳೆ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಸೆನ್ಸಾರ್‌ನಿಂ ಪ್ರಶಂಸೆಗೆ ಒಳಗಾದ ಚಿತ್ರವನ್ನು ತೆರೆಗೆ ತರಲು ತಂಡವು ಯೋಜನೆ ರೂಪಿಸಿಕೊಂಡಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ