ಮಲೆಯಾಳಂ ಚಿತ್ರರಂಗದ ಈ ಲೀಡಿಂಗ್ ಅಭಿನೇತ್ರಿ ಆ ಇಂಡಸ್ಟ್ರಿಯ ರೂಪುರೇಷೆ ಬದಲಾಯಿಸಿದ್ದು ಹೇಗೆ….?
2017ರ ಚಳಿಗಾಲದ ದಿನಗಳು, ಪಾರ್ವತಿ ತಿರುವೋತ್ತು ತವರಿಗೆ, ಅದು ಮುಂದೆ ಬರಲಿರುವ ಚಂಡಮಾರುತದ ಸಂಕೇತವಾಗಿತ್ತು. ಆ ವರ್ಷದ ಡಿಸೆಂಬರ್ ಮಾಸದಲ್ಲಿ ಮಲೆಯಾಳಂ, ತಮಿಳು, ಹಿಂದಿ ಚಿತ್ರಗಳಲ್ಲಿ ತಮ್ಮ ಕೆರಿಯರ್ ನಿಂದ ಐಡೆಂಟಿಟಿ ಪಡೆದಿದ್ದ ಈ ನಟಿ, ಸಿನಿಮಾಗಳಲ್ಲಿ ಮಹಿಳೆಯರ ಪ್ರತಿನಿಧಿತ್ವದ ಕುರಿತಾಗಿ ಒಂದು ಪ್ಯಾನೆಲ್ ಡಿಸ್ಕಶನ್ ನಲ್ಲಿ ಭಾಗವಹಿಸಿದ್ದರು. ಈ ಚರ್ಚೆಯಲ್ಲಿ ಆಕೆ ಒಂದು ಮಲೆಯಾಳಂ ಚಿತ್ರದ ಕುರಿತಂತೆ ತಮ್ಮ ನಿರಾಶೆ ವ್ಯಕ್ತಪಡಿಸಿದರು.
ಇದರಲ್ಲಿ ಒಬ್ಬ `ಉತ್ಕೃಷ್ಟ ನಟ,’ ತನ್ನ ಸಹನಟಿಗೆ ಬಹಳ ಅಪಮಾನಕಾರಕವಾದ ಮಾತನ್ನು ಎಲ್ಲರ ಮುಂದೆ ಹೇಳುತ್ತಾನೆ. ಈ ಚರ್ಚೆಯಲ್ಲಿ ಆಕೆ ಆ ಚಿತ್ರದ ಹೆಸರು ಹೇಳಲಿಲ್ಲ, ಆಗ ಒಬ್ಬ ಸಹಪ್ಯಾನಲಿಸ್ಟ್ ಆಕೆಗೆ ಅದನ್ನು ತಿಳಿಸಲು ಹೇಳಿದಾಗ, ಪಾರ್ವತಿ ಅದನ್ನು 2016ರ ಕ್ರೈಂ ಥ್ರಿಲ್ಲರ್‌ಬಾಕ್ಸ್ ಆಫೀಸ್ ನಲ್ಲಿ ಹಿಟ್ ಎನಿಸಿದವು `ಕಸಾಬಾ’ ಎಂದು ತಿಳಿಸಿದರು. ಇದರಲ್ಲಿ ಮಲೆಯಾಳಂ ಚಿತ್ರರಂಗದ ಸೂಪರ್ ಸ್ಟಾರ್ ಮಮ್ಮೂಟ್ಟಿ ನಟಿಸಿದ್ದರು.
ಈ ಚಿತ್ರ ರಿಲೀಸ್ ಆದಾಗ ಬಹುತೇಕ ವಿಮರ್ಶಕರು ಹಾಗೂ ಕೇರಳ ಮಹಿಳಾ ಆಯೋಗವನ್ನೂ ಒಳಗೊಂಡಂತೆ, ಈ ಚಿತ್ರದಲ್ಲಿನ ಆಕ್ಷೇಪಾರ್ಹ ಮಾತುಗಳನ್ನು ತೀವ್ರವಾಗಿ ವಿರೋಧಿಸಿದರು. ಈ ಚಿತ್ರದಲ್ಲಿನ ಒಂದು ದೃಶ್ಯದಲ್ಲಿ, ಪೊಲೀಸ್ ಆಫೀಸರ್ ಆಗಿರುವ ಮಮ್ಮೂಟ್ಟಿ ಒಬ್ಬ ಹಿರಿಯ ಮಹಿಳಾ ಸಹೋದ್ಯೋಗಿಗೆ, ತನ್ನ ಬೆರಳುಗಳ ಸಂಜ್ಞೆಯ ಮೂಲಕ, ಲೈಂಗಿಕ ದೌರ್ಜನ್ಯದ ಧಮಕಿ ಕೊಡ್ತಾನೆ.
ಪಾರ್ವತಿ ಈ ಕುರಿತಾಗಿ ಮಾಡಿದ ಟಿಪ್ಪಣಿ ಬಲು ಬೇಗ ವೈರಲ್ ಆಯಿತು, ಹೀಗಾಗಿ ಆಕೆ ಆನ್ ಲೈನ್ ನಲ್ಲಿ ಟ್ರೋಲಿಗರ ಆಕ್ರೋಶ ಎದುರಿಸಬೇಕಾಯಿತು. ಘಟಾನುಘಟಿ ಸ್ಟಾರ್ ಮಮ್ಮೂಟಿಯ ಅಭಿಮಾನಿಗಳು ಈಕೆಯನ್ನು ಬಿಟ್ಟಾರೆಯೇ? ಕೆಲವರಂತೂ ಇನ್ನೂ ಒಂದು ಹೆಜ್ಜೆ ಮುಂದೆ ಬಂದು, ಈಕೆಯ ಮೇಲೆ ಅತ್ಯಾಚಾರ ಎಸಗುವ, ಕೊಲೆ ಪ್ರಯತ್ನದ ಧಮಕಿ ಸಹ ನೀಡಿದರು. ಈ ಇಂಡಸ್ಟ್ರಿಯ ಹಲವು ಖ್ಯಾತರು ಸಹ ಬಾಯಿಗೆ ಬಂದಂತೆ ಆಡಿಕೊಂಡರು. ಬೇಕೆಂದೇ ಈಕೆಗೆ ಅತಿ ಅಸಹ್ಯಕರ, ಅಶ್ಲೀಲ ಸಂದೇಶಗಳನ್ನು ಕಳಿಸಿದ ಒಬ್ಬ ದುರಾಚಾರಿಯನ್ನು ಕೇರಳದ ಪೊಲೀಸರು ಬಂಧಿಸಿದ ನಂತರ, `ಕಸಾಬಾ’ ಚಿತ್ರದ ನಿರ್ಮಾಪಕ ಜಾಬಿ ಜಾರ್ಜ್ ಆತನನ್ನು ಸಾರ್ವಜನಿಕವಾಗಿ ಕರೆದು, ತಮ್ಮ ವತಿಯಿಂದ ಶಭಾಷ್ ಗಿರಿ ಎಂಬಂತೆ ನೌಕರಿ ನೀಡಿದರು! ಆದರೆ ಪಾರ್ವತಿ ಇದಾವುದಕ್ಕೂ ಮಣಿಯದೆ ದಿಟ್ಟವಾಗಿ ಮುನ್ನಡೆದರು.
ಇದೇ ಸಂದರ್ಭದಲ್ಲಿ ಈಕೆ ಮಲೆಯಾಳದ `ಟೇಕ್ ಆಫ್’ ಚಿತ್ರಕ್ಕಾಗಿ ಪ್ರತಿಷ್ಠಿತ ಪ್ರಶಸ್ತಿ ಗಳಿಸಿದರು. ಈ ಚಿತ್ರದಲ್ಲಿ ಇರಾಕ್ ನಲ್ಲಿ ಭಯೋತ್ಪಾದಕರು ಕಿಡ್ ನ್ಯಾಪ್ ಮಾಡಿದಂಥ ಭಾರತೀಯ ನರ್ಸುಗಳ ವಾಸ್ತವಿಕ ವೇದನೆ ಚಿತ್ರಿಸಲಾಗಿತ್ತು. ಅದಕ್ಕಾಗಿ ಆಕೆ ಪ್ರಶಸ್ತಿ ಪಡೆದು, ಸ್ವೀಕೃತಿ ಭಾಷಣ ನೀಡಲು ವೇದಿಕೆ ಏರಿದಾಗ, ಪ್ರೇಕ್ಷಕರು ಕಿವಿಗಡಚ್ಚಿಕ್ಕುವ ಕರತನಾಡನ ಮಾಡಿದರು. ಆದರೆ ಇಲ್ಲಿನ ವಿಡಂಬನೆ ಎಂದರೆ, ಈ ಚಪ್ಪಾಳೆ ಆಕೆಯ ಸಮರ್ಥನೆಗಾಗಿ ಆಗಿರಲಿಲ್ಲ, ಆಕೆಯ ಮಾತು ಯಾರಿಗೂ ಕೇಳಬಾರದೆಂಬ ದುರುದ್ದೇಶದಿಂದ ಕೂಡಿತ್ತು!
ಕೊಚ್ಚಿನ್ ನ ಲೀ ಮೆರಿಡಿಯನ್ ಹೋಟೆಲ್ ನಲ್ಲಿ ಕಾಫಿ ಹೀರುತ್ತಾ ಪಾರ್ವತಿ ಹೇಳುತ್ತಾರೆ, “ಏನೇ ಆಗಲಿ, ನಾನು ಮುಂದೆ ಇಟ್ಟ ಹೆಜ್ಜೆ ಹಿಂದೆ ಇಡುವುದಿಲ್ಲ. ಅವರು ಎಷ್ಟೇ ಅಡ್ಡಿ ಆತಂಕ ಒಡ್ಡಿದರೂ ನನ್ನ ದೃಢ ನಿಲುವು ಬದಲಾಗದು!”

ಹಿಂದೆಂದೂ ಹೀಗೆ ನೊಂದಿರಲಿಲ್ಲ
ಆ ರಾತ್ರಿ ಹೋಟೆಲ್ ನ ತನ್ನ ಕೋಣೆಗೆ ಹೋದ ಈಕೆ, ದೇಹಾದ್ಯಂತ ನಡುಗುತ್ತಾ ಪತನಾವಸ್ಥೆ ತಲುಪಿದರು.
“ಅಷ್ಟೂ ಜನರು ಒಟ್ಟಿಗೆ ಬೀರಿದ ತಿರಸ್ಕಾರವನ್ನು ನಾನು ಭರಿಸದಾದೆ. ಹಿಂದೆ ನಾನೆಂದೂ ಹೀಗೆ ಬ್ರೇಕ್ ಡೌನ್ ಆಗಿರಲಿಲ್ಲ…..” ಎಂದು ಬಿಕ್ಕಳಿಸಿದರು.
ಕೆಲವು ತಿಂಗಳ ನಂತರ ಆಕೆ ವಿದೇಶದಿಂದ ಶೂಟಿಂಗ್ ಮುಗಿಸಿ ಭಾರತಕ್ಕೆ ಬಂದಾಗ, ಕೇರಳ ಫಿಲ್ಮ್ ರಾಜ್ಯ ಪ್ರಶಸ್ತಿ ಸಮಾರಂಭಕ್ಕೆ ಮತ್ತೊಂದು ಪುರಸ್ಕಾರ ಪಡೆಯಲು ಹೋಗಬೇಕೆಂದು ತಯಾರಿ ನಡೆಸುತ್ತಿದ್ದಾಗ, ಹೋಟೆಲ್ ನ ಕೋಣೆಯಲ್ಲೇ ಮೂರ್ಛೆ ಹೋದರು. ಅದನ್ನು ನೆನಪಿಸಿಕೊಳ್ಳುತ್ತಾ ಆಕೆ, “ಹೋಟೆಲ್ ಮಾಣಿ ಬಂದು ನೆಲದಲ್ಲಿ ಬಿದ್ದಿದ್ದ ನನ್ನನ್ನು ಎಚ್ಚರಿಸಿದ. ನನ್ನ ದೇಹವನ್ನು ಅವನು ಸೀರೆಯಿಂದ ಮರೆಮಾಡಿದ ನಂತರ, ಬಲು ಕಷ್ಟದಿಂದ ನಾನು ಎದ್ದು, ಮಂಚ ಸೇರಿದೆ!”
ಹೀಗೆ ಬೆದರಿಕೆಗಳು ಸತತ ಮುಂದುವರಿದರೂ, ಪಾರ್ವತಿ ತಮ್ಮ ಮಾತನ್ನು ಹಿಂಪಡೆಯಲಿಲ್ಲ. ಆಕೆ ತಮ್ಮ ಕರ್ತವ್ಯ ಮುಂದುವರಿಸಿದರು. ಅಪಾರ ಪ್ರತಿಭೆಯುಳ್ಳ ಆಕೆಯ ನಟನೆ ಹೆಚ್ಚಿನ ಹೊಗಳಿಕೆ, ಸಮ್ಮಾನ ಗಳಿಸಿತು. ಕರ್ತವ್ಯದ ಜೊತೆ ಆಕೆ ತಮ್ಮ ಮಾತುಗಳನ್ನೂ ಉಚ್ಚ ಸ್ಥಾಯಿಯಲ್ಲೇ ಖಡಕ್ ಆಗಿ ಉಳಿಸಿಕೊಂಡು, `ಖಂಡಿತಾದಿ ಲೋಕವಿರೋಧಿ,’ ಎನಿಸಿದರು. ಆಕೆಯ ಈ ಖಡಕ್ ನಿರ್ಧಾರದಿಂದಾಗಿ, ಮುಂದೆ ಒಂದು ಮಹತ್ವಪೂರ್ಣ ವೈಯಕ್ತಿಕ ಪ್ರೊಫೆಶನಲ್ ಬೆಲೆ ತೆರಬೇಕಾಯಿತು.
“ಇದೇನೂ ಜನ ಕಂಡೂ ಕೇಳರಿಯದ ಹೊಸ ವಿಷಯವಲ್ಲ. ಯಾವ ವ್ಯಕ್ತಿ ಈ ಸ್ಥಿತಿಯಲ್ಲಿದ್ದಾನೋ, ತನ್ನನ್ನು ತಾನು ಸಂಭಾಳಿಸಿಕೊಳ್ಳುತ್ತಾ, ಯಾರು ಜನರಿಗೆ ಉತ್ತರ ಹೇಳುವ ಜವಾಬ್ದಾರಿ ಹೊತ್ತಿದ್ದಾನೋ, ನೈತಿಕತೆಯ ಕವಚ ಧರಿಸಿ, ತನ್ನ ದೇಹಬುದ್ಧಿಯನ್ನು ವ್ಯವಯಸ್ಥಿತವಾಗಿರಿಸಿಕೊಳ್ಳುತ್ತಾ, ಮತ್ತೆ ಮೇಲೇರಲು ಪ್ರಯತ್ನಿಸಬೇಕು. ಅದನ್ನು ಬಿಟ್ಟು ಬೇರೆ ಅವಕಾಶವೇ ಇಲ್ಲ ಎಂಬುದೇ ಇಲ್ಲಿ ವಿಡಂಬನೆ!” ಎಂದು ವಿವರಿಸುತ್ತಾರೆ ಪಾರ್ವತಿ.
“ಹೀಗೆ ಮಾಡುವುದೇನೂ ನಿಸ್ವಾರ್ಥವಲ್ಲ. ನಾನು ಒಂದ ಪರಿಪೂರ್ಣ ಜೀವನ ನಡೆಸಲು ಬಯಸುತ್ತೇನೆ. ನನಗೆ ಇದರ ಹಕ್ಕಿದೆ, ಅದು ನನಗೆ ಸಿಗಲಿ ಎಂದು ಆ ವಿಷಯದಲ್ಲಿ ಸುನಿಶ್ಚಿತಳಾಗಲು ಬಯಸುತ್ತೇನೆ. ಇದನ್ನೆಲ್ಲ ಸುಲಭವಾಗಿ ಗಿಟ್ಟಿಸಲು ನಾನೇನೂ ದೊಡ್ಡ ಸ್ಟಾರ್ ಹೀರೋ ಅಲ್ಲ…. ಸಾಧಾರಣ ನಟಿ ಅಷ್ಟೆ! ಇದು ನನಗಾಗಿ, ನನ್ನ ಸೋದರ ಸೊಸೆಗಾಗಿ ಮಾಡಿಕೊಳ್ತಿದ್ದೀನಿ, ನಂತರ ಅದು ಉಳಿದವರಿಗೆ.”
ಸುಮಾರು 2 ದಶಕಗಳ ಸುದೀರ್ಘ ಕೆರಿಯರ್ ನಂತರ ಪಾರ್ವತಿ, ತನ್ನನ್ನು ತಾನು ಭಾರತೀಯ ಸಿನಿಮಾದ ಬಹುಮುಖಿ ನಟಿಯರಲ್ಲಿ ಒಬ್ಬರು ಎಂಬುದನ್ನು ಸ್ಥಾಪಿಸಿದ್ದಾರೆ. ಕಳೆದ ವರ್ಷ ಈಕೆ ಮಲೆಯಾಳಂನ `ಉಲ್ಲೋಳುಕ್ಕು, ಮನೋರಥಂಗಳ್’ ಮೊದಲಾದ ಚಿತ್ರಗಳಲ್ಲಿ ಅತ್ಯುನ್ನತ ಅಭಿನಯ ನೀಡಿ ಹಲವು ಪ್ರಶಸ್ತಿ ಗಿಟ್ಟಿಸಿದ್ದಾರೆ. ಪ್ರಸಿದ್ಧ ಲೇಖಕ, ಚಿತ್ರಕಥಾ ರೈಟರ್, ನಿರ್ದೇಶಕ ಎಂ.ಟಿ ವಾಸುದೇವನ್ ರ `ಮನೋರಥಂಗಳ್’ OTTಯಲ್ಲಿ ಫೇಮಸ್ ಸೀರೀಸ್ ಎನಿಸಿದೆ.
ಅಂದಹಾಗೆ ಈಕೆಯ ಪೂರ್ವ ಹೆಸರು ಪಾರ್ವತಿ ಮೆನನ್. ಈಗಾಗಲೇ ಈಕೆ ತಮಿಳು ಮಾತ್ರವಲ್ಲದೆ ಕನ್ನಡದ `ಮಿಲನ, ಪೃಥ್ವಿ, ಅಂದರ್‌ಬಾಹರ್, ಮಳೆ ಬರಲಿ…. ಮಂಜೂ ಇರಲಿ,….’ ಮುಂತಾದ ಹಲವು ಚಿತ್ರಗಳಲ್ಲಿ ನಟಿಸಿ, ಗ್ಲಾಮರಸ್ ಮಾತ್ರವಲ್ಲದೆ, ದಕ್ಷಿಣದ ಮಹಾನ್ ಕಲಾವಿದೆಯಾಗಿ ಗುರುತಿಸಿಕೊಂಡಿದ್ದಾರೆ.
ತನ್ನದೇ ಒಂದು ಮಾರ್ಗ
ಈಕೆಯ ಚಿತ್ರಗಳು ಇವರ ಜಟಿಲ ಪಾತ್ರಪೋಷಣೆಯಿಂದಲೇ ಪ್ರಸಿದ್ಧಿ ಪಡೆಯುತ್ತವೆ. ಪ್ರತಿ ಪಾತ್ರದಲ್ಲೂ ಆಳವಾದ ಭಾವನಾತ್ಮಕ ನಂಟು ಇದ್ದೇ ಇರುತ್ತದೆ. `ಉಯರೆ’ ಚಿತ್ರದಲ್ಲಿ ಆ್ಯಸಿಡ್ ಅಟ್ಯಾಕ್ ಸಂತ್ರಸ್ತೆಯ ಗಂಭೀರ ಪಾತ್ರ ನಿರ್ವಹಿಸಿದ್ದರೆ, `ಎನ್ನು ನಿಂಡೆ ಮೊಯಿದ್ದೀನ್’ ಚಿತ್ರದಲ್ಲಿ ಈಕೆ ಅಂತರ್ಧರ್ಮೀಯ ವಿವಾಹವಾದ ನಾಯಕಿಯ ಮನೋಜ್ಞ ಅಭಿನಯ ನೀಡಿದ್ದಾರೆ. `ಪುಳು’ ಚಿತ್ರದಲ್ಲಿ ಅಂತರ್ಜಾತೀಯ ವಿವಾಹವಾದ ನಾಯಕಿ ಪಡು ಬವಣೆಯನ್ನು ಹೃದಯಂಗಮವಾಗಿ ಅಭಿನಯಿಸಿದ್ದಾರೆ. ಮಮ್ಮೂಟ್ಟಿ ಇಲ್ಲಿ ಈಕೆಯ ಅಣ್ಣ. ಅದೇ ತರಹ ದುಲ್ಕರ್ ಸಲ್ಮಾನ್ ಜೊತೆ `ಬೆಂಗಳೂರು ಡೇಸ್’ ಚಿತ್ರದಲ್ಲಿ ರೊಮ್ಯಾಂಟಿಕ್ ಆಗಿ ಮಿಂಚಿದ್ದಾರೆ. ಇದು ಹಿಟ್ ಆಗಿ ತಮಿಳಿಗೂ ರೀಮೇಕ್ ಆಯ್ತು. ಬೆಂಗಳೂರಿನ ಇಂಚಿಂಚು ಜಾಗವನ್ನೂ ಇಲ್ಲಿ ಮನೋಜ್ಞವಾಗಿ ಚಿತ್ರಿಸಲಾಗಿದೆ. ಈಕೆಯ `ಮರಿಯಾನ್’ ತಮಿಳು ಚಿತ್ರ ಸಹ ವಿಮರ್ಶಕರಿಂದ ಉತ್ತಮ ಎನಿಸಿಕೊಂಡಿತು. ಧನುಷ್ ಗೆ ಪೈಪೋಟಿ ನೀಡುವಲ್ಲಿ ಇಲ್ಲಿ ಈಕೆ ಸಕ್ಸೆಸ್. ನಂತರ ಬಾಲಿವುಡ್ ಗೆ ಬಂದು `ಕರೀಬ್ ಕರೀಬ್ ಸಿಂಗ್’ ಹಿಂದಿ ಚಿತ್ರದಲ್ಲಿ ನಟಿಸಿ ಉತ್ತರದವರಿಂದಲೂ ಸೈ ಎನಿಸಿಕೊಂಡರು. ಘಟಾನುಘಟಿ ಇರ್ಫಾನ್ ಜೊತೆ ನಟಿಸಿ ಸೈ ಎನಿಸಿಕೊಳ್ಳುವುದು ಸುಮ್ಮನೆ ಆಗಲಿಲ್ಲ.
ಆದರೆ ಪಾರ್ವತಿ ಯಾವುದೇ ಚಿತ್ರೋದ್ಯಮದ ಹಿರಿ ತಲೆಯ ರಕ್ಷಾಕವಚದಲ್ಲಿ ಬಂದವರಲ್ಲ. ತನ್ನ ಅಪ್ಪಟ ಪ್ರತಿಭೆ, ಅಚ್ಚುಕಟ್ಟಾದ ಶಿಸ್ತಿನ ಕೆಲಸದಿಂದ ಜನಪ್ರಿಯತೆ ಪಡೆದವರು. ಸ್ಕ್ರಿಪ್ಟ್ ಓದದೆ ಚಿತ್ರಕ್ಕೆ ಸೈನ್ ಮಾಡುವುದು ಆಕೆಗೆ ಒಗ್ಗದು. ಒಂದು ನಿರ್ದಿಷ್ಟ ಸಮಯದಲ್ಲಿ ಒಂದೇ ಪ್ರಾಜೆಕ್ಟ್ ಗಾಗಿ ಕೆಲಸ ಮಾಡುವುದು ಈಕೆಯ ಗುಣ. ಅದೇ ತರಹ ಯಾವ ಭಾಷೆಯೇ ಆಗಲಿ, ಅದರಲ್ಲಿನ ಸೊಗಡು ಕಲಿತು ಕನ್ನಡ, ತಮಿಳು, ಹಿಂದಿ ಚಿತ್ರಗಳಿಗೆ ತಕ್ಕಂತೆ ತನ್ನ ಪಾತ್ರಕ್ಕೆ ತಾನೇ ಡಬ್ಬಿಂಗ್ ನೀಡುವುದು ಈಕೆಯ ಹೆಗ್ಗಳಿಕೆ.
ಇತರ ಭಾರತೀಯ ನಟಿಯರು ಆಫ್ ಸ್ಕ್ರೀನ್ ನಲ್ಲಿ ಮಾಡದ ಒಂದು ಕೆಲಸ ಈಕೆಗೆ ಹೆಚ್ಚು ಪ್ರಿಯ. ಅದೇ ಈಕೆಯ ದುರ್ಲಭ ಗುಣ, ಅನ್ಯಾಯದ ವಿರುದ್ಧ ಸಿಡಿದೇಳುವುದು! `ವುಮನ್ ಇನ್ ಸಿನಿಮಾ ಕಿಕ್ಟಿವ್’ ಅತಿ ಪ್ರಮುಖ ಹಾಗೂ ದೃಶ್ಯಮಾನ ಸದಸ್ಯರಲ್ಲಿ ಒಬ್ಬರಾಗಿ, ಆಕೆ ಮತ್ತೆ ಮತ್ತೆ ಮಾಲಿವುಡ್ (ಮಲೆಯಾಳಂ ಚಿತ್ರೋದ್ಯಮ) ನಲ್ಲಿ ಪ್ರಾಪ್ತ ಲೈಂಗಿಕ ಭೇದಭಾವದ ವಿರುದ್ಧ ಸತತ ಹೋರಾಡಿದ್ದಾರೆ.
ಕೇರಳದ ಒಬ್ಬ ಪ್ರಮುಖ ನಟ ನೀಡಿದ ಲೈಂಗಿಕ ಕಿರುಕುಳದ ನಂತರ, 2017ರಲ್ಲಿ ಸಂಘಟಿತ ದೆಸೆಯಿಂದ, ಮಾಲಿವುಡ್ ನಲ್ಲಿ ಹೆಣ್ಣುಮಕ್ಕಳು ಸುರಕ್ಷಿತವಾಗಿ, ಗಂಡಿಗೆ ಸರಿಸಮಾನವಾಗಿ ಸ್ಥಾನಮಾನ ಹೊಂದುವಲ್ಲಿ ಸಾಧ್ಯವಾಗಿದೆ.
“ನನ್ನ ದೇಹವೇ ನನ್ನ ಶೀಲ ಹಾಗೂ ಆಯುಧವಾಗಿದೆ! ಹೀಗಾಗಿ ಸತತ ಪರೀಕ್ಷೆ, ಸವಾಲು, ಸಕ್ರಿಯತೆ ಇತ್ಯಾದಿ ಒಟ್ಟೊಟ್ಟಿಗೆ ಸಾಧಿಸುವುದು ಖಂಡಿತಾ ಸುಲಭವಲ್ಲ!”
ಆಕೆ ತನ್ನೊಂದಿಗೆ ತಾನೇ ಮಾತನಾಡಿಕೊಳ್ಳುತ್ತಾ ಇರುತ್ತಾರೆ. ಇದರಿಂದ ತನ್ನ ಗುರಿ, ದೈಹಿಕ ಹಾಗೂ ಮಾನಸಿಕ ಆರೋಗ್ಯದ ಕಡೆಗೂ ಜಾಗೃತರಾಗಿರಬೇಕು ಎಂಬುದನ್ನು ಖಚಿತಪಡಿಸಿಕೊಳ್ಳುವುದಾಗಿದೆ.
“ನಾನು ಒಬ್ಬ ಸೈನಿಕಳ ತರಹ! ನಾನು ಬಯಸಿದ ರೀತಿಯಲ್ಲೇ ಮಾಡುವಳು. ನ್ಯಾಯೋಚಿತ ಹೋರಾಟವೇ ನನ್ನ ಮುಖ್ಯ ಉದ್ದೇಶ!” ಎನ್ನುತ್ತಾರೆ ಪಾರ್ವತಿ.

ಕಲೆಯ ಪರಾಮರ್ಶೆಗೆ ಸದವಕಾಶ
ಆರಂಭದಲ್ಲಿ ಪಾರ್ವತಿಯ ಪೇರೆಂಟ್ಸ್ ಇಬ್ಬರೂ ವಕೀಲರು. ನಂತರ ಬ್ಯಾಂಕರ್ ರೂಪದಲ್ಲಿ ತಮ್ಮ ಕೆರಿಯರ್ ಮುಂದುವರಿಸಿದರು. ಕುಟುಂಬದ ಆರ್ಥಿಕ ಸ್ಥಿತಿಯ ಸುಭದ್ರತೆ ಅವರಿಗೆ ಮುಖ್ಯವಾಗಿತ್ತು. ಹೀಗಾಗಿ ಪಾರ್ವತಿ ಮತ್ತು ಆಕೆಯ ಅಣ್ಣ ತಮ್ಮ ಕಲಾಸಕ್ತಿ, ಕಲಾಭಿರುಚಿ ಬೆಳೆಸಿಕೊಳ್ಳಲು ಈ ಹಿರಿಯರು ಹೆಚ್ಚಿನ ಪ್ರೋತ್ಸಾಹ ನೀಡಿದರು.
“ಸ್ತ್ರೀವಾದಿ ತಂದೆಯ ಆರೈಕೆಯಲ್ಲಿ ಬೆಳೆದವಳು ನಾನು. ಆತ ಸಮತಾವಾದಿ ಸಹ. ಅಂಥ ವಿಶೇಷ ಹಕ್ಕುಗಳನ್ನು ಪಡೆದೇ ದೊಡ್ಡವಳಾದೆ. ಮನೆಯಲ್ಲಿ ಹೆಣ್ಣು/ಗಂಡು ಇಂಥದ್ದೇ ಕೆಲಸ ಮಾತ್ರ ಮಾಡಬೇಕೆಂಬ ಕಡ್ಡಾಯವೇನೂ ಇರಲಿಲ್ಲ. ಅಮ್ಮನಿಗೆ ಪ್ರತಿ ಮನೆಗೆಲಸದಲ್ಲೂ ಅಪ್ಪ ನೆರವಾಗುತ್ತಿದ್ದರು. ಈಗಲೂ ನಾನು ದುಡಿದು ದಣಿದು ಬಂದು ಸೋಫಾದಲ್ಲಿ ಒರಗಿದಾಗ, ಅಣ್ಣನಿಗೋ ಅಪ್ಪನಿಗೋ ಟೀ ಮಾಡಿಕೊಡಿ ಎಂದು ಹಕ್ಕಿನಿಂದ ಕೇಳಿ ಪಡೆಯುವವಳು ನಾನು!”
ಪಾರ್ವತಿಯ ಅಣ್ಣ ಟೊರಾಂಟೊದಲ್ಲಿ ಕಾರ್ಪೊರೇಟ್ ಸ್ಪೇಸ್ ನಲ್ಲಿ ನೌಕರಿಯಲ್ಲಿದ್ದಾರೆ. ಈತ ಸ್ವಸುಶಿಕ್ಷಿತ ಫೋಟೋಗ್ರಾಫರ್ ಹಾಗೂ ಚಿತ್ರ ನಿರ್ಮಾಪಕ. ತನ್ನ ಜೀವನದ ಮೇಲೆ ಮಹತ್ವಪೂರ್ಣ ಪ್ರಭಾವ ಬೀರಿದ ವ್ಯಕ್ತಿ ಆತ ಎಂದು ತುಂಬು ಮನದಿಂದ ಸ್ಮರಿಸುತ್ತಾರೆ. ಹರೆಯಕ್ಕೆ ಕಾಲಿಟ್ಟ ಹೊಸತರಲ್ಲಿ ಅಪರಿಚಿತ ಯುವಕರು ಈಕೆಯ ಬಾಯ್ ಫ್ರೆಂಡ್ ಆಗಲು ಬಯಸಿದಾಗ, ಆ ಪ್ರಸ್ತಾಪವನ್ನು ತನ್ನ ಅಣ್ಣನ ಕಡೆ ತಿರುಗಿಸಿ, ಅವರನ್ನೇ ಕೇಳಿ ಎಂದು ನಗುತ್ತಿದ್ದರಂತೆ! ಅಣ್ಣ ಈಕೆಗೆ, “ಸದಾ ನಾನು ನಿನ್ನ ರಕ್ಷಾಕವಚ ಆಗಿರುತ್ತೇನೆ ಎಂದುಕೊಳ್ಳಬೇಡ. ಅದು ತೀರಾ ಅನಿವಾರ್ಯವಾದಾಗ ಖಂಡಿತಾ ನಾನು ನಿನ್ನ ಜೊತೆಗಿರುತ್ತೇನೆ. ಹಾಗಾಗಿ ನೀನೇ ನಿನ್ನ ರಕ್ಷಣೆ ಮಾಡಿಕೊಳ್ಳುವ ಜವಾಬ್ದಾರಿ ತೆಗೆದುಕೊಳ್ಳಬೇಕು! ನೀನು ಈ ನಿಟ್ಟಿನಲ್ಲಿ ಸ್ವಾವಲಂಬಿ ಆಗಲೇಬೇಕು!”
ಆ ಕುರಿತಾಗಿ ಪಾರ್ವತಿ, “ಆಗೇನೋ ನನಗೆ ಆ ಉತ್ತರ ಇಷ್ಟವಾಗಲಿಲ್ಲ. ಆದರೆ ಮುಂದೆ ನಾನು ಪ್ರೌಢಳಾದಂತೆ ಆತನ ಮಾತಿನ ಮರ್ಮ ಅರಿತುಕೊಂಡಿ. ನಮ್ಮಿಬ್ಬರ ನಡುವೆ ಒಂದು ಮಹತ್ವಪೂರ್ಣ, ಸಶಕ್ತ ಸಂಬಂಧವಿದೆ, ನಾವು ಪ್ರೌಢರಾದಂತೆ ಅದು ಒಂದು ಹೊಸ ಆಕಾರ ಪಡೆಯಿತು. ನಾವು ಹೈಸ್ಕೂಲ್ ನಲ್ಲಿದ್ದಾಗ ಅಣ್ಣ ನನ್ನನ್ನು ಆಂಗ್ಲ ಸಾಹಿತ್ಯ, ಸಂಗೀತ ಲೋಕಕ್ಕೆ ಪರಿಚಯಿಸಿದ. ಈಗೆಲ್ಲ ಆತ ನನ್ನ ಧಾರ್ಮಿಕ, ಆಧ್ಮಾತ್ಮಿಕ ವಿಚಾರಗಳ ಕುರಿತು ಸಲಹೆ ನೀಡುತ್ತಿರುತ್ತಾನೆ. ನಾವಿಬ್ಬರೂ ಮಾತುಕಥೆಗೆ ಕುಳಿತರೆ ಚರ್ಚಿಸದ ವಿಷಯವೇ ಇಲ್ಲ. ಇದರಲ್ಲಿ ಅಡುಗೆಯಿಂದ ಹಿಡಿದು ಬ್ರಹ್ಮಾಂಡದಲ್ಲಿನ ಸಮಸ್ತ ವಿಷಯಗಳ ವಿಚಾರ ವಿಮರ್ಶೆ ನಡೆಯುತ್ತಿರುತ್ತದೆ!”
ಎಲ್ಲೆಡೆ ಇರುವಂತೆ ಕೇರಳದ ಕೆಲವು ಪ್ರದೇಶಗಳಲ್ಲೂ ಪುರುಷಪ್ರಧಾನ ಸಮಾಜವೇ ರೂಢಿಯಲ್ಲಿದೆ.
“ನನ್ನ ತಂದೆಯ ತಾಯಿ, ಅಂದ್ರೆ ನಮ್ಮಜ್ಜಿ ಇಂಥ ಸಮಾಜದ ಬಲವಾದ ಸಮರ್ಥಕಿ. ಹಾಗೇಂತ ಯಾವುದನ್ನೂ ಆಕೆ ಅತಿ ಮಾಡುತ್ತಿರಲಿಲ್ಲ. ಹೆಣ್ಣುಮಕ್ಕಳ ವಿಷಯದಲ್ಲಿ ತುಸು ಮಡಿವಂತಿಕೆ ಜಾಸ್ತಿ.”
ಪಾರ್ವತಿ ತನ್ನ ಕಸಿನ್ಸ್ ಮಧ್ಯೆ ಮಹಾ ತುಂಟಿ, ತರಲೆ ಎನಿಸಿದ್ದರು. ಕೇರಳದ ಪ್ರಸಿದ್ಧ ಓಣಂ ಹಬ್ಬದ (ಸಂಕ್ರಾಂತಿ ತರಹ) ಸಂದರ್ಭದಲ್ಲಿ ಮಕ್ಕಳೆಲ್ಲ ಮನೆ ಮುಂದೆ ಮರಳಿನಿಂದ ಗುಡಿ ಕಟ್ಟಿಕೊಂಡು ಆಡುತ್ತಾರೆ. ಹೆಣ್ಣಾದ್ದರಿಂದ ಅಲ್ಲಿ ಈಕೆಗೆ ಪೂಜಾರಿಯ ಪಾತ್ರ ಕೊಡುತ್ತಿರಲಿಲ್ಲ. ಆಗೆಲ್ಲ ಮಹಾ ಸಿಟ್ಟಿನಿಂದ ಜಗಳವಾಡುತ್ತಿದ್ದರಂತೆ. ತಾನು ಹೆಣ್ಣಾದ್ದರಿಂದ ಎಷ್ಟೋ ವಿಷಯಗಳಲ್ಲಿ ಹೀಗೆ ಕಟ್ಟುಪಾಡುಗಳೇಕೆ ಎಂದು ಸಿಡಿದುಬೀಳುತ್ತಿದ್ದರು.
“ಆಗಿನಿಂದಲೇ ಎಲ್ಲದಕ್ಕೂ ಸಿಡಿದೆದ್ದು ಜಗಳವಾಡಬೇಕು ಎಂದು ನನ್ನಲ್ಲಿ ಜಾಗೃತಿ ಉಂಟಾಯಿತು,” ಎನ್ನುತ್ತಾರೆ.

ಕಾಲಕ್ಕೆ ತಕ್ಕಂತೆ ಬದಲಾವಣೆ
ಈ ತರಹದ ಲಿಂಗತಾರತಮ್ಯವನ್ನು ಆಕೆ ಎಂದೂ ಸಹಿಸುತ್ತಿರಲಿಲ್ಲ. ಅದರ ಮೂಲದ ಬಗ್ಗೆ ಕೆದಕಿದಾಗ, ತೃಪ್ತಿಕರ ಉತ್ತರ ಸಿಗಲಿಲ್ಲ. “ಕಾಲ ಕಳೆದಂತೆ ನನಗೆ ತಿಳಿದುಬಂದದ್ದು ಅಂದ್ರೆ, ಹಿರಿಯರಾದ ಹೆಂಗಸು, ಗಂಡಸರ ಬಳಿಯೂ ಇದಕ್ಕೆ ಸೂಕ್ತ ಉತ್ತರವಿಲ್ಲ ಎಂಬುದು.”
ಕಿಶೋರಾವಸ್ಥೆ ತಲುಪುತ್ತಿದ್ದಂತೆ, ಈಕೆ ಮನೆಯಲ್ಲಿ ಅತಿ ವಾಚಾಳಿ, ಗಯ್ಯಾಳಿ, ಸಹನೆ ಇಲ್ಲದವಳು, ಸದಾ ಸಮಸ್ಯಾಗ್ರಸ್ತೆ ಇತ್ಯಾದಿ ಬಿರುದು ಹೊರಬೇಕಾಯಿತು. ಎಲ್ಲದಕ್ಕೂ ಅಡ್ಡಬಾಯಿ ಹಾಕುತ್ತಾ ಪ್ರಶ್ನೆ ಕೇಳುತ್ತಾಳೆ ಎಂಬುದೇ ಮುಖ್ಯ ಆಕ್ಷೇಪಣೆ.
ಬಾಲ್ಯದ ಕೆಲವು ವರ್ಷ ಈಕೆ ದೆಹಲಿಯಲ್ಲಿ ಕಳೆದಿದ್ದುಂಟು. ಆ ನಗರ ಆಕೆಯ ಮೇಲೆ ಗಾಢ ಪ್ರಭಾವ ಬೀರಿತು. “ಇಂದಿಗೂ ನನಗೆ ದೆಹಲಿಯ ಬಹುತೇಕ ಜಾಗಗಳ ನೆನಪಿದೆ. ಕರೋಲ್ ಬಾಗ್ ನನ್ನ ಅಚ್ಚುಮೆಚ್ಚಿನ ಸ್ಥಳ, ಅದು ಮಿನಿ ದ.ಭಾರತ ಎಂದರೂ ಉತ್ಪ್ರೇಕ್ಷೆಯಲ್ಲ! ಅಲ್ಲಿನ ಮದ್ರಾಸ್ ಸ್ಟೋರ್, ನಿರುವಾ ಐಸ್ ಕ್ರೀಂ ಪಾರ್ಲರ್, ಮೊದಲ ಸಲ ಬಾಯ್ ಕಟ್ ಮಾಡಿಸಿದ್ದು. ಸೈಕಲ್ ರಿಕ್ಷಾದಲ್ಲಿ ಹೋಗುವಾಗ ಬಿದ್ದದ್ದು… ಎಲ್ಲವೂ ಕಣ್ಣಿಗೆ ಕಟ್ಟಿದಂತಿದೆ! ಹೋಳಿ, ದೀಪಾವಳಿ ಹಬ್ಬಗಳ ಆಚರಣೆ ಮರೆಯಲು ಸಾಧ್ಯವೇ ಇಲ್ಲ. ನಾವಿದ್ದ ಪುಟ್ಟ ಮನೆ, ಸುತ್ತಮುತ್ತಲ ಉ. ಭಾರತೀಯರ ಸ್ನೇಹ, ವಿಶ್ವಾಸ… ಯಾವುದೂ ಮರೆಯುವಂತಿಲ್ಲ.”
ದೆಹಲಿ ನಂತರ ಆಕೆಯ ತಂದೆಗೆ ಕೇರಳದ ರಾಜಧಾನಿ ತಿರುವನಂತಪುರಕ್ಕೆ ವರ್ಗಾವಣೆ ಆಯ್ತು. ಅಲ್ಲಿನ ಒಂದು ಕೇಂದ್ರೀಯ ವಿದ್ಯಾಲಯದಲ್ಲಿ ಈಕೆಯ ವಿದ್ಯಾಭ್ಯಾಸ ಮುಂದುವರಿಯಿತು. ಈ ರೀತಿ ಈಕೆ ಹಲವು ಭಾಷೆಗಳನ್ನು ಮಾತನಾಡಲು, ಓದಿ, ಬರೆಯಲು ಕಲಿಯುವಂತಾಯಿತು.
“ನನ್ನ ದೃಷ್ಟಿಯಲ್ಲಿ ಭಾಷೆ ಒಂದು ಭಾವನಾತ್ಮಕ ಅನುಬಂಧ. ಚರ್ಮದ ಮೇಲೆ ಎಣ್ಣೆ ಅಂಟಿದಂತೆ, ಬಲು ಬೇಗ ಜಾರಿ ಮುಂದೆ ಹೋಗುತ್ತದೆ. ಇದು ನನ್ನ ನಟನೆಯ ಎಲ್ಲಾ ಚಿತ್ರಗಳಿಗೂ ಬಹಳ ಸಹಾಯಕವಾಯಿತು.”
ಪಾರ್ವತಿಯ ತಾಯಿ ಪ್ರತಿಭಾನ್ವಿತ ಭರತನಾಟ್ಯ ಕಲಾವಿದೆ. ಮಗಳಿಗೂ ಅದನ್ನೇ ಕಲಿಸಿದರು. ತಂದೆಗೆ ಆಟೋಟ, ಸಂಗೀತಗಳಲ್ಲಿ ಆಸಕ್ತಿ. “ನಮ್ಮಲ್ಲಿ ಸಂಜೆ ನಂತರ ಕರೆಂಟ್ ಕೈ ಕೊಟ್ಟಾಗ, ಅಪ್ಪ ವೈಲಿನ್ ನುಡಿಸಿದರೆ, ಅಣ್ಣ ಗಿಟಾರ್ ಬಾರಿಸುತ್ತಿದ್ದ. ನಾನೂ, ಅಮ್ಮ ಹಾಡುತ್ತಿದ್ದೆ.”
ಇವರ ನೃತ್ಯ ಗುರುಗಳು ಪಾರ್ವತಿಯ ಹೆತ್ತವರ ಬಳಿ, ಈಕೆಗೆ ಮುಂದೆ ಪ್ರೊಫೆಶನಲ್ ಶಾಸ್ತ್ರೀಯ ನೃತ್ಯಪಟು ಆಗುವ ಎಲ್ಲಾ ಲಕ್ಷಣ ಹೊಂದಿದ್ದಾಳೆ. ಹೀಗಾಗಿ ಪೂರ್ಣ ಪ್ರಮಾಣದ ನೃತ್ಯ ಪಾಠಗಳಾಗಲಿ ಎಂದರು. ಅಷ್ಟಾದರೂ ಆಕೆಯ ನಟನಾ ಹುಚ್ಚಿನೆದರು, ನೃತ್ಯವನ್ನೇ ವೃತ್ತಿಯಾಗಿಸಿಕೊಳ್ಳಲು ಯಾರೂ ಒತ್ತಾಯ ಹೇರಲಿಲ್ಲ. ಅವರ ತಾಯಿ ತಂದೆ ತಮ್ಮ ಆಸೆ ಅಭಿಪ್ರಾಯಗಳನ್ನು ಎಂದೂ ಮಕ್ಕಳ ಮೇಲೆ ಹೇರಲಿಲ್ಲ. ಹೀಗಾಗಿ ಮಕ್ಕಳಿಬ್ಬರೂ ತಾವು ಬಯಸಿದಂಥ ವೃತ್ತಿಗಳನ್ನೇ ಆರಿಸಿಕೊಂಡರು.
ಹೈಸ್ಕೂಲ್ ದಾಟಿದ ನಂತರ ಈಕೆಗೆ ಕರಣ್ ಜೋಹರ್ ನಿರ್ದೇಶನದ ಹಿಂದಿ ಚಿತ್ರಗಳು ಬಹಳ ಇಷ್ಟವಾಗತೊಡಗಿತು ಏಕತಾ ಕಪೂರ್ ರ ಕೌಟುಂಬಿಕ ಧಾರಾವಾಹಿಗಳು ಈಕೆಗೆ ಬಲು ಅಚ್ಚುಮೆಚ್ಚು. `ಕಸೌಟಿ ಝಿಂದಗಿ ಕೀ’ ಧಾರಾವಾಹಿಯ ಒಂದು ಪ್ರಮುಖ ಪಾತ್ರ ತೀರಿಕೊಂಡಾಗ, ಪಾರ್ವತಿ ಇಡೀ ರಾತ್ರಿ ನಿದ್ದೆ ಇಲ್ಲದೆ ಅತ್ತಿದ್ದರಂತೆ!
ಅದನ್ನೆಲ್ಲ ನೆನಪಿಸಿಕೊಳ್ಳುತ್ತಾ ಪಾರ್ವತಿ ಹೇಳುತ್ತಾರೆ, “ನಾನು ಡಿಗ್ರಿ ಮುಗಿಸುವಷ್ಟರಲ್ಲಿ ಜೀವನದ ಹಲವು ಸಿಹಿಕಹಿ ಕಂಡುಂಡಿದ್ದೆ. ನಾನು ಹೇಗಿದ್ದೇನೋ ಹಾಗೇ ನನ್ನನ್ನು ಇಷ್ಟಪಡುವಂಥ ವ್ಯಕ್ತಿ ಒಬ್ಬರೂ ಸಿಗಲಿಲ್ಲ. ಜನರನ್ನು ಮೆಚ್ಚಿಸಲು ಎಷ್ಟೋ ಸಲ ನಾನು `ಹಾರ್ಡಿ ಬಾಯ್ಸ್, ನ್ಯಾನ್ಸಿ ಡೂ’ ಇತ್ಯಾದಿ ಪತ್ತೇದಾರಿ ಕಾದಂಬರಿ ಸಹ ಓದುತ್ತಿದ್ದೆ.”

ಕನಸುಗಳು ಗರಿಗೆದರಿದಾಗ
ಹೈಸ್ಕೂಲ್ ಮುಗಿಯುವ ಹೊತ್ತಿಗೆ ಪಾರ್ವತಿ ಒಂದು ಲೋಕಲ್ ಮಟ್ಟದ ಸ್ಥಾನೀಯ ಟಿವಿ ಸ್ಪರ್ಧೆಯಲ್ಲಿ ವಿಜೇತೆ ಎನಿಸಿದರು. ಈ ಮಾಧ್ಯಮದಿಂದ, ಅಲ್ಲಿನ ಸ್ಥಳೀಯ ಚಾನೆಲ್ ಒಂದರಲ್ಲಿ 2 ಲೈವ್ ಸಂಗೀತ ಶೋಗಾಗಿ ಖಾ ಆಗಿ ಮೊದಲ ಕೆಲಸ ದೊರಕಿತು. ಆಕೆ ಆಗಿನ್ನೂ 2ನೇ ಪಿಯುಸಿ ವಿದ್ಯಾರ್ಥಿನಿ.
ಇಂದತೂ ಆಕೆಯ ಪಾಲಿಗೆ ಹೊಸ ಪ್ರಪಂಚವೇ ಆಗಿತ್ತು. ಆಕೆಯ ಹೆತ್ತವರಿಗೆ ಸಹ, ಸದಾ ಆಕೆಯ ಸುರಕ್ಷತೆಯ ನೆಪದಲ್ಲಿ ಅಕ್ಕಪಕ್ಕದಲ್ಲೇ ಇರುವುದು ಅಸಾಧ್ಯ ಎಂದು ತಿಳಿದಿತ್ತು. ಈಕೆಯ ನಿರ್ಧಾರಗಳನ್ನು ಅವರು ಸಮರ್ಥಿಸಿದರು. 19ರ ಹರೆಯಕ್ಕೆ ಆಕೆ ಸಣ್ಣ ನಗರದಿಂದ ಕೇರಳದ ವಾಣಿಜ್ಯನಗರಿ ಕೊಚ್ಚಿನ್ ಗೆ ನಟನೆಗಾಗಿ ಒಬ್ಬಳೇ ಹೊರಡುವುದೆಂದು ಹೆಜ್ಜೆ ಇಟ್ಟಾಯಿತು.
ಈಕೆಯ ಮೊದಲ ಚಿತ್ರ `ನೋಟ್ ಬುಕ್’ ಮಲೆಯಾಳಂ ಭಾಷೆಯಲ್ಲಿ ಉತ್ತಮ ಹೆಸರು ಗಳಿಸಿತು. ಇಲ್ಲಿ ಈಕೆ ಒಬ್ಬ ಕಾಲೇಜು ಕಿಶೋರಿಯಾಗಿ ಮಿಂಚಿದ್ದರು. ಇದರ ಪಾತ್ರ ಪೋಷಣೆಗಾಗಿ ಅಂಥ ಒಬ್ಬ ತಿಳಿದ ವ್ಯಕ್ತಿಯ ಚಲನವಲನ ನೆನಪಿಟ್ಟು ನಟಿಸುವಂತೆ ಆ ಚಿತ್ರದ ನಿರ್ದೇಶಕರು ಹೇಳಿದ್ದರು. ಆ ಪಾತ್ರ ಬಳಸುವ ಟೂತ್ ಪೇಸ್ಟ್, ತಿನ್ನುವ ತಿಂಡಿ ಊಟದ ಪ್ರತಿಯೊಂದರ ಕುರಿತೂ ಆಳವಾಗಿ ವಿವರ ತಿಳಿದು, ತಾನು ಆ ಪಾತ್ರದಲ್ಲಿ ಪರಕಾಯ ಪ್ರವೇಶ ಪಡೆಯಲು ಸಿದ್ಧರಾದರು.
ಅದೇ ಕ್ರಮವನ್ನು ಈಕೆ ತನ್ನ ಮುಂದಿನ ಎಲ್ಲಾ ಚಿತ್ರಗಳಿಗೂ ಅನ್ವಯಿಸಿಕೊಂಡರು.
“ಚಿತ್ರಕ್ಕೆ ಅಗತ್ಯವಿರುವಂತೆ ಆಯಾ ಪಾತ್ರಗಳ ಎಲ್ಲಾ ಒಳಹೊರಗನ್ನು ಆಮೂಲಾಗ್ರವಾಗಿ ಅರಿಯುತ್ತೇನೆ.”
ಇದರಲ್ಲಿ ಆ ಪಾತ್ರದ ಆರ್ಥಿಕ ಸ್ಥಿತಿ, ಆಕೆಗೆ ಸಿಗುವ ಗೌರವಾದರ, ಎದುರಿಸುವ ನಾನಾ ಸಮಸ್ಯೆಗಳು, ಊಟ ತಿಂಡಿಯ ಅಭ್ಯಾಸ, ಯಾವ ಬ್ರಾಂಡ್ ನ ಅಂಡರ್ ಗಾರ್ಮೆಂಟ್ಸ್ ಧರಿಸುವುದು, ಇತ್ಯಾದಿ ಎಲ್ಲಾ ವಿವರಗಳನ್ನೂ ತಿಳಿದುಕೊಳ್ಳುತ್ತಿದ್ದರು.
ಈಕೆ ಯಾವುದೇ ಆ್ಯಕ್ಟಿಂಗ್ ಸ್ಕೂಲ್ ನಿಂದ ಔಪಚಾರಿಕ ತರಬೇತಿ ಪಡೆದಿಲ್ಲ. ಹೀಗಾಗಿ ಸತತ ತನ್ನ ಜ್ಞಾನ ಹೆಚ್ಚಿಸಿಕೊಳ್ಳಲು, ಹೊಸ ಹೊಸ ಟೆಕ್ನಿಕ್ಸ್ ಪೂರ್ತಿ ಕಲಿಯತೊಡಗಿದರು. ಆಕೆ ಆ ನಿಟ್ಟಿನಲ್ಲಿ ಹುಚ್ಚಿಯಂತೆ `ಇನ್ ಸೈಡ್ ದಿ ಆ್ಯಕ್ಟರ್ಸ್ ಸ್ಟುಡಿಯೋ’ ನೋಡುತ್ತಿದ್ದರು. ಇದು ಟಿವಿ ಸೀರೀಸ್ ಆಗಿದ್ದು, ಲೇಖಕ/ನಾಯಕನಟ ಜೇಮ್ಸ್ ಲಿಪ್ಟನ್, ಹಲವು ಚಿತ್ರ ನಿರ್ಮಾಪಕರ ಸಂದರ್ಶನ ನಡೆಸುತ್ತಿದ್ದ. ಹಾಗೆಯೇ ತನ್ನ ಸಹನಟನಟಿಯರು ಸೂಚಿಸಿದ ಪುಸ್ತಕಗಳನ್ನು ತರಿಸಿ ಓದಿದರು. ಉನ್ನತ ಟೆಕ್ನಿಕ್ಸ್ ಕಲಿಯಲು ಪಾಂಡಿಚೆರಿಯ `ಆದಿಶಕ್ತಿ’ ಥಿಯೇಟರ್ ನಲ್ಲೂ ಸಕ್ರಿಯವಾಗಿ ಪಾಲ್ಗೊಂಡರು.
ಪಾರ್ವತಿ ತಾನಾಗಿ ನಟಿಸುತ್ತಾ…ಆದರೆ ಈಕೆಯ ಸಾರ್ಜನಿಕ ಛವಿ ಒಮ್ಮೊಮ್ಮೆ ಆನ್ ಸ್ಕ್ರೀನ್ ಪಾತ್ರಗಳಿಂದ ಭಿನ್ನವಾಗಿರುತ್ತಿತ್ತು. “ನಾನು ಎಷ್ಟು ಸಲ ಒಬ್ಬ ಸಕ್ರಿಯ ಆ್ಯಕ್ಟಿವಿಸ್ಟ್ ಆಗಿ ಕಂಡುಬರುತ್ತೇನೋ, ಅಷ್ಟೇ ಕಡಿಮೆ ಸಮಯದಲ್ಲಿ ಒಂದು ವಿಶ್ವಸನೀಯ ಪಾತ್ರದಲ್ಲಿ ಮುಳುಗಿ ಹೋಗುತ್ತೇನೆ. ನಾನು ತೆರೆಯಲ್ಲಿ ನಟಿಸುವ ಅಂಜಲಿ, ಪಲ್ಲವಿ ಅಲ್ಲ…. ನಾನೇ ಬೇರೆ ಎಂದು ಎಷ್ಟೋ ಸಲ ಸ್ಪಷ್ಟೀಕರಣ ನೀಡಿದ್ದೇನೆ.”
ಒಬ್ಬ ಉತ್ತಮ ಆ್ಯಕ್ಟಿವಿಸ್ಟ್ ಆಗಿದ್ದುಕೊಂಡು, ಒಬ್ಬ ಬೆಸ್ಟ್ ನಟಿಯಾಗಿಯೂ ಸಾಧನೆ ಮಾಡಬಹುದೆಂಬುದು ಆಕೆಯ ತರ್ಕ. ತಾನು ಎಲ್ಲೇ ಹೋಗಿರಲಿ, ಅಲ್ಲಿ ಕಂಡು ಕೇಳಿಬರುವ ಅನ್ಯಾಯಗಳ ವಿರುದ್ಧ ಸಿಡಿದು ನಿಲ್ಲುವುದೇ ಈಕೆಯ ಆದ್ಯ ಕರ್ತವ್ಯ. ಈಗೀಗ ಆ ಸಿಟ್ಟನ್ನೆಲ್ಲಾ ತನ್ನ ಪಾತ್ರಗಳ ಮೂಲಕ ಕೆಂಡ ಕಾರುತ್ತಾರೆ.
“ನೋವು ಸಹಿಸುವುದು, ಅದರ ವಿರುದ್ಧ ಹೋರಾಡುವುದು ಇತ್ಯಾದಿ ಬದಿಗಿರಿಸಿ, ಅದರಿಂದ ನಾನೇನು ಕಲಿಯಬಹುದು ಎಂಬುದನ್ನೂ ಗಮನಿಸುತ್ತೇನೆ.”
ಇನ್ನಷ್ಟು ಮತ್ತಷ್ಟು ಪಾತ್ರಗಳಿಗೆ ಪ್ರತಿ ಬಾರಿಯೂ ಆಡಿಶನ್ ನೀಡುತ್ತಾ ನಟನೆಯಲ್ಲಿ ಗಟ್ಟಿಗಿತ್ತಿ ಎನಿಸಿದ್ದಾರೆ. ತಾನು ಎಂದೂ ಕಂಡೂ ಕೇಳಿರದಂಥ ಅದ್ಭುತ ಪಾತ್ರಗಳ ನಿರ್ವಹಣೆ ನಿಜಕ್ಕೂ ಒಂದು ಸವಾಲೇ ಸರಿ ಎನ್ನುತ್ತಾರೆ. ಭಾವಿ ನಿರ್ದೇಶಕರ ಕುರಿತಾಗಿ ಹೇಳುತ್ತಾ, “ನಾನು ಈಗಾಗಲೇ ಏನೆಲ್ಲ ಪಾತ್ರಗಳಲ್ಲಿ ನಟಿಸಿದ್ದೆನೋ, ನಾನು ಅಷ್ಟೇ ಎಂದು ಎಣಿಸದಿರಿ. ಅದಕ್ಕಿಂತ ಹೆಚ್ಚಿನ ಮಹತ್ತರವಾದುದನ್ನು ನಾನು ಸಾಧಿಸಬಲ್ಲೆ!” ಎನ್ನುತ್ತಾರೆ.
ಒಟ್ಟಾರೆ ಭಾರತೀಯ ಚಿತ್ರರಂಗದಲ್ಲಿ ಮಲೆಯಾಳಂ ಚಿತ್ರಗಳು ಅತಿ ಪ್ರಗತಿಶೀಲ ಎಂದು ಗುರುತಿಸಲ್ಪಟ್ಟಿವೆ. ಆದರೆ 2017ರ ಫೆಬ್ರವರಿಯಲ್ಲಿ ಈಕೆ ಆ ಸಂಸ್ಕೃತಿಗೆ ತಕ್ಕಂತೆ ಬ್ಯಾಲೆನ್ಸ್ ಮಾಡಲು ವಿವಶರಾಗಬೇಕಾಯಿತು. ಸ್ತ್ರೀ ದ್ವೇಷ, ಲೈಂಗಿಕ ಶೋಷಣೆಗಳ ವಿರುದ್ಧ ಸದಾ ಕಿಡಿ ಕಾರುವುದೇ ಈಕೆಯ ಸ್ವಭಾವ. ಆ ಸಂದರ್ಭದಲ್ಲಿ ಅಲ್ಲಿನ ಒಬ್ಬ ಪ್ರಮುಖ ನಟಿಯನ್ನು ಅಪಹರಿಸಿ, ಆಕೆಯ ಕಾರಿನಲ್ಲೇ ರೇಪ್ ನಡೆಸಲಾಗಿತ್ತು.
ಮಾಲಿವುಡ್ ನ ಒಬ್ಬ ಶಕ್ತಿಶಾಲಿ ಸೂಪರ್ ಸ್ಟಾರ್ ದಿಲೀಪ್ ಈ ಪ್ರಕರಣದಲ್ಲಿ ಪ್ರಮುಖ ಆರೋಪಿ. ಅಪರಾಧಿಗಳಿಗೆ ಸಹಕರಿಸುವುದರಲ್ಲಿ ಈತನ ಪ್ರಮುಖ ಕೈವಾಡವಿತ್ತು. ಈ ಪ್ರಕರಣದಲ್ಲಿ ಆತನಿಗೆ 3 ತಿಂಗಳ ಕಠಿಣ ಸೆರೆವಾಸ ವಿಧಿಸಲಾಗಿತ್ತು, ನಂತರ ಬೇಲ್ ದೊರಕಿತು. ಸದ್ಯಕ್ಕೆ ಇನ್ನೂ ಈ ಹಗರಣ ಕೇರಳದ ಒಂದು ಹೈಕೋರ್ಟ್ ನಲ್ಲಿ ಇನ್ನೂ ನಡೆಯುತ್ತಿದೆ. (ಈ ಲೇಖನ ಅಚ್ಚಿಗೆ ಹೋಗುವ ಹೊತ್ತಿಗೆ).
ಗಂಭೀರ ಪ್ರತಿಕ್ರಿಯೆಗಳನ್ನು ಎದುರಿಸಿದ್ದು
ಈ ಹಗರಣ ನಡೆದ 8 ವರ್ಷಗಳಲ್ಲಿ ಇದು ಕೇರಳದ ಚಿತ್ರೋದ್ಯಮಕ್ಕೇ ಒಂದು ಲಿಟ್ಮಸ್ ಟೆಸ್ಟ್ ನಂತೆ ಆಗಿಹೋಯಿತು. ಇಲ್ಲಿ ಎಷ್ಟೋ ನಟಿಯರು ಇದರ ವಿರುದ್ಧ ಸಹನಟಿಯರ ಜೊತೆ ಸಿಡಿದು ನಿಂತರು. ಅದೇ ಸಂದರ್ಭದಲ್ಲಿ ಪ್ರಭಾವಶಾಲಿ ಗಂಡಸರು ದಿಲೀಪ್ ರಕ್ಷಣೆಗೆ ಆಹೋರಾತ್ರಿ ದುಡಿದರು. ಮೋಹನ್ ಲಾಲ್ ರಂಥ ದಿಗ್ಗಜ ನಟರು, ಇಂಥ ಲೈಂಗಿಕ ಕಿರುಕುಳಗಳನ್ನು ಅತಿ ತುಚ್ಛವಾಗಿ ಖಂಡಿಸಿದರು. ಆಗ ಆತ `ಅಸೋಸಿಯೇಶನ್ ಆಫ್ ಮಲೆಯಾಳಂ ಮೂವಿ ಆರ್ಟಿಸ್ಟ್,’ ಸಂಘದ ಅಧ್ಯಕ್ಷರಾಗಿದ್ದರು. ಆತ ಮೀಟೂ ಆಂದೋಲನದ ಬಗ್ಗೆಯೂ ಪ್ರಸ್ತಾಪಿಸುತ್ತಿದ್ದರು, ಆ ಮೂಲಕ ವಿಶ್ವದೆಲ್ಲೆಡೆಯ ಹೆಂಗಸರು ತಮ್ಮ ವೈಯಕ್ತಿಕ ಅನುಭವಗಳನ್ನು ಹಂಚಿಕೊಂಡರು. ಇದನ್ನು ಆತ `ಎಸ್ಸೆಂಟ್ರಿಸಿಟಿ’ ಎಂದು ವ್ಯಾಖ್ಯಾನಿಸಿದರು.
`ವುಮನ್ ಇನ್ ಸಿನಿಮಾ ಕ್ಲೇಟಿವ್’ ಸಂಘದ ಸದಸ್ಯರು ಬದಲಾವಣೆ ತರಬೇಕನ್ನುವ ಪ್ರಯಾಸದ ನಿಟ್ಟಿನಲ್ಲಿ ನೇತೃತ್ವ ವಹಿಸಿದರು. ಇದಕ್ಕೆ ಅದು ಗಂಭೀರ ಸ್ವರೂಪದ ಪ್ರತಿಕ್ರಿಯೆಗಳನ್ನು ಎದುರಿಸಬೇಕಾಯಿತು. ಈ ಸಂಘ ಸೆಟ್ ನಲ್ಲಿ ಲೈಂಗಿಕ ಶೋಷಣೆಯ ದೂರುಗಳ ಕುರಿತು ಪರೀಕ್ಷೆಗಾಗಿ ಹಕ್ಕುಬದ್ಧ ಸಮಿತಿಗಳ ವಕಾಲತ್ತು, ಕಾನೂನುಬದ್ಧ ಸುಧಾರಣೆಗಳ ವಕಾಲತ್ತು ಇತ್ಯಾದಿ ವಹಿಸಿತು. ಹೀಗಾಗಿ ಹಿಂದಿನ ಎಷ್ಟೋ ಪೂರ್ವಾಗ್ರಹ ವಿಚಾರಗಳು ಒತ್ತರಿಸಲ್ಪಟ್ಟು ಹಾಗೂ ಸಿನಿಮಾದಲ್ಲಿ ಸಮಾನ ಕಾರ್ಯಸ್ಥಳಗಳ ಅವಶ್ಯಕತೆ ಹೆಚ್ಚಿಸಲಾಯಿತು.
ಈ ನಡುವೆ ಕೇರಳದ ರಾಜ್ಯ ಸರ್ಕಾರ ಹೇಮಾ ಸಮಿತಿಯನ್ನು ಸಂಘಟಿಸಿತು, ಇದನ್ನು ಸೇನಾ ನಿವೃತ್ತ ನ್ಯಾಯಾಧೀಶರ ಹೆಸರಲ್ಲಿ ಇಡಲಾಯಿತು. ಅವರು ಇದರ ಮುಂದಾಳತ್ವ ವಹಿಸಿದರು. ಅವರು ಲೈಂಗಿಕ ಅನ್ಯಾಯ, ದುರ್ವ್ಯವಹಾರಗಳ ಪ್ರಕರಣಗಳನ್ನು ಪರೀಕ್ಷಿಸಿ, ಅವುಗಳ ರೆಜಿಸ್ಟ್ರೇಷನ್ ಮಾಡಿಸಿದರು. 2019ರ ಹೊತ್ತಿಗೆ ಆ ಕುರಿತು ತಮ್ಮ ಅಂತಿಮ ವರದಿ ಸಲ್ಲಿಸಿದರು.
5 ವರ್ಷಗಳ ತರುವಾಯ, 2024ರ ಆಗಸ್ಟ್ ನಲ್ಲಿ ಸಂಶೋಧಿತ ರೂಪದಲ್ಲಿ ಈ ವರದಿಯನ್ನು ಎರಡನೇ ಸಲ ಜಾರಿ ಮಾಡಲಾಯಿತು. ಮಲೆಯಾಳಂ ಚಿತ್ರೋದ್ಯಮದ ದುರ್ವ್ಯವಹಾರ, ಕನಿಷ್ಠ ವೇತನ, ಅಸುರಕ್ಷಿತ ಪರಿಸ್ಥಿತಿಗಳ ಮಾಧ್ಯಮದಿಂದ ಮಹಿಳಾ ಕಲಾವಿದರಿಗೆ ಆದ ನಿರಾಸೆ ಇತ್ಯಾದಿಗಳನ್ನು ಉಲ್ಲೇಖಿಸಲಾಯಿತು. ಈ ವರದಿ ಜಾರಿಗೊಂಡ ನಂತರ ಕೇರಳದಲ್ಲಿ ಮೀಟೂ ಆಂದೋಲನ ಮತ್ತೆ ಶುರುವಾಯಿತು. ಮೂಲಕ ಅಟ್ಟಹಾಸದಲ್ಲಿ ಮೆರೆಯುತ್ತಿದ್ದ ಅಪರಾಧಿಗಳನ್ನು ಮಟ್ಟ ಹಾಕುವ ಪ್ರಯತ್ನ ಎಷ್ಟೋ ಯಶಸ್ವಿಯಾಯಿತು. ಈ ವರದಿ ಜಾರಿಯಾದ ಮೇಲೆ ಇದರ ಎಲ್ಲಾ ಕಾರ್ಯಕಾರಿ ಸದಸ್ಯರೂ ರಾಜೀನಾಮೆ ನೀಡಿದರು.
ಇದಂತೂ ಅತಿ ಕಷ್ಟದಿಂದ ದೊರಕಿದ ವಿಜಯವಾಗಿತ್ತು. ಇದನ್ನು ಸ್ಮರಿಸುತ್ತಾ ಪಾರ್ವತಿ, “ನಾವು ಏನು ಮಾಡುತ್ತಿದ್ದೆವೋ ಅದಕ್ಕಾಗಿ ಯಾರೂ ನಮ್ಮನ್ನು ತಯಾರು ಮಾಡುತ್ತಿರಲಿಲ್ಲ,” ಎನ್ನುತ್ತಾರೆ.
2017ರಲ್ಲಿ ಈಕೆ ಮತ್ತು ಸಂಘದ ಸದಸ್ಯರು ಕೂಡಿ, ತಡರಾತ್ರಿ ಬಂದ ಕರೆ ಪ್ರಕಾರ ತಮ್ಮ ಯೋಜನೆ ರೂಪಿಸಿಕೊಡರು. ಈ ನಿಟ್ಟಿನಲ್ಲಿ ಈಕೆ ಟೆನ್ಶನ್ ಎದುರಿಸಲು ಒಂದು ಹೊಸ ದಾರಿ ಕಂಡುಕೊಂಡರು. ಆಕೆ ತನ್ನ ಮುಖಚಹರೆಯಂತೆ ಹಲವು ವಿಧದ ಚಹರೆ ರೂಪಿಸಿ, ತನ್ನ ಕಂಗಳನ್ನು ಲೈನ್ ಮಾಡಿಸಿ, ತುಸು ಐಲೈನರ್ ಬಳಸಿ, ತನ್ನದೇ ಫೋಟೋಗಳನ್ನು ತೆಗೆದುಕೊಂಡು, ಸೋಶಿಯಲ್ ಮೀಡಿಯಾದಲ್ಲೂ ಏನೂ ಪೋಸ್ಟ್ ಮಾಡದೆ, ಮೇಕಪ್ ತೆಗಿಸಿ, ಮಲಗುತ್ತಿದ್ದರು. ಮೇಕಪ್ ಸಹ ಒಂದು ಕಲೆ. ಮಹಿಳೆಯರಿಗೆ ಈ ಮೂಲಕ ಒಂದು ವಿಕಲ್ಪ ನೀಡಿ, ಅಂದ್ರೆ ದುರಂಹಕಾರಿ ಆಗಿರಿ ಅಥವಾ ಬೌದ್ದಿಕರಾಗಿರಿ ಅಂತ. ನಾನು ಇವೆರಡರಿಂದಲೂ ಅಗಬಹುದಾದ ಹಕ್ಕುಗಳ ಕುರಿತು ಸುರಕ್ಷತೆ ವಹಿಸುತ್ತೇನೆ, ಎನ್ನುತ್ತಾರೆ.
ಪುಸ್ತಕಗಳೇ ಎಂದಿದ್ದರೂ ಫ್ರೆಂಡ್ಸ್ ಶೂಟಿಂಗ್ ನಡುವೆ ತುಸು ಪುರಸತ್ತು ದೊರಕಿದರೂ ಪಾರ್ವತಿ ತಕ್ಷಣ ಒಂದು ಪುಸ್ತಕ ಹಿಡಿದು ಕೂರುತ್ತಾರೆ. ನಾನು 9ನೇ ತರಗತಿಗೆ ಬರುವವರೆಗೂ ಈ ಕಾದಂಬರಿ ಕ್ಷೇತ್ರದ ಬಗ್ಗೆ ತಲೆ ಕೆಡಿಸಿಕೊಂಡವಳಲ್ಲ. ಆದರೆ 10ನೇ ತರಗತಿಯಿಂದ ಅದರಲ್ಲಿ ಆಳವಾಗಿ ಮುಳುಗಿಹೋದೆ. ಅದರಿಂದ ಒಂದು `ಸುರಕ್ಷಿತ ಯೋಜನೆ’ ತಯಾರಾಯಿತು. ಆಕೆ ಇದಕ್ಕೆ ಮೊದಲೂ ಸಹ ಇತರ ನಟಿಯರಿಂದ ಈ ಬಗ್ಗೆ ಕೇಳಿದ್ದರು. ಅವರೆಲ್ಲ ಶೂಟಿಂಗ್ ನಲ್ಲಿ ನಿರಂತರ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಿದ್ದರು. ಇಂಥ ಹರಟೆ ಬೇಡವೆಂದೇ ಈಕೆ ಪುಸ್ತಕಗಳಿಗ ಮೊರೆಹೋಗುತ್ತಿದ್ದರು.
ಪಾರ್ವತಿ ಹೇಳುತ್ತಾರೆ, “ಆದರೆ ನನಗೆ ತಿಳಿದುಬಂದ ಮತ್ತೊಂದು ವಿಚಾರ ಅಂದ್ರೆ, ಒಬ್ಬ ನಟಿಯಾಗಿ ನಾನು ಸದಾ ಒಪ್ಪುವ ವಿಷಯ ಅಂದ್ರೆ, ಜನ ನನ್ನ ಪ್ರತಿಯೊಂದು ಚಟುವಟಿಕೆ ಗಮನಿಸುತ್ತಾರೆ. ಪುಸ್ತಕಗಳು ಮಾತ್ರವೇ ಇಂಥ ಬೇಡದ ವಿಚಾರಗಳಿಂದ ನನ್ನನ್ನು ದೂರವಿಟ್ಟಿತು.”
ಪಾರ್ವತಿ ತನಗಾಗಿ ಸರಿಯಾದ ಸ್ಥಾನವಿರಬೇಕೆಂದು ಸದಾ ಅಪರಾಧಿ ಪ್ರಜ್ಞೆಯಿಂದ ಬಳಲುತ್ತಿರುತ್ತಾರೆ. ಕೊನೆಗೆ ತನ್ನನ್ನು ತಾನು ಏಕೆ ದೋಷಿ ಎಂದು ಭಾವಿಸುತ್ತೇನೆ ಎಂಬುದನ್ನೂ ಕಂಡುಕೊಂಡರು.
“ನಾನು ಇದನ್ನು `ಕುಲಸ್ತ್ರೀಕಾಲ’ ಎಂದೇ ಕರೆಯುತ್ತೇನೆ. ಅಂದ್ರೆ ಒಂದು ಸಾಮಾನ್ಯ ಕುಟುಂಬದಲ್ಲಿ ಪಾರಂಪರಿಕ ಲಿಂಗಭೇದ ಆಯಾ ಹೆಂಗಸರನ್ನು ಹೇಗೆ ಕಟ್ಟಿಹಾಕುತ್ತದೆ, ಅದರಿಂದ ಆಕೆ ಎಷ್ಟು ಅಸಹಾಯಕಳಾಗುತ್ತಾಳೆ….. ಇತ್ಯಾದಿ. ನೀವು ಹೆಣ್ಣಾಗಿ ಡೈನಿಂಗ್ ಟೇಬಲ್ ಬಳಿ ಕುಳಿತಿರುತ್ತೀರಿ, ಜೊತೆಗೆ ಅಲ್ಲಿ ಒಬ್ಬ ಗಂಡಸು ಇದ್ದಾನೆ ಅಂದುಕೊಳ್ಳಿ. ಆತ ಇನ್ನೂ ಊಟ ಶುರು ಮಾಡಿರುವುದಿಲ್ಲ. ಆಗ ಇದ್ದಕ್ಕಿದ್ದಂತೆ ಕುಳಿತ ಹೆಂಗಸರಲ್ಲಿ ಒಬ್ಬಾಕೆ ಎದ್ದು, ಆತನನ್ನು ಅಲ್ಲಿ ಕೂರಿಸಿ, ಊಟದ ಪ್ಲೇಟ್ ತಂದುಕೊಡುವಂತೆ ಆಗುತ್ತದೆ. ಈಕೆ ಮಾತ್ರ ಬೇರೊಬ್ಬ ಗಂಡಿನ ಅವಶ್ಯಕತೆಗಳಿಗಿಂತ, ತನ್ನ ಅವಶ್ಯಕತೆ ಮುಖ್ಯವಲ್ಲ ಎಂದೇ ಭಾವಿಸುತ್ತಾ ಹಾಗೆ ಮಾಡುತ್ತಾಳೆ.
“ನನಗಂತೂ ಆಕೆಯನ್ನು ಹಿಡಿದೆಳೆದು ಅಲ್ಲೇ ಕೂರಿಸೋಣ ಎನಿಸುತ್ತದೆ. ಬೇಕಿದ್ದರೆ ಆತನೇ ಪ್ಲೇಟ್ ತೆಗೆದುಕೊಂಡು ಬಂದು, ಜಾಗವಿದ್ದರೆ ಅದೇ ಪಂಕ್ತಿ ಅಥವಾ ನಂತರ ಊಟ ಮಾಡಲಿ ಎಂದು ಒತ್ತಿ ಹೇಳೋಣ ಎನಿಸುತ್ತದೆ.”
ಎಲ್ಲೆಲ್ಲೂ ಕಠೋರವಾಗಿ ಚಾಲ್ತಿಯಲ್ಲಿರುವ ಲೈಂಗಿಕ ಭೇದಭಾವದ ವ್ಯವಹಾರದ ಬಗ್ಗೆ ಸೂಕ್ಷ್ಮ ತಿಳಿಸದೆ, ಹೆತ್ತವರು ಸುಮ್ಮನಾದರಲ್ಲ ಎಂದು ಪಾರ್ವತಿಗೆ ಅಸಹನೀಯ ಬೆರಗಾಗುತ್ತದೆ.
“ಇದೆಂಥ ಕಂಡೀಶನಿಂಗ್? ಇದು ನಮ್ಮ ಮನೆತನದಲ್ಲಿ ಮುಂದುವರಿದಿದೆ ಎಂದರೆ, ಅದು ನಮ್ಮಮ್ಮನಿಂದಲ್ಲ, ಹಿಂದಿನ ಪೂರ್ವಜರಿಂದಲೇ ಬಂದಿರಬೇಕು!” ಎಂದು ನಿಡುಸುಯ್ಯುತ್ತಾರೆ.
ಮಲೆಯಾಳಂ ಚಿತ್ರರಂಗದಲ್ಲಿ ಈಕೆ ಎಲ್ಲೇ ಶೂಟಿಂಗಿಗೆ ಹೋದರೂ ಸದಾ ಸ್ವಚ್ಛತೆಯ ಬೇಡಿಕೆ ಮುಂದಿಡುತ್ತಿದ್ದರಿಂದ ಈಕೆಯನ್ನು `ಬಾತ್ ರೂಂ ಪಾರ್ವತಿ ‘ ಎಂದೇ ರೇಗಿಸುತ್ತಾರೆ. ಇದು ಒಂದು ಗಂಭೀರ ಪ್ರಕರಣವನ್ನು ಮಹತ್ವಹೀನಗೊಳಿಸುತ್ತದೆ ಎಂದೇ ಹೇಳಬಹುದು. ಆಕೆ ಎಲ್ಲರಿಗೂ ಹೆಲ್ತ್ ಹೈಜೀನ್ ನ ಬೇಸಿಕ್ಸ್ ಅಗತ್ಯ ಸಿಗಲಿ ಎಂದೇ ಹೋರಾಡುತ್ತಿದ್ದರು. ಈ ಕಾರಣದಿಂದಲೇ ಆಕೆ 10-12 ಗಂಟೆಗಳ ಕಾಲದ ಶೂಟಿಂಗ್ ಇದ್ದರೂ, ಒಂದಿಷ್ಟೂ ನೀರು ಕುಡಿಯದೆ ಕೆಲಸದಲ್ಲಿ ಮಗ್ನರಾಗುತ್ತಿದ್ದರು. ಬಹಿರ್ದೆಶೆಯ ಟೆನ್ಶನ್ನೇ ಬೇಡ ಎನ್ನುತ್ತಿದ್ದರು. ಈಕೆ ಹೀಗೆ ಬ್ರೇಕ್ ಇಲ್ಲದೆ ದುಡಿಯುತ್ತಿದ್ದರೆ, ಇದೆಂಥ ಅಘೋಷಿತ ನಿಯಮ, ಇದು ಬೇಕಿತ್ತೇ ಎಂದೆಲ್ಲ ಇತರರು ವ್ಯಂಗ್ಯವಾಡುತ್ತಾರೆ.
“ನಾನು ಎಲ್ಲರಿಗೂ ಆರೋಗ್ಯಕರ ಬೇಸಿಕ್ ನೀಡ್ಸ್ ಸಿಗಲಿ ಎಂದು ಪ್ರಯತ್ನಿಸಿದರೆ, ಇವರ ವ್ಯಂಗ್ಯಕ್ಕೆ ಏನು ಹೇಳುವುದು? ಹೀಗೆ ಮಾಡಿ ನಾನು ನನ್ನ ಎಷ್ಟೋ ಹಕ್ಕು ಕಳೆದುಕೊಳ್ಳುತ್ತಿದ್ದೇನೆ……”
ಇಂಥ ಭೇದಭಾವ ಏಕೆ?
ಈಕೆ 2013ರಲ್ಲಿ `ಮರಿಯಾನ್’ ತಮಿಳು ಹಿಟ್ ಚಿತ್ರದಲ್ಲಿ ನಟಿಸಿದ್ದನ್ನು ನೆನಪಿಸಿಕೊಳ್ಳುತ್ತಾರೆ. ಅಲ್ಲಿ ಆಕೆ ಒಬ್ಬ ಅತಿ ಶಾಂತ, ಸದೃಢ ಸ್ವಭಾವದ ಯುವತಿಯ ಪಾತ್ರ ವಹಿಸಿದ್ದರು. ನೋಡಲು ವಿನಮ್ರಳಾದರೂ ಅತಿ ಶಿಸ್ತು, ದೃಢ ಸ್ವಭಾವದ ಆ ಪಾತ್ರಧಾರಿ, ಸಾಗರ ತೀರದ ಹಳ್ಳಿನಿವಾಸಿ. ಸಾಗರ ತಟದಲ್ಲಿ ಶೂಟಿಂಗ್ ನಡೆಯುತ್ತಿದ್ದಾಗ, ಸಹನಟ ಧನುಷ್ ಮೇಲೆ ಬಿಸ್ಲೆರಿ ಬಾಟಲಿಯಿಂದ ನೀರು ಎರಚಲಾಗುತ್ತಿತ್ತು.
“ಆದರೆ ನನ್ನನ್ನು ಮಾತ್ರ ಬಕೆಟ್ ಗಟ್ಟಲೆ ಸಮುದ್ರದ ನೀರಿನಿಂದ ತೊಯ್ಯಿಸುತ್ತಿದ್ದರು. ಆ ಸಮಯದಲ್ಲಿ ನಾನು ಮುಟ್ಟಾಗಿದ್ದೆ, ಅದರಿಂದ ಅಪಾರ ಹಿಂಸೆಯಾಗುತ್ತಿತ್ತು. ಸೂಪರ್ ಸ್ಟಾರ್ ಹೀರೋ ಎಂಬ ಒಂದೇ ಕಾರಣಕ್ಕೆ ಆತನಿಗೆ ಇಂಥ 5 ಸ್ಟಾರ್ ಟ್ರೀಟ್ ಮೆಂಟ್, ಸಾಧಾರಣ ಹೀರೋಯಿನ್ ಆತ ನನಗೆ ಕ್ಷಾರದ ನೀರೇ….?”
ತಾನು ಬಟ್ಟೆ ಬದಲಿಸಬೇಕೆಂಬ ಒಂದೇ ನೆಪವೊಡ್ಡಿ ಆ ಹಿಂಸೆಯಿಂದ ಹೊರಬರೋಣ ಎಂದು ನಿರ್ಧರಿಸಿದರಂತೆ. ಇದಕ್ಕೂ ಸಹ ಅಲ್ಲಿನ ಸಹೋದ್ಯೋಗಿಗಳು ಮೈಮೇಲೆ ತಣ್ಣೀರು ಸುರಿದಂತೆ ತಟಸ್ಥರಾಗಿಯೇ ಇದ್ದುಬಿಟ್ಟರಂತೆ.
“ನಾನೊಂದು ಪಾಪದ ಹುಳು ಎಂಬಂತೆ ಎಲ್ಲರೂ ಕೈ ಕೊಡವಿಕೊಂಡರು. ಅಲ್ಲಿದ್ದ ಗಂಡು/ಹೆಣ್ಣು ಆರ್ಟಿಸ್ಟ್ ಗಳಲ್ಲಿ ಯಾರಿಗೂ ಕೊಂಚ ಸಹಾನುಭೂತಿ ತೋರಿಸೋಣ ಅನ್ನಿಸಲೇ ಇಲ್ಲ…….”
ಆಗ ಅಲ್ಲಿದ್ದ ಮಹಿಳಾ ಪ್ರೊಡಕ್ಷನ್ ಮ್ಯಾನೇಜರ್ ಇವರಿಂದ ಅವಸರದಲ್ಲಿ ಎಲ್ಲಾ ಕೆಲಸ ಮಾಡಿಸಿಕೊಂಡರು. ಈ ಉದ್ಯಮದಲ್ಲಿ ಇಂಥ ಉದಾಸೀನತೆ ಏಕೆ ಎಂದು ಸಿಡುಕುತ್ತಾರೆ. ದುರ್ವ್ಯವಹಾರ ಪ್ರತಿಭಟಿಸಿದಾಗ ಶತ್ರುತ್ವ ತೋರುವ ಸಹನಟಿಯರ ಮೇಲೆ ಈಕೆಗೆ ಕೆಂಡದಂಥ ಕೋಪ.
“ಯಾವ ವ್ಯಕ್ತಿ ಬೇಸಿಕ್ ಮಟ್ಟದ ಗೌರವಾದರ ಬಯಸುತ್ತಾರೋ ಅಂಥವರಿಗೆ ಸಪೋರ್ಟ್ ಮಾಡಿದರೂ ಸಹ, ಏನೋ ದೊಡ್ಡ ಪಾಪ ಮಾಡಿದ್ದಾರೆ ಎಂಬಂತೆ ಲೇಬಲ್ ಅಂಟಿಸುತ್ತಾರೆ. ಇಂಥವರನ್ನು `ನಾರಿವಾದಿ’ ಪಕ್ಷದವರು ಎಂದೆಲ್ಲ ಆಡಿಕೊಳ್ಳುತ್ತಾರೆ. ಅಂಥವರನ್ನು ಯಾವ ಗಂಡು ಸಹನಟ ಸರಿಯಾಗಿ ನಡೆಸಿಕೊಳ್ಳುತ್ತಾನೆ?”
ಹಾಗೆಂದ ಮಾತ್ರಕ್ಕೆ ಕೇರಳ ಬಿಟ್ಟರೆ ಭಾರತದ ಇತರ ಚಿತ್ರೋದ್ಯಮ ಇದಕ್ಕಿಂತ ಬೆಟರ್ ಅಂತೇನೂ ಅಲ್ಲ. ಅದನ್ನೆಲ್ಲ ವಿವರವಾಗಿ ಹೇಳಿಕೊಳ್ಳುವವರು ಯಾರೂ ಇಲ್ಲವಷ್ಟೆ.
“ನನ್ನನ್ನು ಕೇಳಿದರೆ ಇಂಥದ್ದೇ ವಾತಾವರಣ ದೇಶದಲ್ಲಿ ಎಲ್ಲೆಡೆ ಇದೆ! ಹಿಂಸೆಗೆ ಒಳಗಾದವರು ಅದನ್ನು ಹೇಳಿಕೊಳ್ಳಲಾರದೆ, ಮುಂದಿನ ಚಿತ್ರಕ್ಕೆ ಅವಕಾಶ ಸಿಕ್ಕದಲ್ಲ ಎಂದು ತೆಪ್ಪಗಾಗುತ್ತಾರೆ.
“ಜನ ಯಾವ ಮಟ್ಟದ ಸ್ವಾರ್ಥಿಗಳೆಂದರೆ, ತಮ್ಮ ಸ್ಥಾನ ಮಾತ್ರ ಭದ್ರವಾಗಿರಲಿ ಎಂದು ಇತರರನ್ನು ಕೆಳಕ್ಕೆ ತುಳಿಯುವುದರಲ್ಲಿ ತೃಪ್ತಿ ಕಾಣುತ್ತಾರೆ. ಅಂಥ ಅನುಕೂಲಸ್ಥ ಮಂದಿ ಹಣ, ಸುರಕ್ಷತೆ, ಉನ್ನತ ಸ್ಥಾನ ಇತ್ಯಾದಿ ಹೊಂದಿದ್ದು, ಇತರರನ್ನು ಕೀಳಾಗಿ ಕಾಣುವುದರಲ್ಲಿ ಹೆಮ್ಮೆ ಪಡುತ್ತಾರೆ. ತಮ್ಮದೆಲ್ಲ ಸುಸ್ಥಿತಿಯಲ್ಲಿದೆ ಎಂದಾಗ ಮಾತ್ರ ಬಾಯಿಮಾತಿಗೆ ಉಪಚಾರದ ಮಾತನಾಡುತ್ತಾರೆ. ಅಧಿಕಾರ ದಾಹ ಜನರನ್ನು ಹೀಗೆಲ್ಲ ಆಡಿಸುತ್ತದೆ.”
ಇದಕ್ಕೇನೂ ಶಾಶ್ವತ ಪರಿಹಾರ ಇಲ್ಲವೇ? ಎಲ್ಲಾ ಸಹನಟನಟಿಯರೂ ಒಗ್ಗಟ್ಟಾಗಿ ಇದರ ವಿರುದ್ಧ ಹೋರಾಡಿದಾಗ ಮಾತ್ರ ಇದು ಸಾಧ್ಯ ಎನ್ನುತ್ತಾರೆ.
“ಸ್ಟಾರ್ ನಟರು ತಾವಾಗಿ ಮುಂದೆ ಬಂದು ಸಹನಟಿಯರಿಗೆ ಸಪೋರ್ಟ್ ಮಾಡಿದಾಗ ಮಾತ್ರ ಇದು ಸುಲಭವಾದೀತು.”
ಈಕೆ ಈ ವಿಚಾರದಲ್ಲಿ ಹಾಲಿವುಡ್ ನತ್ತ ಕೈ ಮಾಡುತ್ತಾ, ಅಲ್ಲಿನ ಸ್ಟಾರ್ ನಟರು ಸಹನಟಿಯರಿಗೆ ಅನ್ಯಾಯ ಆಗಬಾರದೆಂದು, ತಮ್ಮ ಸಂಭಾವನೆಯಲ್ಲೇ ಒಂದು ಪಾಲನ್ನು ಅವರಿಗೆ ನೀಡುವಷ್ಟು ಉದಾರಿಗಳಾಗುತ್ತಾರೆ. ಆಗ ಮಾತ್ರ ಅಲ್ಲಿನ ನಟಿಯರು ನಿರಾಳರಾಗುತ್ತಾರೆ. ಅದೇ ಇಲ್ಲಿನ ಗಂಡಸರತ್ತ ಕೈ ಮಾಡಿ ಹೇಳುತ್ತಾರೆ, “ಅಂಥ ಮಹಾನ್ ತ್ಯಾಗ ನಾವು ಕೇಳುತ್ತಿಲ್ಲ, ನಮ್ಮನ್ನೂ ಮನುಷ್ಯರೆಂದೇ ಭಾವಿಸಿ ಅಂತ ಕೇಳಿಕೊಳ್ತೀನಿ. ನಮ್ಮ ಪಾಲಿಗೆ ಬರಬೇಕಾದ ಹಕ್ಕುಗಳು ನಮಗೆ ದೊರಕುವಂತಾದರೆ ನಿಮಗೆ ಅದರಿಂದ ಏನೂ ಹಾನಿ ಇಲ್ಲ ಎಂಬುದನ್ನು ಗುರುತಿಸಿ. ಇದರಿಂದ ಎಲ್ಲರಿಗೂ ನೆಮ್ಮದಿ ಸಿಗುತ್ತದೆ. ಇದು ಎಲ್ಲರಿಗೂ ನಿಜ ಅರ್ಥದಲ್ಲಿ ಸಮಾನತೆಯ ಅರಿವು ಮೂಡಿಸುತ್ತದೆ!”
– ಲೀನಾ ಗೀತಾ ರಘುನಾಥ್





